• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಧ್ಯ ವಯಸ್ಕ ಮಹಿಳೆಯರಲ್ಲಿ ಮತ್ತೆ ಚೈತ್ರದ ಚಿಗುರು

By ಜಯನಗರದ ಹುಡುಗಿ
|

ನೀವು 25ರಿಂದ 30 ವರುಷದ ತರುಣ ತರುಣಿಯರಾಗಿದ್ದರೆ ನಿಮ್ಮ ಅಮ್ಮನಿಗೆ ಅಥವಾ ಅತ್ತೆಗೆ ಅಥವಾ ಮನೆಯಲ್ಲಿರುವ ಯಾವುದೇ ಹೆಣ್ಣುಮಕ್ಕಳು 50 ತಲುಪಿದ್ದರೆ ಅಥವಾ ಅದಕ್ಕಿಂತ ದೊಡ್ಡವರಾಗಿದ್ದರೆ ನೀವು ಖಂಡಿತಾ ಈ ಲೇಖನವನ್ನ ಓದಿ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ನಮ್ಮ ಪೀಳಿಗೆಯ ಸುಮಾರು ಜನರ ಅಮ್ಮಂದಿರು ಅಥವಾ ದೊಡ್ಡವರು ಗೃಹಿಣಿಯರೇ. ಅವರ ಓದು, ಕೆಲಸ ಎಲ್ಲವನ್ನ ಬಿಟ್ಟು ಮನೆಯ ಕೆಲಸ, ಮಕ್ಕಳ ಆರೈಕೆಯಲ್ಲಿಯೇ ತೊಡಗಿಕೊಂಡಿರುವವರು. ಅವರಿಗೆ ಅವರ ಗಂಡ, ಅತ್ತೆ, ಮಾವ, ಅಪ್ಪ ಅಮ್ಮ, ಮಕ್ಕಳು ಬಿಟ್ಟು ಯಾವ ಪ್ರಪಂಚವೂ ಇಲ್ಲ. ಅಲ್ಲಲ್ಲಿ ನಡೆಯುವ ಮನೆಯ ಫಂಕ್ಷನ್ ಗಳು ಮಾತ್ರ ಅವರಿಗೆ ಸೋಶಿಯಲೈಜ್ ಮಾಡುವ ಜಾಗಗಳು. ನಮ್ಮ ದಿನಚರಿಗೆ ತಮ್ಮ ದಿನಚರಿಯನ್ನ ಹೊಂದಿಸಿಕೊಂಡು ಬದುಕುವ ಜೀವಿಗಳು. ನಮ್ಮ ಹಳೆಯ ಕಾಲದ ಸಿನೆಮಾಗಳ ತ್ಯಾಗಮಯಿ "ಹೀರೋ ತಾಯಿಯ" ಪಾತ್ರಗಳಿಗೆ ಇವರೇ ಪ್ರೇರಣೆ.

ಹೀಗೆಲ್ಲ ಜೀವ ತೇಯ್ದ ನಂತರ ಆಗುವ ಪರಿಣಾಮಗಳು ಅನೇಕ. ಅದರ ಬಗ್ಗೆ ನಾವು ಕಿಂಚಿತ್ತೂ ಆಲೋಚನೆ ಮಾಡುವುದಿಲ್ಲ. ಎರಡು ವಾರದ ಹಿಂದೆ ಅಜ್ಜಿ ಮನೆಯ ವಿಜಯಕ್ಕ ಇದರ ಬಗ್ಗೆಯೇ ತುಂಬಾ ಒಳ್ಳೆ ಕಿರುಚಿತ್ರ ಮಾಡಿದರೆಂಬ ವಿಷಯ ಕೇಳ್ಪಟ್ಟೆ. ಅವರ ಫೇಸ್ಬುಕ್ಕಿನ ವಾಲಿನ ಮೇಲೆ ನೋಡಿದೆ ಸಹ.

