ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಘು ಹಾಸ್ಯ : ಜನರೇಷನ್ - ಗ್ಯಾಪ್

By * ಇ.ಆರ್. ರಾಮಚಂದ್ರನ್, ಮೈಸೂರು
|
Google Oneindia Kannada News

Humor : Generation Gap
ಬರ್ತಾ ಬರ್ತಾ ನಾವು ಮತ್ತು ನಮ್ಮ ಮಕ್ಕಳು ಒಂದೇ ಮನೆಯಲ್ಲಿದ್ದರೂ ಬೇರೆ ಬೇರೆ ಪ್ಲ್ಯಾನೆಟ್ ನವರಾ ಅಂಥ ಸಂದೇಹ ಬರುತ್ತೆ.

ಮುಂಚೆಯೆಲ್ಲಾ ಮನೆಗೆ ಒಂದು ಸಾಮಾನು ತರೋದಿದ್ರೆ ನಮ್ಮ ಅಪ್ಪ ಅಮ್ಮ ಕೂಡಿಟ್ಟಿದ ಹಣ ಎಷ್ಟು ದುಡ್ಡಿದೆ ಅಂತ ಯೋಚಿಸಿ ಅದನ್ನು ಮತ್ತೆ ಮತ್ತೆ ಎಣಿಸಿ, ಕೂಡಿ, ಭಾಗಿಸಿ ಕೊನೆಗೆ ಧೈರ್ಯವಾಗಿ ಒಂದು ರೇಡಿಯೊ ತರೋವ್ರು. ನಾವು ಅದನ್ನು ಸ್ವಿಚಾನ್ ಮಾಡೋದಿರ್ಲಿ, ದೂರದಿಂದ ಬರೋ ವಿವಿಧ ಭಾರತಿ ಹಾಡುಗಳು ಕೇಳೋದೇ ಒಂದು ಪುಣ್ಯ ಅಂದ್ಕೋತಿದ್ವಿ. ಅಪ್ಪನಿಗೆ ನ್ಯೂಸ್, ಅಣ್ಣಂದಿರಿಗೆ ಕ್ರಿಕೆಟ್ ರನ್ನಿಂಗ್ ಕಾಮೆಂಟ್ರಿ, ಅಮ್ಮನಿಗೆ ವನಿತಾ ವಿಹಾರ; ಇವೆಲ್ಲಾ ಇರುವಾಗ ನಮಗೆ ಸಿಗೋ ಟೈಮ್ನಲ್ಲಿ ಕೇಳೋಕ್ಕೆ ಸಿಗೋದು ಹಿಂದಿ ಹಾಡಿನ ಫರ್‍ಮಾಯಿಷ್, ಸ್ವಲ್ಪ ಹೊತ್ತಷ್ಟೆ .

ಆದ್ರೆ ಈಗ ನೋಡಿ, ಎಲ್ಲಾ ಉಲ್ಟ.... ಮೊನ್ನೆ ಇಂಕ್ರಿಮೆಂಟ್ ದುಡ್ಡು, ಬಾಸ್ಗೆ ಬಟರ್ ಮಾಡಿ ಎಕ್ಸಲೆಂಟ್ ಪರ್ಫಾಮೆನ್ಸ್ ಅಂತ ಬಂದ ಅಡಿಷನಲ್ ಇಂಕ್ರಿಮೆಂಟ್ ಎಲ್ಲಾ ಸೇರ್ಸಿ ಒಂದು ದೊಡ್ಡ ಕಲರ್ ಟಿವಿ ತರೋಣಾಂತ ನಾನೂ ನನ್ನಾಕೆ ಪ್ಲ್ಯಾನ್ ಮಾಡಿದ್ವಿ.

ನನ್ನ ಫ್ರೆಂಡ್ ಹತ್ತಿರ ಒನಿಡಾ ಇದೆ. ರಿಸೆಪ್ಷನ್ ಚೆನ್ನಾಗಿದೆ ಅಂತ ಹೇಳಿದ್ದ. ನಾವೂ ಅದನ್ನೇ ತರೋಣಾಂತ ಡಿಸೈಡ್ ಮಾಡಿದ್ವಿ. ಅದು ಹ್ಯಾಗೆ ನಮ್ಮಗಳು ಸುಮಿ ಮತ್ತು ಮಗ ರಾಹುಲ್ಗೆ ಗೊತ್ತಾಯಿತೋ ದೇವ್ರೇ ಬಲ್ಲ! ರಾತ್ರಿ ಡಿನ್ನರ್ ಮಧ್ಯೆ ಸುಮಿ ಬಹಳ ಮುದ್ದಾಗಿ, 'ಡ್ಯಾಡಿ! 36 ಇಂಚಸ್ ಕಲರ್ ಟಿವಿ ತರ್‍ತಾ ಇದ್ಯಾ?' ಅಂದ್ಲು. ಎಲಾ ಇವಳ! ಹೀಗೇ ಆದ್ರೆ ದೊಡ್ಡವಳಾದ್ರೆ ಇವಳು ಸಿಐಡಿ ಇಲ್ಲಾ ಸಿಬಿಐ ಸೇರೋದ್ರಲ್ಲಿ ಸಂದೇಹವೇ ಇಲ್ಲ ಅನ್ನಿಸ್ತು. ಆದ್ರೂ ಕೂಲಾಗಿ ಹ್ಯಾಂಡಲ್ ಮಾಡ್ದೆ ಸಿಚ್ಯೂಯೇಷನ್. 'ಹೌದು ಮರಿ! ಈಗಿರೋದು ಹಳೇದಾಗಿದೆ. ನಾನು ಮಮ್ಮಿ ಅದನ್ನು ರಿಟೈರ್ ಮಾಡೋಣ ಅಂತ ಯೋಚ್ಸಿದ್ವಿ. ನೀವಿಬ್ರು ಏನು ಹೇಳ್ತೀರಿ?'

ಅದೇ ದೊಡ್ಡ ಮಿಸ್ಟೇಕ್ ಆಯ್ತು, ಅವ್ಳನ್ನ ಕೇಳಿದ್ದು. ಬೀದೀಲಿ ಸುಮ್ಮನೆ ಅದರ ಪಾಟಿಗೆ ಹೋಗ್ತಿದ್ದ ಗೂಳಿ ಹತ್ರ 'ಚ!ಚ! ಇಕ!'ಅಂತ ಕರ್‍ದು ಗುಮ್ಮಿಸಕೊಳ್ಳೋದು ಅಂದ್ರೆ ಇದೇ ಇರ್‍ಬೇಕು!

ಸೆವೆಂತ್ನಲ್ಲಿರುವ ಸುಮಿ ಸ್ವಲ್ಪ ಯೋಚ್ಸಿ, 'ಒಳ್ಳೇ ಐಡಿಯಾ ಡ್ಯಾಡಿ.... ವಾಲ್ ಮೌಂಟೆಡ್ 42 ಇಂಚಸ್ LCD ಸೋನಿ ತಂದ್ಬಿಡಿ. ಗ್ರೇಟಾಗಿ ಇರುತ್ತೆ' ಅಂದ್ಲು. ಎದೆ ಧಸಕ್ ಅಂತು. ಇನ್ನೊಂದು ಇಪ್ಪತ್ತು ಸಾವಿರ ಕಕ್ಬೇಕು. 'ಅದೆಲ್ಲಾ ಬೇಡ. ಸ್ಟ್ಯಾಂಡ್ ಮಾಡೆಲ್ ಸಾಕು. ಲೋಕಲ್ ಆದ್ರೂ ಒನಿಡ ಚೆನ್ನಾಗಿದೆ.'

'ಪಕ್ಕದ ಮನೆ ಮೆಹ್ತಾ ಮನೇಲಿ ಸೋನಿ ನೋಡ್ತಾರೆ. ರಾಹುಲ್ ಬೆಂಬ್ ಮೇಟ್ ರೋಹಿತ್ ಮನೇಲಿ ಪ್ಯಾನಸಾನಿಕ್ ವಾಲ್ ಟಿವಿ ಇದೆ. ನಾವು ಯಾಕೆ ಸ್ಟುಪಿಡ್ ಸ್ಡ್ಯಾಂಡ್ ಮಾಡೆಲ್ ನೋಡ್ಬೇಕು. ಅವರಲ್ಲಾ ನಮ್ಮನ್ನು ನೋಡಿ ನಗ್ತಾರೆ' ಅಂದ್ಲು.

