31008kannada moviesಮಮತಾ ಮೋಹನ್ ದಾಸ್ ಮನ ಬಿಚ್ಚಿದಾಗ!/movies/heroine/2008/12/23-mamata-mohandas-charismatic-young-actress.htmlಒಬ್ಬ ನಟಿ ಹಾಗೂ ಒಬ್ಬ ಗಾಯಕಿ ಇವರಿಬ್ಬರನ್ನೂ ಒಬ್ಬರಲ್ಲೇ ನೋಡಬಹುದು. ಇವೆರಡೂ ಮುಖಗಳ ಒಂದೇ ನಾಣ್ಯ ಮಮತಾ ಮೋಹನ್ ದಾಸ್. ಗೂಳಿ ಚಿತ್ರದ ಮೂಲಕ ಕನ್ನಡ ಬೆಳ್ಳಿತೆರೆಗೆ ಪರಿಚಯವಾದ ಮಲೆಯಾಳಿ ಮಲ್ಲು ಈಗ ದಕ್ಷಿಣ ಭಾರತದಲ್ಲಿ ಬಿಡುವಿಲ್ಲದ ನಟಿ. ಬಹರೈನ್ ನಲ್ಲಿ ಹುಟ್ಟಿ, ಬೆಳೆದ ಈಕೆ ಮಲೆಯಾಳಂ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಬಲು ಬೇಡಿಕೆಯಲ್ಲಿದ್ದಾರೆ. ಈಕೆ 33658http://kannada.oneindia.com/img/2008/12/23-mamata-mohandas1.jpg31008kannada moviesಕರ್ನಾಟಕ ಫಿಲಂ ಅಕಾಡೆಮಿ ಲಿಂಗೈಕ್ಯ!/column/sham/2008/1223-is-karnataka-film-academy-moved-to-trash.htmlಕರ್ನಾಟಕ ಫಿಲಂ ಅಕಾಡೆಮಿ ಬಫ್ ಪೇಪರ್ ಮೇಲೆ ಸ್ಥಾಪನೆಯಾಗಿ ಐದು ತಿಂಗಳಾದವು. ಸಿನಿಮಾ ಸಂಸ್ಕೃತಿ ಹಬ್ಬುವ ಈ ಸಂಸ್ಥೆ ಕಾರ್ಯಾರಂಭ ಮಾಡುವ ಯಾವ ಲಕ್ಷಣಗಳೂ ಗೋಚರಿಸುತ್ತಿಲ್ಲ. ಇದು ಏನನ್ನು ಸೂಚಿಸುತ್ತದೆ?* ಎಸ್ಕೆ. ಶಾಮಸುಂದರಚಲನಚಿತ್ರ ಸಂಸ್ಕೃತಿಯನ್ನು ಪೋಷಿಸುವ ಉದ್ದೇಶದಿಂದ ಸುಮಾರು ಹತ್ತು ವರ್ಷಗಳ ಹಿಂದೆ ನಮ್ಮ ರಾಜ್ಯದಲ್ಲಿ ಕರ್ನಾಟಕ ಫಿಲಂ ಅಕಾಡೆಮಿ ಎಂಬ ಸಂಸ್ಥೆ ಸ್ಥಾಪನೆ ಆಗಿತ್ತು, 33663http://kannada.oneindia.com/img/2008/12/23-film-camera1.gif31008kannada moviesಸಮಾಜ ಸುಧಾರಕನಾಗಿ ಅಯ್ಯಂಗಾರ್ ಐಪಿಎಸ್/movies/music/2008/12/24-iyengar-ips-audio-released.htmlಸಾಧಾರಣವಾಗಿ ಅಯ್ಯಂಗಾರಿ ಸಮುದಾಯ ಎಂದ ಕೂಡಲೆ ಪುಳಿಯೋಗರೆ ಮತ್ತು ಸಕ್ಕರೆ ಪೊಂಗಲ್ ತಟ್ಟನೆ ನೆನಪಾಗುತ್ತವೆ. ಆದರೆ ಇಲ್ಲೊಬ್ಬ ಅಯ್ಯಂಗಾರರು ಅಸ್ಪೃಶ್ಯತೆ, ಜಾತಿ ಪದ್ಧತಿಯಂತಹ ಸಾಮಾಜಿಕ ದುಷ್ಟ ಪದ್ದ್ಧತಿಗಳನ್ನು ನಿವಾರಿಸಲು, ಉತ್ತಮ ಸಮಾಜ ನಿರ್ಮಾಣಕ್ಕಾಗಿ ಐಪಿಎಸ್ ಅಧಿಕಾರಿಯಾಗಿ ಬರುತ್ತಿದ್ದಾರೆ. 'ಅಯ್ಯಂಗಾರ್ ಐಪಿಎಸ್' ಚಿತ್ರದ ಧ್ವನಿಸುರುಳಿ ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಮಾಜಿ ಕೌನ್ಸಿಲರ್ ಎಚ್.ರವೀಂದ್ರ ಚಿತ್ರದ ನಾಯಕ. ರಾಜಕೀಯದಲ್ಲಿ ಯಶಸ್ವಿಯಾದ 33672http://kannada.oneindia.com/img/2008/12/24-iyengar-ips1.jpg31008kannada moviesಚಿತ್ರೋದ್ಯಮ ಬೆಳೆಗೆ ಪೈರಸಿ ನುಸಿ ಕಾಟ/movies/headlines/2008/12/25-fast-track-court-to-check-piracy.htmlಕನ್ನಡ ಚಿತ್ರೋದ್ಯಮವನ್ನು ಬಾಧಿಸುತ್ತಿರುವ ಅನೇಕ ಸಮಸ್ಯೆಗಳಲ್ಲಿ ಪೈರಸಿ ಪಿಡುಗು ಪ್ರಮುಖವಾದುದು.ಇದನ್ನು ಮಟ್ಟಹಾಕಲು ಗೂಂಡಾ ಕಾಯಿದೆಯನ್ನು ಜಾರಿಗೆ ತರಬೇಕು ಎಂಬುದು ಚಿತ್ರೋದ್ಯಮದ ಬಹುದಿನಗಳ ಬೇಡಿಕೆ. ಕಡೆಗೂ ಈ ಬೇಡಿಕೆಗೆ ಸರ್ಕಾರ ಓಗೊಟ್ಟಿದೆ. ಬೃಹದಾಕಾರವಾಗಿ ಹಬ್ಬಿರುವ ಪೈರಸಿ ನುಸಿಯನ್ನು ತಡೆಯಲು ಪ್ರತ್ಯೇಕ ನ್ಯಾಯಾಲಯ ಸ್ಥಾಪಿಸಬೇಕು ಎನ್ನುವುದು ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಜಯಮಾಲಾ ಅವರ ಅಭಿಪ್ರಾಯ. ಕರ್ನಾಟಕ 33705http://kannada.oneindia.com/img/2008/12/25-jayamala-kfcc1e.jpg31008kannada moviesಕಾಮಿಡಿ ಗಣೇಶನ ರೇಟು ಕಾಮಿಡಿ /movies/hero/2008/12/26-ganesh-call-sheet-two-crores-hehehe.htmlಹೆಣ್ಣಿನ ವಯಸ್ಸು, ಗಂಡಿನ ಸಂಬಳ ಕೇಳಬಾರದೆಂಬ ಗಾದೆಯಿದೆ. ಎರಡರಲ್ಲಿ ಯಾವುದನ್ನು ಕೇಳಿದರೂ ಸುಳ್ಳು ಕಟ್ಟಿಟ್ಟ ಬುತ್ತಿ. ಆದರೆ, ಗಣೇಶ್ ತೀರ ಅಷ್ಟೊಂದು ಸುಳ್ಳು ಹೇಳೋದಾ? ಅವರ ಮನೆಮಕ್ಕಳಂತಿರುವ ಕೆಲವು ಇಂಗ್ಲಿಷ್ ಪತ್ರಕರ್ತರು ಇತ್ತೀಚೆಗೆ ಅವರ ಸಂಭಾವನೆ ಕೇಳಿದ್ದೇ ತಡ, ಗಣೇಶ್ ಎರಡು ಕೋಟಿ ಎಂದರಂತೆ. ಪಾಪ, ಕನ್ನಡದ ಮಾರುಕಟ್ಟೆ ಗೊತ್ತಿರದ ಅವರು, ನಮ್ಮ ಗಣೇಶು ಸಂಭಾವ್ನೆ ಎರಡು 33713http://kannada.oneindia.com/img/2008/12/26-ganesh1.jpg123731rajkumarಭಾರತೀಯ ಚಿತ್ರರಂಗದ ಪಿತಾಮಹ ದಾದಾಸಾಹೇಬ್ ಫಾಲ್ಕೆ/movies/headlines/2007/08/080807dadasaheh_phalke1.htmlಹೊಸಅಲೆ ಚಿತ್ರಗಳಿಂದ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ಶ್ಯಾಮ್ ಬೆನಗಲ್ ಅವರಿಗೆ 2005ನೇ ಸಾಲಿನ ಫಾಲ್ಕೆ ಪ್ರಶಸ್ತಿ ಸಂದಿದೆ. ಈ ಸಂದರ್ಭದಲ್ಲಿ ಚಿತ್ರರಂಗದ ಏಳ್ಗೆಗಾಗಿ ಜೀವನವನ್ನೇ ತೆತ್ತ ಧುಂಡಿರಾಜ್ ಯಾನೆ ದಾದಾಸಾಹೇಬ್ ಫಾಲ್ಕೆ ಅವರ ನೆನಕೆ. ವಾಣಿ ರಾಮದಾಸ್, ಸಿಂಗಪುರ1913, ಮೇ 13 ಭಾರತೀಯ ಚಿತ್ರರಂಗವನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನ. ಅಂದು ಮುಂಬೈನ ಜನಸಾಗರದ ದೃಷ್ಟಿ ಒಂದೆಡೆ ಕೇಂದ್ರೀಕೃತವಾಗಿತ್ತು. ಹಣವಿದ್ದವರು 5095http://kannada.oneindia.com/img/2009/09/30-phalke1.jpg123731rajkumarಗುರು ಶ್ರೀ ರಾಘವೇಂದ್ರ ದಯೆ ತೋರೋ/column/gv/2007/180807raghavendra_swami1.htmlದಾರಿ ಕಾಣದಾಗಿದೆ ರಾಘವೇಂದ್ರನೇಎಂದು ದಾರಿ ತೋರಿಸುವಂತೆ ರಾಯರನ್ನು ಪ್ರಾರ್ಥಿಸುವವರ ಸಂಖ್ಯೆ ದೊಡ್ಡದು. ಆಗಸ್ಟ್ ತಿಂಗಳ ಕೊನೆಯಲ್ಲಿ ಶ್ರೀ ರಾಘವೇಂದ್ರರ ಆರಾಧನೆ ವಿಶ್ವದೆಲ್ಲೆಡೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ರಾಯರ ಬದುಕು, ಪವಾಡ, ಸಾಧನೆ ಬಗ್ಗೆ ಒಂದಿಷ್ಟು ಅರಿಯೋಣ. ಡಾ।'ಜೀವಿ" ಕುಲಕರ್ಣಿ, ಮುಂಬಯಿ ಕಲಿಯುಗದ ಕಲ್ಪತರು, ಕಲ್ಪವೃಕ್ಷವೆಂದೇ ಪ್ರಸಿದ್ಧರಾಗಿರುವ ಶ್ರೀ ರಾಘವೇಂದ್ರಸ್ವಾಮಿಗಳ ಹೆಸರನ್ನು ಕೇಳದ ಕನ್ನಡಿಗರು ವಿರಳ. ತಿರುಪತಿಯ ನಂತರ 11073http://kannada.oneindia.com/img/2009/05/29-raghavendra3.jpg123731rajkumarನನ್ನ ಮಗನಿಗೆ ದರ್ಶನ ಕೊಟ್ಟರು ಶ್ರೀ ಗುರುರಾಯರು!/column/gv/2007/250807raghavendra-swami-miracles2.htmlನಲವತ್ತು ಬೆಡ್‌ಗಳು ಇದ್ದ ದೊಡ್ಡ ಕೋಣೆ. ಹೊಲಸು ಗಬ್ಬು ವಾಸನೆಯಿಂದ ತುಂಬಿತ್ತು. ಹಾಸಿಗೆಯ ಮೇಲೆ ನಮ್ಮ ಬೆಡ್‌ಶೀಟ್ ಹಾಕಿ ಮಲಗಿಸಿದೆವು. ತಗಣಿಗಳ ಸೈನ್ಯವೇ ಅಲ್ಲಿತ್ತು. ಅಷ್ಟು ತಗಣಿಗಳ ಪಡೆಯನ್ನು ನಾನೆಂದೂ ಎಲ್ಲಿಯೂ ಕಂಡಿರಲಿಲ್ಲ. ಮಗು ಒದ್ದಡಾತೊಡಗಿತು. ನನಗೊಂದು ಐಡಿಯಾ ತೋಚಿತು. ಕೆಳಗೆ ನೆಲದ ಮೇಲೆ ಚಾದರ ಹಾಸಿ ಮಗುವನ್ನು ಮಲಗಿಸಿದೆವು. ಸುತ್ತಲೂ ನೀರು ಸುರಿದೆವು. ತಗಣೆ ದಾಟಿಬರಲಿಲ್ಲ. 11086http://kannada.oneindia.com/img/2009/05/29-raghavendra3.jpg123731rajkumarಡೆಡ್ಲಿ ಕಾಂಬಿನೇಶನ್ ಮತ್ತು ಇಡ್ಲಿ ಕಾಂಬಿನೇಶನ್../column/vichitranna/2007/140807deadly-combination-idly-combination.htmlಜಗತ್ತಿನ ಅತ್ಯಂತ ಒಳ್ಳೆ ಕಾಂಬಿನೇಶನ್ ;ಕಪ್ಪು ಮತ್ತು ಬಿಳುಪು! ಅತಿ ಕೆಟ್ಟ ಕಾಂಬಿನೇಶನ್ ಅಂದ್ರೂನೂ ಕಪ್ಪು ಮತ್ತು ಬಿಳುಪು ಎಂದೇ ಹೇಳಬೇಕಾಗುತ್ತದೆ.