ಒಂದು ಪಾತ್ರ ತನ್ನ ಮಗ ಓದು ಮುಗಿಸಿಕೊಂಡು ಅಮೇರಿಕಾಗೆ ಹೋಗಿ ತನ್ನ ಬದುಕನ್ನ ಕಟ್ಟಿಕೊಳ್ಳುತ್ತಿದ್ದಾನೆ. ಅವಳ ಗಂಡ ತನ್ನ ಕೆಲಸದಲ್ಲಿಯೇ ಮಗ್ನನಾಗಿದ್ದಾನೆ. ತನ್ನ ಮಗ ಮತ್ತು ಗಂಡನಿಗೆ ಕೆಲಸ ಮಾಡಿಕೊಟ್ಟು ಅಭ್ಯಾಸ ಮಾಡಿಕೊಂಡವಳಿಗೆ ಈಗ ಅವರವರ ಪಾಡು ಅವರವರು ನೋಡಿಕೊಂಡ ನಂತರ ಅವಳ ಬದುಕಿಗೆ ಅರ್ಥವಿಲ್ಲ ಅನ್ನಿಸುತ್ತಿದೆ. ತನ್ನ ಗೆಳತಿಗೆ ಕರೆಮಾಡಿ ತನ್ನ ದುಃಖವನ್ನ ತೋಡಿಕೊಳ್ಳುತ್ತಾಳೆ.

ಹೊಸ ಚಿಗುರು ಹಳೆಬೇರಿನಲ್ಲಿ ನವಚೈತನ್ಯ ಮೂಡಿಸಲಿ

ಅವಳ ಗೆಳತಿ "ನಿನ್ನ ಜೀವನವನ್ನ ಜೀವಿಸಿಯೇ ಇಲ್ಲ, ಗೆಳತಿಯರನ್ನ ಭೇಟಿ ಮಾಡುತ್ತಲೇ ಇರುತ್ತಿರಲ್ಲಿಲ್ಲ, ಯಾವಾಗ ಕೇಳಿದರೂ ಮಗನಿಗೆ ಪರೀಕ್ಷೆ, ಗಂಡ ಮನೆಗೆ ಬಂದು ಬಿಡುತ್ತಾನೆ ಎಂದೆಲ್ಲಾ ಕಾರಣ ಕೊಟ್ಟು ತಪ್ಪಿಸಿಕೊಳ್ಳುತ್ತಿದ್ದೆ, ನಿನ್ನದೇ ಅನ್ನೋ ಜೀವನವೇ ಇರಲ್ಲಿಲ್ಲ, ಅದು ತಪ್ಪು" ಎಂದು ಬುದ್ಧಿ ಹೇಳುತ್ತಾ ಹೋಗುತ್ತಾಳೆ. ಇದು ಬಹುಶಃ ಸುಮಾರು ಹೆಣ್ಣುಮಕ್ಕಳು ಮಾಡುವ ತಪ್ಪು. ಅವರಿಗೆ ಅವರದೇ ಆದ ಜೀವನವನ್ನ ಕಂಡುಕೊಳ್ಳುವ ಪ್ರಯತ್ನ ಮಾಡುವುದೇ ಇಲ್ಲ.

ಕರ್ನಾಟಕದ ಲೋಕಸಭಾ ಸದಸ್ಯರಲ್ಲಿ ಯಾರು ಎಷ್ಟು ಓದಿದ್ದಾರೆ?

ತೀರ ಇಪ್ಪತ್ತರಿಂದ ಇಪ್ಪತ್ತ್ಮೂರು ವಯಸ್ಸಿನೊಳಗಡೆ ಮದುವೆಯಾಗಿ ಮನೆಯ ಎಲ್ಲಾ ಜವಾಬ್ದಾರಿಗಳನ್ನ ತೆಗೆದುಕೊಳ್ಳುವ ಹೆಣ್ಣು ಮಕ್ಕಳಿಗೆ ಅವರ ಮನೆಯೇ ಪ್ರಪಂಚವಾಗಿಬಿಡುತ್ತದೆ. ಕೆಲವು ಹೊಸದಾಗಿ ಮದುವೆಯಾಗಿರುವ ನನ್ನ ಗೆಳತಿಯರಿಗೂ ಅದೇ ಸಮಸ್ಯೆ. ಹೊಸದಾಗಿ ಮದುವೆಯಾಗಿರುವ ಹೆಣ್ಣುಮಕ್ಕಳಲ್ಲೂ ಕಂಡು ಬರುತ್ತದೆ. ಹೊಸ ಪರಿಸರಕ್ಕೆ ಹೊಂದಿಕೊಳ್ಳೋದಕ್ಕೆ ಸಮಯ ಬೇಕಿದ್ದರೂ ಸಹ ಅವರ ಹಳೆ ಗೆಳೆಯರು ಗೆಳತಿಯರನ್ನ ಮರೆತು ಮುಂದೆ ಹೋಗಿರುತ್ತಾರೆ. ಅವರದೇ ಆದ ಪ್ರಪಂಚವನ್ನ ಬಿಟ್ಟು ಬಹಳಷ್ಟು ದೂರ ಹೋಗಿರುತ್ತಾರೆ.

