• search

ವಿಶಿಷ್ಟ ವ್ಯಕ್ತಿತ್ವದ ಎಡಚರ ಸ್ವಾತಂತ್ರ್ಯಕ್ಕೆ ಜೈ ಎನ್ನಿ!

By ಜಯನಗರದ ಹುಡುಗಿ
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬಾರ್ಸಿಲೋನಾದಲ್ಲಿ ಒಬ್ಬಳೆ ಮೊಟ್ಟ ಮೊದಲಬಾರಿಗೆ 4 ಲೆವೆಲ್ ಇದ್ದ ಸೂಪರ್ ಮಾರ್ಕೆಟ್ ಗೆ ಹೋದೆ. ಮೊದಲ ಬಾರಿ ಮನೆಯ ಸಾಮಾನು ಅಂಥದೆಲ್ಲಾ ಜವಾಬ್ದಾರಿಗಳನ್ನೆಲ್ಲಾ ಹೊತ್ತಿದ್ದು. ಸೂಪರ್ ಮಾರ್ಕೆಟ್ ಅಲ್ಲಿಯೇ ಲಿಫ್ಟ್, ಎಸ್ಕಲೇಟರ್, ಎಲಿವೇಟರ್ ಇವೆಲ್ಲಾ ನೋಡಿ ಹೈರಾಣಾಗಿ ಅರ್ಥವಾಗದ ಭಾಷೆಯಲ್ಲಿ ವೆರ್ದೂರ (ಶಾಖಾಹಾರಿ) ಸೆಕ್ಷನ್ ಗೆ ಹೋಗೋ ಅಷ್ಟರಲ್ಲಿ ನನ್ನ ಹಿಂದೆ ದುರು ದುರು ಎಂದು ಬೈದು, ಕೆಕ್ಕರಿಸಿ ನೋಡೀ "ಜಾಗ ಬಿಡು" ಎಂದು ಬೈದು ಹೋದಳು ಒಂದು ಹುಡುಗಿ.

  ನನ್ನ ಪಾಡಿಗೆ ನಾನು ಎಸ್ಕಲೇಟರ್ ಅಲ್ಲಿ ಎಡಗಡೆಗೆ ನಿಂತಿದ್ದೆ. ನನ್ನ ಹಿಂದೆ ಸುಮಾರು ಜನ ನಿಂತಿದ್ದರು. ಅವರ ನೋಟದಿಂದ ನನ್ನಿಂದಲೇ ಎಡಕ್ಕೆ ನಿಂತಿದ್ದರು ಎಂದು ಗೊತ್ತಾಯಿತು. ಅಲ್ಲಿ ಎಡಕ್ಕೆ ಜನ ಅವರ ಪಾಡಿಗೆ ಹೋಗುತ್ತಾರೆ. ಎಸ್ಕಲೇಟರ್ ನಲ್ಲಿ ಬಲಕ್ಕೆ ನಿಲ್ಲಬೇಕು. ಅವರ ದಾರಿ ಎಡಕ್ಕೆ. ನನಗೆ ಅದು ಅರ್ಥವಾಗದೇ ಮಧ್ಯದಲ್ಲಿ ನಿಂತು ಹೋದೆ. ಇವೆರೆಲ್ಲರ ಬೈಗುಳದಿಂದ ತಪ್ಪಿಸಿಕೊಳ್ಳೋಕೆ.