ನಂಗೆ ಕೋಪ ನೆತ್ತೀಗೇರ್‍ತು. 'ನಗ್ಲಿ ಬಿಡು. ಐಡೋಂಟ್ ಕೇರ್. ನಮ್ಮನೇಲಿ ನಮಗೆ ಯಾವುದು ಬೇಕೋ ಅದನ್ನೇ ತರೋದು. ಈಸ್ ದಟ್ ಕ್ಲಿಯರ್' ಎಂದು ಗುಡುಗ್ದೆ. ವಾಲ್ ಮೌಂಟೆಡ್ ತರ್‍ದೇ ಇದ್ರೆ ನಾವು ರಾತ್ರಿ ಮಲಗಲ್ಲ ಅಂತ ಅಳ್ತ ರಾಹುಲ್ನ ಕರ್ಕೊಂಡು ಅವ್ರ ರೂಮ್ಗೆ ಓಡಿದ್ಲು.

ಬೆಳೆಗ್ಗೆ ನಮ್ಮನೇಲಿ ಇದ್ದಕ್ಕಿದಂತೆ ಸ್ಕೋರ್ 1-3 ಆಯ್ತು. ನನ್ನ ಹೆಂಡ್ತಿ ರಾತ್ರೋ ರಾತ್ರಿ ಮುಲಾಯಂ ಸಿಂಗ್ ತರಾ ಡಿಫೆಕ್ಟ್ ಮಾಡಿದ್ಲು. ಕೈಗೆ ಕಾಫಿ ಕೊಟ್ಟು, ಪರ್ವಾಗಿಲ್ಲ.... ಸೋನಿನೇ ತಂದ್ಬಿಡಿ. ಅಡ್ಜಸ್ಟ್ ಮಾಡ್ಕೊಳ್ಳೋಣ ಅಂದ್ಲು. ಮೊದಲನೇ ಸೋಲದು.

ಇನ್ನೊಂಸರ್ತಿ ಅಜಾ ಅಜ್ಜಿ ಸೇರಿ ಪೂರ ಪಟಾಲಂನ ಕರ್ಕೊಂಡು 'ಜೂ'ಗೆ ಹೋದ್ವಿ. ಮಧ್ಯಾಹ್ನ ತಿಂಡಿಗೆ ಹೋಟಲ್ಗೆ ಹೋದಾಗ ವೈಟರ್ ಶುರುಮಾಡ್ದ...' ಪೂರಿ ಪಲ್ಯ, ಮಸಾಲ್ ದೋಸೆ, ಖಾರಾಭಾತ್, ಊತಪ್ಪ... 'ಏನ್ ತೊಗೋಳ್ತಿಯಾ ಸುಮೀ' ಅಂದ್ಲು ನನ್ನ ಹೆಂಡ್ತಿ. ಸುಮಿ ವೈಟರ್ ಗೆ, 'ಬರ್ಗರ್ ಇದೆಯಾ? ಇಲ್ಲ. ಪೀಟ್ಜಾ ಇದ್ಯಾ? ... ಆದೂ ಇಲ್ವಾ..? ಅಟ್ ಲೀಸ್ಟ್ ಗೋಬಿ ಮಂಚೂರಿಯನ್ ? ಇಲ್ಲ. ಐ ಕಾನ್ಟ್ ಬಿಲೀವ್ ಇಟ್' ಅಂದ್ಲು ಸುಮಿ.