ಬೇವು-ಬೆಲ್ಲದ ಯುಗಾದಿ: ಆಚರಣೆ ಭಿನ್ನ... ಸಂಭ್ರಮ ಎಲ್ಲೆಲ್ಲೂ ಒಂದೇ!

ಇವೆಲ್ಲಾ ಜವಾಬ್ದಾರಿಗಳು ಮುಗಿದು ತಮ್ಮ ಮಕ್ಕಳು ಅವರವರ ಜೀವನ ನೋಡಿಕೊಂಡು ಹೋದಾಗ ಅವರಿಗೆ ಆವರಿಸುವ ಖಿನ್ನತೆ, ಅಥವಾ ಮನಸ್ಸಿನಲ್ಲಿನ ತಳಮಳ ಇವೆಲ್ಲದಕ್ಕೆ ಪರಿಹಾರ ಕಂಡುಕೊಳ್ಳಲು ಬಹಳ ಕಷ್ಟ ಪಡಬೇಕಾಗುತ್ತದೆ. ಯಾರಿಗೆ ಅವರ ಪರಿಸ್ಥಿತಿ ಅರ್ಥವಾಗುತ್ತದೆ ಎಂದು ಹುಡುಕಲು ಹೊರಡುತ್ತಾರೆ. ಅದೇ ಸಮಯದಲ್ಲಿ ಅವರಿಗೆ ಆಗುವ ಮೆನೋಪಾಸ್ ಇನ್ನು ಗಿರಕಿ ಹೊಡೆಸಿಬಿಡುತ್ತದೆ. ಸ್ವಾನುಕಂಪಕ್ಕೂ ಜಾರಿ ಬಿಡಬಹುದು. ಇದು ಎಲ್ಲರ ಮನೆಯಲ್ಲಿಯೂ ಕಂಡು ಬರುವ ವಿಷಯ.

ಮನೆಯಲ್ಲಿ ಇರುವ ನಾವುಗಳು ಇಷ್ಟು ಸೂಕ್ಷ್ಮ ವಿಚಾರವನ್ನ ಸಾಲ್ವ್ ಮಾಡುವುದಕ್ಕೆ ಪ್ರಯತ್ನ ಮಾಡುವುದಿಲ್ಲ ಎಂದು ಆಗಾಗ ಅಲೋಚಿಸುತ್ತಿರುತ್ತೇನೆ. ನಾವು ಚಿಕ್ಕವರಿದ್ದಾಗ ಅಮ್ಮ ನಮಗೆ ಹೊಸ ಗೆಳೆಯ ಗೆಳತಿಯರನ್ನ ಪರಿಚಯ ಮಾಡಿಕೊಡಲ್ಲಿಲ್ಲವೇ, ಹೊಸ ಹವ್ಯಾಸಗಳಿಗೆ ದೂಡಲಿಲ್ಲವೇ ಅಥವಾ ಸ್ವಾವಲಂಬಿಗಳಾಗಿ ಮಾಡಲಿಲ್ಲವೇ?

ಯಾರು ಕುಬೇರರು, ಯಾರು ಕುಚೇಲರು? ಆಸ್ತಿಪಾಸ್ತಿ ವಿವರ ಬೇಕೆ?

