135847vishweshwar bhatಪತ್ರಕರ್ತ ಬಿವಿ ಸೀತಾರಾಂ ಜೈಲು ಪ್ರಸಂಗ/column/ravibelagere/2009/0112-karavali-ale-editor-bv-seetharam-in-soup.htmlಸೀತಾರಾಂ ಅವರ ಹಟಮಾರಿತನದ ಪರಿಣಾಮವಾಗಿ ಕರಾವಳಿ ಅಲೆ ವರದಿಗಾರರು ಕೆಲಸಬಿಟ್ಟು ಹೋಗಿದ್ದಾರೆ. ಬೇರೆ ಪತ್ರಿಕೆಗಳಿಗೆ, ಛಾನಲ್ ಗಳಿಗೆ ಸೇರಿಕೊಂಡಿದ್ದಾರೆ. ಸೀತಾರಾಂ ತಮ್ಮ ದೃಷ್ಟಿಕೋನ ಬದಲಿಸಿಕೊಳ್ಳಲಿ. ಪದೇಪದೇ ಜೈಲು ಸೇರುವುದನ್ನು ಅವರು ಹೋರಾಟ ಅಂದುಕೊಂಡರೆ, ಅದು ಅವರ ಮತ್ತು ಅವರ ಪತ್ರಿಕೆಯ ಆರೋಗ್ಯಕ್ಕೆ ಒಳ್ಳೆಯದಲ್ಲ. ಸೀತಾರಾಂ ಅವರ ಬಂಧನವನ್ನು ಖಂಡಿಸಿ ಜ.12ರ ಸಂಜೆ 4: 30ಕ್ಕೆ ಬೆಂಗಳೂರಿನ 34027http://kannada.oneindia.com/img/2009/01/12-bv-seetharam1.jpg135847vishweshwar bhatಎಂಟಿಆರ್ : ಆಹಾರ ಸಂಸ್ಕೃತಿಗೆ ಹೊಸರುಚಿ/column/bhat/2009/0129-meet-yajnanarayana-founder-mtr-bengaluru.htmlಆ ಪುಸ್ತಕ ಓದುತ್ತಿದ್ದಾಗ ನನಗೆ ಹೋಟೆಲ್ ಮಾಲೀಕರೊಬ್ಬರ ಜೀವನಕಥನ ಓದುತ್ತಿದ್ದೇನೆಂದು ಅನಿಸಲೇ ಇಲ್ಲ. ಅದು ಕೇವಲ ಹೋಟೆಲ್ ಉದ್ಯಮಿಯೊಬ್ಬರ ಕತೆಯೋ, ಕೈಫಿಯತ್ತೋ ಆಗಿದ್ದಿದ್ದರೆ ಅದರ ಬಗ್ಗೆ ಇಲ್ಲಿ ಪ್ರಸ್ತಾಪಿಸುತ್ತಲೂ ಇರಲಿಲ್ಲ. ಒಬ್ಬ ಅಪರೂಪದ ಸಾಧಕ,ದಣಿವರಿಯದ ಶ್ರಮಿಕ, ಹಿರಿಯಣ್ಣನಂಥ ಬೋಧಕ ಹಾಗೂ ಹಲವು ತಲೆಮಾರುಗಳನ್ನು ಮುನ್ನಡೆಸುವ ಮಾರ್ಗದರ್ಶಕ ಹೀಗೆ ಏಕಕಾಲಕ್ಕೆ ಅನೇಕ ಗುಣಗಳಿಂದ ಬದುಕಿಗೆ ಸ್ಫೂರ್ತಿ ನೀಡುವ ಒಬ್ಬ 34361http://kannada.oneindia.com/img/2009/01/29-yn-maiya-kc-reddy.jpg135847vishweshwar bhatಜಾಲಿಯ ಮರವು ನೆರಳಲ್ಲ, ಗೌರವ ಡಾಕ್ಟರೇಟ್ ಸ್ಥಿರವಲ್ಲ/column/bhat/2009/0226-bs-yeddyurappa-and-honorary-doctorate.htmlರುಂಡ ಮುಂಡಗಳನ್ನು ಒಂದು ಮಾಡುವಂತೆ ಮುಚ್ಚುವ ಉಸಿರುಗಟ್ಟಿಸುವ ಹಾರಗಳು, ಅರ್ಹರನ್ನೂ ಅನರ್ಹರನ್ನಾಗಿ ಮಾಡುವ ಗೌರವ ಡಾಕ್ಟರೇಟ್ ಬಿರುದುಬಾವಲಿಗಳನ್ನು ಒಲ್ಲೆ ಎಂದಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ಕಿವಿತುಂಬಿ ತೂತುಬೀಳುವಂತೆ ಮಾಡುವ ಬಹುಪರಾಕ್ ಗಳನ್ನು ಕೂಡ ನಿರಾಕರಿಸಲಿ. ಇವನ್ನೆಲ್ಲ ನಿರಾಕರಿಸಿ ದೊಡ್ಡವರಾಗುವುದಕ್ಕಿಂತ ನಿಸ್ವಾರ್ಥ ಸೇವೆಯಿಂದ ದೊಡ್ಡವರೆನ್ನಿಸಿಕೊಳ್ಳಲಿ. ಜೊತೆಗೆ ಎಂಟನಿ ಮತ್ತು ಫರ್ನಾಂಡಿಸ್ ಹಾಕಿಕೊಟ್ಟಿರುವ ಮೇಲ್ಪಂಕ್ತಿಯ ಹಾದಿಯಲ್ಲಿ ತುಸುವಾದರೂ ಸಾಗಲಿ.* ವಿಶ್ವೇಶ್ವರ ಭಟ್ 34883http://kannada.oneindia.com/img/2009/02/26-yeddyurappa12.jpg135847vishweshwar bhatದುಡ್ಡಿನಿಂದ ಸುಖ ನೆಮ್ಮದಿ ಖರೀದಿಸಬಹುದೆ?/column/bhat/2009/0312-where-is-happiness.htmlಬಚ್ಚಲಿನ ಟೈಲ್ಸ್ ಕೆಳಗೆ, ಮಂಚದ ಅಡಿಯಲ್ಲಿ, ಬೀರುವಿನಲ್ಲಿ, ಬ್ಯಾಂಕುಗಳಲ್ಲಿ ಕಾಂಚಾಣವನ್ನು ತುಂಬಿಕೊಂಡವರು ಮಹಾ ಸುಖಿಗಳೆಂದು ಭಾವಿಸಿರುತ್ತಾರೆ. ಅಂಥವರಿಗೆ ಕಂತೆ ಕಂತೆ ಕಾಪಾಡಿಕೊಳ್ಳುವುದೇ ಚಿಂತೆ. ಸುಂದರ ಹೆಂಡತಿಯಿದ್ದರೆ ಬೇರೆಯವರು ನೋಡಿಯಾರೆಂಬ ಚಿಂತೆ. ಇನ್ನು ಸಂತಸ ಎಂಬುದು ಸಂತೆಯಲ್ಲಿ ಸೂಜಿ ಹುಡುಕಿದಂತೆ. ಸಂತೋಷ, ಖುಷಿ, ನೆಮ್ಮದಿ ಇರುವುದಾದರೂ ಎಲ್ಲಿ? ಹುಡುಕಿಕೊಳ್ಳಿ. ಸಿಗದಿದ್ದರೆ ಚಿಂತೆ ಮಾಡಬೇಡಿ, ದುಃಖಪಡಬೇಡಿ.* ವಿಶ್ವೇಶ್ವರ ಭಟ್ಇತ್ತೀಚೆಗೆ ಪತ್ರಿಕೆಯಲ್ಲೊಂದು 35179http://kannada.oneindia.com/img/2009/03/12-happiness1.jpg135847vishweshwar bhatಚುನಾವಣೆಯೆಂಬ ಮಾಯೆಯ ಮಹಿಮೆ ಏನಿದೆಯೋ?/column/bhat/2009/0319-lok-sabha-election-who-knows-what-happens.htmlಒಂದೇ ಸಮನೆ ಸೂರ್ಯ ಉಗಿಯಲಾರಂಭಿಸಿದ್ದಾನೆ. ಬಿಸಿಲಗುಳ್ಳೆಗಳು ಒಡೆಯಲಾರಂಭಿಸಿವೆ. ನೆಲ ಕಾದ ಕಾವಲಿಯಂತಾಗಿದೆ. ನೀರಿನ ಪಸೆ ಕಾವಲಿ ಮೇಲೆ ಬಿದ್ದ ನೀರಿನ ಹನಿಗಳ ಹಾಗೆ ಆವಿಯಾಗುತ್ತಿವೆ. ಏಪ್ರಿಲ್, ಮೇ ಹೇಗಿರಬಹುದೆಂಬುದನ್ನು ಊಹಿಸಿದರೇ ಬೆವರು ಟಿಸಿಲೊಡೆಯುತ್ತವೆ. ಇಷ್ಟೂ ಸಾಲದೆಂಬಂತೆ ಚುನಾವಣೆ ಕಾವು ಕೊಡಲಾರಂಬಿಸಿದೆ. ಬಿಸಿಲಿನ ಝಳ ಹಾಗೂ ಚುನಾವಣೆ ಕಾವಿನ ಜುಗಲ್‌ಬಂದಿಯಲ್ಲಿ ಜನಸಾಮಾನ್ಯ ಚಕ್ರದಡಿಗೆ ಸಿಕ್ಕ ಲಿಂಬೆಹಣ್ಣಿನಂತಾಗಿದ್ದಾನೆ. ಎಲ್ಲ ರಾಜಕೀಯ 