ಆ ಮಾತು ಬಿಡಿ, ಲೋಕೋಭಿನ್ನರುಚಿ ಎಂಬಂತೆ ಜಗತ್ತಲ್ಲಿ ಏನೇನೋ ಕಾಂಬಿನೇಶನ್ ಗಳಿವೆ. ಅವು ಒಂದೆರಡಲ್ಲ. * ಶ್ರೀವತ್ಸ ಜೋಶಿ ವ್ಹಾ! ಅದೊಂದು ಅದ್ಭುತವಾದ ಡೆಡ್ಲಿ ಕಾಂಬಿನೇಶನ್!" - ಎಂಬೋ ಉದ್ಗಾರವನ್ನು ನೀವು ವಿವಿಧ 11408http://kannada.oneindia.com/img/2009/10/13-deadly-combination2.jpg123731rajkumarಅಭಿಮಾನಿ ದೇವರುಗಳ ಭಕ್ತ ಮರೆಯಾಗಿ ಮೂರು ವರ್ಷ!/movies/headlines/2009/04/12-rajkumar-3rd-death-anniversary.htmlಬೆಂಗಳೂರು, ಏ. 12 : ಕರ್ನಾಟಕದ ಸಮಸ್ತ ಕನ್ನಡಿಗರ ಕಣ್ಮಣಿ ನಟಸಾರ್ವಭೌಮ ಡಾ. ರಾಜಕುಮಾರ್ ನೇಪಥ್ಯಕ್ಕೆ ಸರಿದು ಏಪ್ರಿಲ್ 12ಕ್ಕೆ ಸರಿಯಾಗಿ ಮೂರು ವರ್ಷ.77 ವರ್ಷಗಳ ತುಂಬು ಜೀವನ ನಡೆಸಿ 'ಅಭಿಮಾನಿ ದೇವರು'ಗಳನ್ನು ಅರ್ಧ ಶತಮಾನ ಕಾಲ ಚಿತ್ರಗಳ ಮೂಲಕ ರಂಜಿಸಿದ್ದ ಮುತ್ತುರಾಜ್ ಜನಮಾನಸದಿಂದ ಮರೆಯಾಗಿದ್ದಾರೆಂದು ಇಂದಿಗೂ ಅನ್ನಿಸುವುದಿಲ್ಲ. ಅವರು ನಟಿಸಿದಂಥ ಅನ್ನುವುದಕ್ಕಿಂದ ಜೀವಂತಿಗೆ ತುಂಬಿದ್ದ ವಿಭಿನ್ನ 35888http://kannada.oneindia.com/img/2009/04/12-rajkumar12.jpg38243manikanthಅಮ್ಮ ಹೇಳಿದ ಎಂಟು ಸುಳ್ಳುಗಳು/column/manikanth/2008/0918-eight-lies-of-my-mothers.htmlಸೂಚನೆ : ಈ ಸುಳ್ಳುಗಳನ್ನು ಓದುವುದಕ್ಕೆ ಶುರುಮಾಡುವ ಮುನ್ನ ಕರವಸ್ತ್ರವನ್ನು ಕೈಯಲ್ಲಿಟ್ಟುಕೊಂಡಿದ್ದರೆ ಕ್ಷೇಮ. ಯಾಕೆಂದರೆ, ಇದು ತಾಯಿಯ ಪ್ರೀತಿ ಮತ್ತು ತ್ಯಾಗವನ್ನು ಕಂಡುಂಡು ಕಡುಬಡತನದಲ್ಲಿ ಬೆಳೆದ ಕನ್ನಡ ಮಕ್ಕಳಿಗೆ ಮಾತ್ರ. ಸಿರಿ ಉಕ್ಕಿ ಮದ ಹೊಕ್ಕಿದವರಿಗಿಲ್ಲ. ಅಂಕಣಕಾರ : ಎ.ಆರ್. ಮಣಿಕಾಂತ್ ತುಂಬಾ ದೂರ ಅಲ್ಲ ಸಾರ್, ಇಲ್ಲೇ, ಬೆಂಗಳೂರು ತುಮಕೂರಿನ ಮಧ್ಯೆ ನೆಲಮಂಗಲ 765http://kannada.oneindia.com/img/2009/10/24-manikanth1.jpg38243manikanthಎರಡೂ ಕೈಗಳಿಲ್ಲದ ಹೀಗೂ ಉಂಟೆ/column/manikanth/2008/1224-jessica-cox-hats-off-to-the-handless.htmlಕಾಲುಗಳಿಲ್ಲದ ನಾಗನರೇಶ್ ಕರುತರ ಸಾಫ್ಟ್‌ವೇರ್ ಎಂಜಿನಿಯರ್ ಆದದ್ದನ್ನು; ಕೈ-ಕಾಲುಗಳಿಲ್ಲದ ನಿಕ್ ಜೆಸಿಕ್‌ನ ಯಶೋಗಾಥೆಯನ್ನು; ಅಂಧತ್ವಕ್ಕೇ ಸವಾಲು ಹಾಕಿ ಭರತನಾಟ್ಯದ ದೊರೆಯಾದ ಬುಸೇಗೌಡರ ಕತೆಯನ್ನು; ಕಡುಕಡುಕಡುಕಡು ಬಡತನದ ಮಧ್ಯೆಯೂ ಐಎಎಸ್ ಮಾಡಿದ ಗೋವಿಂದ ಜೈಸ್ವಾಲ್‌ನ ದಿಗ್ವಿಜಯದ ಚರಿತೆಯನ್ನು ಈ ಹಿಂದೆ, ಇದೇ ಅಂಕಣದಲ್ಲಿ ಓದಿದ್ದೀರಿ. ಈಗ ನಿಮ್ಮೆದುರು ತೆರೆದುಕೊಳ್ಳಲಿರುವುದು, ಇವರೆಲ್ಲರನ್ನೂ ಮೀರಿಸಿದ ಮಹಾನ್ ಸಾಧಕಿಯೊಬ್ಬಳ ಬದುಕಿನ ಕಥೆ; ಹ್ಯಾಟ್ಸ್ 33687http://kannada.oneindia.com/img/2008/12/24-jessicacox1.jpg38243manikanthಯುವ ನಿರ್ದೇಶಕರುಗಳಿಗೆ ಒಂದು ಪತ್ರವು.../column/manikanth/2009/0103-open-letter-to-young-directors-kannada-movie.htmlಹಳೆಯ ಕಥೆ, ಬಡಕಲು ಹೀರೋ, ಕಡಿಮೆ ಬಟ್ಟೆಯ ಇಪ್ಪತ್ತೈದು ಕೇಜಿಯ ಹೀರೋಯಿನ್, ಮಧ್ಯೆ ಮಧ್ಯೆ ಲಾಂಗು-ಮಚ್ಚುಗಳ ಖಣಖಣ, ನಮ್ಮ ವಜ್ರಮುನಿಯ ಕಿರುಬೆರಳಿಗೂ ಸಾಟಿಯಾಗದಂಥ ವಿಲನ್ನು... ಇಂಥವರೇ ತುಂಬಿಕೊಂಡಿರೋ ನಿಮ್ಮ ಸಿನಿಮಾ ನೋಡೋಕೆ-ಜನಕ್ಕೇನಾದ್ರೂ ಹುಚ್ಚು ಹಿಡಿದಿದೆಯೇನ್ರಿ? ಮುಂಗಾರು ಮಳೆ ಸುರಿಸಲು ಬಂದು ಅರ್ಧದಾರಿಯಲ್ಲೇ ಆವಿಯಾಗಿ ಹೋದ ಯುವ ನಿರ್ದೇಶಕರಿಗೆ ಎರಡು ಕಿವಿಮಾತುಗಳು. ಆದರೆ ಇನ್ನೊಂದು ಮಾತು, ಈ ಕಿವಿಯಿಂದ 33855http://kannada.oneindia.com/img/2009/01/03-preetam-gubbi1e.jpg38243manikanthಪ್ರೀತಿಯ ತಂದೆಗೆ ಮಗಳ ಪತ್ರ.../column/manikanth/2009/0109-letter-from-daughter-to-beloved-father.htmlಮಕ್ಕಳು ಜೀವನದಲ್ಲಿ ಎಡವದಿರಲೆಂದು ಮುದ್ದು ಮಾಡಿ ಬೆಳೆಸಿದ ಅಪ್ಪ ಅಮ್ಮಂದಿರು ಹೇಗೆ ಅಪೇಕ್ಷಿಸುತ್ತಾರೋ, ಅರಿವಿದ್ದೋ, ಅರಿವಿಲ್ಲದೆಯೋ ಎಡವಿ ಬಿದ್ದಾಗ ಮಕ್ಕಳು ಕೂಡ ಪ್ರೀತಿಯ ಅಪ್ಪ ಮತ್ತು ಅಮ್ಮ ತಮ್ಮ ಕಿರುಬೆರಳು ಹಿಡಿದು ಎಬ್ಬಿಸುತ್ತಾರೆಂದು ಅಪೇಕ್ಷಿಸುತ್ತವೆ. ಸೋತಾಗ ಕೈಹಿಡಿದು ಎಬ್ಬಿಸಿ, ಗೆದ್ದಾಗ ಬೆನ್ನುತಟ್ಟಿ ಪ್ರೋತ್ಸಾಹಿಸುವುದು ಪ್ರತಿ ಪಾಲಕರ ಕರ್ತವ್ಯ.* ಎ.ಆರ್. ಮಣಿಕಾಂತ್ಮಗಳ ವರ್ತನೆ ಯಾಕೋ ಸರಿಯಾಗಿಲ್ಲ. ಇಂಥದೊಂದು ಅನುಮಾನ 33978http://kannada.oneindia.com/img/2009/01/09-daughter-father-love1.jpg38243manikanthಬೇಡ ಬಿಟಿ ಬದನೆ, ಶ್ರೀರಾಮುಲು ಅವರಿಗೆ ನಿವೇದನೆ/column/manikanth/2009/0128-bt-brinjal-how-safe-is-gm-crop.htmlಜೈವಿಕ ತಂತ್ರಜ್ಞಾನ ಬಳಸಿ ಬೆಳೆಯಲಾಗುವ ಆಹಾರದ ವಿರುದ್ಧ ಇಡೀ ದೇಶದಲ್ಲೇ ಹುಯಿಲೆದ್ದಿದೆ. ಕುಲಾಂತರಿ ಆಹಾರ ತಯಾರಿಗೆ, ಸಂಶೋಧನೆಗೆ ನಾನು ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಸಚಿವರು ಕೂಡ ಘೋಷಿಸಿದ್ದಾರೆ. ರಾಜ್ಯದ ಆರೋಗ್ಯ ಸಚಿವರಾದ ಶ್ರೀರಾಮುಲು ಮಾತ್ರ ಬಾಯಿಗೆ ಬಿರಡೆ ಹಾಕಿ ಕುಳಿತಿದ್ದಾರೆ. ಸಾವಯವ ಕೃಷಿಗೆ ಉತ್ತೇಜನ ನೀಡುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದ್ದರೂ ಜೈವಿಕ ತಂತ್ರಜ್ಞಾನದ ಬಳಕೆ 34337http://kannada.oneindia.com/img/2009/01/28-bt-brinjal1.jpgnews"> ಮೌಲ್ಡ್ ರಾಜಣ್ಣನ ಕಥೆ ಕೇಳಿ... | Mould Rajanna | Mould artist | Kannada movies | Black and White | ಮೌಲ್ಡ್ ರಾಜಣ್ಣ | ಅಭಿನವ ಬ್ರಹ್ಮ | ಕನ್ನಡ ಚಿತ್ರರಂಗ - Kannada Oneindia

ಮೌಲ್ಡ್ ರಾಜಣ್ಣನ ಕಥೆ ಕೇಳಿ...

Abhinava Brahma Mould Rajanna
ನಮ್ಮ ಕಥಾನಾಯಕನ ಹೆಸರು ಮೌಲ್ಡ್ ರಾಜಣ್ಣ. 89 ವರ್ಷ ವಯಸ್ಸಿನ ರಾಜಣ್ಣ, ಕನ್ನಡ ಚಿತ್ರರಂಗದ ಎಲ್ಲ ಮಗ್ಗುಲುಗಳನ್ನೂ ಪ್ರತ್ಯಕ್ಷ ಕಂಡವರು. ತೆಲುಗಿನ ಎನ್‌ಟಿಆರ್, ತಮಿಳಿನ ಎಂಜಿಆರ್ ಹಾಗೂ ವರನಟ ಡಾ. ರಾಜ್‌ಕುಮಾರ್ ಅವರಿಂದಲೇ ಅಭಿನವ ಬ್ರಹ್ಮ' ಎಂದು ಕರೆಸಿಕೊಂಡದ್ದು ರಾಜಣ್ಣನ ಹೆಚ್ಚುಗಾರಿಕೆ. ಒಂದೇ ಒಂದು ವ್ಯತ್ಯಾಸವೆಂದರೆ, ಬ್ರಹ್ಮನದು ಸಜೀವ ಸೃಷ್ಟಿ; ಈ ರಾಜಣ್ಣನದು ನಿರ್ಜೀವ ಸೃಷ್ಟಿ. ಬ್ರಹ್ಮನ ಸೃಷ್ಟಿ ಅದೆಷ್ಟೋ ಕೋಟಿಯಿದ್ದರೆ, ಈ ರಾಜಣ್ಣನ ಸೃಷ್ಟಿ ಸಾವಿರಗಳ ಆಚೆಗಂತೂ ಖಂಡಿತ ಇದೆ. ರಾಜಣ್ಣನ ಕೈಚಳಕದಿಂದ ಅರಳಿದವರು' ಯಾರ್‍ಯಾರು ಗೊತ್ತೆ? ಬ್ರಹ್ಮ, ವಿಷ್ಣು, ಮಹೇಶ್ವರ, ಯಕ್ಷ, ಅಶ್ವಿನಿ ದೇವತೆಗಳು, ನವಗ್ರಹಗಳು, ಸಪ್ತ ಮಾತೃಕೆಯರು, ಶಕ್ತಿ ದೇವತೆಗಳು, ಅಷ್ಟಲಕ್ಷ್ಮಿಯರು, ದೇವೇಂದ್ರನ ಆಸ್ಥಾನದಲ್ಲಿರುವ ರಂಬೆ, ಊರ್ವಶಿ, ಮೇನಕೆ, ಗಣಪತಿ, ಶಬರಿಮಲೆ ಸ್ವಾಮಿ ಅಯ್ಯಪ್ಪ; ದೇವರನ್ನು ಕಾಣಲು ಹೊರಟ ತುಕಾರಾಂ, ಕನಕದಾಸ, ಪುರಂದರದಾಸ, ಕಬೀರ, ಬುದ್ಧ, ಬಸವ, ಅಕ್ಕಮಹಾದೇವಿ, ಭಕ್ತೆ ಮಿರಾ... ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಸ್ವಾರಸ್ಯವೆಂದರೆ, ಈ ಪೈಕಿ ಯಾರೊಬ್ಬರನ್ನೂ ಪ್ರತ್ಯಕ್ಷ ಕಾಣದಿದ್ದರೂ, ಇವರು ಅವರೇ' ಎಂದು ಕಣ್ಮುಚ್ಚಿಕೊಂಡು ಹೇಳಿಬಿಡುವಷ್ಟು ನೈಜವಾಗಿ ಎಲ್ಲ ಮೂರ್ತಿಗಳನ್ನೂ ತಯಾರಿಸಿದ' ಹೆಗ್ಗಳಿಕೆ ಮೌಲ್ಡ್ ರಾಜಣ್ಣನದು.

