99737gv kulkarniಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ/column/gv/2008/1227-vk-gokak-birth-centenary-memoirs-part2.htmlಕನ್ನಡ ಮತ್ತು ಇಂಗ್ಲಿಷಿನ ಮೇಲಿನ ಅದಮ್ಯ ಪ್ರಭುತ್ವದಿಂದಾಗಿ ಕನ್ನಡನಾಡಿನ ಒಳಗಡೆ ಮತ್ತು ಹೊರಗಡೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿನಾಯಕ ಕೃಷ್ಣ ಗೋಕಾಕ್ ಅತ್ಯಂತ ಪ್ರಭಾವಶಾಲಿ ಸಾಹಿತಿಯಾಗಿ ಹೊರಹೊಮ್ಮಿದ್ದರು. ಇತರ ಸಾಹಿತಿಗಳನ್ನು ರಾಷ್ಟ್ರಮಟ್ಟದಲ್ಲಿ ಸಮರ್ಥವಾಗಿ ಬಿಂಬಿಸಿದ್ದರಿಂದ ಕನ್ನಡ ರಾಷ್ಟ್ರದುದ್ದಕ್ಕೂ ಮೆರೆಯುವಂತಾಯಿತು. ಜನ್ಮಶತಮಾನೋತ್ಸವದ ನಿಮಿತ್ತ ಗೋಕಾಕ್ ಸ್ಮರಣೆಯ ಎರಡನೆಯ ಭಾಗ.* ಡಾ. 'ಜೀವಿ' ಕುಲಕರ್ಣಿ, ಮುಂಬಯಿಗೋಕಾಕರ ವಿದ್ಯಾರ್ಥಿ ಜೀವನಕ್ಕೆ ಅವರ ಮದುವೆ 33727http://kannada.oneindia.com/img/2008/12/27-vk-gokak-bendre1.jpg99737gv kulkarniಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ (ಭಾಗ 3)/column/gv/2009/0117-vinayaka-krishna-gokak-part3.htmlಇಂಗ್ಲೆಂಡಿನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಬಿಎ ಮಾಡಿ ಭಾರತಕ್ಕೆ ಮರಳಿದ ವಿನಾಯಕ ಕೃಷ್ಣ ಗೋಕಾಕ್ ಅವರು ಮಾಡಿಕೊಂಡ ದೊಡ್ಡ ಆಸ್ತಿಯೆಂದರೆ ಅಪಾರ ಶಿಷ್ಯವೃಂದ. ಹೇಮಂತ ಕುಲಕರ್ಣಿ, ಸುಬ್ಬಣ್ಣ ಎಕ್ಕುಂಡಿ, ವಿ.ಜಿ.ಭಟ್ಟ, ಗಾಂಗಾಧರ ಚಿತ್ತಾಲ ಮೊದಲಾದ ಖ್ಯಾತ ಲೇಖಕರು ಗೋಕಾಕರ ಗರಡಿಯಲ್ಲಿ ಪಳಗಿದವರೇ.* ಡಾ|ಜೀವಿ ಕುಲಕರ್ಣಿಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಆಂಗ್ಲಸಾಹಿತ್ಯದಲ್ಲಿ ಪ್ರಥಮ ದರ್ಜೆಯಲ್ಲಿ ಬಿ.ಎ.(ಆಗ್ಝನ್) ಡಿಗ್ರಿ ಪಡೆದು ವಿಕ್ರಮ ಸಾಧಿಸಿದ ಗೋಕಾಕರು 34120http://kannada.oneindia.com/img/2009/01/17-vk-gokak3e.jpg99737gv kulkarniಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ (ಭಾಗ 4)/column/gv/2009/0124-vinayaka-krishna-gokak-part4.htmlಮಹರ್ಷಿ ಶ್ರೀ ಅರವಿಂದರ ಕೃತಿಗಳನ್ನು ಅರಗಿಸಿ ಕುಡಿದು ತಮ್ಮ ಜೀವನದಲ್ಲಿ ಹಾಗೂ ಸಾಹಿತ್ಯದಲ್ಲಿ ಅದರ ಬೆಳಕನ್ನು ಹರಡಿದ ಕೆಲವೇ ಶ್ರೇಷ್ಠ ಸಾಹಿತಿಗಳಲ್ಲಿ ಗೋಕಾಕರೂ ಒಬ್ಬರು ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ. ಜ್ಞಾನಪೀಠ ಪ್ರಶಸ್ತಿ ವಿಜೇತ ವಿನಾಯಕ ಕೃಷ್ಣ ಗೋಕಾಕರ ಜನ್ಮಶತಮಾನೋತ್ಸವ ನಿಮಿತ್ತ ಲೇಖನ ಸರಣಿ ಮುಂದುವರಿಯುತ್ತಿದೆ.* ಡಾ|ಜೀವಿ ಕುಲಕರ್ಣಿ1947ರಲ್ಲಿ ಭಾರತಕ್ಕೆ ಸ್ವಾತಂತ್ಯ ದೊರೆತ ನಂತರ ಬರೋಡಾ ಸಂಸ್ಥಾನ ಭಾರತ ಸರಕಾರದಲ್ಲಿ 34269http://kannada.oneindia.com/img/2009/01/24-vk-gokak4.jpg99737gv kulkarniಧಾರವಾಡಕ್ಕೂ ಗೋಕಾಕರಿಗೂ ಬಿಡಲಾರದ ನಂಟು/column/gv/2009/0131-unforgettable-days-of-gokak-in-dharwad.htmlಧಾರವಾಡಕ್ಕೂ ವಿಕೆ ಗೋಕಾಕರಿಗೂ ಬಿಡಲಾರದ ನಂಟು. ಅವರು ಧಾರವಾಡಕ್ಕೆ ಬರುತ್ತಿದ್ದಾರೆಂದು ತಿಳಿದಕೂಡಲೆ ಅಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಗೋಕಾಕರ ಮಹತ್ವದ ಕೃತಿಗಳು ಪ್ರಕಟವಾಗಿದ್ದು ಅವರು ಧಾರವಾಡದಲ್ಲಿದ್ದಾಗಲೇ. ಧಾರವಾಡದಲ್ಲಿನ ಅವರ ಒಡನಾಟ, ವಿದ್ಯಾರ್ಥಿಗಳೊಂದಿಗಿನ ಬಾಂಧವ್ಯ, ಸಾಂಸ್ಕೃತಿಕ ನಗರಿಯಲ್ಲಿ ಕಳೆದ ಅವಿಸ್ಮರಣೀಯ ಗಳಿಗೆಗಳನ್ನು ಜೀವಿ ಕುಲಕರ್ಣಿಯವರು ಇಲ್ಲಿ ಮೆಲುಕು ಹಾಕಿದ್ದಾರೆ. ಗೋಕಾಕ್ ಜನ್ಮಶತಮಾನೋತ್ಸವದ ನಿಮಿತ್ತ ಗೋಕಾಕ್ ಲೇಖನ ಸರಣಿಯ ಭಾಗ 34397http://kannada.oneindia.com/img/2009/01/31-vk-gokak4.jpg99737gv kulkarniಗೋಕಾಕರಿಗೆ ಸತ್ಯಸಾಯಿಬಾಬಾ ಅನುಗ್ರಹ/column/gv/2009/0207-vk-gokak-birth-centenary-part-6.htmlಶೈಕ್ಷಣಿಕವಾಗಿ ಮಾತ್ರ ವಿನಾಯಕ ಕೃಷ್ಣ ಗೋಕಾಕರು ಪರೀಕ್ಷೆಗಳನ್ನೆದುರಿಸಲಿಲ್ಲ ಜೀವನದುದ್ದಕ್ಕೂ ಅನೇಕ ಸತ್ವಪರೀಕ್ಷೆಗಳನ್ನು ಅವರು ಎದುರಿಸಿದರು. ಹೋದಲ್ಲೆಲ್ಲ ವಿಜಯಶಾಲಿಯಾದರು, ಗೆಳೆಯರನ್ನು ಸಂಪಾದಿಸಿದರು, ಶಿಷ್ಯಂದಿರನ್ನು ಹುಟ್ಟುಹಾಕಿದರು. ಅವರ ವ್ಯಕ್ತಿತ್ವವೇ ಅಂತಹುದಾಗಿದ್ದು. ಗೋಕಾಕರ ಜೀವನವನ್ನು, ವ್ಯಕ್ತಿತ್ವವನ್ನು ಬಣ್ಣಿಸುವ 'ಜೀವಿ' ಕುಲಕರ್ಣಿಯವರ ಸರಣಿ ಲೇಖನದ ಆರನೇ ಭಾಗ, ಗೋಕಾಕರ ಜನ್ಮಶತಮಾನೋತ್ಸವದ ನಿಮಿತ್ತ.ಗೋಕಾಕರು ಎರಡನೆಯ ಸಲ ಹೈದ್ರಾಬಾದ್‌ಗೆ ತೆರಳಿದ್ದು ಆಕಸ್ಮಿಕವಾಗಿದ್ದರೂ, ಒಂದು ರೀತಿಯಲ್ಲಿ, ಇದು 34531http://kannada.oneindia.com/img/2009/02/07-vk-gokak4.jpg99732ಜೀವಿ ಕುಲಕರ್ಣಿಗುರು ಶ್ರೀ ರಾಘವೇಂದ್ರ ದಯೆ ತೋರೋ/column/gv/2007/180807raghavendra_swami1.htmlದಾರಿ ಕಾಣದಾಗಿದೆ ರಾಘವೇಂದ್ರನೇಎಂದು ದಾರಿ ತೋರಿಸುವಂತೆ ರಾಯರನ್ನು ಪ್ರಾರ್ಥಿಸುವವರ ಸಂಖ್ಯೆ ದೊಡ್ಡದು. ಆಗಸ್ಟ್ ತಿಂಗಳ ಕೊನೆಯಲ್ಲಿ ಶ್ರೀ ರಾಘವೇಂದ್ರರ ಆರಾಧನೆ ವಿಶ್ವದೆಲ್ಲೆಡೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ರಾಯರ ಬದುಕು, ಪವಾಡ, ಸಾಧನೆ ಬಗ್ಗೆ ಒಂದಿಷ್ಟು ಅರಿಯೋಣ. ಡಾ।'ಜೀವಿ" ಕುಲಕರ್ಣಿ, ಮುಂಬಯಿ ಕಲಿಯುಗದ ಕಲ್ಪತರು, ಕಲ್ಪವೃಕ್ಷವೆಂದೇ ಪ್ರಸಿದ್ಧರಾಗಿರುವ ಶ್ರೀ ರಾಘವೇಂದ್ರಸ್ವಾಮಿಗಳ ಹೆಸರನ್ನು ಕೇಳದ ಕನ್ನಡಿಗರು ವಿರಳ. ತಿರುಪತಿಯ ನಂತರ 11073http://kannada.oneindia.com/img/2009/05/29-raghavendra3.jpg99732ಜೀವಿ ಕುಲಕರ್ಣಿಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ/column/gv/2008/1227-vk-gokak-birth-centenary-memoirs-part2.htmlಕನ್ನಡ ಮತ್ತು ಇಂಗ್ಲಿಷಿನ ಮೇಲಿನ ಅದಮ್ಯ ಪ್ರಭುತ್ವದಿಂದಾಗಿ ಕನ್ನಡನಾಡಿನ ಒಳಗಡೆ ಮತ್ತು ಹೊರಗಡೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿನಾಯಕ ಕೃಷ್ಣ ಗೋಕಾಕ್ ಅತ್ಯಂತ ಪ್ರಭಾವಶಾಲಿ ಸಾಹಿತಿಯಾಗಿ ಹೊರಹೊಮ್ಮಿದ್ದರು. ಇತರ ಸಾಹಿತಿಗಳನ್ನು ರಾಷ್ಟ್ರಮಟ್ಟದಲ್ಲಿ ಸಮರ್ಥವಾಗಿ ಬಿಂಬಿಸಿದ್ದರಿಂದ ಕನ್ನಡ ರಾಷ್ಟ್ರದುದ್ದಕ್ಕೂ ಮೆರೆಯುವಂತಾಯಿತು. ಜನ್ಮಶತಮಾನೋತ್ಸವದ ನಿಮಿತ್ತ ಗೋಕಾಕ್ ಸ್ಮರಣೆಯ ಎರಡನೆಯ ಭಾಗ.* ಡಾ. 'ಜೀವಿ' ಕುಲಕರ್ಣಿ, ಮುಂಬಯಿಗೋಕಾಕರ ವಿದ್ಯಾರ್ಥಿ ಜೀವನಕ್ಕೆ ಅವರ ಮದುವೆ 33727http://kannada.oneindia.com/img/2008/12/27-vk-gokak-bendre1.jpg99732ಜೀವಿ ಕುಲಕರ್ಣಿಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ (ಭಾಗ 3)/column/gv/2009/0117-vinayaka-krishna-gokak-part3.htmlಇಂಗ್ಲೆಂಡಿನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಬಿಎ ಮಾಡಿ ಭಾರತಕ್ಕೆ ಮರಳಿದ ವಿನಾಯಕ ಕೃಷ್ಣ ಗೋಕಾಕ್ ಅವರು ಮಾಡಿಕೊಂಡ ದೊಡ್ಡ ಆಸ್ತಿಯೆಂದರೆ ಅಪಾರ ಶಿಷ್ಯವೃಂದ. ಹೇಮಂತ ಕುಲಕರ್ಣಿ, ಸುಬ್ಬಣ್ಣ ಎಕ್ಕುಂಡಿ, ವಿ.