• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಕಸ್ಮಾತ್ ಚಿನ್ನದ'ಒಳ ಉಡುಪು' ಗಿಫ್ಟ್ ಸಿಕ್ಕಿದ್ರೆ? ರಿಯಾಕ್ಷನ್ ಹೇಗಿರುತ್ತೆ?

By ಸುವರ್ಣಾನಂದ
|

ಕರ್ನಾಟಕದಲ್ಲಿ ಈಗ ದುಬಾರಿ ವಾಚು, ಕಾರುಗಳದ್ದೇ ಸುದ್ದಿ. ಹಾಲಿ ಮಾಜಿ ರಾಜಕಾರಣಿಗಳ ವಾಕ್ಸಮರಕ್ಕೆ, ವಾಕ್ಚಾತುರ್ಯಕ್ಕೆ, ಅಂಕಿ ಅಂಶ, ಕಥೆಗಳಿಗೆ ವೇದಿಕೆ ಒದಗಿಸಿದೆ.ಈ ಸಂದರ್ಭದಲ್ಲಿ ಒಂದು ಕಾಲ್ಪನಿಕ ಲೇಖನ ಇಲ್ಲಿದೆ.

ಅಕಸ್ಮಾತ್ ನಮ್ಮ'ಮಂತ್ರಿಗಳಿಗೆ' ಯಾರಾದ್ರೂ, ಯಾಕಾದ್ರೂ 'ಚಿನ್ನದ ಕಾಚ' (underwear) ಗಿಫ್ಟ್ ಕೊಟ್ಟಿದ್ರೆ.. ಅದು ಲೀಕಾಗಿದ್ರೆ, it means ಚಿನ್ನದ underwear ಅನ್ನೋ ಸುದ್ಧಿ ಲೀಕಾಗಿದ್ರೆ, ಅವರು ಏನ್ ಮಾಡ್ತಾ ಇದ್ರು? ಒಂದು ತಿಂಗಳ ಕಾಲ 'ಅಂಡು ಕೆರಕೊಂಡು' ಯೋಚ್ನೆ ಮಾಡಿ ಒಂದು ಕಥೆ ಹೇಳ್ತಾ ಇದ್ರು..[ದುಬಾರಿ ಹ್ಯೂಬ್ಲಟ್ ವಾಚು ಪುರಾಣದ ಕಂತೆ]

-------

ನಾನು ಧಾರವಾಡದಲ್ಲೋ, ಬೆಳಗಾವಿಯಲ್ಲೋ ಓದೋವಾಗ ಹಾಸ್ಟೆಲ್ಲಿನಲ್ಲಿದ್ದೆ.. ನನ್ನ ರೂಮಲ್ಲಿ ನನ್ನ ಸಹಪಾಠಿ ಮತ್ತು ಗೆಳೆಯ 'ಹಗಲ್ಕರ್' ಅಂತ ಒಬ್ಬ ಇದ್ದ.. ನಾನು ಬಡವ ಅವನು ನಂಗಿಂತ ಬಡವ.. ಅವನಿಗೆ ಕಾಚ ತಗೋಳೋಕು ಕಾಸಿರಲಿಲ್ಲ.. ನಾನು ಯೂಸ್ ಮಾಡಿ ಹಳೆಯದಾದ ಅಂಡರ್ ವೇರ್ ಗಳನ್ನು ಅವನಿಗೆ ಕೊಡ್ತಾ ಇದ್ದೆ, ಅವನು ಅದನ್ನ ಹಾಕೋತಾ ಇದ್ದ..! [ಗಡಿಯಾರದ ಗಲಾಟೆ, ಎಚ್ಡಿಕೆ ಬುಟ್ಟಿಯಲ್ಲಿ ಹೊಸ ಹಾವು!]

ಕಾಲೇಜು ಮುಗಿದು ನಾನು ರಾಜಕೀಯಕ್ಕೆ ಬಂದೆ, ಅವನು ಬ್ಯುಸಿನೆಸ್ ಮಾಡೋಕೆ 'ಮಂಗೋಲಿಯಾ' ದೇಶಕ್ಕೆ ಹೋದ.. ಅಲ್ಲಿ ಅವನು ದೊಡ್ಡ businessman ಆಗಿ ಕೋಟ್ಯಾಂತರ ರೂಪಾಯಿ ಸಂಪಾದ್ನೆ ಮಾಡಿದ..! 'ಮೂರು ತಿಂಗಳ ಹಿಂದೆ ಫೇಸ್ಬುಕ್ಕಲ್ಲಿ' ಅವನು ನಂಗೆ ಮೆಸೇಜ್ ಮಾಡಿದ.. "ನಲವತ್ತು ವರ್ಷಗಳ ನಮ್ಮ ಗೆಳೆತನದ ಬಗ್ಗೆ ಮಾತಾಡಿದ.." ಕಾಲೇಜಿನಲ್ಲಿದ್ದಾಗ ಅವನು ನನ್ನ ಅಂಡರ್ವೇರ್ ಹಾಕೋತಾ ಇದ್ದಿದ್ದನ್ನೆಲ್ಲಾ ನೆನಪಿಸಿಕೊಂಡ...[ವಾಚ್ ತೊಟ್ಟ ಸಿದ್ದರಾಮಯ್ಯ ವಿರುದ್ಧ ಕ್ರಿಮಿನಲ್ ಕೇಸ್?]

