ಥೂ ಇಂಥಾ ಜಿಪುಣರನ್ನ ನೀವು ಎಲ್ಲಾದ್ರೂ ನೋಡಿದ್ದಿರಾ?

By: ಚಿತ್ರಾ ಬಡಿಗೇರ
Subscribe to Oneindia Kannada

(ಕಂಜೂಸ್ ಗಂಡ ಮತ್ತು ಅವನ ಹೆಂಡತಿ ಮದ್ಯೆ ನಡೆಯುವ ಕಾಮಿಡಿ ಡ್ರಾಮಾ...)

(ಗಂಡ ಹಲ್ಲುಜ್ಜುವ ಪೇಸ್ಟ್ ಒತ್ತಿ ಒತ್ತಿ ತೆಗಿಯುತ್ತಿರುತ್ತಾನೆ)

ಹೆಂಡತಿ : ಅಲ್ಲಾರೀ..... ಅಷ್ಟು ದುಡ್ಡು ಉಳ್ಸೊ ಮನಸಿದ್ರೆ, ಕಲ್ಲಿದ್ಲಿಂದಾನೆ ನಿಂದ ಹಲ್ಲು ಉಜ್ಜಿ. ಅದನ್ಯಾಕ್ ಒತ್ತತಿದಿರಾ?

ಗಂಡ : ಪೆದ್ದೆ .....ಹೊರಗಡೆ ಅಷ್ಟೆ ಪೇಸ್ಟ್ ರಾಪರ್ ಇರೋದು...ಒಳಗಡೆ ಇದ್ದಲು ಮತ್ತೆ ಬೂದಿನೇ ಹಾಕಿದಿನಿ..

ಹೆಂಡತಿ : ಏನೋ ಒಂದು .....ಹಲ್ಲು ಉಜ್ಜಿ ಬೇಗ ಬನ್ನಿ.

ಗಂಡ : ಯಾಕೆ? ತೌವ್ರ ಮನೆಗೆನಾದ್ರೂ ಹೋಗ್ತಿದಿಯಾ? ಬಿಟ್ಟು ಬರ್ಲಾ?

ಹೆಂಡತಿ : ಹಾಗೇನೂ ಇಲ್ಲಾ...ನನ್ ಸೋದರತ್ತೆ ಮಗನ್ ಮದ್ವೆ....ವೈಟ್ ಫಿಲ್ಡ್ ನಲ್ಲಿ. ಅದ್ಕೆ ಬನ್ನಿ ಹೋಗೋಣಾ... [ಗಂಡ ಹೆಂಡತಿ ಜೋಕ್ಸ್]

Have you ever seen such a stingy fellow?

(ಎಲ್ಲೊ ಸತ್ತಾಗ ಜೋರಾಗಿ ಅಳುವ ಶಬ್ದ ಬರಲು)

ಗಂಡ : ಯಾರೋ ಹೋಗೆ ಹಾಕ್ಸಕೊಂಡಂಗೆ ಅನ್ಸ್ತಾ ಇದೆ, ನಾನ್ ಮದ್ವೆಗೆ ಬರಲ್ಲಾ..

ಹೆಂಡತಿ : ಏನ್ರೀ ಇದು ನಿಮ್ ಮಾತಿಗೆ ಲಿಂಕು ಇಲ್ಲಾ ಸಿಂಕು ಏನೂ ಇಲ್ಲಾ...ಅವ್ರ್ಯಾರೂ ಸತ್ರೆ ನೀವ್ಯಾಕೆ ಮದ್ವೆಗೆ ಬರ್ತಾ ಇಲ್ಲಾ?

ಗಂಡ : ಸಿಂಪಲ್ ಚಿನ್ನಾ... ಮದ್ವೆಗೆ ಊಟಕ್ಕೆ ಗಿಫ್ಟು ಕೊಟ್ರೆ ಲಾಸು, ಸತ್ರವ್ರಿಗೆ ಲಿಫ್ಟು ಕೊಟ್ರೆ ಲಾಭ. ಮದ್ವೆಗೆ ಹಾಕ್ಬೇಕು ಇನ್ವೆಸ್ಟಮೆಂಟ್, ತಿಥಿಗೆ ಓನ್ಲಿ ಇನಕಮ್...

ಹೆಂಡತಿ : ಥೂ ಇಂತಾ ಜಿಪುಣರನ್ನಾ ನಾ ನೋಡೆ ಇಲ್ಲಾ..... ನಾನಂತೂ ತಿಥಿ ಊಟಕ್ಕೆ ಬರಲ್ಲಾ.

ಗಂಡ : ಬರ್ಬೇಡಾ.....ನಿಂಗೆ ಹುಷಾರಿಲ್ಲಾ ಅಂತಾ ಹೇಳಿ, ನಿನ್ ಊಟನೂ ಪಾರ್ಸಲ್ ಕಟ್ಟಸ್ಕೊಂಡು ಬರ್ತೀನಿ.... ಅದೇ ರಾತ್ರಿ ಊಟಕ್ಕೂ ಆಗತ್ತೆ!

