ಟ್ರೋಲ್ ಮಾಡೋರಿಗೆ ಆಹಾರವಾಯ್ತು ಫ್ರೀಡಂ 251!

Subscribe to Oneindia Kannada

ಮೊಬೈಲ್ ಬುಕ್ ಮಾಡೋರು ಒಬ್ರಾ,,ಇಬ್ರಾ...? ಊರ ತುಂಬಾ ಇದ್ದಾರೆ.... ಎಂಥ ಟ್ರಾಫಿಕ್ ಆದ್ರೂ ಸಿಲ್ಕ ಬೋರ್ಡ್ ಮತ್ತು ಮಾರತಹಳ್ಳಿ ಮೀರಿಸೋಕೆ ಆಗಲ್ಲ..ಕಣ್ರೋ.. ಇದೆಲ್ಲ ಟ್ರೋಲ್ ನಲ್ಲಿ ಪ್ರಿಂಟಾದ ಕನ್ನಡ ಸಿನಿಮಾಗಳ ಹಿಟ್ ಡೈಲಾಗ್ ಗಳು. ಇವೆಲ್ಲ ಅಚ್ಚಾಗಲು ಕಾರಣ ಫ್ರೀಡಂ 251.

ಕಳೆದ ಎರಡು ದಿನಗಳಿಂದ ಯಾರ ಬಾಯಲ್ಲಿ ಕೇಳಿದರೂ ಫ್ರಿಡಂ 251 ರದ್ದೇ ಮಾತು. ನೀನು ಬುಕ್ ಮಾಡಿದೆಯಾ? ಎಷ್ಟೊತ್ತಿಗೆ ಮಾಡಿದೆ? ಹಣ ನೀಡೋದು ಹೇಗೆ? ನಂದು ಬುಕ್ ಆಗಲೇ ಇಲ್ಲ..ಯಾವಾಗ ನೋಡಿದರೂ ಸರ್ವರ್ ಕ್ರ್ಯಾಶ್.. ಹೀಗೆ ವಿಭಿನ್ನ ಮಾತುಗಳನ್ನು ಕೇಳಿರಬಹುದು.

ನಮ್ಮ ಟ್ರೋನ್ ಮಹಾರಾಜರುಗಳು ಇದಕ್ಕೆ ತಕ್ಕುದಾದ ಇಮೇಜ್ ಗಳನ್ನೇ ಬಳಸಿಕೊಂಡು ಸಖತ್ ಮಜಾ ನೀಡಿದ್ದಾರೆ. ಇನ್ನೊಂದು ಸಂಗತಿ ಗೊತ್ತಿಲ್ಲ. ಫ್ರೀಡಂ 251 ಎಲ್ಲರಿಗೂ ಧನ್ಯವಾದ ಸಲ್ಲಿಸುವ ಭರದಲ್ಲಿ ಎಡವಟ್ಟೊಂದನ್ನು ಮಾಡಿಕೊಂಡಿದೆ. ಜೈ ಹಿಂದ್ ಎನ್ನುವ ಬದಲಾಗಿ ಜೈ ಹಿಂದಿ ಎಂದು ಬರೆದುಕೊಂಡಿತ್ತು. ಇದೀದ ಸರಿ ಮಾಡಿದೆ.[ಅಗ್ಗದ ಫ್ರೀಡಂ 251 ಮೊಬೈಲ್ ಬುಕಿಂಗ್ ಮುಕ್ತಾಯ?]

ಈ ಆನ್ ಲೈನ್ ತಾಣಗಳಲ್ಲಿ ಬುಕ್ ಮಾಡುವ ಮಜಾನೇ ಬೇರೆ. ಸಿಕ್ಕಿದವಗೆ ಸಿರುಂಡೆ ಅನ್ನೋ ಗಾದೆ ಇದಕ್ಕೆ ಅಂತಾನೇ ಇರಬೇಕು. ಕನ್ನಡ ಸಿನಿಮಾದ ದೃಶ್ಯಗಳನ್ನು ಬಳಕೆ ಮಾಡಿಕೊಂಡಿರುವ ಟ್ರೋಲ್ ತಂಡ ಫ್ರೀಡಂ 251 ರ ಬುಕಿಂಗ್ ಮತ್ತು ನಂತರದ ಘಟನಾವಳಿಗಳನ್ನು ತನ್ನದೇ ಪರಿಭಾಷೆಯಲ್ಲಿ ಹೇಳಿದೆ.. ನೀವು ಒಂದು ರೌಂಡ್ ಹಾಕಿಕೊಂಡು ಬನ್ನಿ....ಚಿತ್ರ ಕೃಪೆ

ಜೈ ಹಿಂದಿ

ಜೈ ಹಿಂದಿ

ಬುಕಿಂಗ್ ಗೆ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆ ನಂತರ ರಿಂಗಿಂಗ್ ಬೆಲ್ ಕಂಪನಿ ಧನ್ಯವಾದ ಸಲ್ಲಿಸಿದ್ದನ್ನು ಕಣ್ಣು ತುಂಬಿಕೊಳ್ಳಿ. ಜೈ ಹಿಂದ್ ಎನ್ನುವ ಬದಲು ಜೈ ಹಿಂದಿ. ಈಗ ಸರಿ ಮಾಡಲಾಗಿದೆ.

ಟ್ರಾಫಿಕ್ ಹೆಚ್ಚಿದೆ

ಟ್ರಾಫಿಕ್ ಹೆಚ್ಚಿದೆ

ಫ್ರೀಡಂ 251 ಬುಕ್ ಮಾಡಲು ಸಾಧ್ಯವಾಗುತ್ತಿಲ್ಲ ಟ್ರಾಫಿಕ್ ಇದೆಯಂತೆ, ಎಷ್ಟೇ ಇದ್ದರೂ ನಮ್ಮ ಸಿಲ್ಕ್ ಬೋರ್ಡ್ ಮಾರತಹಳ್ಳಿ ಬೀಟ್ ಮಾಡೋಕಾಗಲ್ಲ ಕಣ್ರೋ..

ಒಬ್ರಾ..ಇಬ್ರಾ

ಒಬ್ರಾ..ಇಬ್ರಾ

ಫ್ರೀಡಂ 251 ಬುಕ್ ಮಾಡೋಕೆ ಕಾಯ್ತಾ ಇರೋರು ಒಬ್ರಾ,,ಇಬ್ರಾ? ಕಾಯ್ತಾಇರೋರು ಕಹಾ ಹೈ? ಅಂದ್ರೆ ಇಂಡಿಯಾ ತುಂಬಾ ಹೈ.

ನಿದ್ದೆ ಹೋಯ್ತು..

ನಿದ್ದೆ ಹೋಯ್ತು..

ಎಕ್ಸಾಮ್ ದಿನಾನೂ ಇಷ್ಟು ಬೇಗ ಎದ್ದಿರಲಿಲ್ಲ. ಈಗ ನೋಡಿದ್ದೆ ವೆಬ್ ಸೈಟ್ ಕ್ರ್ಯಾಶ್ ಆಗಿ ನಿದ್ದೆ ಎಲ್ಲಾ ಹಾಳಾಗೋತು..

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The smartphone's website has been plagued with problems since the day of the launch owing to which the excitement around the phone seems to be fizzling out. Here is some trolls which are tells story about mobile booking.
Please Wait while comments are loading...