'ನಾಲ್ಕು ತಿಂಗಳ ಹಿಂದೆ ಬೆಂಗಳೂರಿಗೆ ಬಂದಾಗ' ನನ್ನ ಭೇಟಿಯಾಗಿ ಹಳೆ ಕಾಚದ ಋಣ ತೀರಿಸಲು 'ಚಿನ್ನದ ಕಾಚ' ಗಿಫ್ಟ್ ಕೊಟ್ಟು ಹೋದ..

"ಮುವತ್ತು ವರ್ಷಗಳ ಗೆಳೆತನ, ಬೇಡ ಅನ್ನೋಕೆ ಮನಸ್ಸು ಬರಲಿಲ್ಲ, ತಗೊಂಡೆ..!" ಚಿನ್ನದ ಕಿರೀಟಾನೋ, ಚಿನ್ನದ ಚಪ್ಪಲಿನೋ, ಕೈಗಡಿಯಾರಾನೋ ಕೊಟ್ಟಿದ್ರೆ "ನನ್ನ ಗೆಳೆಯ ಕೊಟ್ಟಿರೋ ಗಿಫ್ಟು!" ಎಂದು ಹೆಮ್ಮೆಯಿಂದ ಬಹಿರಂಗಪಡಿಸಬಹುದಿತ್ತು..

ಚಿನ್ನದ ಕಾಚ ಅಂತ ಪಂಚೆ ಎತ್ತಿ ಎತ್ತಿ ತೋರಿಸೋಕ್ ಆಗುತ್ತದೆಯೇ? ಅಥವ ನಾನು ಚಿನ್ನದ ಕಾಚ ಹಾಕಿದೀನಿ ಅಂತ ಬೊಂಬ್ಡಾ ಹೊಡ್ಕೋಳಕ್ಕಾಗತ್ತಾ? ಹಾಗಾಗಿ ಕಾಚದ ವಿಚಾರ ಹೇಳ್ಕೋಳೋಕೆ ಮುಜುಗರವಾಗಿ ಸುಮ್ಮನಿದ್ದುಬಿಟ್ಟೆ.. [ಕಾಲದೊಂದಿಗೆ ಓಡುವ ಕೈವಾಚು ಪುರಾಣ]

'ಆರು ತಿಂಗಳ ಹಿಂದೆ ಮೈಸೂರಲ್ಲಿ' ದಸರಾ ಕಾರ್ಯಕ್ರಮ ಉದ್ಘಾಟನೆಗೆ ಹೋಗಿದ್ದಾಗ, ಸಾರ್ವಜನಿಕ ಶೌಚಾಲಯದಲ್ಲಿ ಮೂತ್ರವಿಸರ್ಜನೆ ಮಾಡೋ ಟೈಮಲ್ಲಿ ಯಾರೋ ಕದ್ದು ನೋಡಿ ಮೊನ್ನೆ ವಿಷಯ ಲೀಕ್ ಮಾಡಿಬಿಟ್ಟಿದ್ದಾರೆ..!

ಕಾಚ ಅನ್ನೋ ಕಾರಣದಿಂದ ನಾನು ವಿಷಯ ಮುಚ್ಚಿಟ್ಟೆ ಹೊರತು, ಜನರಿಗಾಗಗಲಿ ಅಥವ ನನ್ನ ಸ್ಥಾನಕ್ಕಾಗಲೀ ದ್ರೋಹ ಮಾಡೋ ಉದ್ದೇಶದಿಂದಲ್ಲ.. ಈ ಚಿನ್ನದ ಕಾಚ 'ಸೋಮಾಲಿಯ' ದೇಶದ ಕರೆನ್ಸಿಯಲ್ಲಿ 13ಲಕ್ಷಗಳಾಗುತ್ತದೆ.. ನಮ್ಮ ರೂಪಾಯಿಯಲ್ಲಿ ಅಂದಾಜು ಮೂರು ನಾಲ್ಕು ಲಕ್ಷ ರೂಪಾಯಿಗಳಾಗಬಹುದಷ್ಟೇ..

ಈ ಚಿನ್ನದ ಚೆಡ್ಡಿಗೆ ಗಿಫ್ಟ್ ಟ್ಯಾಕ್ಸ್ ಕಟ್ತೀನಿ.. ಇಷ್ಟು ದಿನ ಮುಚ್ಚಿಟ್ಕೊಂಡಿದ್ದಕ್ಕೆ ಕ್ಷಮೆ ಕೇಳ್ತೇನೆ.. ನಾನು ಸಮಾಜವಾದಿ, ಮಜವಾದಿ ಅಲ್ಲ.. ಈ ಚೆಡ್ಡಿ ರಾಜ್ಯದ ಆಸ್ತಿ ಅಂತ ಸರ್ಕಾರಕ್ಕೆ ಒಪ್ಪಿಸ್ತೀನಿ.. ಇನ್ನು ಮುಂದೆ ನಾನು ಚೆಡ್ಡಿ ಹಾಕಲ್ಲ..! ಇಷ್ಟನ್ನು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆಯಲು ಇಷ್ಟಪಡ್ತೀನಿ..

English summary
The diamond studded Hublot wrist watch gift controversy rocking in Karnataka. What is the gift was underwear? what will be reaction from our Ministers? Here is a imaginary article found on popular social networking site Facebook.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X