ಬೇಂದ್ರೆ ಅವರ ನೂರು ಅಮರ ಗೀತೆಗಳು
ಧಾರವಾಡದಲ್ಲಿರುವ ಡಾ। ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷರಾದ ಡಾ। ಎಂ.ಎಂ.ಕಲಬುರ್ಗಿಯವರಿಗೆ ಒಂದು ಪ್ರತಿ ಕೊಟ್ಟೆ. ಅವರು ಸಂತೋಷ ವ್ಯಕ್ತಪಡಿಸುತ್ತ ಆ ಪ್ರತಿಯನ್ನು ಕೈಯಲ್ಲಿ ಹಿಡಿದುಕೊಂಡೇ ಮೊದಲ ಪ್ರಶ್ನೆ ಕೇಳಿದ್ದರು, ‘‘ಆ ಪದ್ಯದ ಕೊನೆಗೆ ಒಂದು ಸಾಲು ಬರುತ್ತದೆ, ‘ಅಬಿಕಾತನಯನತ್ತೆ ಬಾ’ ಎಂದು. ಇದರ ಅರ್ಥ ಬರೆದಿದ್ದೀರಾ?’’
ಆಗ ನಾನೆಂದೆ, ‘ಬರೆದಿದ್ದೇನೆ. ಡಾ। ರಂ.ಶ್ರೀ.ಮುಗಳಿಯವರಂತಹ ಹಿರಿಯ ವಿಮರ್ಶಕರು ‘ಅಂಬಿಕಾತನಯ ಅಳುತ್ತಾನೆ’ ಎಂದು ತಪ್ಪುಅರ್ಥ ಮಾಡಿದ್ದಾರೆ. ‘ಅಂಬಿಕಾತನಯನ ಕಡೆಗೆ ಬಾ’ ಎಂಬ ಅರ್ಥವಿದೆ. ಇದಲ್ಲದೆ ಹಲವಾರು ಟೀಕೆಗಳಿಗೆ ಉತ್ತರ ನೀಡಿರುವೆ.’’ ಎಂದೆ. ‘ಋಷಿಯ ತೊಡೆಯಿಂದ ನುಸುಳಿ ಬಾ’ ಎಂದರೇನು? ‘ನನ್ನ ತಲೆಯಾಳಗೆ’ ಅಷ್ಟೇ ಅಲ್ಲ ‘ಮೂಲ ಹೊಲದಲ್ಲಿ ನೆಲಸಿ ಬಾ’ ಎಂದರೇನು. ‘ಕರು ಕಂಡ ಕರುಳೆ’ ಏನಿದರ ಅರ್ಥ. ‘ಬಂದಾರೆ ಬಾರೆ, ಒಂದಾರೆ ಸಾರೆ । ಕಣ್ಧಾರೆ ತಡೆವರೇನೆ?’ ಎಂದರೇನು. (ಬಹಳ ವಿಮರ್ಶಕರ ತಲೆಕೆಡಿಸಿದ ಸಾಲುಗಳು ಇವು.) ಇದರ ಬಗ್ಗೆ ಹಲವಾರು ಜನ ಪ್ರಶ್ನೆ ಕೇಳಿದರು.
ಬೇಂದ್ರೆಯವರು ಇದನ್ನು ಬರೆದಾಗ ಧಾರವಾಡದಲ್ಲಿ ಮಳೆ ಆಗಿತ್ತು. ಶಿವಮೊಗ್ಗೆಯ ಸಾಹಿತ್ಯ ಅಮ್ಮೇಲನದಲ್ಲಿ, ಅಧ್ಯಕ್ಷ ಸ್ಥಾನದಿಂದ, ಇದನ್ನು ಓದಿದಾಗ, ಅಲ್ಲಿಯೂ ಮಳೆಯಾಗಿತ್ತು. ಒಬ್ಬರು ಮೋಜಿನ ಪ್ರಶ್ನೆ ಕೇಳಿದ್ದರು. ನೀವು ಇದನ್ನು ಓದಿದಿರಿ, ಮಳೆ ಆಗಲಿಲ್ಲವಲ್ಲ?’ ನಾನು ಅವರಿಗೆ ಉತ್ತರಿಸಿದ್ದೆ, ‘ಇಲ್ಲಿ ನಾನು ಓದಿದ್ದೇನೆ, ಬೇಂದ್ರೆಯವರೇ ಓದಿದ್ದರೆ ಮಳೆಯಾಗಬಹುದಿತ್ತು’ಎಂದು. ನನ್ನ ‘ರಿಪಾರ್ಟಿ’ಗೆ ಶ್ರೋತೃಗಳಿಂದ ಮೆಚ್ಚುಗೆಯ ಹರ್ಷೋದ್ಗಾರದ ಸ್ಪಂದನ ದೊರೆತಿತ್ತು.
