ಮಾರುಕಟ್ಟೆಗೆ ಮೊಸಳೆ ಕಣ್ಣೀರು!

Subscribe to Oneindia Kannada
Political satire on majavani by vaarta vidooshaka
(ಮಜಾವಾಣಿ ಬ್ಯುಸಿನೆಸ್ ಡೆಸ್ಕ್)

ಬೆಂಗಳೂರು ಡಿ. 9: ವಿಖ್ಯಾತ ಡಿಸೈನರ್ ಸಂಸ್ಥೆಯಾದ ಫ್ರಾನ್ಸಿನ ಲಕೋಸ್ಟ್ ಸಂಸ್ಥೆ ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಮೊಸಳೆ ಕಣ್ಣೀರನ್ನು ಕ್ರೋಕೋಟಿಯೇ ಎಂಬ ಹೆಸರಿನಲ್ಲಿ ಮಾನ್ಯ ಮುಖ್ಯಮಂತ್ರಿ ಬಿ.ಎಸ್. ಯಡ್ಯೂರಪ್ಪನವರ ಸಮ್ಮುಖದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿತು.

BSY and URA shed Crocotier tears
ಜಗತ್ತಿನ ಅತ್ಯುತ್ತಮ ಮೊಸಳೆ ತಳಿಗಳಿಂದ ಸಂಗ್ರಹಿಸಿರುವ ಈ ಕಣ್ಣೀರು ಶೇ.100 ನೈಸರ್ಗಿಕವಾಗಿದ್ದು, ಮಾನವರ ಉಪಯೋಗಕ್ಕೆ ಸಂಪೂರ್ಣ ಸುರಕ್ಷಿತವಾಗಿದೆ. ಈ ಉತ್ಪನ್ನದ ಕುರಿತು ಮಾಹಿತಿ ನೀಡಿದ ಲಕೋಸ್ಟ್ ಸಂಸ್ಥೆಯ ಸಿ.ಇ.ಓ. ಕಾರ್ಲಾ ಬ್ರೂನಿಯವರು, "ಸಮಾಜದ ಗಣ್ಯವ್ಯಕ್ತಿಗಳಿಗೆ ಕೆಲವೊಮ್ಮೆ ಸಾಮಾನ್ಯ ಜನತೆಯ ಬಗೆಗೆ ಅಗಾಧ ಶೋಕ ವ್ಯಕ್ತಪಡಿಸುವ ಸನ್ನಿವೇಶ ಎದುರಾಗುತ್ತದೆ. ಅಂತಹ ಸಂದರ್ಭಗಳಲ್ಲಿ ನಮ್ಮ ಕಂಬನಿ ಕೈಕೊಟ್ಟಾಗ, ಎದೆಗುಂದಿ ಮುಖ ಮುಚ್ಚಿಕೊಳ್ಳುವ ಬದಲು ಕ್ರೋಕೋಟಿಯೇ ಬಳಸುವುದು ಸೂಕ್ತ. ಕ್ರೋಕೋಟಿಯೇ ಹೈಪೋ ಅಲರ್ಜೆನಿಕ್ ಆಗಿದ್ದು ಅದರ ಬಳಕೆಯಿಂದ ಯಾವುದೇ ಸೈಡ್ ಎಫೆಕ್ಟ್ಸ್‌ನ ಭಯವಿಲ್ಲ" ಎಂದರು.

ಸಮಾರಂಭದಲ್ಲಿ ಭಾಗವಹಿಸಿದ್ದ ಖ್ಯಾತ ಲೇಖಕ ಯು.ಆರ್.ಅನಂತಮೂರ್ತಿಯವರು ಎಲ್ಲವೂ ಕೃತಕವಾಗುತ್ತಿರುವ ಈ ಯುಗದಲ್ಲಿ ಕ್ರೋಕೋಟಿಯೇ ಶೇ.100 ನೈಸರ್ಗಿಕ ಮೊಸಳೆ-ಕಣ್ಣೀರಾಗಿರುವುದಕ್ಕೆ ಅತ್ಯಂತ ಹರ್ಷ ವ್ಯಕ್ತಪಡಿಸಿದರು.

ಮೊಸಳೆ ಕಣ್ಣೀರ ಕಥೆಗಳು
ಬಾಯಲ್ಲಿ ಭಗವದ್ ಗೀತೆ ಬಗಲಲ್ಲಿ ಬಾಕು
ಗಳಗಳನೆ ಅತ್ತ ಖರ್ಗೆ, ಗಹಗಹಿಸುತ್ತಿರುವ ಧರ್ಮಸಿಂಗ್

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Please Wait while comments are loading...