ಮೊಬೈಲ್ ಸುಪ್ರಭಾತಮ್: ನೆಟ್ಟು ಉಚಿತಮ್ ಹುಚ್ಚು ಖಚಿತಮ್|

Posted By:
Subscribe to Oneindia Kannada

'ಐಲು ಐಲು ಕೈಲಿದ್ರೆ ಮೊಬೈಲು..' ಮೊಬೈಲ್ ಫೋನ್ ಗಳ ಕ್ರೇಜ್ ಬಗ್ಗೆ ಅನೇಕ ಸಾಂಗ್ಸು, ಟ್ರಾಲ್ಸ್ ಬಂದಿರಬಹುದು. ಈಗ ಮೊಬೈಲ್ ಫೋನ್ ಹುಚ್ಚಿಗೆ ಕಿಚ್ಚು ಹಚ್ಚಿದ ಉಚಿತ ಇಂಟರ್ನೆಟ್ ಸೌಲಭ್ಯವನ್ನು ಅಣಕಿಸುವ ಸುಪ್ರಭಾತ ಮಾದರಿಯ ಗೀತ ಸಾಹಿತ್ಯ ಇಲ್ಲಿದೆ..

ಈ ಗೀತೆಯಲ್ಲೇ ಹೇಳಿರುವಂತೆ ಇದನ್ನು ರಚಿಸಿದವರು ಸೂರ್ಯಸಾರಥಿ. ಮಿಕ್ಕ ಮಾಹಿತಿ ನಮಗೂ ಗೊತ್ತಿಲ್ಲ. ವಾಟ್ಸಪ್ ಮೂಲಕ ಹರಿದಾಡುತ್ತಿರುವ ಈ ಸಾಹಿತ್ಯವನ್ನು ಹಾಗೆ ನಿಮ್ಮ ಮುಂದಿಡುತ್ತಿದ್ದೇವೆ.

ಪ್ರಾತಃಸ್ಮರಾಮಿ ಮೊಬೈಲ್ ಫೋನಮ್

ಅಂಗುಷ್ಠೇ ಸ್ಕ್ರೀನು ತೀಡನಮ್||

ನೋಟಿಫಿಕೇಷನ್ನು ವಿಹಾರಾರ್ಥೇ|

ಪ್ರಭಾತೇ ಮೊಬೈಲ್ದರ್ಶನಮ್||1||

ಭಾವಾರ್ಥ : ಬೆಳಗೆದ್ದು ಮೊಬೈಲ್ ಫೋನ್ ಮೊದಲಿಗೆ ಸ್ಮರಿಸುತ್ತೇನೆ, ಹೆಬ್ಬೆರಳಿನಿಂದ ಸ್ಕ್ರೀನ್ ತಿಕ್ಕುತ್ತೇನೆ, ನೋಟಿಫಿಕೇಷನ್ ಗಳನ್ನು ನೋಡುತ್ತಾ ಮೊಬೈಲ್ ದರ್ಶನ ಆರಂಭಿಸುತ್ತೇನೆ.

ಮೊಬೈಲ್ ಮೆ ವಸತೇ 4ಜಿ |

ಸರ್ವತಂ ನೆಟ್ವರ್ಕ್ ಮಂಡಲೇ||

ದ್ವಿತೀಯ ಪತ್ನೀ ನಮಸ್ತುಭ್ಯಂ|

ಪ್ರಥಮ ಪತ್ನೀ ಕ್ಷಮಸ್ವಮೇ|| 2||

ಭಾವಾರ್ಥ: ಮೊಬೈಲ್ ಫೋನ್ ನಲ್ಲಿ 4ಜಿ ಕನೇಕ್ಷನ್ ಇದರೆ ಸಾಲದು, ಜತೆಗೆ ನೆಟ್ವರ್ಕ್ ಎಲ್ಲೆಡೆ ಸಿಗುವಂತಿರಬೇಕು. ಎರೆಡೆರಡು ಸಿಮ್ ವುಳ್ಳವರನ್ನು ಛೇಡಿಸುತ್ತಾ ಎರಡನೇ ಪತ್ನಿಗೆ ನಮಸ್ಕಾರ, ಮೊದಲ ಪತ್ನಿ ನನ್ನನ್ನು ಕ್ಷಮಿಸಲಿ ಎಂದು ಬರೆಯಲಾಗಿದೆ. ಇನ್ನಷ್ಟು ಚರಣಗಳನ್ನು ಮುಂದೆ ಓದಿ ಆನಂದಿಸಿ..