ನನಗೆ ತಡೆಯಕ್ಕಾಗ್ಲಿಲ್ಲ. 'ಇರೋದನ್ನ ಯಾವುದಾದ್ರೂ ತರಿಸ್ಕೊಂಡ್ ತಿನ್ನು' ಅಂದೆ. 'ನಂಗೆ ಏನೂ ಬೇಡ. ಪೆಪ್ಸಿ ಸಾಕು.' 'ಪೆಪ್ಸಿ ಗಿಪ್ಸಿ ಬೇಡ. ಹಾಲು ಕುಡಿ. ಗುಡ್ ಫಾರ್ ಹೆಲ್ತ್.' 'ನನಗೆ ಏನೂ ಬೇಡ. ಐ ವಿಲ್ ವೈಟ್ ಔಟ್ ಸೈಡ್' ಅಂತ ಹೊರಗಡೆ ಓಡಿದ್ಲು. ರಾಹುಲ್ ಎದ್ದವನು ನನ್ನ ಡರ್ಟಿ ಲುಕ್ಸ್ ನೋಡಿ ಅಲ್ಲೇ ಕೂತ್ಕೊಂಡ. ವೈಟರ್ ಇದೆಲ್ಲಾ ನೋಡ್ತಿದ್ದವ್ನು , ಮಕ್ಳಿಗೆ ನೀವು ಡಿಸಿಪ್ಲಿನ್ ಕಲಿಸಿಲ್ಲ ಅಂದ. ಸುಮಾಳ ಹಿಂದೆಯೇ ಅವಳಜ್ಜ ಓಡಿದ್ರು... ನಾವು ತಿಂದು ಕಾರ್ ಹತ್ರ ಹೋದಾಗ ಅವಳ ಕೈಲಿ ಬರ್ಗರ್ ಇನ್ನೊಂದು ಕೈಲಿ ಪೆಪ್ಸಿ. ಪ್ಲಸ್ ನನ್ನ ನೋಡಿ ಒಂದು ವಿಕ್ಟರಿ ಸ್ಮೈಲ್. ಪಕ್ಕದಲ್ಲಿದ್ದ ಢಾಭಾಲಿ ಅವರಿಗೆ ಸಿಕ್ಕಿತ್ತು. ಅಜ್ಜನ ಕೈಲಿ ಇನ್ನೊಂದು ಸೆಟ್ ರಾಹುಲ್ಗೆ! ಮತ್ತೆ ನಾನು ಸೋತೆ.

ಫೋರ್ತ್ ನಲ್ಲಿರೋ ರಾಹುಲ್ ಕೂಡ ಈಗ ನನಗೆ ಆಟ ಆಡಿಸೋದಕ್ಕೆ ಶುರು ಮಾಡಿದಾನೆ. ಸೈಕಲ್ ಕಲಿತುಕೊಂಡ್ರೆ ಒಳ್ಳೇ ಎಕ್ಸರ್ ಸೈಜ್ ಆಗುತ್ತೇ ಅಂತ ಸಿಂಪಲಾಗಿರೋ ಹೀರೋ ಸೈಕಲ್ ಕೊಡಿಸೋಣಾಂತ ಕರ್‍ಕಕೊಂಡ್ಹೋದೆ. ಶಾಪ್ ಗೆ ಹೋದ್ಮೇಲೆ ರಾಹುಲ್ ತರ್ಲೆ ಮಾಡಕ್ಕೆ ಶುರು ಮಾಡ್ದ. 'ನಂಗೆ ಬಿಎಮೆಕ್ಸ್ ಬೇಕು ಅದರಲ್ಲಿ ಸ್ಟಂಟ್ಸ್ ಮಾಡ್ಬೋದು. ನನ್ನ ಫ್ರೆಂಡ್ ಉತ್ತಮ ಸೈಕಲ್ ಬಿಡ್ತಾನೇ ಸ್ಟಂಟ್ಸ್ ಎಲ್ಲಾ ಮಾಡ್ತಾನೆ' ಅಂದ.