35348http://kannada.oneindia.com/img/2009/03/19-jyoti-basu1.jpg153662ಅಜಯ್ಕಿರುತೆರೆಯಲ್ಲಿ ಹಿಟ್ ಚಿತ್ರಗಳ ಸುಗ್ಗಿ/movies/tv/2009/01/12-hit-movies-screening-on-tv-channels-sankranthi.htmlಈ ಬಾರಿಯ ಮಕರಸಂಕ್ರಾಂತಿಯಂದು ( ಜನವರಿ 14, ಬುಧವಾರ) ಕನ್ನಡ ಸಿನಿರಸಿಕರಿಗೆ ಕಿರುತೆರೆಯಲ್ಲಿ ಸುಗ್ಗಿಯೋ ಸುಗ್ಗಿ. ಕನ್ನಡ ಟಿವಿ ಚಾನಲುಗಳು ಪೈಪೋಟಿಯಂತೆ ಹಿಟ್ ಚಿತ್ರಗಳನ್ನು ಅಂದು ಪ್ರಸಾರಮಾಡುತ್ತಿವೆ. ರಿಮೋಟ್ ಕೈಯಲ್ಲಿಟ್ಟುಕೊಳ್ಳಿರಿ, ನಿಮಗೆ ಯಾವುದು ಬೇಕೋ ಅದನ್ನು ಆರಿಸಿಕೊಂಡು ಕ್ಲಿಕ್ ಮಾಡಿ.1. ಸುವರ್ಣ ವಾಹಿನಿಚಿತ್ರ : ಮುಂಗಾರು ಮಳೆ ಸಮಯ: ಸಂಜೆ 4.00ಕ್ಕೆ2007 ರಲ್ಲಿ ಬಿಡುಗಡೆಯಾಗಿ, ಕನ್ನಡ ಚಿತ್ರರಂಗಲ್ಲಿ 34015http://kannada.oneindia.com/img/2009/01/12-ganesh2.jpg153662ಅಜಯ್ತಾಜ್‌ಮಹಲ್ ಮತ್ತು ಸುನೀಲ್‌ರಾವ್!/movies/hero/2009/01/28-sunil-rao-and-story-behind-tajmahal.htmlತಾಜ್‌ಮಹಲ್ ಚಿತ್ರ ಹಲವರ ಹಣೆಬರಹ ಬದಲಿಸಿದ ಕಥೆ ಗೊತ್ತಲ್ಲ.ಚಂದ್ರು ಎನ್ನುವ ಕನಸುಕಂಗಳ ನಿರ್ದೇಶಕ ಕೋಟಿ ರೂಪಾಯಿ ಸಂಭಾವನೆ ಬಗ್ಗೆ ಮಾತನಾಡುವ ಯಕ್ಷಿಣಿಗೆ ಈ ಚಿತ್ರವೇ ಕಾರಣ. ಆರಕ್ಕೇರದೆ ಚಡಪಡಿಸುತ್ತಿದ್ದ ಅಜಯ್ ಎನ್ನುವ ಹುಡುಗ ನಾಯಕನಾಗಿ ಒಂದಷ್ಟು ಅವಕಾಶ ಕಾಣಲಿಕ್ಕೂ ಈ ಚಿತ್ರವೇ ಕಾರಣ. ಇಂತಿಪ್ಪ ತಾಜ್‌ಮಹಲ್ ಚಿತ್ರವನ್ನು ಸುನೀಲ್ ರಾವ್ ಒಲ್ಲೆ ಎಂದಿದ್ದರಾ? ನಿರ್ದೇಶಕ ಚಂದ್ರು ಪ್ರಕಾರ, 34338http://kannada.oneindia.com/img/2009/01/28-sunilrao1.jpg153662ಅಜಯ್ತಾಜ್ ಮಹಲ್ ಚಂದ್ರು ಪ್ರೇಮ್ ಕಹಾನಿ ಸಿದ್ಧ/movies/studio/2009/03/30-chandru-prem-kahani-completes-shooting.htmlಶ್ರೀ ಲಕ್ಷ್ಮೀ ಬಾಲಾಜಿ ಪ್ರೊಡಕ್ಷನ್ಸ್ ಲಾಂಛನದಲ್ಲಿ, ಕೆ.ಎಂ. ವಿಶ್ವನಾಥ್, ಜಿ.ರವಿಕುಮಾರ್ ಕೂಡಿ ನಿರ್ಮಿಸುತ್ತಿರುವ ತಾಜ್‌ಮಹಲ್ ಆರ್.