  ಸಚಿನ್ ಅಮಿತಾಭ್ ಒಬಾಮಾ ಮತ್ತು ನಿಮ್ಮ ಪ್ರೀತಿಯ

  ಅಲ್ಲಿನ ಬಸ್ ಸಂಚಾರ, ರಸ್ತೆ ನಿಯಮ ಎಲ್ಲವೂ ಎಡಚರಿಗೆ ಅನುಕೂಲವಾದ್ದದ್ದು. ನನ್ನ ಅಲ್ಲಿದ್ದ ಮುಕ್ಕಾಲು ಪಾಲು ಸ್ನೇಹಿತರು ಎಡಚರು. ಅಲ್ಲಿನ ಕಾರು, ಸೈಕಲ್ ಲೇನ್, ಬೀಗ ಹಾಕುವ ರೀತಿ, ಮನೆಯಲ್ಲಿನ ಕತ್ತರಿ ಎಲ್ಲವೂ ಎಡಚರ ಪರವೆ ಎಂದು ತಿಳಿದು ಒಮ್ಮೆಲೆ ನನಗೆ ಇದಕ್ಕೆ ಅಡ್ಜೆಸ್ಟ್ ಹೇಗಾಗೋದು ಎಂದು ಯೋಚಿಸುತ್ತಿದ್ದಾಗ, ನನ್ನ ಮನೆಯಲ್ಲಿ ನನ್ನ ಒಡಹುಟ್ಟಿದ ತಂಗಿ ನಮ್ಮಂತಹ ಬಲಗೈ ಜನರ ಮಧ್ಯೆ ಎಷ್ಟು ಒದ್ದಾಡುತ್ತಿದ್ದಳು ಎಂಬ ಸತ್ಯ ಅರಿವಾಗಿ ಇವರೆಲ್ಲರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಬಯಸಿದೆ.

  Everything is right about the Left Handers

  "ನಾವು ಅಲ್ಪಸಂಖ್ಯಾತರಾದಾಗ ಮಾತ್ರ ಅವರ ನೋವು ನಮಗೆ ತಿಳಿಯೋದು, ಬಹುಸಂಖ್ಯಾತರ ಮಧ್ಯೆ ಇದ್ದರೆ ಅದರ ಆಳ ತಿಳಿಯುವುದಿಲ್ಲ" ಎಂಬ ಮಾತನ್ನ ಸುಮಾರು ಬಾರಿ ಕೇಳಿದ್ದೆ. ಎಷ್ಟೋ ಬಾರಿ ತಂಗಿಗೆ "ಹೀಗ್ ತಿರುಗಿಸೋ ಬದ್ಲು, ಹಾಗ್ ತಿರುಗಿಸು" ಎಂದು ಅತಿ ಸಾಮಾನ್ಯವಾಗಿ ತಿಳಿಸುತ್ತಿದ್ದೆ. ಅವತ್ತು ಎಡಚರ ಡೋರ್ ನಾಬ್ ಸರಿಯಾಗಿ ತಿರುಗಿಸದೆ ಹೀಗೂ ಹಾಗೂ ಬೇಕಾದಷ್ಟು ಬಾರಿ ತಿರುಗಿಸಿ ಮನೆ ಲಾಕ್ ಆಗಿ, ನಾಬ್ ಕೈಗೆ ಬಂದು, ಅವತ್ತು ಛಳಿಯಲ್ಲಿ ಗೆಳತಿ 4 ಘಂಟೆ ಬರೋವರೆಗೂ ಫುಟ್ ಪಾತ್ ನಲ್ಲಿ ಕೂತಿದ್ದು ಇನ್ನೂ ನೆನಪಿದೆ. ತನ್ನ ಅಭ್ಯಾಸವನ್ನ ಒಂದರೆಕ್ಷಣದಲ್ಲಿ ಬದಲಾಯಿಸೋದು ಬಹು ಕಷ್ಟ ಅನ್ನೋದು ಅನುಭವಕ್ಕೆ ಬಂದಾಗಲೇ ಅದರ ಕಥೆ ಗೊತ್ತಾಗೋದು.

  ಮನೆಗೆಲಸ ಹೆಣ್ಮಕ್ಕಳೇ ಯಾಕೆ ಮಾಡ್ಬೇಕು? ಸಮಾನತೆ ಮೈ ಫುಟ್!

  ನನ್ನ ತಂಗಿಯನ್ನ ಶಾಲೆಗೆ ಸೇರಿಸಿದಾಗ ಬಹು ಸಾಮಾನ್ಯವಾಗಿ ಎಲ್ಲಾ ಶಿಕ್ಷಕರು ಅವಳಿಗೆ ಬಲಗೈಗೆ ಪೆನ್ಸಿಲ್ ಕೊಟ್ಟು ಬರೆಸೋದಕ್ಕೆ ಶುರು ಮಾಡಿದ್ದರು. ಅವಳಿಗೆ ಗ್ರಿಪ್ ಬರುತ್ತಿರಲ್ಲಿಲ್ಲ. ಬರೆಯೋದಕ್ಕೆ ಸೋಂಬೇರಿತನ ಎಂದು ಅಂದುಕೊಳ್ಳುತ್ತಿದ್ದರು. ತುಂಬಾ ದಿವಸಗಳ ನಂತರ ಎಡಗೈಗೆ ಪೆನ್ಸಿಲ್ ಕೊಟ್ಟಾಗ ಬರೆಯೋದು ಸುಲಭವಾಯ್ತು. ನಮ್ಮ ಮನೆಯ ಮೊದಲ ಎಡಗೈ ಸುಂದರಿ ನನ್ನ ತಂಗಿ.