ಜಿ.ಭಟ್ಟ, ಗಾಂಗಾಧರ ಚಿತ್ತಾಲ ಮೊದಲಾದ ಖ್ಯಾತ ಲೇಖಕರು ಗೋಕಾಕರ ಗರಡಿಯಲ್ಲಿ ಪಳಗಿದವರೇ.* ಡಾ|ಜೀವಿ ಕುಲಕರ್ಣಿಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಆಂಗ್ಲಸಾಹಿತ್ಯದಲ್ಲಿ ಪ್ರಥಮ ದರ್ಜೆಯಲ್ಲಿ ಬಿ.ಎ.(ಆಗ್ಝನ್) ಡಿಗ್ರಿ ಪಡೆದು ವಿಕ್ರಮ ಸಾಧಿಸಿದ ಗೋಕಾಕರು 34120http://kannada.oneindia.com/img/2009/01/17-vk-gokak3e.jpg99732ಜೀವಿ ಕುಲಕರ್ಣಿಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ (ಭಾಗ 4)/column/gv/2009/0124-vinayaka-krishna-gokak-part4.htmlಮಹರ್ಷಿ ಶ್ರೀ ಅರವಿಂದರ ಕೃತಿಗಳನ್ನು ಅರಗಿಸಿ ಕುಡಿದು ತಮ್ಮ ಜೀವನದಲ್ಲಿ ಹಾಗೂ ಸಾಹಿತ್ಯದಲ್ಲಿ ಅದರ ಬೆಳಕನ್ನು ಹರಡಿದ ಕೆಲವೇ ಶ್ರೇಷ್ಠ ಸಾಹಿತಿಗಳಲ್ಲಿ ಗೋಕಾಕರೂ ಒಬ್ಬರು ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ. ಜ್ಞಾನಪೀಠ ಪ್ರಶಸ್ತಿ ವಿಜೇತ ವಿನಾಯಕ ಕೃಷ್ಣ ಗೋಕಾಕರ ಜನ್ಮಶತಮಾನೋತ್ಸವ ನಿಮಿತ್ತ ಲೇಖನ ಸರಣಿ ಮುಂದುವರಿಯುತ್ತಿದೆ.* ಡಾ|ಜೀವಿ ಕುಲಕರ್ಣಿ1947ರಲ್ಲಿ ಭಾರತಕ್ಕೆ ಸ್ವಾತಂತ್ಯ ದೊರೆತ ನಂತರ ಬರೋಡಾ ಸಂಸ್ಥಾನ ಭಾರತ ಸರಕಾರದಲ್ಲಿ 34269http://kannada.oneindia.com/img/2009/01/24-vk-gokak4.jpg99732ಜೀವಿ ಕುಲಕರ್ಣಿವರಕವಿ ಬೇಂದ್ರೆಯವರ ಮೌನಯೋಗ-1/column/gv/2009/0228-bendres-mouna-yoga-part-1.html'ಮಾತು ಮಾತು ಮಥಿಸಿ ಬಂದ ನಾದದ ನವನೀತ ಎಂದು ಭಾವಗೀತದ ಉಗಮದ ಬಗ್ಗೆ ಉದ್ಘೋಷಿಸಿದ ಬೇಂದ್ರೆಯವರು ಮೌನದ ಬಗ್ಗೆಯೂ ಬರೆದಿದ್ದಾರೆ, ಅಷ್ಟೇ ಅಲ್ಲ, ಅದನ್ನು 'ಮೌನಯೋಗವೆಂದು ಕರೆದಿದ್ದಾರೆ.ಬೇಂದ್ರೆಯವರ ಕಾವ್ಯದಲ್ಲಿ ಮೌನದ ಪ್ರಸ್ತಾಪ ನೂರಾರು ಕಡೆ ಮಾಡಿದ್ದಾರೆ. ಅವರ 'ಸಖೀಗೀತದಲ್ಲಿಯ ಈ ನುಡಿ ಬಹಳ ಪ್ರಸಿದ್ಧವಾಗಿದೆ :* ಡಾ|ಜೀವಿ ಕುಲಕರ್ಣಿ, ಮುಂಬೈ“ಮೌನದಲ್ಲಿಯು ಕೂಡ ಮಾತಿನ ಧ್ವನಿಯಿರಲಿಮೂಕ-ಮೌನವು ಒಂದು ಶಾಪದೊಲುತಾಪವ 34918http://kannada.oneindia.com/img/2009/02/28-bendre4.jpg110459kannada portalಟ್ವಿಟ್ಟರ್.ಕಾಂನಲ್ಲಿ ದಟ್ಸ್ ಕನ್ನಡ/column/sham/2008/1230-follow-thatskannada-on-twitter.htmlಅಂತರ್ಜಾಲದ ಬೃಹತ್ ಮರದಲ್ಲಿ ಕುಳಿತು ಇನ್ನೊಂದು ಟೊಂಗೆಯಲ್ಲಿ ಕುಳಿತಿರುವ ಸ್ನೇಹಿತ, ಕುಟುಂಬದ ಸದಸ್ಯ, ಸಹೋದ್ಯೋಗಿಗಳೊಡನೆ ಉಭಯ ಕುಶಲೋಪರಿ ವಿಚಾರಿಸುವ, ನೀವೇನು ಮಾಡುತ್ತಿದ್ದೀರೆಂದು ತಿಳಿಸುವ ಉತ್ತಮ ವೇದಿಕೆ ಈಗ ಟ್ವಿಟ್ಟರ್.ಕಾಂ(www.twitter.com)ನಲ್ಲಿ ಲಭ್ಯವಾಗಿದೆ. ಅತಿ ವೇಗವಾಗಿ ಬೆಳೆಯುತ್ತಿರುವ ಈ ಸೋಷಿಯಲ್ ನೆಟ್ವರ್ಕಿಂಗ್ ವೆಬ್ ಸೈಟ್ ನಲ್ಲಿ ಕುಳಿತಲ್ಲಿಂದಲೇ ವೆಬ್ ಜಗತ್ತಿನಲ್ಲಿ ಏನೇನಾಗುತ್ತಿದೆ ಎಂದು ಅಷ್ಟೇ ವೇಗವಾಗಿ ತಿಳಿಯಬಹುದು.