ದೊಡ್ಡವರಾದವ್ರು ಮತ್ತಷ್ಟು ಚಿಕ್ಕವರಾಗುತ್ತಾರೆ ಎಂಬ ಮಾತಿದೆ. ಹಾಗೆ ನಾವೂ ಸಹ ನಮ್ಮ ಅಮ್ಮನನ್ನ ಅತ್ತೆಯನ್ನ ಚಿಕ್ಕ ಹುಡುಗಿಯರನ್ನಾಗಿ ಮಾಡಬೇಕಿದೆ. ಅವರೇ ಮರೆತು ಹೋದ ರಂಗೋಲಿ, ಸಂಗೀತ, ನೃತ್ಯ, ಗಣಿತ ಪಾಠ, ಅವರ ಹಳೆಯ ಗೆಳೆಯ ಗೆಳತಿಯರು, ಜೊತೆ ಅವರ ಜೀವನವನ್ನ ಅವರೇ ಕಂಡುಕೊಳ್ಳಬೇಕಿದೆ. ಅವರ ಮನೆಯಷ್ಟೆ ಅವರ ಸೀಮಿತ ಗಡಿಯಲ್ಲ, ಅದರ ಹೊರಗೂ ಪ್ರಪಂಚವಿದೆ ಎನ್ನುವ ಮಾತನ್ನ ಆಗಾಗ ನೆನಪಿಸುತ್ತಲೇ ಇರಬೇಕಾಗಿದೆ. ನ್ಯೂಸ್ ಚಾನೆಲ್ಲಿನ ಉದ್ವೇಗ ಭರಿತ ಮಾತುಗಳು, ಟೀವಿ ಸೀರಿಯಲ್ಲಿನ ಕೆಟ್ಟ ಕಥೆಗಳಿಂದ ನಮ್ಮ ಮನೆಯ ಹೆಂಗಸರನ್ನ ಆಚೆ ತರಬೇಕಿದೆ. ಅವರಿಗೆ ಟೈಮ್ ಪಾಸ್ ಮಾಡೋದು ಬೇರೆ ಥರ ಎಂದು ಆಗಾಗ ತಿಳಿಸಬೇಕು.

ಒಂದು ಪೀಳಿಗೆಯ ಇಡೀ ಹೆಣ್ಣುಕುಲದ ವರ್ಕ್ ಫೋರ್ಸನ್ನ ನಾಶ ಮಾಡಿದ್ದ ನಮ್ಮ ಕೆಟ್ಟ ಬುದ್ಧಿಗೆ ನಾವು ಮರುಕ ಪಡಬೇಕು. ಅದೆಷ್ಟು ವಿದ್ಯಾವಂತ ಹೆಣ್ಣು ಮಕ್ಕಳನ್ನ ತ್ಯಾಗ ಎಂಬ ದೊಡ್ಡ ಮಾತನ್ನ ಹೇಳಿ ಮನೆಯಲ್ಲಿಯೇ ಇಷ್ಟವಿಲ್ಲದಿದ್ದರೂ ಕೂಡಿಸಿದ್ದಾರೆ ನೀವೆ ಹೇಳಿ? ಬಾರ್ಸಿಲೋನಾದಲ್ಲಿದ್ದಾಗ ನಮ್ಮ ಅಪಾರ್ಟ್ಮೆಂಟಿನ ಸುಮಾರು ಮಧ್ಯವಯಸ್ಸಿನ ಹೆಂಗಸರು ನನಗಿಂತ ಫಿಟ್ ಆಗಿ, ನನಗಿಂತ ಶಕ್ತಿವಂತರಾಗಿರುತ್ತಿದ್ದರು. ನಾನೇ ಪರೀಕ್ಷೆ ಎಂದು ರೂಮಿನಲ್ಲಿಯೇ ಇದ್ದರೆ ಬಂದು ಎಳೆದುಕೊಂಡು ಹೋಗಿ 5 ಕಿಮೀ ಬೆಟ್ಟ ಹತ್ತಿಸಿ ಕರೆದುಕೊಂಡು ಬರುತ್ತಿದ್ದರು. ಮನೆ ಮನೆ ಎಂದು 2 ಬಾರಿಗಿಂತ ಜಾಸ್ತಿ ಅಂದರೆ ಉದ್ಧಾರ ಆಗಲ್ಲ ಎಂದು ನಕ್ಕುಬಿಡುತ್ತಿದ್ದರು.