ಹೆಂಡತಿ : ನಂಗ್ ಬರ್ತಾ ಇರೋ ಕೋಪದಲ್ಲಿ ತಲೆ ಜಜ್ಕೊಬೇಕು ಅನ್ಸ್ತಾ ಇದೆ..... [ಏನ್ಮಾಡ್ತೀರಿ? ಕಟಗೊಂಡೇವಿ ಅನಭವಿಸಬೇಕ ಇಷ್ಟ!]

ಗಂಡ : ತಲೆ ಜಜ್ಕೊ ಬೇಡಾ.... ಎದೆ ಜಜ್ಕೊ.... ನಾನು ಬರೀ ಹಾರ್ಟ್ ಗಷ್ಟೆ ಇನ್ಸುರನ್ಸ್ ಮಾಡ್ಸಿದ್ದು.

ಹೆಂಡತಿ : ಅದನ್ನಾದ್ರೂ ಯಾಕೆ ಮಾಡ್ಸಿದ್ರಿ?

ಗಂಡ : ನನ್ ಇನ್ಸುರನ್ಸ್ ಜೊತೆಗೆ, ನಿಂದು ಫ್ರೀ ಇನ್ಸುರನ್ಸ್ ಇತ್ತು ಅದಿಕೆ...

ಹೆಂಡತಿ : ಏನಾದ್ರೂ ಮಾಡಿ ಹಾಳಾಗೋಗ್ರಿ...ನಾನಂತೂ ಮದ್ವೆಗೆ ಹೋಗಿ.... ಚೆನ್ನಾಗಿ ಮದ್ವೆ ಊಟ ತಿಂದು ಬರ್ತೀನಿ.

(ಫೋನ್ ಕಾಲ್ ಹೆಂಡತಿ ತಾಯಿಯಿಂದ... ಹೆಂಡತಿ ರಿಸಿವ್ ಮಾಡಿ)

ಹೆಂಡತಿ : ಹೇಳಮ್ಮಾ... ಹಾ ಬರ್ತಾ ಇದ್ದೀನಿ.. ಏನು ಮದ್ವೆಗೆ ಬಂದವರಿಗೆಲ್ಲಾ ಬಟ್ಟೆ, ವಾಚು ಗಿಫ್ಟು ಕೊಡ್ತಾ ಇದ್ದಾರಾ? .....ಪೈವ್ ಸ್ಟಾರ್ ಹೋಟಲ್ ನಲ್ಲಾ ಮದ್ವೇ? .....ಒಕೇ ಬಂದೆ ಬಂದೆ ಬೈ ಇಡ್ತೀನಿ.

ಗಂಡ : (ಫೋನ್ ನಲ್ಲಿ ಮಾತು ಕೇಳಿಸಿಕೊಂಡು) ನಾನೂ ಮದ್ವೆಗೆ ಬಸ್ ನಲ್ಲಿ ಬರ್ತೀನಿ. ಆದ್ರೆ ನಾನು ನಿನ್ ಗಂಡನಾಗಿ ಅಲ್ಲಾ...

ಹೆಂಡತಿ : (ಖುಶಿಯಾಗಿ) ಹಾಗಾದ್ರೆ ನೀವು ನಂಗೆ ಡೈವರ್ಸ್ ಕೊಡ್ತಿರಾ? ಯಾವಾಗ? [ರೀ ನಿಮ್ಮನ್ನ ಕೇಳೋದು ಮಿಡ್‌ವೈಫ್ ಅಂದ್ರೇನ್ರೀ!]

ಗಂಡ : ಸಾಧ್ಯಾನೇ ಇಲ್ಲಾ, ನಿಂಗೆ ಊಟಕ್ಕೆ ಹಾಕಿದ ದುಡ್ಡೇ ಇನ್ನು ವಾಪಸ್ ಬಂದಿಲ್ಲ!

ಹೆಂಡತಿ : ಸರಿ.....ಮದ್ವೆಗೆ ಬರಕ್ ರೆಡಿಯಾದ್ರಲ್ಲಾ ಅಷ್ಟೆ ಸಾಕು...

(ಗಂಡ ಮತ್ತು ಹೆಂಡತಿ ಬಸ್ ನಲ್ಲಿ)

ಕಂಡಕ್ಟರ್ : ಟಿಕೆಟ್.......ಟಿಕೆಟ್...ಟಿಕೆಟ್

ಹೆಂಡತಿ : ಒಂದು ಫುಲ್.. ಇನ್ನೊಂದು ಬೈಟು, ನನ್ ಮಗ ಎಂಟ ವರ್ಷ.