  ನಮ್ಮ ಮನೆಯಲ್ಲಿ ಎಡಚರ ಬಗ್ಗೆ ಹೊಸ ಹೊಸ ವಿಷಯಗಳು ತಿಳಿಯೋದಕ್ಕೆ ಶುರುವಾಯ್ತು. ಸಾಮಾನ್ಯ ಕೀ - ಲಾಕ್, ಕತ್ತರಿ, ಗಾಡಿ ಓಡಿಸೋದು, ಕಾರ್ ಓಡಿಸೋದು ಎಲ್ಲವೂ ಅವಳಿಗೆ ವಿಭಿನ್ನ. ಪೂರ್ತಿ ವಿಭಿನ್ನ. ಅಮ್ಮ ಆಗಾಗ ಶಾಲೆಗೆ ಬಂದು ಅವಳನ್ನ ಬೆಂಚಿನ ಎಡಕ್ಕೆ ಕೂರಿಸಿ ಅಂತ ಸುಮಾರು ಬಾರಿ ಹೇಳುತ್ತಿದ್ದರು. ಕೆಲವೊಮ್ಮೆ ನಮ್ಮ ಸಂಸ್ಕೃತಿಯಲ್ಲಿ ಎಡಗೈ ಬಳಸೋದು ಸಮಂಜಸವಲ್ಲ ಎಂಬ ವಿಷಯಕ್ಕೆ ಮೊದಲ ರೆಬಲ್ ಅವಳು. ಎಡಗೈಯಲ್ಲಿ ಹೊಡೆಸಿಕೊಂಡಿದ್ದರೆ ಮತ್ತೆ ನೀವು ಆ ಮಾತನ್ನ ಅವರ ಮುಂದೆ ಆಡುವುದೇ ಇಲ್ಲ.

  ಚಪ್ಪರಿಸಿಕೊಂಡು ಓದಿ ನನ್ನ ಮತ್ತು ಚಾಕೋಲೇಟ್ ಕಥೆಯನ್ನು!

  ಈ ಎಡಚರು ಜಗತ್ತಿನ ಜನರಲ್ಲಿ ಹತ್ತು ಪ್ರತಿಶತ ಮಾತ್ರ ಇರೋದು. ಅವರನ್ನ ಅತಿ ಬುದ್ಧಿವಂತರೆಂದೇ ಕರೆಯುತ್ತಾರೆ. ಮನೋವೈದ್ಯೆ ಕ್ಲಾರೆ ಪೋರಾಕ್ ಎಡಚರ ಬಗ್ಗೆ ಸುಮಾರು ಅಧ್ಯಯನ ಮಾಡಿದ್ದಾರೆ. ನಮ್ಮ ಮೆದುಳು, ಅದರ ಎಡ, ಬಲ ಭಾಗ ಇವೆಲ್ಲವೂ ಹೇಗೆ ಕೆಲಸ ಮಾಡುತ್ತದೆ ಎಂಬುದರ ಅನುಗುಣವಾಗಿ ನಾವು ಯಾವ ಕೈಯಲ್ಲಿ ಬರೆಯುತ್ತೇವೆ ಎಂಬುದು ನಿರ್ಧಾರವಾಗುತ್ತದೆ. 90 ಪ್ರತಿಶತ ಜನರು ಬಲಗೈಯವರು. ಮಾತು ಮತ್ತು ಭಾಷೆ ಮೆದುಳಿನ ಎಡ ಭಾಗದ ಪ್ರಾಸೆಸ್. ಹಾಗೂ ದೇಹದ ಬಲ ಭಾಗವನ್ನ ಎಡ ಮೆದುಳು ಕಂಟ್ರೋಲ್ ಮಾಡುವುದರಿಂದ ಮತ್ತು ಬರೆಯುವುದು ಭಾಷೆಯ ಒಂದು ಅಂಗವಾದುದ್ದರಿಂದ ತುಂಬಾ ಜನರು ಬಲಗೈಯನ್ನ ಬರೆಯೋಕೆ ಉಪಯೋಗಿಸಿದ್ದರ ಪುರಾವೆ ಸಹಿತ ತಿಳಿಸಿದ್ದಾರೆ.