ಸಂತಸದ ಸಂಗತಿಯೆಂದರೆ, ನಿಮ್ಮ 33786http://kannada.oneindia.com/img/2008/12/30-twitter1e.gif110459kannada portalತರಳಬಾಳು ಜಗದ್ಗುರುಗಳ ಬಿಸಿಲು ಬೆಳದಿಂಗಳು/column/gv/2009/0607-sirigeri-seer-bisilu-beladingalu-book.htmlಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆಯ ಪೀಠಾಧೀಶರಾದ ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳ ಬಗ್ಗೆ ಕೇಳಿದ್ದೆ. ಅವರು ಸಾಮಾಜಿಕ ಕಾರ್ಯಗಳಲ್ಲಿಯೂ ಧಾರ್ಮಿಕ ಕಾರ್ಯಗಳಷ್ಟೇ ಆಸಕ್ತಿ ವಹಿಸುವರೆಂದು ಕೇಳಿದ್ದೆ. ಅಸಂಖ್ಯ ಶಾಲೆ-ಕಾಲೇಜುಗಳನ್ನೂ ನಡೆಸುತ್ತಾರೆಂದೂ ಕೇಳಿದ್ದೆ. ಅವರನ್ನು ಕಾಣುವ ಅವಕಾಶ ಒದಗಿ ಬಂದಿರಲಿಲ್ಲ. ಅವರು ವಿಜಯ ಕರ್ನಾಟಕ ದಿನ ಪತ್ರಿಕೆಗೆ ಬರೆದ ಅಂಕಣ ಲೇಖನಗಳ ಪುಸ್ತಕ ಬಿಸಿಲು ಬೆಳದಿಂಗಳು' ನನ್ನ 37177http://kannada.oneindia.com/img/2009/06/07-taralabala-jagadguru1.jpg110459kannada portalಗಂಗೂಲಿ ಕಿರೀಟಕ್ಕೆ ಇನ್ನೊಂದು ಪುಕ್ಕ/news/2009/07/16/sourav-ganguly-is-lancashire-university-fellow.htmlಬೆಂಗಳೂರು, ಜು. 16: ಗುಂಡೆದೆಯ ಗಂಡು ಸೌರವ್ ಗಂಗೂಲಿಯ ಟೊಪ್ಪಿಗೆಗೆ ಇನ್ನೊಂದು ಪುಕ್ಕ. ಹೌದು, ವಿದೇಶದ ವಿಶ್ವವಿದ್ಯಾನಿಲಯವೊಂದು ಅವರಿಗೆ ಗೌರವ ಫೆಲೋಷಿಪ್ ನೀಡಿ ಗೌರವಿಸಿದೆ. ಬ್ರಿಟನ್ನಿನ ಲಂಕಾಶೈರ್ ಕೇಂದ್ರೀಯ ವಿಶ್ವವಿದ್ಯಾಯಲಯ ಗಂಗೂಲಿಗೆ ಫೆಲೋಫಿಪ್ ಪ್ರಕಟಿಸಿ ತಿಂಗಳುಗಳೇ ಕಳೆದಿತ್ತು. ಜುಲೈ 15ರ ಬುಧವಾರ ಗಂಗೂಲಿ ಇಂಗ್ಲೆಂಡಿಗೆ ತೆರಳಿ ಖದ್ದಾಗಿ ಗೌರವ ಪುರಸ್ಕಾರವನ್ನು ಸ್ವೀಕರಿಸಿದರು."ಸರಿಸಾಟಿಯಿಲ್ಲದ ಬದ್ಧತೆ, ಪ್ರತಿಭೆ ಮತ್ತು ಛಲ" 38035http://kannada.oneindia.com/img/2009/07/16-sourav-ganguly1.jpg110459kannada portalನಮ್ಮ ಕಾಮೆಂಟ್ ಸರ್ವರ್ ನಿತ್ರಾಣ/column/sham/2009/0826-thatskannada-comments-server-dilly-dally.htmlದಟ್ಸ್ ಕನ್ನಡ ಕಾಮೆಂಟ್ ಸರ್ವರ್ ನಲ್ಲಿ ತಲೆದೋರಿರುವ ಕೆಲವೊಂದು ತಾಂತ್ರಿಕ ವ್ಯತ್ಯಯಗಳಿಂದಾಗಿ ನಮ್ಮ ಕಾಮೆಂಟ್ ವಿಭಾಗ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಆಗಸ್ಟ್ 25ರ ಸಂಜೆ 5 ಗಂಟೆಯಿಂದ ಮೊದಲ್ಗೊಂಡು, ಕಳೆದ 18 ಗಂಟೆಗಳಿಂದ ಸರ್ವರ್ ದುರ್ಬಲವಾಗಿದ್ದು ಓದುಗರು ದಾಖಲಿಸುವ ಅಭಿಪ್ರಾಯಗಳನ್ನು ಸ್ವೀಕರಿಸುತ್ತಿಲ್ಲ. ಸರ್ವರ್ ಇನ್ ಕನ್ ಸಿಸ್ ಟೆಂಟ್ ಆದಾಗ, ಕೆಲವೊಮ್ಮೆ ಕಾಮೆಂಟ್ ತೆಗೆದುಕೊಳ್ಳುತ್ತದೆ, ಕೆಲವೊಮ್ಮೆ ನಿರಾಕರಿಸುತ್ತದೆ. 38825http://kannada.oneindia.com/img/2009/08/26-keyboard1.jpgnews"> ತರಳಬಾಳು ಜಗದ್ಗುರುಗಳ ಬಿಸಿಲು ಬೆಳದಿಂಗಳು | Sirigeri Bruhanmath| Shivamurthy Shivacharya | Bisilu Beladingalu book| GV Kulakarni| ತರಳಬಾಳು ಜಗದ್ಗುರುಗಳ ಬಿಸಿಲು ಬೆಳದಿಂಗಳು - Kannada Oneindia

ತರಳಬಾಳು ಜಗದ್ಗುರುಗಳ ಬಿಸಿಲು ಬೆಳದಿಂಗಳು

Shivamurthy Shivacharya Swamiji
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆಯ ಪೀಠಾಧೀಶರಾದ ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳ ಬಗ್ಗೆ ಕೇಳಿದ್ದೆ. ಅವರು ಸಾಮಾಜಿಕ ಕಾರ್ಯಗಳಲ್ಲಿಯೂ ಧಾರ್ಮಿಕ ಕಾರ್ಯಗಳಷ್ಟೇ ಆಸಕ್ತಿ ವಹಿಸುವರೆಂದು ಕೇಳಿದ್ದೆ. ಅಸಂಖ್ಯ ಶಾಲೆ-ಕಾಲೇಜುಗಳನ್ನೂ ನಡೆಸುತ್ತಾರೆಂದೂ ಕೇಳಿದ್ದೆ. ಅವರನ್ನು ಕಾಣುವ ಅವಕಾಶ ಒದಗಿ ಬಂದಿರಲಿಲ್ಲ. ಅವರು ವಿಜಯ ಕರ್ನಾಟಕ ದಿನ ಪತ್ರಿಕೆಗೆ ಬರೆದ ಅಂಕಣ ಲೇಖನಗಳ ಪುಸ್ತಕ ಬಿಸಿಲು ಬೆಳದಿಂಗಳು' ನನ್ನ ಕೈಸೇರಿತು. (ನಿವೃತ್ತ ಪ್ರಾಂಶುಪಾಲ ಆರ್ ವೆಂಕಟೇಶ ಶೆಟ್ಟಿಯವರು ನನಗೆ ಕಳಿಸಿದ್ದರು).

* ಡಾ. 'ಜೀವಿ' ಕುಲಕರ್ಣಿ, ಮುಂಬಯಿ

15 ಲೇಖನಗಳುಳ್ಳ ಈ ಪುಸ್ತಕ ಓದಿದಾಗ ನನಗೆ ಆನಂದವೂ ಆಶ್ಚರ್ಯವೂ ಆಯಿತು. ಸೆಪ್ಟೆಂಬರ್ 2008 ರಲ್ಲಿ ಇದರ ಪ್ರಥಮ ಮುದ್ರಣ ಪ್ರಕಟವಾಗಿತ್ತು. ಎರಡನೆಯ ಮುದ್ರಣ ಡಿಸೆಂಬರ್‌ದಲ್ಲೇ ಹೊರಬಂದಿದೆ. ಪ್ರತಿ ಮುದ್ರಣ 5000 ಪ್ರತಿಗಳು ಅಚ್ಚಾಗಿವೆ. ( ಇದೂ ಒಂದು ದಾಖಲೆಯಾಗಿರಬೇಕು). ಈ ಪುಸ್ತಕವನ್ನು ಓದಿದಾಗ ಸ್ವಾಮಿಗಳನ್ನು ಕಂಡಷ್ಟೆ ಸಂತೋಷವಾಯಿತು. ಒಂದು ಉತ್ತಮ ಪುಸ್ತಕವನ್ನು ಸ್ಪರ್ಶ ಮಾಡಿದರೆ ಅದರ ಲೇಖನನ್ನು ಸ್ಪರ್ಶಿಸಿದಂತೆ' ಎಂದು ಒಂದು ಆಂಗ್ಲ ಗಾದೆ ಇದೆ.

ಮಠಾಧಿಪತಿಗಳು ವಿರಕ್ತರಾಗಿದ್ದರೆ ಸಾಲದು ಅವರು ವಿದಗ್ಧರೂ, ಚಿಂತನಶೀಲರೂ, ತಪಸ್ವಿಗಳೂ ಆಗಿರಬೇಕು. ಅಂಥವರ ನಡೆನುಡಿಗಳಿಂದ ಸಮಾಜಕ್ಕೆ ಒಂದು ಹೊಸ ದಿಶೆ ದೊರೆಯುತ್ತದೆ. ಈ ಸಂದರ್ಭದಲ್ಲಿ ನನಗೆ ಗದುಗಿನ ಶ್ರೀ ತೋಂಟದಾರ್ಯ ಮಠದ ಶ್ರೀ ಸಿದ್ಧಲಿಂಗ ಸ್ವಾಮಿಗಳ ನೆನಪಾಗುತ್ತದೆ. ಅವರು ಕೂಡ ಸಾಹಿತ್ಯದಲ್ಲಿ ಆಸಕ್ತಿ ವಹಿಸುತ್ತಾರೆ, ಶಾಲೆ-ಕಾಲೇಜುಗಳನ್ನು ನಡೆಸುತ್ತಾರೆ. ಪ್ರತಿ ಸೋಮವಾರ ಶಿವಾನುಭುಮಂಟಪ ಕಾರ್ಯಕ್ರಮದಲ್ಲಿ ವಿವಿಧ ವಿದ್ವಾಂಸರನ್ನು ಕರೆಸಿ ಭಾಷಣ ಮಾಡಿಸುತ್ತಾರೆ. ಒಮ್ಮೆ ನಾನು ಅವರಲ್ಲಿ ಯೋಗ iತ್ತು ನಿಸರ್ಗ ಚಿಕಿತ್ಸೆಯ ಮಹತ'ದ ಬಗ್ಗೆ ಭಾಷಣ ಮಾಡಲು ಶ್ರೀಗಳ ಆಮಂತ್ರಣದ ಮೇರೆಗೆ ಹೋಗಿದ್ದೆ. ಶ್ರೀಗಳು ನನ್ನ ಬಯೋಡೇಟಾ ನೋಡಿ ಚಕಿತರಾಗಿದ್ದರು. ಅವರು ತಮ್ಮ ಭಾಷಣದಲ್ಲಿ ಹೇಳಿದ್ದರು, "ಇಂದಿನ ಅತಿಥಿ ಭಾಷಣಕಾರರು ಕನ್ನಡ ಸಾಹಿತಿಗಳೆಂದು ತಿಳಿದಾಗ, ಹುಚ್ಚ-ಹುಚಿ' ಎಂಬ ಪ್ರಣಯಗೀತ ಸಂಗ್ರಹದ ಲೇಖಕರು ಎಂದು ತಿಳಿದಾಗ ನನಗೆ ಆಶ್ಚರ್ಯವಾಯಿತು. ನಾನು ವಿದ್ಯಾರ್ಥಿಯಾಗಿದ್ದಾಗ ಇವರ ಪ್ರಣಯ ಸಂಕಲನವನ್ನು ಬಹುವಾಗಿ ಮೆಚ್ಚಿದ್ದೆ. ಹೆಚ್ಚಿನ ಕವನಗಳು ಮುಖೋದ್ಗತವಾಗಿದ್ದವು. ನನ್ನ ನಚ್ಚಿನ ಕವಿಗಳು ಬಂದಿದ್ದಾರೆಂದು ತಿಳಿದು ಇಂದು ನನಗೆ ಹೆಚ್ಚಿನ ಸಂತೋಷವಾಗಿದೆ.''