• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಯ್ಯೋ ಹೊಟ್ಟೆ! ಕನ್ನಡವಿಲ್ಲದೇ ನೀ ಕೆಟ್ಟೆ!

By Staff
|

ಕರಾವಳಿ, ಮಲೆನಾಡು, ಉತ್ತರ ಕರ್ನಾಟದ ಊಟ, ಮುದ್ದೆ ಊಟ..ಎಷ್ಟು ವಿವಿಧತೆ ಇದೆ! ಇದ್ನೆಲ್ಲ ಬಿಟ್ಟು ಎಣ್ಣೆಲ್ಲಿ ಮೆತ್ತಿದ ಊಟಕ್ಕೋ, ಬ್ರೆಡ್ ಊಟಕ್ಕೋ ನಿಮ್ಮ ದೇಹವನ್ನ ಒಪ್ಪಿಸಿ ಅಂತ ಒತ್ತಾಯ ಮಾಡ್ತಿರೋ ಇವತ್ತಿನ ಹೋಟೆಲ್ಗಳು ನಮ್ಮ ಆರೋಗ್ಯಕ್ಕೆ ಎಷ್ಟು ಹಾನಿಕರವಾಗಿವೆ ಅಂತ ಯೋಚ್ನೆ ಮಾಡು ಗುರು!

ಬಾಳೆ ಎಲೆ ಊಟ... ಆಹಾ!!!ಇದೇ ತಿಂಗಳ 6ನೇ ತಾರೀಖಿನ ಡೆಕ್ಕನ್ ಹೆರಾಲ್ಡು ಇಂದಿರಾನಗರದ ಕ್ಲಬ್ ನಡೆಸಿದ ಆಹಾರ ಮೇಳದಲ್ಲಿ ಕರ್ನಾಟಕದ ಆಹಾರದಲ್ಲಿ ಇರೋ ವಿವಿಧತೆ ಮತ್ತೆ ಬೇಡಿಕೆಯನ್ನ ವರದಿ ಮಾಡಿದೆ. ಶಭಾಷ್ ಡೆಕ್ಕನ್ ಹೆರಾಲ್ಡ್.

One hears about every kind of Indian cuisine, but rarely about Karnataka cuisine. The first food festival presented by the Indiranagar Club in its series of "Taste of India" showcased Karnataka cuisine in its different varieties. As many as 30 veg and non-veg items were on offer at the buffet held at the back lawns of the club. A diner could choose from any of the 30 dishes at an unbelievable rate of Rs 100 only per head.

ಕರ್ನಾಟಕಕ್ಕೆ ಆಗ್ತಿರೋ ಅನಿಯಂತ್ರಿತ ವಲಸೆ ಯಾವ ಗೊಂದಲವನ್ನು ಉಂಟುಮಾಡಿದೆಯೋ ಅದರಲ್ಲಿ ಮೂರ್ಖರಂತೆ ಕನ್ನಡದ ತಿಂಡಿ-ತಿನಿಸುಗಳನ್ನು ಮರೆತರೆ ನಮ್ಮ ಆರೋಗ್ಯ ಮಟೇಸು ಗುರು! ಈ ಹಿನ್ನೆಲೆಯಲ್ಲಿ ಕನ್ನಡನಾಡಿನ ವೈವಿಧ್ಯಮಯ ಆಹಾರ ಪದ್ಧತಿಯನ್ನ ಪರಿಚಯಿಸ್ಲಿಕ್ಕೆ ಇಂತಹ ಮೇಳಗಳು ಬೇಕು. ನಮ್ಮ ರಾಜ್ಯದ ಆಹಾರ ಪದ್ಧತಿಯ ರುಚಿ ಮೆಟ್ರೋ ಕನ್ನಡಿಗರಿಗೂ, ಕನ್ನಡೇತರರಿಗೂ ತೋರಿಸಬೇಕು ಗುರು!