ಚಂದ್ರು ನಿರ್ದೇಶನದ 'ಪ್ರೇಮ್ ಕಹಾನಿ' ಚಿತ್ರಕ್ಕೆ ಗಿಳಿಯಾ ಮರಿಯೊಂದು ಗೂಡು ಬಿಟ್ಟರೆ ಗಿಡುಗನ ಹಿಂದೆ ಹಾರ ಹೊರಟಿದೆ ಓ ಒಲವೆ ... ಓ ಒಲವೆ... ಓ ಒಲವೆ... ಅಂದರೆ ಇದೇನಾ ... ಸಂತೋಷ್ ರಚಿಸಿದ ಈ ಗೀತೆ ಇಳೆಯರಾಜ ಕಂಠದಿಂದ ಹೊರಬಂದ 35589http://kannada.oneindia.com/img/2009/03/30-premkahani2.jpg153662ಅಜಯ್ಜಾಜಿ ಮಲ್ಲಿಗೆ, ಗೌತಮ್ ಈ ವಾರ ತೆರೆಗೆ/movies/headlines/2009/04/01-jaaji-mallige-gauttham-on-april-3.htmlಜಾಜಿ ಮಲ್ಲಿಗೆ: ಜೆ.ಎನ್. ಫಿಲಂಸ್ ಲಾಂಛನದಲ್ಲಿ ಅಣಜಿ ನಾಗರಾಜ್ ಹಾಗೂ ವಿತರಕ ಜಯಣ್ಣ ಸೇರಿ ನಿರ್ಮಿಸಿರುವ ಜಾಜಿ ಮಲ್ಲಿಗೆ ಈ ವಾರ ರಾಜ್ಯಾದ್ಯಂತ ತೆರೆಕಾಣಲಿದೆ. ತಾಜ್‌ಮಹಲ್ ನಂತರ ಅಜಯ್ ಅಭಿನಯಿಸಿರುವ ಈ ಚಿತ್ರಕ್ಕೆ ತುಂಬಾ ನಿರೀಕ್ಷೆ ಇದ್ದು, ಆರ್. ಅನಂತರಾಜು ಅವರು ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ತಮಿಳಿನ ಯಶಸ್ವಿ ಚಿತ್ರ ದೇವತೈ ಕಂಡೇನ್‌ನ ರೀಮೇಕ್ ಆದ 35653http://kannada.oneindia.com/img/2009/04/01-jaajimallige.jpg153662ಅಜಯ್ಯಜ್ಞ ತೆರೆಗೆ, ಪ್ರೇಮ್ ಕಹಾನಿ ಮಾತಿನ ಮನೆಗೆ/movies/studio/2009/04/17-yagna-released-prem-kahani-in-dubbing.htmlಶ್ರೀ ಲಕ್ಷ್ಮೀ ಬಾಲಾಜಿ ಪ್ರೊಡಕ್ಷನ್ಸ್ ಲಾಂಛನದಲ್ಲಿ, ಕೆ.ಎಂ. ವಿಶ್ವನಾಥ್, ಜಿ.ರವಿಕುಮಾರ್ ಕೂಡಿ ನಿರ್ಮಿಸುತ್ತಿರುವ ತಾಜ್‌ಮಹಲ್ ಆರ್.ಚಂದ್ರು ನಿರ್ದೇಶನದ ಪ್ರೇಮ್ ಕಹಾನಿ ಚಿತ್ರಕ್ಕೆ ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿತು. ಈ ಚಿತ್ರದ ಛಾಯಾಗ್ರಹಣ ಚಂದ್ರಶೇಖರ್, ಸಂಗೀತ ಇಳಯರಾಜ, ಸಂಕಲನ ಕೆ.ಎಂ. ಪ್ರಕಾಶ್, ಸಾಹಸ ರವಿವರ್ಮ, ಕಲೆ ಹೊಸ್ಮನೆ ಮೂರ್ತಿ, ನೃತ್ಯ ರಾಮು, ಮದನ್ ಹರಿಣಿ ರಘು, ಇಮ್ರಾನ್, ಹರ್ಷ, ಸಾಹಿತ್ಯ 36030http://kannada.oneindia.com/img/2009/04/17-premkahani2.jpg154042ವಿಶ್ವೇಶ್ವರ ಭಟ್ಪತ್ರಕರ್ತ ಬಿವಿ ಸೀತಾರಾಂ ಜೈಲು ಪ್ರಸಂಗ/column/ravibelagere/2009/0112-karavali-ale-editor-bv-seetharam-in-soup.htmlಸೀತಾರಾಂ ಅವರ ಹಟಮಾರಿತನದ ಪರಿಣಾಮವಾಗಿ ಕರಾವಳಿ ಅಲೆ ವರದಿಗಾರರು ಕೆಲಸಬಿಟ್ಟು ಹೋಗಿದ್ದಾರೆ. ಬೇರೆ ಪತ್ರಿಕೆಗಳಿಗೆ, ಛಾನಲ್ ಗಳಿಗೆ ಸೇರಿಕೊಂಡಿದ್ದಾರೆ. ಸೀತಾರಾಂ ತಮ್ಮ ದೃಷ್ಟಿಕೋನ ಬದಲಿಸಿಕೊಳ್ಳಲಿ. ಪದೇಪದೇ ಜೈಲು ಸೇರುವುದನ್ನು ಅವರು ಹೋರಾಟ ಅಂದುಕೊಂಡರೆ, ಅದು ಅವರ ಮತ್ತು ಅವರ ಪತ್ರಿಕೆಯ ಆರೋಗ್ಯಕ್ಕೆ ಒಳ್ಳೆಯದಲ್ಲ. ಸೀತಾರಾಂ ಅವರ ಬಂಧನವನ್ನು ಖಂಡಿಸಿ ಜ.12ರ ಸಂಜೆ 4: 30ಕ್ಕೆ ಬೆಂಗಳೂರಿನ 34027http://kannada.oneindia.com/img/2009/01/12-bv-seetharam1.jpg154042ವಿಶ್ವೇಶ್ವರ ಭಟ್ಅವರ ಪರ್ಸನಲ್ ವಿಷಯ ನಮಗ್ಯಾಕೆ/column/bhat/2009/0115-kumaraswamy-radhika-platonic-love-rekindled.html'ಇದು ಸರೀನಾ? ಒಬ್ಬರವೈಯಕ್ತಿಕ ವಿಷಯಗಳನ್ನು ಪತ್ರಿಕೆಯಲ್ಲಿ ಬರೆಯುವುದು ಎಷ್ಟು ಸರಿ? ಪರ್ಸನಲ್ ವಿಷಯಗಳನ್ನು ಸಾರ್ವಜನಿಕವಾಗಿ ಚರ್ಚಿಸುವುದು ಸಮಂಜಸವಾ? ಇದನ್ನೇ ಟ್ಯಾಬ್ಲಾಯಿಡ್ ಪತ್ರಿಕೆಯೊಂದು 'ಅನಿತಕ್ಕ ಮಧುಗಿರಿಗೆ, ಕುಮಾರಣ್ಣ ಮಧುಚಂದ್ರಕ್ಕೆ' ಎಂದು ಲೇವಡಿ ಮಾಡಿತು. ಪರ್ಸನಲ್ ವಿಷಯವನ್ನು ಈ ಪರಿ ಬಹಿರಂಗಗೊಳಿಸುವುದು ಖಂಡಿತ ಖಂಡನೀಯ' *ವಿಶ್ವೇಶ್ವರ ಭಟ್ಜನರು ಹೀಗೆ ಹೇಳುವುದನ್ನು ಮೇಲಿಂದ ಮೇಲೆ ಕೇಳುತ್ತಿರುತ್ತೇವೆ . "ಅದು ಅವರ ಪರ್ಸನಲ್ 34076http://kannada.oneindia.com/img/2009/01/15-hdk-radhika1.jpg154042ವಿಶ್ವೇಶ್ವರ ಭಟ್ಎಂಟಿಆರ್ : ಆಹಾರ ಸಂಸ್ಕೃತಿಗೆ ಹೊಸರುಚಿ/column/bhat/2009/0129-meet-yajnanarayana-founder-mtr-bengaluru.htmlಆ ಪುಸ್ತಕ ಓದುತ್ತಿದ್ದಾಗ ನನಗೆ ಹೋಟೆಲ್ ಮಾಲೀಕರೊಬ್ಬರ ಜೀವನಕಥನ ಓದುತ್ತಿದ್ದೇನೆಂದು ಅನಿಸಲೇ ಇಲ್ಲ. ಅದು ಕೇವಲ ಹೋಟೆಲ್ ಉದ್ಯಮಿಯೊಬ್ಬರ ಕತೆಯೋ, ಕೈಫಿಯತ್ತೋ ಆಗಿದ್ದಿದ್ದರೆ ಅದರ ಬಗ್ಗೆ ಇಲ್ಲಿ ಪ್ರಸ್ತಾಪಿಸುತ್ತಲೂ ಇರಲಿಲ್ಲ. ಒಬ್ಬ ಅಪರೂಪದ ಸಾಧಕ,ದಣಿವರಿಯದ ಶ್ರಮಿಕ, ಹಿರಿಯಣ್ಣನಂಥ ಬೋಧಕ ಹಾಗೂ ಹಲವು ತಲೆಮಾರುಗಳನ್ನು ಮುನ್ನಡೆಸುವ ಮಾರ್ಗದರ್ಶಕ ಹೀಗೆ ಏಕಕಾಲಕ್ಕೆ ಅನೇಕ ಗುಣಗಳಿಂದ ಬದುಕಿಗೆ ಸ್ಫೂರ್ತಿ ನೀಡುವ ಒಬ್ಬ 34361http://kannada.oneindia.com/img/2009/01/29-yn-maiya-kc-reddy.jpg154042ವಿಶ್ವೇಶ್ವರ ಭಟ್ಜಾಲಿಯ ಮರವು ನೆರಳಲ್ಲ, ಗೌರವ ಡಾಕ್ಟರೇಟ್ ಸ್ಥಿರವಲ್ಲ/column/bhat/2009/0226-bs-yeddyurappa-and-honorary-doctorate.htmlರುಂಡ ಮುಂಡಗಳನ್ನು ಒಂದು ಮಾಡುವಂತೆ ಮುಚ್ಚುವ ಉಸಿರುಗಟ್ಟಿಸುವ ಹಾರಗಳು, ಅರ್ಹರನ್ನೂ ಅನರ್ಹರನ್ನಾಗಿ ಮಾಡುವ ಗೌರವ ಡಾಕ್ಟರೇಟ್ ಬಿರುದುಬಾವಲಿಗಳನ್ನು ಒಲ್ಲೆ ಎಂದಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ಕಿವಿತುಂಬಿ ತೂತುಬೀಳುವಂತೆ ಮಾಡುವ ಬಹುಪರಾಕ್ ಗಳನ್ನು ಕೂಡ ನಿರಾಕರಿಸಲಿ. ಇವನ್ನೆಲ್ಲ ನಿರಾಕರಿಸಿ ದೊಡ್ಡವರಾಗುವುದಕ್ಕಿಂತ ನಿಸ್ವಾರ್ಥ ಸೇವೆಯಿಂದ ದೊಡ್ಡವರೆನ್ನಿಸಿಕೊಳ್ಳಲಿ. ಜೊತೆಗೆ ಎಂಟನಿ ಮತ್ತು ಫರ್ನಾಂಡಿಸ್ ಹಾಕಿಕೊಟ್ಟಿರುವ ಮೇಲ್ಪಂಕ್ತಿಯ ಹಾದಿಯಲ್ಲಿ ತುಸುವಾದರೂ ಸಾಗಲಿ.* ವಿಶ್ವೇಶ್ವರ ಭಟ್ 34883http://kannada.oneindia.com/img/2009/02/26-yeddyurappa12.jpg154042ವಿಶ್ವೇಶ್ವರ ಭಟ್ದುಡ್ಡಿನಿಂದ ಸುಖ ನೆಮ್ಮದಿ ಖರೀದಿಸಬಹುದೆ?/column/bhat/2009/0312-where-is-happiness.htmlಬಚ್ಚಲಿನ ಟೈಲ್ಸ್ ಕೆಳಗೆ, ಮಂಚದ ಅಡಿಯಲ್ಲಿ, ಬೀರುವಿನಲ್ಲಿ, ಬ್ಯಾಂಕುಗಳಲ್ಲಿ ಕಾಂಚಾಣವನ್ನು ತುಂಬಿಕೊಂಡವರು ಮಹಾ ಸುಖಿಗಳೆಂದು ಭಾವಿಸಿರುತ್ತಾರೆ. ಅಂಥವರಿಗೆ ಕಂತೆ ಕಂತೆ ಕಾಪಾಡಿಕೊಳ್ಳುವುದೇ ಚಿಂತೆ. ಸುಂದರ ಹೆಂಡತಿಯಿದ್ದರೆ ಬೇರೆಯವರು ನೋಡಿಯಾರೆಂಬ ಚಿಂತೆ. ಇನ್ನು ಸಂತಸ ಎಂಬುದು ಸಂತೆಯಲ್ಲಿ ಸೂಜಿ ಹುಡುಕಿದಂತೆ. ಸಂತೋಷ, ಖುಷಿ, ನೆಮ್ಮದಿ ಇರುವುದಾದರೂ ಎಲ್ಲಿ? ಹುಡುಕಿಕೊಳ್ಳಿ. ಸಿಗದಿದ್ದರೆ ಚಿಂತೆ ಮಾಡಬೇಡಿ, ದುಃಖಪಡಬೇಡಿ.* ವಿಶ್ವೇಶ್ವರ ಭಟ್ಇತ್ತೀಚೆಗೆ ಪತ್ರಿಕೆಯಲ್ಲೊಂದು 35179http://kannada.oneindia.com/img/2009/03/12-happiness1.jpgnews"> ಅನಾಮಧೇಯ ವ್ಯಕ್ತಿಗಳ ಅಸಾಧಾರಣ ಸಾಧನೆ! | Unsung | Subhashini mistry | Mahesh Bhat | Humanity hospital - ಅನಾಮಧೇಯ ವ್ಯಕ್ತಿಗಳ ಅಸಾಧಾರಣ ಸಾಧನೆ! - Kannada Oneindia

ಅನಾಮಧೇಯ ವ್ಯಕ್ತಿಗಳ ಅಸಾಧಾರಣ ಸಾಧನೆ!