'ಯಾರೋ ಅದು ?' 'ಉತ್ತಮ್ ಸಿಂಗ್, ನನ್ನ ಕ್ಲಾಸ್ ಮೇಟ್' ಅಂದ. 'ರಾಹುಲ್... ಸಿಂಗ್ ಅಂದ್ರೆ ಮುಂದೆ ಒಲಿಂಪಿಕ್ಸ್ ಗೆ ಹೋಗ್ತಾನೋ ಏನೋ. ನೀನು ಮೂಲೇ ಅಂಗ್ಡಿ ಶೆಟ್ಟರ ಅಂಗ್ಡಿಗೆ ಹೋಗಿ ಕೊತ್ತಂಬರೀ ಸೊಪ್ಪು, ಹಸೀ ಮೆಣಸಿನಕಾಯಿ ತಂದ್ರೆ ಬೇಕಾದಷ್ಟು ಆಯ್ತು. ನಿನಗೆ ಹೀರೋ ಸೈಕಲ್ ಸಾಕು' ಅಂದೆ. ಪಟ್ಟುಹಿಡಿದ.

ಅಲ್ಲೇ ಎರ್‍ಡು ಬಿಟ್ಟೆ. ಕೊಡಿಸ್ಬಿಡೀ ಅಂಕಲ್ ಅಂದ ಶಾಪ್ ಓನರ್. ರಾಹುಲ್ ನ ಎಳಕೊಂಡು ಸೀದಾ ಮನೇಗ್ ಬಂದೆ. ಅಳ್ತಾ ಮೂಲೇಲ್ ಕೂತ್ಕೊಂಡ. ಎಲ್ಲಾರು ಅವನ ಹತ್ರ ಓಡಿದ್ರು. ನಾನೂ ಸೀದ ರೂಮ್ಗೆ ಹೋದೆ. ಮನೇಲಿ ಸ್ಮಶಾನ ಮೌನ.

ನೆಕ್ಸ್ಟ್ ಡೇ ಆಫೀಸ್ನಿಂದ ಮನೆ ಹತ್ರ ಬಂದಾಗ ಸುಮಿ, ನನ್ನಾಕೆ ಗೇಟ್ ಹತ್ರ ನಿಂತಿದ್ರು. ಇಬ್ರೂ ಫುಲ್ ಸ್ಮೈಲ್ಸ್. ಅವರ ಹಿಂದೆ ಅಜ್ಜ ಅಜ್ಜಿ.. ಅವ್ರೂ ಖುಶಿಯಾಗಿದ್ರು...ಎಲ್ಲಾರೂ ಸೇರಿ ಸ್ಮೈಲಿಂಗ್ ಫ್ಯಾಮಿಲಿ...ಓಹೋ ಏನೋ ಲಾಟ್ರೀ ಎನಾದ್ರೂ ಬಿತ್ತಾ ನಮಗೆ ಅಂದ್ಕೊಂಡೆ....... ಅವರೆಲ್ಲರ ಹಿಂದೆ ರಾಹುಲ್ ಬಿಎಮೆಕ್ಸ್ ಸೈಕಲ್ ಹಿಡ್ಕೊಂಡು ನಿಂತಿದ್ದ..! ಕರ್ಟಿಸಿ ಅಜ್ಜ ಅಜ್ಜಿ! ಮೈ ಫೈನಲ್ ಸೋಲು.

ಇದೆಲ್ಲಾ ನೋಡೇ ನಂದು ಒಂದು ಥಿಯರಿ ಇದೆ.

ನಮ್ಮ ಮೊಮ್ಮಕ್ಕಳು ಮತ್ತು ಅಜ್ಜ ಅಜ್ಜಿ ಮಧ್ಯೆ ಜನರೇಷನ್ ಗ್ಯಾಪ್ ಎಳ್ಳಷ್ಟೂ ಇಲ್ಲ. ಇದು ನಮ್ಮ ಮನೆಯ, ನಮ್ಮ ದೇಶದ ರಿಯಾಲಿಟಿ. ಏನಿದ್ರೂ ಈ ಎರಡು ಜನರೇಷನ್ನಿಗೂ ನಮ್ಮ ಜೊತೆ, ಜೆನರೇಷನ್- ಗ್ಯಾಪ್ ಇದೆ!

English summary
A humor write up on generation gap between father-daughter and his grandson. This write up explains how a father defeated by his children with the help of grandfather while purchaing electronics goods and consumer goods
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X