ಯಾರಿವರು ಈ ಮೌಲ್ಡ್ ರಾಜಣ್ಣ? ಆತ ಚಿತ್ರಿಸಿರುವ ಸಾವಿರಾರು ಕಲಾಕೃತಿಗಳೆಲ್ಲ ಈಗ ಎಲ್ಲಿವೆ? ಹೇಗಿವೆ? ರಾಜಣ್ಣ ಎಂಬ ಮುಪ್ಪಾನು ಮುದುಕನನ್ನು ಈಗ ಪರಿಚಯಿಸುವ ಉದ್ದೇಶವಾದರೂ ಏನು? ಎಂಬ ಕುತೂಹಲಕರ ಪ್ರಶ್ನೆಗಳಿಗೆ ಒಂದು ಚಿಕ್ಕ ಉತ್ತರ: ತೆಲುಗು, ತಮಿಳು, ಹಿಂದಿ, ಕನ್ನಡ ಭಾಷೆಯಲ್ಲಿ ಬಂದಿರುವ ಪೌರಾಣಿಕ, ಜಾನಪದ ಹಿನ್ನೆಲೆಯ ಬ್ಲ್ಯಾಕ್ ಅಂಡ್ ವೈಟ್ ಸಿನಿಮಾಗಳಿವೆಯಲ್ಲ? ಆ ಚಿತ್ರಗಳಲ್ಲಿ ರಾಕ್ಷಸರ ಗುಹೆ; ಅಲ್ಲಿ ಆಆಆಆ...' ಎಂದು ಬಾಯ್ದೆರೆದು ನಿಂತಿರುವ ಕ್ರೂರ ಮೃಗಗಳು, ಋಷಿಗಳ ಆಶ್ರಮ, ದೇವೇಂದ್ರನ ಆಸ್ಥಾನ, ಅಲ್ಲಿ ಶಿಲಾಬಾಲಿಕೆಯ ಗೆಟಪ್ಪಿನಲ್ಲಿ ನಿಂತ ಅಪ್ಸರೆ... ಇಂಥವೇ ಕಲಾಕೃತಿಗಳನ್ನು ರೂಪಿಸಿದ್ದು ಇದೇ ರಾಜಣ್ಣ. ಕಪ್ಪು-ಬಿಳುಪು ಚಿತ್ರಗಳ ಟೈಟಲ್ ಕಾರ್ಡನ್ನು ಹುಷಾರಾಗಿ ಗಮನಿಸಿದರೆ ಕಲಾನಿರ್ದೇಶನ;ಮೌಲ್ಡ್ ರಾಜು' ಎಂಬ ಹೆಸರನ್ನೂ ತಪ್ಪದೆ ಕಾಣಬಹುದು.

ಇಂತಿಪ್ಪ ಹಿನ್ನೆಲೆಯ ರಾಜಣ್ಣ, ಬೆಂಗಳೂರಿನ ಹಲಸೂರಿನಲ್ಲಿ ಜನಿಸಿದವರು. ಓದಿದ್ದು ಜಸ್ಟ್ ಒಂದನೇ ಕ್ಲಾಸು. ನಂತರ ಹೆಸರಾಂತ ಪಲ್ಪ್' ಕಲಾವಿದ ಎಂಬಾರಯ್ಯ ಅವರ ಕಣ್ಣಿಗೆ ಬಿದ್ದ ರಾಜಣ್ಣ, ಮುಂದೆ ಅವರೊಂದಿಗೇ ಉಳಿದರು. ತಮಗೆ ಚೆನ್ನಾಗಿ ತಿಳಿದಿದ್ದ ಪೇಪರ್ ಪಲ್ಪ್ ಕಲೆಯನ್ನು ರಾಜಣ್ಣನಿಗೆ ಧಾರೆಯೆರೆದರು ಎಂಬಾರಯ್ಯ. ಪರಿಣಾಮ, ತಮ್ಮ ಹನ್ನೆರಡನೇ ವಯಸ್ಸಿಗೇ ಮೌಲ್ಡಿಂಗ್ ಆರ್ಟಿಸ್ಟ್ ಎಂದು ಚಿತ್ರರಂಗದ ಸಂಪರ್ಕಕ್ಕೆ ಬಂದರು ರಾಜಣ್ಣ. ಅವು ನಲವತ್ತರ ದಶಕದ ದಿನಗಳು. ಆಗ ತಯಾರಾಗುತ್ತಿದ್ದವುಗಳೆಲ್ಲ ಪೌರಾಣಿಕ, ಜಾನಪದ ಹಿನ್ನೆಲೆಯ ಸಿನಿಮಾಗಳೇ. ಎಲ್ಲ ಸಿನಿಮಾಗಳಿಗೂ ಮದ್ರಾಸೇ ತವರುಮನೆ. ಅದೇ ರಂಗಶಾಲೆ. ಪೌರಾಣಿಕ/ಜಾನಪದ ಹಿನ್ನೆಲೆಯ ಸಿನಿಮಾ ಅಂದಮೇಲೆ ರಾಕ್ಷಸರು ವಾಸಿಸುವ ಗುಹೆಗಳ, ಅವರೊಂದಿಗೇ ಕಾಣಿಸಿಕೊಳ್ಳುವ ಕ್ರೂರ ಮೃಗಗಳ ಪ್ರತಿಕೃತಿಗಳು ಬೇಕಲ್ಲ? ಅವುಗಳನ್ನು ತಯಾರಿಸುವ ಕೆಲಸ ಮೌಲ್ಡ್ ರಾಜಣ್ಣ ಅವರದಾಗಿತ್ತು. ಹಾಗೆಯೇ ದೇವಾನುದೇವತೆಗಳ ಆಸ್ಥಾನದಲ್ಲಿ ಶಿಲಾಬಾಲಿಕೆಯರು, ರತ್ನ ಖಚಿತ ಸಿಂಹಾಸನ; ಋಷಿಗಳ ಆಶ್ರಮಕ್ಕೆ ಹಿನ್ನೆಲೆಯಾಗಿ ಕಾಣಿಸಿಕೊಳ್ಳುವ ಝರಿ ಹರಿಯುವ ಸನ್ನಿವೇಶ; ಕೈಲಾಸ-ವೈಕುಂಠಗಳ ಸೆಟ್... ಇಂಥ ಕೆಲಸವೆಲ್ಲ ರಾಜಣ್ಣನ ಹೆಗಲಿಗೇ ಬಿದ್ದಿತ್ತು.

ಈ ಎಲ್ಲವನ್ನೂ ಪೇಪರ್ ಪಲ್ಪ್ ಹಾಗೂ ಪೇಪರ್ ಮೌಲ್ಡ್ ಬಳಸಿ ತಯಾರಿಸುತ್ತಿದ್ದರು ರಾಜಣ್ಣ. ಹೀಗೆ ತಯಾರಾದ ಆಕೃತಿಗಳ ವೈಶಿಷ್ಟ್ಯವೇನೆಂದರೆ- ಅವು ತೀರಾ ತೀರಾ ಹಗುರವಾಗಿರುತ್ತಿದ್ದವು. (ಮೌಲ್ಡ್ ಮಾಡಿ ತಯಾರಿಸುವ ಕಲಾಕೃತಿಗಳೆಲ್ಲ ಈಗಲೂ ತುಂಬಾ ಹಗುರವಾಗಿರುತ್ತವೆ.) ಪರಿಣಾಮವಾಗಿ, ರಾಕ್ಷಸನ, ದೇವತೆಗಳ ಹಾಗೂ ಕ್ರೂರ ಮೃಗಗಳ ಆಕೃತಿಗಳನ್ನು ಸೆಟ್‌ನಲ್ಲಿ ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಸುಲಭವಾಗಿ ಸಾಗಿಸಬಹುದಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಹೀಗೆ ತಯಾರಾದ ಮೌಲ್ಡಿಂಗ್ ಕಲಾಕೃತಿಗಳು ಎಷ್ಟೇ ಮೇಲಿನಿಂದ ಕೆಳಕ್ಕೆ ಬಿದ್ದರೂ ಒಡೆದು ಹೋಗುತ್ತಿರಲಿಲ್ಲ. ಈ ಕಾರಣದಿಂದ ಚಿತ್ರ ನಿರ್ಮಾಪಕರೆಲ್ಲ ಸಹಜವಾಗಿಯೇ ರಾಜಣ್ಣನ ಹಿಂದೆ ಬಿದ್ದರು. ಪರಿಣಾಮ, ಕಲಾ ನಿರ್ದೇಶಕ' ಎಂಬ ಬಿರುದು ಹಾಗೂ ಬಿಡಿಗಾಸಿನನೌಕರಿ ಎರಡೂ ರಾಜಣ್ಣನಿಗೆ ಲಭ್ಯವಾದವು.

