Get Updates
Get notified of breaking news, exclusive insights, and must-see stories!

2026 ಏಪ್ರಿಲ್ ತಿಂಗಳ ಹಬ್ಬಗಳು: ಅಕ್ಷಯ ತೃತೀಯ ಮತ್ತು ಏಕಾದಶಿಯ ಮಹತ್ವ ತಿಳಿದುಕೊಳ್ಳಿ

ಹಿಂದೂ ಧರ್ಮದಲ್ಲಿ ಪ್ರತಿಯೊಂದು ತಿಂಗಳಿಗೂ ತನ್ನದೆ ಆದ ದಾರ್ಮಿಕ ಮಹತ್ವ ಇದೆ. ಆದರೆ 2026 ಏಪ್ರಿಲ್ ತಿಂಗಳು ಭಕ್ತರಿಗೆ ಅತ್ಯಂತ ವಿಶೇಷವಾದ ಮಾಸವಾಗಿದೆ. ಈ ತಿಂಗಳು ವರುಥಿನಿ ಏಕಾದಶಿ ಮತ್ತು ಆಕ್ಷಯ ತೃತೀಯದಂತಹ ಮಹತ್ವದ ದಿನಗಳು ಬರಲಿದ್ದು, ಶ್ರೀ ಹರಿಯ ಕೃಪೆಗೆ ಪಾತ್ರರಾಗಲು ಇದು ಸರಿಯಾದ ಸಮಯವಾಗಿದೆ.

ಅಕ್ಷಯ ತೃತೀಯದ ಮಹತ್ವ

ಪುರಾಣಗಳ ಪ್ರಕಾರ, ಅಕ್ಷಯ ತೃತೀಯದಂದು ಸೂರ್ಯೋದಯಕ್ಕೆ ಮುನ್ನ ಪವಿತ್ರ ಸ್ನಾನ ,ಮಾಡಿ, ಮಧುಸೂದನ ರೂಪದ ಶ್ರೀ ವಿಷ್ಣುವನ್ನು ಪೊಜಿಸುವುದು ಅತ್ಯಂತ ಫಲಪ್ರದ. ಈ ದಿನ ಮಾಡು ದಾನ ದರ್ಮಗಳು ಎಂದಿಗೂ ಅಳಿಸದಂತಹ ಪುಣ್ಯವನ್ನು ತಂದು ಕೊಡುತ್ತದೆ ಎಂಬ ನಂಬಿಕೆಯಿದೆ. ಅಕ್ಷಯ ತೃತೀಯದಂದು ಭಗವಾನ್ ವಿಷ್ಣುವಿನ ಕಥೆಗಳನ್ನು ಆಲಿಸುವುದರಿಂದ ಜೀವನದಲ್ಲಿ ಸುಖ-ಶಾಂತಿ ಮತ್ತು ನೆಮ್ಮದಿ ನೆಲೆಸುತ್ತದೆ.

April 2026 Festival List

ಅಕ್ಷಯ ತೃತೀಯದ ದಿನ

ಮಧುಸೂದನ (ವಿಷ್ಣು) ಪೂಜೆ ಮಾಡುವುದು
ಅನ್ನ, ಬಟ್ಟೆ, ಧನ ದಾನ ಮಾಡುವುದು
ಪವಿತ್ರ ಕಥೆಗಳು ಕೇಳುವುದು

ಇವುಗಳ ಮೂಲಕ ಭಕ್ತರು ಶಾಶ್ವತ ಆಧ್ಯಾತ್ಮಿಕ ಫಲಗಳನ್ನು ಪಡೆಯುತ್ತಾರೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.

ಏಕಾದಶಿ ಉಪವಾಸದ ಮಹತ್ವ

ಏಕಾದಶಿ ದಿನವನ್ನು ಶ್ರೀ ಹರಿಯ ಆರಾಧನೆಗೆ ಅತ್ಯಂತ ಪವಿತ್ರ ದಿನವೆಂದು ಪರಿಗಣಿಸಲಾಗಿದೆ.
ಉಪವಾಸ ಆಚರಣೆ ಮಾಡುತ್ತಾರೆ
ಬೆಳಿಗ್ಗೆ ಸ್ನಾನ ಮಾಡಿ ಪೂಜೆ ಮಾಡುತ್ತಾರೆ
ದಾನ ಮತ್ತು ಜಪದಲ್ಲಿ ತೊಡಗುತ್ತಾರೆ

ಏಕಾದಶಿ ಉಪವಾಸವನ್ನು ಆಚರಿಸಿ, ಮುಂದಿನ ದಿನ ದ್ವಾದಶಿಯಲ್ಲಿ ದಾನ ಮಾಡಿದರೆ ಹೆಚ್ಚಿನ ಪುಣ್ಯ ದೊರೆಯುತ್ತದೆ ಎಂಬ ನಂಬಿಕೆ ಇದೆ.

ದ್ವಾದಶಿ ಮತ್ತು ತ್ರಯೋದಶಿ ವಿಶೇಷತೆ

ದ್ವಾದಶಿ ದಿನ: ತುಳಸಿ ಎಲೆಗಳಿಂದ ವಿಷ್ಣು ಪೂಜೆ ಮಾಡಿದರೆ ಕುಟುಂಬದ ಮೋಕ್ಷ ಲಭಿಸುತ್ತದೆ ಎಂದು ಹೇಳಲಾಗುತ್ತದೆ.

