ಗಾಂಧಿ ಕನ್ನಡಕಕ್ಕೆ ಎಕ್ಸ್-ರೇ ಪವರ್ : ರಾಹುಲ್

Subscribe to Oneindia Kannada
Rahul Gandhi
ನವದೆಹಲಿ, ಮಾ.9: ಗಾಂಧಿ ಕನ್ನಡಕ ನೇತ್ರಕ್ಕೆ ಮಾತ್ರವಲ್ಲ ಬುದ್ಧಿಗೂ ಸಹ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನುಡಿದಿದ್ದಾರೆ.

ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಕನ್ನಡಕ ಹಲವು ದಶಕಗಳ ನಂತರ ಭಾರತಕ್ಕೆ ಹಿಂದಿರುಗಿರುವ ಶುಭ ಸಂದರ್ಭದಲ್ಲಿ ಮದ್ಯೋದ್ಯಮಿ ಡಾ.ವಿಜಯ್ ಮಲ್ಯ ನಗರದಲ್ಲಿ ಏರ್ಪಡಿಸಿದ್ದ ಸಂತೋಷ ಕೂಟದಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿಯವರು, ದೇಶದಲ್ಲೇ ಪ್ರಪ್ರಥಮ ಬಾರಿಗೆ ಗಾಂಧೀಜಿಯವರ ಕನ್ನಡಕವನ್ನು ಮತ್ತೊಮ್ಮೆ ಧರಿಸಿ ಈ ಮಾತನ್ನು ಆಡಿದರು.

"ಗಾಂಧಿ ತಾತನ ಕಣ್ಣಿನ ಪವರ್ ಬೇರೆ. ನನ್ನ ಕಣ್ಣಿನ ಪವರ್ ಬೇರೆ" ಎಂದ ರಾಹುಲ್, "ಆದರೆ, ಈ ಕನ್ನಡಕ ಕಣ್ಣಿಗೆ ಮಾತ್ರವಲ್ಲ. ಹೃದಯ ಮತ್ತು ಬುದ್ಧಿಗೂ ಹೊಸದೊಂದು ದೃಷ್ಟಿ ನೀಡುವಂತಹುದು. ಇದನ್ನು ಧರಿಸಿದ ಮೇಲೆ ನನಗೆ ಭಾರತದ ಬಗೆಗೆ ಹೊಸದೊಂದು ದರ್ಶನವೇ ಆಗಿದೆ. ಭಾರತೀಯರ ಬಗೆಗೆ ಒಳನೋಟ ತೋರುವ ಎಕ್ಸ್-ರೇ ಪವರ್ ಈ ಕನ್ನಡಕಕ್ಕಿದೆ" ಎಂದರು.

"ಈ ಕನ್ನಡಕವನ್ನು ಧರಿಸಲು ಅವಕಾಶ ನೀಡಿದ ಮಲ್ಯ ಅಂಕಲ್‌ಗೆ ಧ್ಯಾಂಕ್ಸ್" ಎಂದ ರಾಹುಲ್ ಗಾಂಧಿ, ಅನುಮತಿ ದೊರೆತರೆ ಲೋಕಸಭಾ ಚುನಾವಣೆಯ ಪ್ರಚಾರ ಸಂದರ್ಭದಲ್ಲಿ ಈ ಕನ್ನಡಕವನ್ನು ಪ್ರತಿದಿನ ಧರಿಸಿ ಜನ ಸಾಮಾನ್ಯರಿಗೆ ಅದರ ದರ್ಶನ ನೀಡಲು ತಾವು ಸಿದ್ಧರಿರುವುದಾಗಿ ಅವರು ಘೋಷಿಸಿದರು.

ಇದೇ ಸಂದರ್ಭದಲ್ಲಿ ಹಾಜರಿದ್ದ ಖ್ಯಾತ ಚಿತ್ರ ನಟಿ ಮತ್ತು ಸಂಸದೆ ಜಯಪ್ರದ, ಮಲ್ಯ ಅನುಮತಿ ಇತ್ತರೆ ಮುಂದಿನ ಬಾರಿ ವೈದ್ಯಕೀಯ ತಪಾಸಣೆಗೆ ಹೋದಾಗ ಗಾಂಧೀಜಿಯವರ ಬ್ಲಡ್ ಟೆಸ್ಟ್ ರಿಪೋರ್ಟ್ ಅನ್ನು ತಾವು ಬಳಸುವುದಾಗಿ ನುಡಿದರು.

(ಮಜಾವಾಣಿ ದೆಹಲಿ ಬ್ಯೂರೋ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Please Wait while comments are loading...