ಈ ಸಂದರ್ಭದಲ್ಲಿಯೇ ಸ್ವಾರಸ್ಯವೊಂದು ನಡೆಯಿತು. ಆ ಕಾಲದ ಸಿನಿಮಾಗಳಲ್ಲಿ ದೇವತೆಗಳ, ರಾಕ್ಷಸರ ಅಥವಾ ರಾಜ ಮಹಾರಾಜರುಗಳ ಹೆಂಡತಿಯರ ಪಾತ್ರ ನಿರ್ವಹಿಸುತ್ತಿದ್ದರಲ್ಲ? ಅವರಿಗೆಲ್ಲ ಸೊಂಟಕ್ಕೆ ಡಾಬು, ಜತೆಯಲ್ಲೇ ಫಳಫಳ ಹೊಳೆಯುವ ಆಭರಣಗಳ ಚೈನು, ಕೊರಳಿಗೆ ಸರ, ಹಣೆಯ ಮೇಲೆ ಬಾಸಿಂಗದಂಥದೊಂದು... ಹೀಗೆ ಆಭರಣಗಳನ್ನು ಹೊಂದಿಸಬೇಕಾಗುತ್ತಿತ್ತು. ರೋಲ್ಡ್ ಗೋಲ್ಡ್ ಆಭರಣಗಳನ್ನು ಬಾಡಿಗೆಗೆ ತಂದರೆ, ಅವುಗಳ ತೂಕ ಜಾಸ್ತಿ. ಈ ಕಾರಣದಿಂದಲೇ ಅವುಗಳನ್ನು ಕಟ್ಟಿಕೊಂಡು ಸರಭರನೆ ಓಡಾಡಲು, ಡ್ಯಾನ್ಸ್ ಮಾಡಲು ಆಗುವುದಿಲ್ಲ ಎಂದು ನಟಿಯರೆಲ್ಲ ವರಾತ ತೆಗೆದರು. ಆ ಸಂದರ್ಭದಲ್ಲಿ ಮತ್ತೆ ರಾಜಣ್ಣನ ಮೊರೆ ಹೊಕ್ಕ ನಿರ್ಮಾಪಕರು- ಈ ಸಮಸ್ಯೆಗೂ ಒಂದು ಪರಿಹಾರ ಹುಡುಕು ಮಾರಾಯ' ಅಂದರಂತೆ. ತಕ್ಷಣವೇ ಅದೇ ಪೇಪರ್ ಪಲ್ಪ್‌ಗಳಿಂದ ರಾಕ್ಷಸರು ಕುತ್ತಿಗೆಗೆ ಹಾಕಿಕೊಳ್ಳುವ ತಲೆಬುರುಡೆ, ರಾಜರುಗಳ ಕಿರೀಟ, ರಾಣಿಯರ ಅಲಂಕಾರ ಸಾಮಗ್ರಿಗಳನ್ನೂ ತಯಾರಿಸಿದರು ರಾಜಣ್ಣ. ಈಗ ನಾವೆಲ್ಲ ಕಪ್ಪು-ಬಿಳುಪು ಸಿನಿಮಾಗಳಲ್ಲಿ ನೋಡುತ್ತೇವಲ್ಲ? ಆ ವಜ್ರ ವೈಢೂರ್‍ಯದ ಲಕಲಕಲಕ ಆಭರಣಗಳೆಲ್ಲ ಮೌಲ್ಡ್ ರಾಜಣ್ಣನ ಕೈ ಚಳಕದಿಂದ ತಯಾರಾಗಿರುವ ನಕಲಿ' ಒಡವೆಗಳೇ.

ರಾಜಣ್ಣ ಸೃಷ್ಟಿಸಿದ ಮೂರ್ತಿಗಳಿಗೆ ಎಂಥ ಶಾರ್ಪ್‌ನೆಸ್ ಇರುತ್ತಿತ್ತು ಎಂಬುದಕ್ಕೆ ಒಂದು ಪುಟ್ಟ ಉದಾಹರಣೆ: ಅದೊಮ್ಮೆ ನಿರ್ಮಾಪಕನೊಬ್ಬ ಕಾಳಿಕಾದೇವಿಯ ಭವ್ಯ ವಿಗ್ರಹವೊಂದನ್ನು ತನ್ನ ಹೊಸ ಸಿನಿಮಾಕ್ಕಾಗಿ ತಯಾರಿಸುವಂತೆ ಹೇಳಿ ಮುಂಗಡ ಹಣ ಕೊಟ್ಟು ಹೋದ. ತ್ರಿಶೂಲ ಹಿಡಿದು, ನಾಲಿಗೆ ಹೊರಚಾಚಿ, ಕಂಗಳನ್ನು ಅಗಲಿಸಿಕೊಂಡು ಬಲಿಗಾಗಿ ಕಾದು ನಿಂತ ಕಾಳಿಕಾಂಬೆಯ ವಿಗ್ರಹವನ್ನು ರಾಜಣ್ಣ ತುಂಬ ಶ್ರದ್ಧೆಯಿಂದ ರೂಪಿಸಿದರು. ಎಲ್ಲ ಕೆಲಸ ಮುಗಿದ ಮೇಲೆ, ಆ ವಿಗ್ರಹವನ್ನು ಬಟ್ಟೆಯಿಂದ ಮುಚ್ಚಿ, ನಿರ್ಮಾಪಕರ ಬಳಿ ಹೋಗಿ ಹೇಳಿದರು; ನನ್ನ ಕೆಲಸ ಮುಗಿದಿದೆ. ಆದ್ರೆ ಒಂದು ವಿಷಯ: ಕಾಳಿಕಾದೇವಿಯ ಮೂರ್ತಿ ಭವ್ಯವಾಗಿದೆ. ಹೆದರಿಕೆ ಹುಟ್ಟಿಸುವಂತಿದೆ. ಹಾಗಾಗಿ ನೀವು ಒಬ್ಬರೇ ಹೋಗಿ ನೋಡುವ ಸಾಹಸ ಮಾಡಬೇಡಿ. ಚಿತ್ರತಂಡದ ಎಲ್ಲರ ಜತೆಗೇ ಹೋಗಿ ನೋಡಿ...'