ಕಂಡಕ್ಟರ್ : ಮಗುಗೆ ದಾಡಿ ಬಂದಿದೆ, ಎಂಟು ವರ್ಷ ಅಂತಿದೀರಲ್ರೀ? [ಈ ದಿನಕ್ಕೋಸ್ಕರ ಎಷ್ಟು ದಿನದಿಂದ ಕಾಯುತ್ತಿದ್ದೆ!]

ಗಂಡ : (ಮಗು ದ್ವನಿಯಲ್ಲಿ) ಅಂಕಲ್ ಅಂಕಲ್.... ಪಾ ಫಿಲ್ಮ್ ನೋಡಿದಿರಾ? ಅದ್ರಲ್ಲಿ ಅಮಿತಾಬ್ ಬಚ್ಚನ್ ಇದ್ದ ರೋಗನೇ ನಂಗೂ ಇದೆ. ಇದೊಂತರಾ ಕನ್ನಡ ವರ್ಶನ್. ಅ....ಪ್ಪಾಆಆಆಆಆಆ...

ಕಂಡಕ್ಟರ್ : ಸರಿ.... ಈಗ ವಿಶೇಷ ಸೂಚನೆ ಹಿರಿಯ ನಾಗರಿಕರಿಗೆ ನಮ್ ಬಸ್ ನಲ್ಲಿ ಎರಡು ಸಾವಿರ ರೂಪಾಯಿ ಡಿಸ್ಕೌಂಟ್ ಕೂಪನ್ ಕೊಡ್ತಾ ಇದ್ದಿವಿ.

ಗಂಡ : ಸ್ವಾಮಿ ಕೂಪನ್ ನಂಗ್ ಕೊಡಿ..

ಕಂಡಕ್ಟರ್ : ಇವ್ನು ಮೈನರ್ ಅಲ್ವೇನ್ರೀ?

ಗಂಡ : ಈ ರೋಗ ಹೇಂಗದ್ರೆ ಹಂಗೆ .....ಯಾವಾಗ್ ಬೇಕದ್ರೂ ಮೇಜರ್ ಆಗ್ಬಹುದು ಯಾವಾಗ್ ಬೇಕಾದ್ರೂ ಮೈನರ್ ಆಗಬಹುದು.

ಕಂಡಕ್ಟರ್ : ಏಳ್ರಿ ...ಎದ್ದೇಳಿ. ಏನ್ ಮಾತಾಡ್ತಾ ಇದ್ದಿರಾ? ನಮ್ಮನ್ನೇನು ಗುಗ್ಗು ಅನ್ಕೊಂಡಿದಿರಾ? (ಎಂದು ಇಬ್ಬರೂ ಕಾಲರ್ ಹಿಡಿದು ಜಗಳವಾಡುವಾಗ, ಗಂಡನ ಬಳಿ ಇದ್ದ ಐಡಿ ಕಾರ್ಡ್ ಕೆಳಗೆ ಬೀಳುತ್ತದೆ)

ಕಂಡಕ್ಟರ್ : (ಐಡಿ ಕಾರ್ಡ್ ಓದಿ) ದಾನಪ್ಪಾ ಎಲ್ಲಪ್ಪಾ ನೊಮನಿ....... ಇದೇನ್ರೀ ದಾನಪ್ಪಾ ಎಲ್ಲಪ್ಪಾ ನೊಮನಿ ಅಂತಾ ಇದೆ. ಕಡೆ ಮನಿ ಮೂಲಿಮನಿ.. ದೊಡ್ಡಮನಿ... ಎಲ್ಲಾ ಕೇಳಿದಿವಿ ಇದೇನು ನೋ ಮನಿ?

ಗಂಡ : ಅದು ನನ್ ಹತ್ರ ಯಾವಾಗ್ಲೂ ದುಡ್ಡಿರಲ್ಲಾ.. ಅದಿಕೆ ನೋಮನಿ. ನಾನ್ ನೋಮನಿ, ಅದ್ಕೆ ಇವಳೇ ನಾಮಿನಿ!

ಕಂಡಕ್ಟರ್ : ಐಡಿ ಕಾರ್ಡ್ ನಲ್ಲಿ ವಯಸ್ಸು ಮೂವತ್ತೈದು ಅಂತಾ ಇದೆ. ಐದು ಸಾವಿರ ನಿಮ್ ಫೈನು, ಕೊಡ್ಲಿಲ್ಲಾ ಅಂದ್ರೆ ಪೋಲಿಸ್ ಟ್ರೈನು....

ಗಂಡ : ಹತ್ಸೋದು ಹತ್ಸತೀರಾ ಅಟ್ ಲೀಸ್ಟ್ ಏರೋ ಪ್ಲೇನ್ ಅದ್ರೂ ಹತ್ಸಿ!

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Have you ever seen such a mean, stingy fellow in your life? My God, there is limit for everything. But, this husband goes beyond any limit to get anything free of cost.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