. ಶ್ರೀಗಳು ನನ್ನ ಗುರುಗಳಾದ ವರಕವಿ ಬೇಂದ್ರೆಯವರನ್ನು ನಿರರ್ಗಳವಾಗಿ ತಮ್ಮ ಭಾಷಣಗಳಲ್ಲಿ ಉದ್ಧರಿಸಿದ್ದನ್ನು ಕಂಡಾಗ ನನಗೆ ಅಧಿಕ ಸಂತೋಷವಾಗಿತ್ತು. ಶ್ರೀಗಳು ಸಾಹಿತಿಗಳಿಗೆ ಸಹಾಯ ಮಾಡುತ್ತಿದ್ದರು, ಅಪ್ರಕಟಿತವಾಗಿ ಉಳಿದ ಕೆಲವು ಕನ್ನಡ ಪಿಎಚ್‌ಡಿ ಪ್ರಬಂಧಗಳ ಪ್ರಕಟನೆಗೆ ಸಹಾಯಮಾಡಿದ್ದರು.(ಅದರಲ್ಲಿ ಕುಮಾರವ್ಯಾಸನ ಬಗ್ಗೆ ಒಂದು ಸಂಶೋಧನ ಗ್ರಂಥವಿದೆ)

ತರಳಬಾಳು ಶ್ರೀಗಳು ಬರೆದ ಲೇಖನಗಳು ಆಪ್ತಶೈಲಿಯಲ್ಲಿ ಬರೆದವುಗಳು. ಅವು ಶ್ರೀ ಸಾಮಾನ್ಯರನ್ನು ತಟ್ಟುತ್ತವೆ ಮುಟ್ಟುತ್ತವೆ, ಬುದ್ಧಿವಂತರನ್ನು ಅಲ್ಲಾಡಿಸುತ್ತವೆ, ಅವರ ಲೇಖನದಲ್ಲಿ ಅನುಭವಾಮೃತವಿದೆ. ಯಾರನ್ನೋ ಮೆಚ್ಚಿಸಲು ಬರೆದ ಬರವಣಿಗೆ ಇದಲ್ಲ. ಅಂಕಣ ಲೇಖನಗಳಲ್ಲೇ ಹೊಸತೊಂದು ಮಾದರಿಯನ್ನು ಈ ಲೇಖನಗಳು ಸೃಷ್ಟಿಸಿವೆ ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ. ಪ್ರತಿಯೊಬ್ಬ ಲೇಖಕನಲ್ಲಿ ತನ್ನ ವಿಚಾರಗಳನ್ನು ಸಂವಹನ ಮಾಡುವ ಒಂದು ಕುಶಲಕಲೆ ಗುಪ್ತವಾಗಿರುತ್ತದೆ. ಸಮುದ್ರದ ನೀರನ್ನು ಒಂದು ಹನಿಯ ರುಚಿನೋಡಿ ತಿಳಿಂiಬಹುದು. ಶೈಲಿಯೇ ವ್ಯಕ್ತಿತ್ವವನ್ನು ಪ್ರದರ್ಶಿಸುವ ಬೆಳಕಾಗುತ್ತದೆ. ಕೆಲವು ಅವಿಸ್ಮರಣೀಯ ವಾಕ್ಯಗಳನ್ನು ಲೇಖಕರು ಬರೆದುಬಿಡುತ್ತಾರೆ. ಶಿವ ಖಿರಾ ಎಂಬವರು ನೀವೂ ಗೆಲ್ಲಬಹುದು' ಎಂಬ ಪುಸ್ತಕದಲ್ಲಿ ಒಂದು ಮಾತು ಹೇಳುತ್ತಾರೆ. ಯಶಸ್ವಿ ಪುರುಷರು ಬೇರೆ ಏನನ್ನೂ ಮಾಡುವುದಿಲ್ಲ, ಆದರೆ ಅವರು ಮಾಡುವ ರೀತಿ ಮಾತ್ರ ಬೇರೆಯಾಗಿರುತ್ತದೆ.'' ಇದು ಶಬ್ದಗಳ ಆಟದಂತೆ ಕಂಡರೂ ವಿಚಾರದಿಂದ ಪರಿಪ್ಲುತವಾಗಿದೆ. ತರಳಬಾಳು ಜಗದ್ಗುರುಗಳು ಒಂದೆಡೆ ಹೇಳುತ್ತಾರೆ, ಮಗು ತಾಯಿಯ ಜಠರದಲ್ಲಿ ಇರುವಾಗ ಅದು ಒದೆಯುತ್ತದೆ, ಆಗ ತಾಯಿಗೆ ಸ್ವರ್ಗಸುಖ ಲಭಿಸುತ್ತದೆ, ಅದೇ ಮಗು ದೊಡ್ಡವನಾದ ಮೇಲೆ ಒದ್ದಾಗ ಅದು ನರಕ ಯಾತನೆ ತರುತ್ತದೆ.''. ಇದು ಜನರೇಶನ್ ಗ್ಯಾಪ್ ಬಗ್ಗೆ, ತಂದೆತಾಯಿಗಳನ್ನು ಧಿಕ್ಕರಿಸಿ, ಅವರನ್ನು ಸೇವಿಸದೇ ವೃದ್ಧಾಶ್ರಮಕ್ಕೆ ತಳ್ಳುತ್ತಿರುವ ಜನರ ವಸ್ತುಸ್ಥಿತಿಯ ಮೇಲೆ ಶ್ರೀಗಳ ಈ ವಾಕ್ಯ ಒಂದು ಟಿಪ್ಪಣಿಯಂತಿದೆ.