Subhashini Mistry
ಪುಸ್ತಕದೊಳಗೆ ಹಾದು ಹೋಗುವ ವ್ಯಕ್ತಿಗಳು ಇಷ್ಟೊಂದು ಗಾಢವಾಗಿ ಸ್ಫೂರ್ತಿ, ಪ್ರೇರಣೆಯ ಸಂಚಲನದ ಸಿಂಚನಗೈಯಬಹುದು ಎಂದುಕೊಂಡಿರಲಿಲ್ಲ. ಇತ್ತೀಚೆಗೆ ಅಂತಾರಾಷ್ಟ್ರೀಯ ಖ್ಯಾತಿಯ ಫೋಟೊಗ್ರಾಫರ್, ಅಪ್ಪಟ ಕನ್ನಡಿಗ, ಸ್ನೇಹಿತ ಮಹೇಶ್ ಭಟ್ ತಾವು ಅನಿತಾ ಪ್ರತಾಪ್ ಜತೆಗೂಡಿ ಬರೆದ 'Unsung' ಎಂಬ ಪುಸ್ತಕವನ್ನು ಕಳುಹಿಸಿಕೊಟ್ಟಿದ್ದರು. ನಿಮಗೆ ಮಹೇಶ್ ಭಟ್ ಗೊತ್ತಿರಬಹುದು, ಅವರು ಕರ್ನಾಟಕದ ಬಗ್ಗೆ ತೀರಾ ಅಪರೂಪವೆನಿಸುವ ಫೋಟೊಗಳಿರುವ ಪುಸ್ತಕ ಬರೆದಿದ್ದಾರೆ. ನ್ಯೂಸ್‌ವೀಕ್, ಟೈಮ್, ನ್ಯೂಯಾರ್ಕ್ ಟೈಮ್ಸ್ ಮ್ಯಾಗಜಿನ್, ದಿ ಗಾರ್ಡಿಯನ್ ಮುಂತಾದ ಪತ್ರಿಕೆಗಳಿಗೆ ಕೆಲಸ ಮಾಡಿದವರು.

ಸುಮಾರು ಏಳು ವರ್ಷಗಳ ಹಿಂದೆ, ದೊಡ್ಡ ಗಾತ್ರದಲ್ಲಿದ್ದ ವಿಜಯ ಕರ್ನಾಟಕ' ಪತ್ರಿಕೆಯನ್ನು ತುಸು ಕಿರಿದುಗೊಳಿಸಿದಾಗ ನಾನು ಮಹೇಶ್ ಭಟ್ ಅವರನ್ನು ತೀರ ಅನಿರೀಕ್ಷಿತವಾಗಿ ರೂಪದರ್ಶಿಯಾಗಿ ಬಳಸಿಕೊಂಡಿದ್ದೆ. ಸಾಯಿಬಾಬಾಹೇರ್‌ಸ್ಟೈಲ್‌ನಲ್ಲಿದ್ದ ಮಹೇಶ್ ಭಟ್ ಅವರ ತಲೆಗೂದಲನ್ನು ಕಂಪ್ಯೂಟರ್ ನೆರವಿನಿಂದ ಕತ್ತರಿಸಿ, ಪತ್ರಿಕೆಯ ಗಾತ್ರ ಕಡಿಮೆಗೊಳಿಸಿದ್ದನ್ನು ಅದಕ್ಕೆ ಹೋಲಿಸಿ ಸ್ಲಿಮ್ ಆಂಡ್ ಟ್ರಿಮ್' ಎಂಬ ಕ್ಯಾಂಪೇನ್ ಮಾಡಿದ್ದೆವು. ಅತ್ಯಂತ ಸೂಕ್ಷ್ಮ ಸಂವೇದಿ ಕಣ್ಣು, ಮನಸ್ಸಿನ ಪ್ರತಿಭಾನ್ವಿತ ಫೋಟೊಗ್ರಾಫರ್ ಮಹೇಶ್ ಕಳಿಸಿದ ಪುಸ್ತಕ ನನ್ನಲ್ಲಿ ಸಹಜ ಕುತೂಹಲ ಕೆರಳಿಸಿತು. ಮೊದಲ ಪುಟದ ಮೇಲೆ ಬೆರಳಿಟ್ಟಿದ್ದು ಮಾತ್ರ ಗೊತ್ತು, ಕೊನೆಯ ಪುಟದ ಬದುವಿನಲ್ಲಿ ನಿಂತುಕೊಂಡಾಗ ಮನಸ್ಸಿನ ಹುಲ್ಲುಗಾವಲಿನಲ್ಲಿ ಸ್ಫೂರ್ತಿಯ ಅಸಂಖ್ಯ ಮೊಗ್ಗುಗಳು ಪಕಳೆಗಳಾಗಿ ಮೈಬಿರಿಯುತ್ತಿದ್ದವು. ಮೆರವಣಿಗೆಯಲ್ಲಿ ಹೊರಟ ಸಾರ್ಥಕ ಕ್ಷಣಗಳೆಲ್ಲ ನನ್ನ ಮುಂದೆ ಪ್ರೀತಿಯಿಂದ ಧರಣಿ ಕುಳಿತಿದ್ದವು. ಯಾರೋ ಕೆಲವು ಅನಾಮಧೇಯ ವ್ಯಕ್ತಿಗಳು ನನ್ನನ್ನು ಬಂದು ಹಿಡಿದು ಅಲುಗಾಡಿಸಿ, ಮೈಯಲ್ಲಿದ್ದ ಜಾಡ್ಯವನ್ನು ಉದುರಿಸಿ, ಹೊಸ ಚೈತನ್ಯದ ಜೀವಸೆಲೆ ತುಂಬಿ ಪಕ್ಕನೆ ಅದೃಶ್ಯರಾಗಿ ಹೋದಂತೆ ಭಾಸವಾಗಿತ್ತು. ಆಗ ಮನಸ್ಸಿನಲ್ಲಿ ಸ್ನೇಹಿತ ಮಹೇಶ್‌ಗೆ ([email protected]) ಅಭಿಮಾನದ ಪುಟ್ಟತೋರಣ ಕಟ್ಟಿದ್ದೆ!