ಈ ಎಚ್ಚರಿಕೆಯ ಮಾತು ಕೇಳಿದ ಮೇಲೆ ನಿರ್ಮಾಪಕನಿಗೆ ಸಹಜವಾಗಿಯೇ ಕುತೂಹಲ ಶುರುವಾಯಿತು. ಆತ ಅದೊಂದು ದಿನ ಬೆಳಗ್ಗೆ ಬೆಳಗ್ಗೆಯೇ ಒಬ್ಬನೇ ಹೋಗಿ ಕಾಳಿಕಾದೇವಿಯ ವಿಗ್ರಹದ ಬಟ್ಟೆ ತೆಗೆದ. ಅಷ್ಟೆ: ಆ ರುದ್ರ, ಉಗ್ರ ಹಾಗೂ ವ್ಯಗ್ರ ಮುಖಭಾವದ ದೇವಿಯ ಮೂರ್ತಿಯನ್ನು ನೋಡಿ ನಿರ್ಮಾಪಕನಿಗೆ ಹೃದಯಾಘಾತ ಆಗಿಹೋಯಿತು! ಇದನ್ನು ನೆನಪು ಮಾಡಿಕೊಂಡೇ ಡಾ. ರಾಜ್ ಕುಮಾರ್ ಸೇರಿದಂತೆ ಚಿತ್ರರಂಗದ ಹಿರಿಯ ನಟರೆಲ್ಲ ಹೇಳುತ್ತಿದ್ದರಂತೆ: ಬೈ ಛಾನ್ಸ್ ಯಾರಾದ್ರೂ ಕಳ್ಳರು ರಾತ್ರಿ ವೇಳೆ ರಾಜಣ್ಣನವರ ಮನೆಗೆ ನುಗ್ಗಿದ್ರು ಅಂತ ಇಟ್ಕೊಳ್ಳಿ. ಆ ಸಂದರ್ಭದಲ್ಲಿ ಮನೆಯೊಳಗಿರುವ ಹುಲಿ, ಸಿಂಹ ಅಥವಾ ಚಿರತೆಯ ಮೂರ್ತಿಯನ್ನು ಕಂಡಾಗ- ಇದು ಜೀವಂತ ಪ್ರಾಣಿಯೇ ಅನ್ನಿಸಿ ಕಳ್ಳರು ಸತ್ತೆನೋ ಕೆಟ್ಟೆನೋ ಅಂದುಕೊಂಡು ಪರಾರಿಯಾಗೋದು ಗ್ಯಾರಂಟಿ...'

ಹೀಗೆ ಮೌಲ್ಡಿಂಗ್ ಕಲಾವಿದನಾಗಿ ಏಕಮೇವಾದ್ವಿತೀಯ ಎನ್ನುವಂಥ ಸಾಧನೆ ಮಾಡಿದ ರಾಜಣ್ಣ, ಕೃಷ್ಣಲೀಲಾ, ನಾಗಕನ್ನಿಕಾ, ಭಕ್ತ ರಾಮದಾಸ, ಜಗನ್ಮೋಹಿನಿ, ಶ್ರೀನಿವಾಸ ಕಲ್ಯಾಣ, ಕಾಡಿನ ರಹಸ್ಯ, ಗಂಧದ ಗುಡಿ, ಹಣ್ಣೆಲೆ ಚಿಗುರಿದಾಗ, ಶಿವಶರಣೆ ನಂಬಿಯಕ್ಕ ಸೇರಿದಂತೆ ನೂರಾರು ಚಿತ್ರಗಳಿಗೆ ಕಲಾ ನಿರ್ದೇಶಕರಾಗಿ ದುಡಿದರು. ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್ ಹಾಗೂ ವರನಟ ಡಾ. ರಾಜ್‌ಕುಮಾರ್ ಇಬ್ಬರೂ ಆಗಷ್ಟೇ ಜನಪ್ರಿಯತೆಯ ಹತ್ತನೇ ಮೆಟ್ಟಿಲಲ್ಲಿ ಇದ್ದಾಗ, ರಾಜಣ್ಣನವರು ತಂತ್ರಜ್ಞರಾಗಿ ಸೂಪರ್‌ಸ್ಟಾರ್ ಎನ್ನಿಸಿಕೊಂಡಿದ್ದರು. ಅಂದರೆ, ಅವರ ಕೈ ಚಳಕದ ಕರಾಮತ್ತು ಹೇಗಿತ್ತೋ ಊಹಿಸಿಕೊಳ್ಳಿ. ಮುಂದೆ ಜಾನಪದ ಹಾಗೂ ಪೌರಾಣಿಕ ಹಿನ್ನೆಲೆಯ ಸಿನಿಮಾಗಳ ಕಾಲ ಮುಗಿದಾಗ, ಸಹಜವಾಗಿಯೇ ರಾಜಣ್ಣನಿಗೆ ಅವಕಾಶಗಳು ಕಡಿಮೆಯಾದವು. ಕೈ ಚೆನ್ನಾಗಿ ನಡೆಯುತ್ತಿದ್ದಾಗ ಮನೆಯನ್ನೇ ಛತ್ರದಂತೆ ಮಾಡಿಕೊಂಡು, ಸಿಗುತ್ತಿದ್ದ ದಿನಗೂಲಿಯಲ್ಲೇ ಬಂದವರಿಗೆಲ್ಲ ಊಟ ಹಾಕಿಸುತ್ತಿದ್ದ ರಾಜಣ್ಣ, ಮದ್ರಾಸು ತೊರೆದು ಮೈಸೂರಿಗೆ ಬಂದರು. ಕೂಡಿಟ್ಟಿದ್ದ ಹಣದಿಂದ ಆರು ಮಂದಿ ಮಕ್ಕಳಿಗೂ ಮದುವೆ ಮಾಡಿದರು. ಈ ಸಂದರ್ಭದಲ್ಲಿಯೇ ಮಾತನಾಡುವ ಗೊಂಬೆ' ಉಮ್ಮೇದಿಯಲ್ಲಿದ್ದ ಉದಯ್ ಜಾದೂಗಾರ್ ಅವರ ಪರಿಚಯವಾಯಿತು. ಮಗಾ, ನಿಂಗೆ ಮುದ್ ಮುದ್ದಾಗಿ ಕಾಣುವ ಗೊಂಬೆ ಬೇಕು ಅಲ್ವಾ? ಮಾಡಿಕೊಡ್ತೀನಿ ಬಿಡು, ಯೋಚಿಸಬೇಡ' ಎಂದವರೇ- ಹ್ಯಾರಿ' ಹೆಸರಿನ ಗೊಂಬೆಗೆ ರೂಪು ಕೊಟ್ಟರು ರಾಜಣ್ಣ. ಇವತ್ತು ದೇಶದಲ್ಲಿರುವ ಬಹುಪಾಲು ಜಾದೂಗಾರರು ಮಾತನಾಡುವ ಗೊಂಬೆ'ಯೊಂದಿಗೆ ಆಟಕ್ಕೆ ನಿಲ್ಲುತ್ತಾರೆ ನಿಜ, ಆ ಗೊಂಬೆಗೆ, ಹೀಗಿದ್ದರೇ ಸರಿ' ಎಂಬಂಥ shape ನೀಡಿದ್ದು ರಾಜಣ್ಣನ ಕೈಗಳೇ.

* * * *
ಇದಿಷ್ಟೂ ಹಳೆಯ ಕಥೆ. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಆಧಾರಸ್ತಂಭದಂತಿದ್ದ ಈ ಮೇರು ಕಲಾವಿದನ ಈಗಿನ ಪರಿಸ್ಥಿತಿ ಕಂಡರೆ ನೋವಾಗುತ್ತದೆ, ಬೇಸರವಾಗುತ್ತದೆ. ಚಿತ್ರರಂಗದ ಹಿರಿಯ ತಲೆಗಳ ಬಗ್ಗೆ, ನಮ್ಮ ಸರಕಾರದ ಬಗ್ಗೆ, ಜನಪ್ರತಿನಿಧಿಗಳ ಬಗ್ಗೆ, ಎಲೆಮರೆಯ ಕಾಯಂತಿರುವ ಕಲಾವಿದರನ್ನು ಗಮನಿಸದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳ ವರ್ತನೆಯ ಬಗ್ಗೆ ಸಿಟ್ಟು ಬರುತ್ತದೆ. ಏಕೆಂದರೆ, ಚಿತ್ರರಂಗಕ್ಕಾಗಿ ತನ್ನ ಬದುಕನ್ನೇ ಮುಡಿಪಾಗಿಟ್ಟ ಮೌಲ್ಡ್ ರಾಜಣ್ಣನಿಗೆ ಸರ್ಕಾರದಿಂದ ಒಂದೇ ಒಂದು ಪ್ರಶಸ್ತಿಯೂ ಬಂದಿಲ್ಲ. ಹಿರಿಯ ಕಲಾವಿದರಿಗೆ ಕೊಡಲಾಗುವ ಸಹಾಯಧನವೂ ಸಿಕ್ಕಿಲ್ಲ. ಚಿತ್ರರಂಗದ ಏಳಿಗೆಗಾಗಿ ದುಡಿದವರ ಬಗ್ಗೆ ಪುಸ್ತಕ ಬರೆಸಿದ ಪುಣ್ಯಾತ್ಮರಿಗೆ' ಮೌಲ್ಡ್ ರಾಜಣ್ಣನ ನೆನಪಾಗಿಲ್ಲ. ಕಲಾವಿದರ ಕೋಟಾದಲ್ಲಿ ಸಿಗುವ ಸೈಟು, ಪ್ರಶಸ್ತಿ, ಸನ್ಮಾನ... ಉಹುಂ, ಈ ಯಾವುದೂ ರಾಜಣ್ಣನಿಗೆ ಲಭಿಸಿಲ್ಲ.

ಆದರೆ, ಒಂದು ಸರಕಾರ ಮಾಡದ ಕೆಲಸವನ್ನು ಉದಯ ಜಾದೂಗಾರ್ ಮಾಡುತ್ತಿದ್ದಾರೆ. ಈ ಹಿಂದೆ- ಮಾತನಾಡುವ ಗೊಂಬೆಯನ್ನು ಪರಿಚಯಿಸುವಾಗ- ಇದರ ಹೆಸರು ಹ್ಯಾರಿ. ಇದನ್ನು ಲಂಡನ್‌ನಿಂದ ತಂದಿದ್ದೀನಿ' ಎನ್ನುತ್ತಿದ್ದೆ. ಆ ಮೂಲಕ ರಾಜಣ್ಣನ ಪ್ರತಿಭೆಯ ಬಗ್ಗೆ ಹೇಳದೆ ತಪ್ಪು ಮಾಡಿದೆ ಎನ್ನುವ ಉದಯ್, ಆ ತಪ್ಪಿಗೆ ಕ್ಷಮೆ ಕೇಳುವ ರೂಪದಲ್ಲಿ ಕಳೆದ ನಾಲ್ಕು ವರ್ಷಗಳಿಂದಲೂ ಮಾಸಿಕ 2000 ರೂ.ಗಳನ್ನು ರಾಜಣ್ಣನಿಗೆ ಕೊಡುತ್ತಿದ್ದಾರೆ. ಇದನ್ನು ನೆನಪು ಮಾಡಿಕೊಂಡು ಈಗಲೂ ಹನಿಗಣ್ಣಾಗುವ ರಾಜಣ್ಣ ನನ್ನಿಂದ ಕಸುಬು' ಕಲಿತುಕೊಂಡು ಚೆನ್ನಾಗಿ ಸಂಪಾದಿಸಿ ಶೋಕಿಗೆ ಬಿದ್ದಿರುವ ಸ್ವಂತ ಮಕ್ಕಳೇ ನನ್ನನ್ನು ಮರೆತಿದ್ದಾರೆ. ಹಾಗಿರುವಾಗ ಇವನು ಸಹಾಯ ಮಾಡ್ತಿದಾನಲ್ಲಪ್ಪಾ...' ಎನ್ನುತ್ತ ಗದ್ಗದಿತರಾಗುತ್ತಾರೆ. ಸದ್ಯ, ಉತ್ತರಹಳ್ಳಿಹಳ್ಳಿಯಲ್ಲಿರುವ ಮಗಳು ಇಂದ್ರಾಣಿಯ ಮನೆಯಲ್ಲಿರುವ ರಾಜಣ್ಣ ತಮ್ಮ ಕಲಾಕೃತಿಗಳನ್ನು ಸ್ವಾಮೀಜಿಯೊಬ್ಬರ ಆಶ್ರಮಕ್ಕೆ ದಾನ ಮಾಡಿದ್ದಾರೆ. ಈಗ ಬಡತನದ ಮಧ್ಯೆ, ಬವಣೆಗಳ ಮಧ್ಯೆ, ಸಂಕಟಗಳ ಮಧ್ಯೆ ಉಳಿದಿದ್ದಾರೆ. ಬದುಕಿನ ಸಂಧ್ಯಾ ಕಾಲದಲ್ಲಿರುವ ಅವರಿಗೆ, ತಮ್ಮ ಪ್ರತಿಭೆಗೆ ಸೂಕ್ತ ಪ್ರತಿಫಲ ಸಿಗಲಿಲ್ಲ ಎಂಬ ನೋವಿದೆ. ತಮ್ಮ ಸಂಕಷ್ಟದ ಮಧ್ಯೆಯೂ ಜತೆಗಿರುವವರ ಏಳಿಗೆಯನ್ನು ಬಯಸುವ, ಕಪ್ಪು-ಬಿಳುಪು ಸಿನಿಮಾಗಳ ಕಾಲದ ಥರಾವರಿ ಕಥೆ ಹೇಳಿ ನಗಿಸುವ ಅವರಿಗೆ ಒಂದು ಪ್ರಶಸ್ತಿ ನೀಡುವ ಮನಸು ರಾಜ್ಯ ಸರಕಾರಕ್ಕೆ ಬರಬಾರದೆ? ಮೌಲ್ಡ್ ರಾಜಣ್ಣನ ಕಣ್ಣಲ್ಲಿ ಸುಪ್ರೀಂ ಹೀರೋ' ಅನ್ನಿಸಿಕೊಂಡಿರುವ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರಾದರೂ ರಾಜಣ್ಣನಿಗೆ ಪ್ರತಿಭೆಗೆ ಸೂಕ್ತ ಸನ್ಮಾನ ಮಾಡಲು ಮುಂದಾಗಬಾರದೆ? ಅಂದಹಾಗೆ ಮೌಲ್ಡ್ ರಾಜಣ್ಣನೊಂದಿಗೆ ಮಾತಾಡಬೇಕೆಂದರೆ: 92421 42266.

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಆಧಾರಸ್ತಂಭದಂತಿದ್ದ ರಾಜಣ್ಣ ಈಗ ಬಡತನದ ಮಧ್ಯೆ, ಬವಣೆಗಳ ಮಧ್ಯೆ, ಸಂಕಟಗಳ ಮಧ್ಯೆ ಉಳಿದಿದ್ದಾರೆ. ಬದುಕಿನ ಸಂಧ್ಯಾ ಕಾಲದಲ್ಲಿರುವ ಅವರಿಗೆ, ತಮ್ಮ ಪ್ರತಿಭೆಗೆ ಸೂಕ್ತ ಪ್ರತಿಫಲ ಸಿಗಲಿಲ್ಲ ಎಂಬ ನೋವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+