ವಾಟ್ಸಪ್ ಮೂಲಕ ಹರಿದಾಡುತ್ತಿರುವ ಸಾಹಿತ್ಯ

ವಾಟ್ಸಪ್ ಮೂಲಕ ಹರಿದಾಡುತ್ತಿರುವ ಸಾಹಿತ್ಯ

ಈ ಗೀತೆಯಲ್ಲೇ ಹೇಳಿರುವಂತೆ ಇದನ್ನು ರಚಿಸಿದವರು ಸೂರ್ಯಸಾರಥಿ. ಮಿಕ್ಕ ಮಾಹಿತಿ ನಮಗೂ ಗೊತ್ತಿಲ್ಲ. ವಾಟ್ಸಪ್ ಮೂಲಕ ಹರಿದಾಡುತ್ತಿರುವ ಈ ಸಾಹಿತ್ಯವನ್ನು ಹಾಗೆ ನಿಮ್ಮ ಮುಂದಿಡುತ್ತಿದ್ದೇವೆ.

ಪ್ರಾತಃಸ್ಮಾರಾಮಿ ಮೊಬೈಲ್ ಫೋನಮ್
ಅಂಗುಷ್ಠೇ ಸ್ಕ್ರೀನು ತೀಡನಮ್||
ನೋಟಿಫಿಕೇಷನ್ನು ವಿಹಾರಾರ್ಥೇ|
ಪ್ರಭಾತೇ ಮೊಬೈಲ್ದರ್ಶನಮ್||1||

ಭಾವಾರ್ಥ : ಬೆಳಗೆದ್ದು ಮೊಬೈಲ್ ಫೋನ್ ಮೊದಲಿಗೆ ಸ್ಮರಿಸುತ್ತೇನೆ, ಹೆಬ್ಬೆರಳಿನಿಂದ ಸ್ಕ್ರೀನ್ ತಿಕ್ಕುತ್ತೇನೆ, ನೋಟಿಫಿಕೇಷನ್ ಗಳನ್ನು ನೋಡುತ್ತಾ ಮೊಬೈಲ್ ದರ್ಶನ ಆರಂಭಿಸುತ್ತೇನೆ.

****


ಮೊಬೈಲ್ ಮೆ ವಸತೇ 4ಜಿ |
ಸರ್ವತಂ ನೆಟ್ವರ್ಕ್ ಮಂಡಲೇ||
ದ್ವಿತೀಯ ಪತ್ನೀ ನಮಸ್ತುಭ್ಯಂ|
ಪ್ರಥಮ ಪತ್ನೀ ಕ್ಷಮಸ್ವಮೇ|| 2||

ಭಾವಾರ್ಥ: ಮೊಬೈಲ್ ಫೋನ್ ನಲ್ಲಿ 4ಜಿ ಕನೇಕ್ಷನ್ ಇದರೆ ಸಾಲದು, ಜತೆಗೆ ನೆಟ್ವರ್ಕ್ ಎಲ್ಲೆಡೆ ಸಿಗುವಂತಿರಬೇಕು. ಎರೆಡೆರಡು ಸಿಮ್ ವುಳ್ಳವರನ್ನು ಛೇಡಿಸುತ್ತಾ ಎರಡನೇ ಪತ್ನಿಗೆ ನಮಸ್ಕಾರ, ಮೊದಲ ಪತ್ನಿ ನನ್ನನ್ನು ಕ್ಷಮಿಸಲಿ ಎಂದು ಬರೆಯಲಾಗಿದೆ.