ತ್ರಯೋದಶಿ ದಿನ: ಹಾಲು, ಮೊಸರು, ತುಪ್ಪ, ಜೇನುತುಪ್ಪದಿಂದ ಪಂಚಾಮೃತ ಅಭಿಷೇಕ ಮಾಡಿದರೆ ವಿಷ್ಣುಲೋಕದ ಅನುಗ್ರಹ ಸಿಗುತ್ತದೆ.

ವೈಶಾಖ ಮಾಸದ ಮಹತ್ವ

ಏಪ್ರಿಲ್ ತಿಂಗಳಲ್ಲೇ ಆರಂಭವಾಗುವ ವೈಶಾಖ ಮಾಸವು ಅತ್ಯಂತ ಪವಿತ್ರವಾಗಿದ್ದು, ಈ ತಿಂಗಳಲ್ಲಿ ಮಾಡುವ ಪೂಜೆ, ಜಪ ಮತ್ತು ದಾನ ಕಾರ್ಯಗಳಿಗೆ ವಿಶೇಷ ಪುಣ್ಯ ಫಲ ದೊರೆಯುತ್ತದೆ.

ಏಪ್ರಿಲ್ 2026 ಹಬ್ಬಗಳು ಮತ್ತು ಉಪವಾಸದ ಪಟ್ಟಿ ಹಿಗಿದೆ.

ಏಪ್ರಿಲ್ 5 - ಸಂಕಷ್ಟ ಚತುರ್ಥಿ

ಏಪ್ರಿಲ್ 9 - ಮಾಸಿಕ ಕೃಷ್ಣ ಜನ್ಮಾಷ್ಟಮಿ

ಏಪ್ರಿಲ್ 10 - ಕಲಷ್ಟಮಿ

ಏಪ್ರಿಲ್ 13 - ವರುಥಿನಿ ಏಕಾದಶಿ, ವಲ್ಲಭಾಚಾರ್ಯ ಜಯಂತಿ

ಏಪ್ರಿಲ್ 14 - ಮೇಷ ಸಂಕ್ರಾಂತಿ

ಏಪ್ರಿಲ್ 15 - ಬುಧ ಪ್ರದೋಷ ವ್ರತ, ಮಾಸಿಕ ಶಿವರಾತ್ರಿ

ಏಪ್ರಿಲ್ 17 - ಚೈತ್ರ ಅಮಾವಾಸ್ಯೆ

ಏಪ್ರಿಲ್ 19 - ಅಕ್ಷಯ ತೃತೀಯಾ, ಪರಶುರಾಮ ಜಯಂತಿ, ತ್ರೇತಾ ಯುಗ ದಿನ

ಏಪ್ರಿಲ್ 20 - ಮಾತಂಗಿ ಜಯಂತಿ, ರೋಹಿಣಿ ವ್ರತ

ಏಪ್ರಿಲ್ 21 - ಶಂಕರಾಚಾರ್ಯ ಜಯಂತಿ, ಸೂರದಾಸ್ ಜಯಂತಿ

ಏಪ್ರಿಲ್ 22 - ರಾಮಾನುಜ ಜಯಂತಿ, ಸ್ಕಂದ ಷಷ್ಠಿ

ಏಪ್ರಿಲ್ 23 - ಗಂಗಾ ಸಪ್ತಮಿ

ಏಪ್ರಿಲ್ 24 - ಮಾಸಿಕ ದುರ್ಗಾಷ್ಟಮಿ

ಏಪ್ರಿಲ್ 25 - ಸೀತಾ ನವಮಿ

ಏಪ್ರಿಲ್ 27 - ಮೋಹಿನಿ ಏಕಾದಶಿ, ಸಿದ್ಧಿಲಕ್ಷ್ಮಿ ಜಯಂತಿ

ಏಪ್ರಿಲ್ 28 - ಭೌಮ ಪ್ರದೋಷ ವ್ರತ, ಪರಶುರಾಮ ದ್ವಾದಶಿ

ಏಪ್ರಿಲ್ 30 - ನರಸಿಂಹ ಜಯಂತಿ

ಮೇ 2026 ಆರಂಭದ ಪ್ರಮುಖ ದಿನ

ಮೇ 1 - ವೈಶಾಖ ಪೂರ್ಣಿಮಾ, ಬುದ್ಧ ಪೂರ್ಣಿಮಾ

ಏಪ್ರಿಲ್ ತಿಂಗಳು ಭಕ್ತರಿಗೆ ಧಾರ್ಮಿಕ ಚಟುವಟಿಕೆಗಳಿಗೆ ಅತ್ಯಂತ ಅನುಕೂಲಕರ ಸಮಯವಾಗಿದೆ. ಉಪವಾಸ, ಪೂಜೆ ಮತ್ತು ದಾನಗಳ ಮೂಲಕ ಜೀವನದಲ್ಲಿ ಶಾಂತಿ, ಸಮೃದ್ಧಿ ಮತ್ತು ಆಧ್ಯಾತ್ಮಿಕ ಪ್ರಗತಿಯನ್ನು ಪಡೆಯಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+