ಹೊಗಳಿದವರು ನಮ್ಮನ್ನು ಹೊನ್ನಶೂಲಕ್ಕೆ ಏರಿಸುವರು' ಎಂದರು ಬಸವಣ್ಣನವರು. ಕೀರ್ತಿಶನಿ ತೊಲಗಾಚೆ' ಎಂದರು ಕುವೆಂಪು. ಹೊಗಳಿಕೆಯ ತೆಗಳಿಕೆಯ ಲಾಭ ನಷ್ಟಗಳ ಬಗ್ಗೆ ಶ್ರೀಗಳು ಬರೆಯುತ್ತಾರೆ. ಮಹಾಭಾರತದಲ್ಲಿ ಬರುವ ಕ್ರೋಧಭಕ್ಷ್ಯ ಎಂಬ ಕುರೂಪಿ ರಾಕ್ಷಸನ ಕತೆಯನ್ನು ಹೇಳುತ್ತಾರೆ. ಅವನು ಇಂದ್ರನ ಸಿಂಹಾಸನವನ್ನೇ ಏರಿ ಕುಳಿತನಂತೆ. ಎಷ್ಟು ಬೈದರೂ ಕೆಳಗಿಳಿಯಲಿಲ್ಲ. ಬೈದಷ್ಟು ಅವನ ರೂಪ ಸುಂದರವಾಗುತ್ತಿತ್ತಂತೆ. ಇಂದ್ರ ಇದನ್ನು ಕಂಡು ಅವನನ್ನು ಹೊಗಳತೊಡಗಿದ. ಅವನು ಕುರೂಪಿಯಾಗಿತ್ತ ಕುಬ್ಜನಾಗುತ್ತ ನಡೆದ. ಕೊನೆಗೆ ಓಡಿಹೋದನಂತೆ. ನಿಂದಕರು ಇರಬೇಕಯ್ಯಾ ಊರೊಳಗೆ' ಎಂಬ ಪುರಂದರ ದಾಸರ ಮಾತನ್ನು ನೆನೆಯುತ್ತಾರೆ. ಹಂದಿ ಇದ್ದರೆ ಕೇರಿ ಶುದ್ಧವಾಗುವಂತೆ, ನಿಂದಕರಿಂದ ಊರು ಶುದ್ಧವಾಗುತ್ತದೆ ಎನ್ನುತ್ತಾರೆ. ಶಿವರಾತ್ರಿ ಸಿನಿಮಾ ರಾತ್ರಿಯಾಗದಿರಲಿ' ಎಂಬ ಪ್ರಬಂಧದಲ್ಲಿ ಮಹಾಭಾಭರತದ ಶಾಂತಿಪರ್ವದಲ್ಲಿ ಬರುವ ಕಥೆಯನ್ನು ಉದ್ಧರಿಸುತ್ತಾರೆ. ಅಲ್ಲಿ ಬರುವ ವ್ಯಾಧನ ಕಥೆಗೆ ಹೊಸ ಅರ್ಥವನ್ನು ಬರೆಯುತ್ತಾರೆ. ಶ್ರೀ ಕೃಷ್ಣನ ಪುಣ್ಯಕ್ಷೇತ್ರಗಳು ಇರುವಲ್ಲೆಲ್ಲ ಈಶ್ವರನ ದೇವಾಲಯಗಳು ಇರುವುದರ ಸ್ವಾರಸ್ಯವನ್ನು ತೀಳಿಸುತ್ತಾರೆ, ಬೃಂದಾವನದಲ್ಲಿರುವ ಗೋಪೀಶ್ವರ ಮಹಾದೇವನ ಸ್ವಾರಸ್ಯಕರ ಕತೆಯನ್ನು ನಿರೂಪಿಸುತ್ತಾರೆ. ಕೃಷ್ಣನ ರಾಸಲೀಲೆ ನೋಡಲು ಶಿವನು ಪಾರ್ವತಿಯೊಂದಿಗೆ ಬಂದ ಪ್ರಸಂಗ. ಪಾರ್ವತಿಗೆ ಪ್ರವೇಶ ದೊರೆಯಿತು. ಶಿವನಿಗೆ ದೊರೆಯಲಿಲ್ಲ. ಆಗ ಅವನೂ ಗೋಪಿಯ ವೇಷದಲ್ಲಿ ಪ್ರವೇಶ ಪಡೆದ. ಶಿವನನ್ನು ಗುರುತಿಸಿದ ಕೃಷ್ಣನು ಅವನನ್ನು ಗೋಪೀಶ್ವರಾ' ಎಂದು ಕರೆದನಂತೆ. ರಾಸಲೀಲೆಯನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಗೋಪೀಶ್ವರ ಮಹಾದೇವನಿಗೆ ವಹಿಸಿದನಂತೆ.

ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು- ಎಂಬ ಗಾದೆಯ ವಿಚಾರ ಚರ್ಚಿಸುತ್ತ ಅದರ ಹಿಂದಿರುವ ರೋಚಕ ಕಥಾನಕವನ್ನು ವಿವರಿಸುತ್ತಾರೆ. ಕಾಳಿದಾಸನ ಉಪಮೆ, ಭಾರವಿಯ ಅರ್ಥಗೌತವ, ದಂಡಿಯ ಪದಲಾಲಿತ್ಯ ಇವೆಲ್ಲ ಕನ್ನಡ ಗಾದೆಗಳಲ್ಲಿರುವುದನ್ನು ಉದಾಹರಣೆಗಳಿಂದ ತಿಳಿಸುತ್ತಾರೆ.

ಎದೆತುಂಬಿ ಹಾಡಿದೆನು ಅಂದು ನಾನು' ರಾಷ್ಟ್ರಕವಿ ಶಿವರುದ್ರಪ್ಪನವರ ಪ್ರಸಿದ್ಧ ಹಾಡು. ಈ ಹಾಡಿನ ಬಗ್ಗೆ ಬರೆಯುತ್ತ ತಮಗೆ ಇರುವ ಕನ್ನಡ ಕಾವ್ಯಾಸಕ್ತಿಯನ್ನು ಶ್ರೀಗಳು ಚೆನ್ನಾಗಿ ಮೂಡಿಸಿದ್ದಾರೆ. ಮಠಃ ಛಾತ್ರಾನಿಲಯಃ' ಎಂಬ ಅಮರಕೋಶದ ಉಕ್ತಿಯನ್ನು ಉದ್ಧರಿಸಿ ಹಿಂದಿನ ಕಾಲದಲ್ಲಿ ಮಠಗಳು ಶಿಕ್ಷಣ ಕೇಂದ್ರಗಳಾಗಿದ್ದವು ಎಂಬುದನ್ನು ಬರೆಯುತ್ತಾರೆ. ಕರ್ನಾಟಕದ ಮಠಗಳು ಅದ್ವಿತೀಯ ಪ್ರತಿಭೆಗಳಿಗೆ ಆಶ್ರಯ ನೀಡಿದ ವಿಚಾರ ತಿಳಿಸುತ್ತಾರೆ. ಮೊದಲು ಕನ್ನಡ ಪ್ರಧ್ಯಪಕನಾಗಿ, ನಂತರ ಅಂತಾರಾಷ್ಟ್ರೀಯ ಖ್ಯಾತಿಯ ಸಮಾಜಶಾಸ್ತ್ರಜ್ಞನಾಗಿ ಬೆಳೆದ ಡಾ|ಹಿರೇಮಲ್ಲೂರ್ ಈಶ್ವರನ್ ಅವರಿಗೆ ಸಿರಿಗೆರೆ ಮಠ, ಅಂತಾರಾಷ್ಟ್ರೀಯ ಖ್ಯಾತಿಯ ಅರ್ಥಶಾಸ್ತ್ರಜ್ಞ ಡಾ| ನಂಜುಡಪ್ಪನವರಿಗೆ ಸುತ್ತೂರ ಮಠ, ರಾಷ್ಟ್ರಕವಿ ಜಿ.ಎಸ್.ಎಸ್. ಅವರಿಗೆ ಸಿದ್ಧಗಂಗಾ ಮಠ ಆಶ್ರಯ ನೀಡದ್ದರ ಬಗ್ಗೆ ಬರೆಯುತ್ತಾರೆ. ಇಲ್ಲಿ ತಮ್ಮ ಜೀವನದ ಬಗ್ಗೆ ಕೂಡಾ ಬರೆಯುತ್ತಾರೆ.