ರಾಜ್ಯದ ಸಂಸದರಲ್ಲಿ ಯಾರ ವಿರುದ್ಧ ಎಷ್ಟು ಕ್ರಿಮಿನಲ್ ಪ್ರಕರಣಗಳಿವೆ?

ನನ್ನ ಅಮ್ಮನ ಸಮಾನರಾದ, ಅತ್ತೆಯ ಸಮಾನರಾದ ಹೆಣ್ಣುಮಕ್ಕಳಲ್ಲಿ ಒಂದೇ ವಿನಂತಿ. ನಿಮ್ಮ ಮರೆತುಹೋದ ಜೀವನವನ್ನ ಮತ್ತೆ ಕಂಡುಕೊಳ್ಳಿ, ನೀವು ಮರೆತ ವಿದ್ಯೆಯನ್ನ ಮತ್ತೆ ಕಲಿಯಿರಿ, ಕಲಿಸಿರಿ ಮತ್ತೆ ಹುಡುಗಿಯರಾಗಿ. ಜೀವಂತಿಕೆ ಇರುವಷ್ಟು ಜೀವ ಖುಷಿಯಾಗಿರುತ್ತದೆ. ಅಮ್ಮ ಫೋನ್ ಮಾಡಿದಾಗಲ್ಲೆಲ್ಲಾ ತಾನು ಕಲಿತ ಜರ್ಮನ್ನಿನ ಹೊಸ ಪದ, ಯೋಗ ಕ್ಲಾಸಿಗೆ ಲೇಟ್ ಆಗುತ್ತಿದೆ ಎಂದು ಶಾಲೆಯ ಹಾಗೆ ಡಿಸಿಪ್ಲೀನಾಗಿ ಹೋಗುವ ಪರಿ, ಸೂರ್ಯ ಮುಳುಗುವಷ್ಟ್ರಲ್ಲಿ ದಬದಬನೆ ಅವಳ ವಾಕಿಂಗ್, ಯಾವುದೋ ಪುಸ್ತಕದ ವಿಮರ್ಶೆಯನ್ನ ತಾನೇ ಬರೆದು ಫೇಸ್ ಬುಕ್ಕಿನಲ್ಲಿ ಪ್ರಕಟಿಸುವ ಪರಿ ನೋಡಿದಾಗಲ್ಲೆಲ್ಲ ನನಗೆ ಬಹಳ ಖುಷಿಯಾಗುತ್ತದೆ.

ನಾನು ಫೋನ್ ಮಾಡಿದಾಗ ಅಮ್ಮ ಬ್ಯುಸಿ ಎಂದು ಮೆಸೇಜ್ ಕಳಿಸಿದಾಗ ನನಗಾಗುವ ಖುಷಿ ಅಷ್ಟಿಷ್ಟಲ್ಲ. ಅವಳ ಜೀವನ, ವ್ಯಕ್ತಿತ್ವ ಮತ್ತೆ ಅವಳೇ ಕಂಡುಕೊಂಡಿದ್ದು ಫೀನಿಕ್ಸಿನಂತೆ ಎದ್ದು ಬಂದಿದ್ದು ಅವಳ ಹಿರಿಮೆ. ಇದು ಎಲ್ಲರಲ್ಲೂ ಬರಲಿ. ಅಂತಹ ಬದುಕಿಗೆ ಯುಗಾದಿಯೇ ನಾಂದಿ ಹಾಡಲಿ, ಎಲ್ಲ ಮಧ್ಯ ವಯಸ್ಕ ಮಹಿಳೆಯರ ಬಾಳಲ್ಲಿ ಚೈತ್ರದ ಚಿಗುರು ಚಿಗುರಲಿ. ಅಂದ ಹಾಗೆ ನಿಮ್ಮ ಅಮ್ಮ ಅಥವಾ ಅತ್ತೆಯ ಹಳೆ ಭಾವಚಿತ್ರವನ್ನ ನೋಡಿದ್ದೀರಿ ಅಥವಾ ಅವರ ಕಲೆಯ ಬಗ್ಗೆ ನಿಮಗೆಷ್ಟು ಗೊತ್ತು? ತಿಳಿದುಕೊಳ್ಳಿ....

English summary
Middle aged women, your life is not yet over. Get back to your younger life, learn what you like, engage yourself in activities, rejuvenate yourself.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more