ಹೊರಗಿನವರ ತಿಂಡಿ-ತಿನಿಸುಗಳು ನಮ್ಮ ಆರೋಗ್ಯಕ್ಕೆ ಅಷ್ಟೇನು ಒಳ್ಳೇದಲ್ಲ

ಇತ್ತೀಚೆಗೆ ಬೆಂಗ್ಳೂರಂಥಾ ಪಟ್ಟಣಗಳಲ್ಲಿ ಯಾವ ಹೋಟೆಲ್ಲಿಗೆ ಹೋದರೂ ನಮ್ಮ ಮೊಸರನ್ನವೋ, ದೋಸೆಯೋ, ಇಡ್ಲಿಯೋ, ಹುಗ್ಗಿಯೋ ಕೇಳಿದ್ರೆ ಹೋಟೆಲ್ಲಿನ ಮಾಲೀಕರಿಂದ ಹಿಡಿದು, ಸಿಬ್ಬಂದಿಗಳು ಬಾಯಿ ಬಾಯಿ ಬಿಟ್ಟು ನೋಡ್ತಾರೆ. ಸಂಜೆ ಆದ್ಮೇಲಂತೂ ಕೇಳಲೇಬೇಡಿ! "ನಾರ್ತಿಂಡ್ಯನ್ನು ಇಲ್ಲಾ ಚೈನೀಸು ಇಲ್ಲಾ ಮೆಕ್ಸಿಕನ್ನು ಮಾತ್ರ ಇರೋದು. ಬೇಕಾ?" ಅನ್ನೋ ಹೋಟಲ್ಗಳೇ ಹೆಚ್ಚು! ಅಲ್ಲ - ಇವೆಲ್ಲ ಇರಬಾರದು ಅಂತೇನು ನಾವು ಹೇಳ್ತಿಲ್ಲ. ಆದರೆ ನಮಗೆ ಬೇಕಾದ್ದು ಸಿಗದೇನೇ ಹೋದ್ರೆ?

ಇರಬೇಕು, ಹೋಟೆಲ್ಗಳಲ್ಲಿ ವಿವಿಧತೆ ಇರಬೇಕು, ಬೇರೆ ಬೇರ ತರ ಊಟ ಸಿಗ್ಬೇಕು, ಅಂದ ಮಾತ್ರಕ್ಕೆ ನಮ್ಮ ಊಟಾನೇ ಸಿಗೋಲ್ಲ ಅಂದ್ರೆ ನ್ಯಾಯ ಅಲ್ಲ. ದಿನ ದಿನ ಪಿಜಾ ತಿನ್ನೋದು, ದಿನ ದಿನ ಪನ್ನೀರ್ ತಿನ್ನೋದು ನಮಗೆ ಆಗುತ್ತಾ? ನಮ್ಮ ಆರೋಗ್ಯ ಏನಾಗ್ಬೇಕು?

ಆಹಾರ ಪದ್ದತಿಗಳಿಗೂ ಸುತ್ತಮುತ್ತಲ ಭೌಗೋಳಿಕ ಸ್ಥಿತಿಗೂ ಇರುವ ನಂಟನ್ನು ಒಡೆಯಬಾರದು

ಯಾವುದೇ ಪ್ರದೇಶದ ಆಹಾರ ಪದ್ಧತಿ ಆಯಾ ಪ್ರದೇಶದ ಹವಾಮಾನಕ್ಕೂ, ಜನಾಂಗದ ಬದುಕಿನ ರೀತಿಗೂ ಅವಲಂಬಿಸಿರುತ್ತೆ ಗುರು. ಪ್ರಪಂಚದಲ್ಲೆಲ್ಲ ಹವಾಮಾನಕ್ಕೆ ತಕ್ಕಂತೆ, ಜನಾಂಗಕ್ಕೆ ತಕ್ಕಂತೆ ಆಹಾರ, ಉಡಿಗೆ, ತೊಡಿಗೆಗಳು ಬೇರೆಬೇರೆಯೇ ಆಗಿರ್ತವೆ. ಈ ವಿವಿಧತೆ ಲಕ್ಷಾಂತರ ವರ್ಷಗಳಿಂದ ಇದೆ. ಹಾಗಾಗಿ ನಮ್ಮ ಪೂರ್ವಜರು ಅಭ್ಯಸಿಸಿ ನಮಗೆ, ನಮ್ಮ ದೇಹಕ್ಕೆ ಹೊಂದುವ ಅತಿ ಹಿತವಾದ ಆಹಾರ ಪದ್ಧತಿಯನ್ನು ನಮಗಾಗಿ ಬಿಟ್ಟು ಹೋಗಿದ್ದಾರೆ.

ರಾಗಿ ಮುದ್ದೆ, ಸೊಪ್ಪಿನ ಸಾರು, ಜೋಳದ ರೊಟ್ಟಿ, ಕುಟ್ ಚಟ್ನಿ , ಅನ್ನ, ಸಾರು ಇದ್ರಲ್ಲಿ ನಮ್ಮ ದೇಹಕ್ಕೆ ಒಗ್ಗೋ ಪೌಷ್ಟಿಕತೆನೂ ಇದೆ, ರುಚಿನೂ ಇದೆ. ಯಾವ ತರದ ಊಟ ಬೇಕು! ಕರಾವಳಿ, ಮಲೆನಾಡು, ಉತ್ತರ ಕರ್ನಾಟದ ಊಟ, ಮುದ್ದೆ ಊಟ..ಎಷ್ಟು ವಿವಿಧತೆ ಇದೆ! ಇದ್ನೆಲ್ಲ ಬಿಟ್ಟು ಎಣ್ಣೆಲ್ಲಿ ಮೆತ್ತಿದ ಊಟಕ್ಕೋ, ಬ್ರೆಡ್ ಊಟಕ್ಕೋ ನಿಮ್ಮ ದೇಹವನ್ನ ಒಪ್ಪಿಸಿ ಅಂತ ಒತ್ತಾಯ ಮಾಡ್ತಿರೋ ಇವತ್ತಿನ ಹೋಟೆಲ್ಗಳು ನಮ್ಮ ಆರೋಗ್ಯಕ್ಕೆ ಎಷ್ಟು ಹಾನಿಕರವಾಗಿವೆ ಅಂತ ಯೋಚ್ನೆ ಮಾಡು ಗುರು!