‘ಬಾರೋ ಸಾಧನಕೇರಿಗೆ’ ಪದ್ಯದಲ್ಲಿ ಬೇಂದ್ರೆಯವರ ಧಾರವಾಡದ ವಾಸಸ್ಥಾನ ಸಾಧನಕೇರಿಯ ಪ್ರೀತಿ ವ್ಯಕ್ತವಾಗಿದೆ. ಈ ಪದ್ಯವನ್ನು ಬರೆಯಲು ಅವರಿಗೆ ಸ್ಫೂರ್ತಿ ದೊರೆತದ್ದು ಚಿತ್ತವಿದ್ರಾವಕ ದುಃಖದ ಘಟನೆ. ‘ನರಬಲಿ’ ಪದ್ಯವು ಬ್ರಿಟಿಶ್ ಆಳರಸರ ಕ್ರೋಧ ತಂದಿತ್ತು. ಬೇಂದ್ರೆ ಕೆಲಸ ಕಳೆದುಕೊಂಡಿದ್ದರು. ಹತ್ತು ವರ್ಷ ಕೆಲಸವಿಲ್ಲದೆ ಅಲೆಮಾರಿ ಜೀವನ ನಡೆಸಿದ್ದರು.
ಪುಣೆಗೆ ಹೋಗಿ ಎರಡುವರ್ಷ ಕಳೆದಾಗ ಎಂ.ಎ.ಡಿಗ್ರಿಯನ್ನು ಪಡೆದರು. ಗದುಗಿನ ಸಮಿತಿ ಶಾಲೆಯಲ್ಲಿ ಮುಖ್ಯಾಧ್ಯಾಪಕ ಕೆಲಸ ದೊರೆತಿತ್ತು. ಸಾಹಿತಿ ಎಂಬ ಕೀರ್ತಿ ದಿನೇ ದಿನೇ ವರ್ಧಿಸುತ್ತಿತ್ತು. ಮಲ್ಲಮ್ಮನ ಬೆಳವಡಿಯಲ್ಲಿ 21 ಜೋಡೆತ್ತಿನ ಮೆರವಣಿಗೆ, ಸನ್ಮಾನ ಪಡೆದು ಗದುಗಿಗೆ ಮರಳಿದಾಗ ಅವರಿಗೆ ಶಾಲೆಯ ಆಡಳಿತದಿಂದ ದೊರೆತ ಸನ್ಮಾನ, ‘ಕೆಲಸದಿಂದ ವಜಾ ಮಾಡಿದ ಪತ್ರ’. ಒಂದೇ ವರ್ಷದಲ್ಲಿ ಮತ್ತೆ ಮನೆಯನ್ನು ಕಿತ್ತಿಕೊಂಡು ಧಾರವಾಡಕ್ಕೆ ಮರಳುವ ಪಸಂಗ. ಆಗ ಬರೆದ ಪದ್ಯವಿದು, ‘ಬಾರೋ ಸಾಧನಕೇರಿಗೆ’. ಕಹಿ ಉಂಡು ಸಿಹಿ ಕೊಡುವ, ವಿಷ ಕುಡಿದು ಅಮೃತ ಹಂಚುವ ಜಾಯಮಾನ ಈ ವರಕವಿಗಳದು. ಈ ಹಿನ್ನೆಲೆಯಲ್ಲಿ ಈ ಹಾಡು ಕೇಳಿದಾಗ ಓದುಗನಿಗೆ ರೋಮಾಂಚನವಾಗುತ್ತದೆ.
‘ಜೋಗಿ’ ಪದ್ಯ ಬಹಳ ಮಹತ್ವದ ಹಾಡು. ಇದರ ಬಗ್ಗೆ ಅತ್ಯಧಿಕ ವಿಮರ್ಶಕರು ಲೇಖನಗಳನ್ನು ಬರೆದಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯ 23 ಲೇಖನಗಳನ್ನು ಆಯ್ದು ಒಂದು ಹೊತ್ತಿಗೆಯನ್ನೇ ಪ್ರಕಟಿಸಿತು. (ಅದರಲ್ಲಿ ನನ್ನದೂ ಒಂದು ಲೇಖನವಿದೆ.)