ತುಂಗ-ಭದ್ರೆಯ ಸಂಗಮದ ಸ್ಥಳದಿಂದ ಕೂಗಳತೆಯ ಒಂದು ಹಳ್ಳಿ ಶ್ರೀಗಳ ಜನ್ಮಸ್ಥಳ. ಹತ್ತಿರದ ಹಳ್ಳಿಗೆ ಲಿಂಗೈಕ್ಯರಾದ ಸಿರಿಗೆರೆಯ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಆಗಮಿಸಿದ್ದರು. ಅಲ್ಲಿಯ ಸಭೆಯಲ್ಲಿ ಒಬ್ಬ ಬಾಲಕ ಒಂದೆರಡು ಭಕ್ತಿಗೀತ ಹಾಡಿದ. ಅವನಿಗೆ ಸಂಗೀತದ ಗೀಳು ಇತ್ತು. ಹತ್ತಿರದ ಪೇಟೆಯ ಬೀದಿಯಲ್ಲಿ ಭಿಕ್ಷುಕನೊಬ್ಬ ತೆಂಗಿನ ಚಿಪ್ಪಿನ ತಂತಿವಾದ್ಯ ನುಡಿಸುತ್ತಿದ್ದ. ಅದರಿಂದ ಆಕರ್ಷಿತನಾದ ಬಾಲಕ ತಾನೂ ಒಂದು ವಾದ್ಯ ತಾಯಾರಿಸಲು ಪ್ರಯತ್ನಿಸಿದ. ಈ ವಿಷಯ ತೀಳಿದ ಶ್ರೀಗಳು ಆ ಹುಡುಗನನ್ನು ಬಳಿಗೆ ಕರೆದು ಮೈದಡವಿದರು. ಮಠದಿಂದ ಮಾರನೆಯ ದಿನವೇ ಒಂದು ಸುಂದರ ಪಿಟೀಲನ್ನು ಅವನಿಗೆ ಕಳಿಸಿಕೊಟ್ಟರು. ಆ ಹುಡುಗ ಮುಂದೆ ವಿದೇಶದಲ್ಲೂ ತನ್ನ ಪಿಟೀಲುವಾದನ ಕಲೆಯನ್ನು ಮೊಳಗಿಸಿದ. ವಿಜ್ಞಾನದ ವಿದ್ಯಾರ್ಥಿಯಾಗಿದ್ದ. ಅವನನ್ನು ಕರೆದು ಕನ್ನಡ ಮತ್ತು ಸಂಸ್ಕೃತ ಕಲಿಯಲು ಪ್ರೋತ್ಸಾಹಿಸಿ ಮಹರಾಜಾ ಕಾಲೇಜು ಸೇರಿಸಿದರು. ಅವನಿಗೆ ಕಾಲೇಜಿನಲ್ಲಿ ಸಹಪಾಠಿಗಳಾಗಿ ದೊರೆತವರು ಆಲನಹಳ್ಳಿ ಶ್ರೀಕೃಷ್ಣ, ಕೆ ರಾಮದಾಸ, ತೀ.ನಂ. ಶಂಕರನಾರಾಯಣ, ಕಾಳೇಗೌಡ ನಾಗವಾರ, ಪಿ.ಕೆ.ರಾಜಶೇಖರ, ಪುತಿನ ಮಗಳು((ಅಲಮೇಲು). ವಿದ್ಯಾಗುಗಳಲ್ಲಿ ಜಿ.ಎಸ್.ಶಿವರುದ್ರಪ್ಪ ಪ್ರಮುಖರು. ಅದೇ ಬಾಲಕ ಮುಂದೆ ಬನಾರಸ ಹಿಂದೂ ವಿಶ್ವವಿದ್ಯಾನಿಲಯದಿಂದ ಸೂತಸಂಹಿತೆಯ ಬಗ್ಗೆ ಸಂಶೋಧನ ಪ್ರಬಂಧ ಬರೆದು ((A critical Study of the Suta-Samhita) ) ಡಾಕ್ಟರೇಟ್ ಗಳಿಸಿದ.(1976).

ಆ ಹಳ್ಳಿಯ ಮುಗ್ದ ಹುಡುಗನೇ ಸಿರಿಗೆರೆ ಮಠದ ಈಗಿನ ಪೀಠಾಧಿಪತಿ ಡಾ| ಶಿವಮೂರ್ತಿ ಶಿವಾಚಾರ್ಯರು ಎಂದು ತಿಳಿದಾಗ ನಮಗೆಲ್ಲ ಅಚ್ಚರಿಯಾಗುತ್ತದೆ. ಎಲ್ಲಿ ವಿಜ್ಞಾನ, ಎಲ್ಲಿ ಪಿಟೀಲು, ಎಲ್ಲಿ ಕನ್ನಡ ಸಂಸ್ಕೃತ ಪಾಡಿತ್ಯ, ಎಲ್ಲಿ ಗುರುಗಳ ಅನುಗ್ರಹ. (ಎತ್ತಣಿಂದೆತ್ತ ಸಂಬಂಧವಯ್ಯ?)

"ಎದೆತುಂಬಿ ಹಾಡಿದೆನು ಅಂದು ನಾನು
ಮನವಿಟ್ತು ಕೇಳಿದಿರಿ ಅಲ್ಲಿ ನೀವು
ಇಂದು ನಾ ಹಾಡಿದರು ಅಂದಿನಂತೆಯೆ ಕುಳಿತು
ಕೇಳುವಿರಿ ಸಾಕೆನಗೆ ಅದುವೆ ಬಹುಮಾನ.''

ಈ ಹಾಡು ಕೇಳಿದಾಗ ಶ್ರೀ ತರಳಬಾಳು ಜಗದ್ಗುರು ಡಾ| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳಿಗೆ ತಮ್ಮ ಜೀವನದ, ಬಾಲ್ಯದ ನೆನಪಾಗುತ್ತದೆಯಂತೆ. ಅವರ ಬಾಳೂ ಒಂದು ಹಾಡಿನಂತೆ ಸುಮಧುರವಾಗಿದೆ, ಅವರ ಲೇಖನಗಳಲ್ಲಿ ಪದ್ಯದ ಲಾಲಿತ್ಯವಿದೆ, ಗದ್ಯದ ಔಚಿತ್ಯವಿದೆ, ಪೀಠದ ಪ್ರೌಢಿಮೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+