ಹಾಗಾದರೆ ನಾವೇನು ಮಾಡಬೇಕು?

ನಮ್ಮ ಆಹಾರ ಪದ್ಧತಿ ನಮ್ಮ ಸಂಸ್ಕೃತಿಯ ದ್ಯೋತಕವೂ ಹೌದು. ನಮ್ಮೂರಿನ ಹೋಟೆಲ್ಗಳಲ್ಲಿ ನಮ್ಮ ಊಟ ಸಿಗೋಲ್ಲ ಅಂದ್ರೆ ಅಂತ ಹೋಟೆಲ್ ಇದ್ರೇನು ..ಬಿಟ್ರೇನು ಗುರು? ನಮ್ಮ ಹೋಟೆಲ್ ಉದ್ಯಮಿಗಳು ನಮ್ಮತನ ಮೆರೆಸಬೇಕು, ನಮ್ಮ ಕರ್ನಾಟಕದ ಆಹಾರ ಪದ್ಧತಿಗಳಿಗೆ ಆದ್ಯತೆ ಕೋಡ್ಬೇಕು. ಉತ್ತರದ ಬೀದರಿನಿಂದ ಹಿಡಿದು, ದಕ್ಷಿಣದ ಮೈಸೂರಿನವರೆಗೂ ನಮ್ಮಲ್ಲಿ ವಿಧ ವಿಧವಾದ ರುಚಿಕರ ತಿಂಡಿ-ತಿನಿಸುಗಳು, ಆಹಾರ ಪದ್ಧತಿಗಳಿವೆ. ಇವನ್ನೆಲ್ಲ ನಮ್ಮ ಹೋಟೆಲ್ ಉದ್ಯಮಿಗಳು ಅವರ ಮೆನುನಲ್ಲಿ ಹಾಕಿದ್ರೆ ಅವ್ರಿಗೇ ಲಾಭ ಅನ್ನೋದನ್ನ ಕಲಿತ್ಕೋಬೇಕು.

ನಾವೂ ಅಷ್ಟೆ! ಕನ್ನಡೇತರರ ಜೊತೆ ಹೊರಗೆ ಊಟಕ್ಕೆ ಹೋದಾಗ ನಮ್ಮ ಆಹಾರಗಳನ್ನ ಅವರಿಗೆ ಪರಿಚಯಿಸೋ ಜವಾಬ್ದಾರಿ ತಗೋಬೇಕು. ನಮ್ಮ ಕನ್ನಡದ ಆಹಾರಕ್ಕೆ ಆದ್ಯತೆ ಕೊಡ್ಬೇಕು. ಹೊರಗಿನಿಂದ ಬಂದೋರಿಗೂ ಕನ್ನಡ ನಾಡಿನ ಆಹಾರ ಪದ್ದತಿಗಳಿಗೆ ಒಗ್ಗದೆ ಆರೋಗ್ಯವಿಲ್ಲ ಗುರು! ಊಟ-ತಿಂಡಿಯಲ್ಲೂ ಕನ್ನಡವೇ ಸತ್ಯ, ಅನ್ಯವೆನಲದೇ ಮಿಥ್ಯ ಗುರು! ಆಗೀಗ ಹಾಳು-ಮೂಳು ತಿಂದ್ರೆ ತಪ್ಪೇನಿಲ್ಲ. ಆದ್ರೆ ಹೊರಗೆ ಹೋದಾಗೆಲ್ಲಾ ತಿನ್ನಲು ನಮ್ಮ ಕನ್ನಡದ ತಿಂಡಿ-ತಿನಿಸುಗಳು ಇಲ್ಲದೇ ಇರೋದು ನಮ್ಮ ಆರೋಗ್ಯಕ್ಕೆ ಸಕ್ಕತ್ ಹಾನಿಕರ ಗುರು. ಹೋಟೆಲಿಗರಿಗೆ ಇದನ್ನ ಅರ್ಥ ಮಾಡಿಸಬೇಕು, ಅಷ್ಟೆ.

(ಸ್ನೇಹಸೇತು :ಏನ್ ಗುರು?)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X