ಜಿಯೋ ನೆಟ್ವರ್ಕು ತ್ರಿಪುರಾಂತಕಾರೀ|

ಜಿಯೋ ನೆಟ್ವರ್ಕು ತ್ರಿಪುರಾಂತಕಾರೀ|

ಜಿಯೋ ನೆಟ್ವರ್ಕು ತ್ರಿಪುರಾಂತಕಾರೀ|
ಏರ್ಟೆಲ್ಲು, ಐಡಿಯಾ ಸರ್ವಂ ಪರಾರಿ||
ನೆಟ್ಟು ಉಚಿತಮ್ ಹುಚ್ಚು ಖಚಿತಮ್|
ಮೊಬೈಲಸ್ಯ ಕೃತಂ ತಥಂ||3||

ಭಾವಾರ್ಥ: ರಿಲಯನ್ಸ್ ಸಂಸ್ಥೆ ಜಿಯೋ ನೆಟ್ವರ್ಕನ್ನು ಹಾಡಿಹೊಗಳಲಾಗಿದೆ. ಏರ್ ಟೆಲ್, ಐಡಿಯಾಗೆ ಇದರಿಂದ ಭಾರಿ ಹೊಡೆಯ ಬಿದ್ದಿದೆ. ಉಚಿತವಾಗಿ ಇಂಟರ್ನೆಟ್ ಸಿಕ್ಕಿರುವುದರಿಂದ ಮೊಬೈಲ್ ಬಳಕೆದಾರರ ಹುಚ್ಚು ಹೆಚ್ಚಾಗಿದೆ. ಮೊಬೈಲ್ ನಿಂದ ಆಗಿದ್ದೆ ಇದೆಲ್ಲ ಎನ್ನಲಾಗಿದೆ.
****

ಕುಲದೇವತಾ ವಾಟ್ಸಪ್ಪೌ|
ಫೇಸ್ಬುಕ್ಕೌ ಇಷ್ಟ ದೇವತಾಃ||
ಇಂಟರ್ನೆಟ್ಟಾತ್ಮವೋ ಪರಮಾತ್ಮಃ|
ಮೊಬೈಲೂ ಸ್ವರ್ಗ ಮೀದೃಷಂ||4||

ಭಾವಾರ್ಥ: ಮೊಬೈಲ್ ಗಳ ಕುಲದೇವತೆ ಎಂದರೆ ಅದು ವಾಟ್ಸಪ್, ಫೇಸ್ ಬುಕ್ ಇಷ್ಟದೇವತೆ, ಇಂಟರ್ನೆಟ್ ಎಂಬುದು ಪರಮಾತ್ಮ, ಮೊಬೈಲ್ ಫೋನ್ ಸ್ವರ್ಗ ಸಮಾನ ಎಂದು ವರ್ಣಿಸಲಾಗಿದೆ.

ಫೇಸ್ಬುಕ್ಕೇ ಕೃತಂ ಕರ್ಮಾ|

ಫೇಸ್ಬುಕ್ಕೇ ಕೃತಂ ಕರ್ಮಾ|

ಫೇಸ್ಬುಕ್ಕೇ ಕೃತಂ ಕರ್ಮಾ|
ವಾಟ್ಸಪ್ಪಂ ಮೇ ಪುನರಾಕೃತಾ ||
ಘಳಿಘಳಿಗೆ ದರ್ಶನಮ್ ಕುರ್ಯಾತ್ |
ಮನಸ್ಸಂತೋಷಮಮ್ ಭೂಯಾತ್ ||5||

ಭಾವಾರ್ಥ: ಫೇಸ್ಬುಕ್ ನಲ್ಲಿ ಮಾಡಿದ ಕರ್ಮವು ವಾಟ್ಸಪ್ ನಲ್ಲಿ ಮತ್ತೆ ಮಾಡಲಾಗುತ್ತದೆ. ಹೀಗಾಗಿ, ಪ್ರತಿಕ್ಷಣ ನೋಡುವುದು ಅನಿವಾರ್ಯ. ಆದರೆ, ಇದರಿಂದ ಮನಸ್ಸು ಸಂತೋಷಮಯವಾಗುವುದು.
***

ಮೊಬೈಲ್ ಯೂಸರ್ ನಿತ್ಯ ಮೌನಿಃ|
ಪ್ರತಿಕ್ಷಣಮ್ ಬ್ರೌಸಿಂಗು ಕರ್ಮಣೀ||
ಅಪ್ಡೇಟ್ ಚೆಕಿಂಗ್ ಚಾಪಲ್ಯಸ್ಯ|
ಸಾಯಂ ಪ್ರಾತಃ ಮೊಬೈಲ್ತೀಡಮ್ || 6 ||