  ಮತ್ತೊಂದು, ನಮ್ಮಲ್ಲಿ ಇರುವ ಡಿ ಜೀನ್ ಮತ್ತು ಸಿ ಜೀನ್ ಎಂಬುದರಿಂದ ಆಗೋದು. ಈ ಡಿ ಜೀನ್ ಇರೋರು ಬಲಗೈಯವರಾಗುತ್ತಾರೆ. ಅಕಸ್ಮಾತ್ ಒಬ್ಬೊಬ್ಬರಿಗೆ ಸಿ ಜೀನ್ ಇದ್ದರೆ ಅವರು ಎಡಚರಾಗುತ್ತಾರೆ. ಕೋಟಿಗೊಬ್ಬ ಥರ. ಆದರೆ ಸುಮಾರು ಜನರು ಬಲಗೈಯವರಾಗೋದು ಕೆಲವೊಮ್ಮೆ ನಮ್ಮ ಸುತ್ತಮುತ್ತಲಿನ ಜನರಲ್ಲಿ ಬಿತ್ತಿರುವ ಎಡಗೈ ಕೆಟ್ಟದ್ದು ಎಂಬ ನಂಬಿಕೆಯಿಂದ.

  ಮುಂಚಿನ ಕಾಲದಲ್ಲಿ ಜನಕ್ಕೆ ಕೆಲವುದರ ಬಗ್ಗೆ ತಿಳಿವಳಿಕೆ ಇರಲ್ಲಿಲ್ಲ. ಅವರು ನಂಬಿದ್ದ ಸತ್ಯ ಬೇರೆಯವರು ಮಾಡಬೇಕೆಂದು ಬಯಸಿದ್ದರು. ಅದರಲ್ಲಿ ಭೂಮಿ ಗುಂಡಗಿಲ್ಲ, ಭೂಮಿ ಸುತ್ತ ಸೂರ್ಯ ಸುತ್ತುತ್ತದೆ ಎಂಬ ಅತಾರ್ಕಿಕ ನಂಬಿಕೆಗಳೊಂದಿಗೆ ಈ ಥರ ಎಡಗೈ ಸಹ ಕೆಟ್ಟದ್ದು ಎಂದು ನಂಬಿದ್ದರು. ಇವೆಲ್ಲಾ ದಾಟಿ ನಾವು ಬರಬೇಕಿದೆ. ನಿಮ್ಮ ಮೊದಲ ಮಗು ಬಲಗೈಯಲ್ಲಿ ಬರೆಯತ್ತೆ ಅನ್ನೋದು ಎಷ್ಟು ಸಹಜವೋ, ಅಷ್ಟೆ ಸಹಜ ಮತ್ತೊಂದು ಮಗು ಎಡಗೈಯಲ್ಲಿ ಬರೆಯುತ್ತೆ ಅನ್ನೋದು. ನಿಮ್ಮ ಅತಾರ್ಕಿಕ ಮೂಢನಂಬಿಕೆಗಳಿಗೆ ಮಕ್ಕಳ ನ್ಯಾಚುರಲ್ ಎಬಿಲಿಟಿಯನ್ನ ಬಲಿಕೊಡಬೇಡಿ. ಇಷ್ಟಕ್ಕೂ ಆಗಸ್ಟ್ 13 ಎಡಚರ ದಿವಸ, ಆಗಸ್ಟ್ 15 ಸ್ವಾತಂತ್ರ್ಯ ದಿವಸ. ಎಡಚರ ಸ್ವಾತಂತ್ರ್ಯಕ್ಕೆ ಜೈ!

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  August 13 is celebrated as International Left Handers' Day. Psychologists explain how left-handed people work differently. There is nothing wrong with the left handers. Meghana Sudhindra throws more light on Lefties.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more