‘ತಾರ ಪಂಚಮದಾಗ ಕೋಗಿಲಾ ಕೂಗತǚದೊ ಜೋಗಿ । ಯಾವ ಬಣ್ಣ ಅದಕಾವ ಕಣ್ಣು ನಾ ನೋಡಲೇನೊ ಹೋಗಿ? । ತೋಟವೆಲ್ಲ ಹೂವಾಗಿ ನಿಂತು ತೊಂಗೆಲ್ಲ ಗೊಂಚಲಾಗಿ । ಪಾಡು ಆಗತಾವ, ಹಣ್ಣು ಆಗತಾವ, ಅದರ ಲಯಕೆ ತೂಗಿ.’ .....
‘ಯಾವಸ್ವರಾ ಇದು ಯಾವ ಕೋಗಿಲಾ? ಯಾವ ಮರವೊ ಏನೋ । ಯಾಕ ಹೀಂಗ ಅಸರಂತ ಕೂಗತದ ಏನು ಇದಕ ಬ್ಯಾನ್ಯೋ । ಸುತ್ತ ಗುಡ್ಡ ನುಗ್ಗಾಗಿ ಹೋದವೋ ಓಗೊಟ್ಟು ಇದಕǚ । ಬಿಸಿಲು ಕುಣಿದು ಬೆವತǚದ ಈಗ ಬಂದǚದ ಮಳಿಯ ಹದಕǚ.’
ನಾನು ಎಂ.ಎ. ವಿದ್ಯಾರ್ಥಿಯಾಗಿದ್ದಾಗ ನನ್ನ ಸಹಪಾಠಿಯಾಬ್ಬ ‘ಜೋಗಿ’ ಪದ್ಯ ಹಾಡಿದಾಗ ಅದನ್ನು ಕೇಳಿದ ನಮ್ಮ ಗುರುಗಳಾಗಿದ್ದ ಪ್ರೊ.ತೀ.ನಂ.ಶ್ರೀಕಂಠಯ್ಯ ಮೈಮರೆತು ಮಂತ್ರಮುಗ್ಧರಾಗಿದ್ದರು. ಆ ಪ್ರಸಂಗ ನನಗೆ ನೆನಪಾಗುತ್ತದೆ. ‘ಬೇಂದ್ರೆಯವರ ಯಾವ ಹಾಡಿನಲ್ಲಿ ಯಾವ ನಿಧಿ ಅಡಗಿರುತ್ತದೆ ಗೊತ್ತಾಗುವುದೇ ಇಲ್ಲ. ಈ ಪದ್ಯ ನಾನು ಓದಿದ್ದೆ. ಆದರೆ ಹಾಡನ್ನು ಕೇಳಿದ ಮೇಲೆ ಇದರ ಗಹನ ಅರ್ಥ, ಪಾರಮಾರ್ಥಿಕ ಸಂಕೇತ ಪರಂಪರೆ ನನಗೆ ದಿಗಿಲನ್ನುಂಟು ಮಾಡಿದೆ’ ಎಂಬ ಉದ್ಗಾರ ತೆಗೆದಿದ್ದರು.
-
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾ ಕುಮಾರಿ ನೇಮಕ -
April 5 Horoscope: ನಿಮ್ಮ ಅದೃಷ್ಟ ಹೇಗಿದೆ? ಸಂಪೂರ್ಣ ಮಾಹಿತಿ ಇಲ್ಲಿ -
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ -
Bengaluru Viral: ಬೆಂಗಳೂರಿನ ಲಾಲ್ಬಾಗ್ ನೋಡಿ ತಪ್ಪೊಪ್ಪಿಗೆ ಕೊಡಬೇಕು ಎಂದ ವಿದೇಶಿಗ, ವಿಡಿಯೋ ವೈರಲ್ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
Virat Kohli: ಎಲ್ಲೂ ಅವಕಾಶ ಸಿಗದಿದ್ರೆ ಸ್ಯಾಂಡಲ್ವುಡ್ಗೆ ಬರ್ತೀನಿ: ವಿರಾಟ್ ಕೊಹ್ಲಿ ವಿಡಿಯೋ ವೈರಲ್












Click it and Unblock the Notifications