ಭಾವಾರ್ಥ: ಮೊಬೈಲ್ ಫೋನ್ ಹುಚ್ಚು ಹೆಚ್ಚಾದ ಹಾಗೆ ಬಳಕೆದಾರರು ಹೆಚ್ಚೆಚ್ಚು ಮೌನಕ್ಕೆ ಜಾರುತ್ತಾರೆ. ಪ್ರತಿಕ್ಷಣ ಬ್ರೌಸಿಂಗ್ ಮಾಡುತ್ತಿರುತ್ತಾರೆ ಜತೆಗೆ ಅಪ್ಡೇಟ್ ಪಡೆಯುವ ಆಸೆ ಹೆಚ್ಚಾಗುತ್ತದೆ. ಬೆಳಗ್ಗೆ-ಸಂಜೆ ಮೊಬೈಲ್ ಸ್ಕ್ರೀನ್ ತೀಡುವುದರಲ್ಲೇ ಕಾಲ ಕಳೆಯುತ್ತಾರೆ.

ಇಂಟರ್ನೆಟ್ಟಸ್ಯ ಧರ್ಮಸ್ಯ|

ಇಂಟರ್ನೆಟ್ಟಸ್ಯ ಧರ್ಮಸ್ಯ|

ಇಂಟರ್ನೆಟ್ಟಸ್ಯ ಧರ್ಮಸ್ಯ|
ಬ್ರೌಸಿಂಗೇ ನಿತ್ಯ ಪೂಜನಮ್||
ನೆಟ್ಟುಂ ನಶ್ಯತಿ ಮತಿಭ್ರಂಶಾತ್|
ಪೃಷ್ಠ ಜ್ವಲಿತ ಮಾರ್ಜಾಲಃ||7||

ಭಾವಾರ್ಥ: ಇಲ್ಲಿ ಇಂಟರ್ನೆಟ್ ಎಂಬುದೇ ಧರ್ಮ, ಬ್ರೌಸಿಂಗ್ ಮಾಡುವುದೇ ನಿತ್ಯ ಪೂಜೆ, ಇಂಟರ್ನೆಟ್ ಇಲ್ಲದಿದ್ದರೆ ಬುದ್ಧಿಕೆಡುತ್ತದೆ. ಅಂಡು ಸೊಟ್ಟುಕೊಂಡ ಬೆಕ್ಕಿನ ಹಾಗೆ ಓಡಾಡತೊಡಗುತ್ತಾರೆ.
****

ಸ್ಮಾರ್ಟುಫೋನಾಯ ವಿದ್ಮಹೇ |
ಫೋರ್ಜಿ ಸಿಮ್ಮಾಯ ಧೀಮಹೇ|
ತನ್ನೋ ನೆಟ್ವರ್ಕು ಪ್ರಚೋದಯಾತ್|| 8||

ಭಾವಾರ್ಥ: ನೆಟ್ವರ್ಕ್ ಸಿಗಬೇಕು ಎಂದು ಆಹ್ವಾನ ನೀಡುವುದು ಹೇಗೆ, 4ಜಿ ಸಿಮ್ ಯುಳ್ಳ ನನ್ನ ಸ್ಮಾರ್ಟ್ ಫೋನಿಗೆ ನೆಟ್ವರ್ಕ್ ಬೇಗ ಬಾ ಎಂದು ಕರೆಯಲಾಗುತ್ತಿದೆ.

ಇತಿ ಶ್ರೀಮದ್ ಮೊಬೈಲ್ಗೀತಾ ಸು ಉಪನಿಷತ್ ಕಲಿಯುಗದ ವಿದ್ಯಾಯಾಮ್, ಮೊಬೈಲ್ ಶಾಸ್ತ್ರೇ, ಶ್ರೀ ಟೆಕ್ನಾಲಜಿ ಪುರಾಣೇ, ಡಿವೈಸು ಖಾಂಡೇ, ಸೂರ್ಯಸಾರಥಿ ರಚಿತಮ್ ಪ್ರಥಮೋಧ್ಯಾಯಃ ||

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Here is a comedy song lyrics in style of Suprabhatam on Mobile phone craze and how people are addicted to smartphone on day to day life.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