ಸಿನಿಮಾದಲ್ಲಿ ಹಾಡದ ಅಥವಾ ಹಾಡಲು ಬಾರದ ನಾಯಕನನ್ನು Unsung Hero ಎಂದು ತಮಾಷೆಗೆ ಪನ್ ಮಾಡುವುದುಂಟು. ಆದರೆ ಈ ಪುಸ್ತಕ ಅಂಥದ್ದಲ್ಲ. ಇದು ಅನಾಮಧೇಯ ವ್ಯಕ್ತಿಗಳ ಅಸಾಧಾರಣ, ಅದ್ಭುತ ಕಾಯಕ-ಸಾಧನೆ ಮೆರೆದ ಯಶೋಗಾಥೆ. ನಮ್ಮ ಮಧ್ಯದಲ್ಲೇ ಇರುವ ಒಬ್ಬ ತೀರಾ ಸಾಮಾನ್ಯ ವ್ಯಕ್ತಿ, ವಠಾರದಲ್ಲಿದ್ದೂ ಕಣ್ಣಿಗೆ ಬೀಳದ ವ್ಯಕ್ತಿ ಹಾಗೂ ಪ್ರಚಾರ, ಪತ್ರಿಕಾಗೋಷ್ಠಿ, ಫ್ಲೆಕ್ಸ್, ಟಿವಿ-9 ಮುಂತಾದವು ತನಗೆ ಗೊತ್ತೇ ಇಲ್ಲವೆಂದು ಭಾವಿಸಿ ತಮ್ಮಷ್ಟಕ್ಕೆ ತಾವು ಕೆಲಸ ಮಾಡಿ ನೋಡನೋಡುತ್ತಾ ಅದ್ಭುತವೆನಿಸುವ ಕೆಲಸ ಮಾಡಿ ನಮ್ಮ ಮುಂದೆ ಬೆರಗನ್ನು ಹಾಸುವ ಸಾಮಾನ್ಯರಲ್ಲಿ ಸಾಮಾನ್ಯ, ಅಸಾಮಾನ್ಯ ವ್ಯಕ್ತಿಗಳ ಕುರಿತ ಪುಸ್ತಕವಿದು. ಇಲ್ಲಿ ಅಂಥ ಹತ್ತು ಶುದ್ಧ ಸಾಧಕರ ಜೀವನದರ್ಶನ'ವಿದೆ. ಇರುವೆಯಾಗಲಿ, ಜೇನ್ನೊಣಗಳಾಗಲಿ ಎಂದೂ ಹೆಸರು, ಖ್ಯಾತಿ, ಪ್ರಶಸ್ತಿ, ಪಿಂಡಗಳಿಗೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ. ಇಲ್ಲಿನ ಸಾಧಕರೂ ಹಾಗೇ. ಅವರಾಯಿತು, ಅವರ ಕೆಲಸಗಳಾಯಿತು. ನಂಬಿದ ವಿಶ್ವಾಸ, ನೆಚ್ಚಿಕೊಂಡ ನಂಬಿಕೆಗಳೊಂದಿಗೆ ಅವರಿಗೆ ದುಡಿಯುವುದೊಂದೇ ಗೊತ್ತು. ಅದರಿಂದ ನಾಲ್ಕು ಮಂದಿಗೆ, ಸುತ್ತಲಿನ ಸಮಾಜಕ್ಕೆ ಒಳ್ಳೆಯದಾದರೆ ಸಾಕು ಎಂಬುದು ಅವರ ಪರಮ ಆಶಯ, ಅಪ್ಪಟ ಸ್ವಾರ್ಥ.

ನಮ್ಮಲ್ಲೊಂದು ನಂಬಿಕೆಯಿದೆ. ನಮಗೆ ನಾಯಕರು ಅಂದ್ರೆ ರಾಜಕೀಯ ನಾಯಕರು. ಉಳಿದವರಾರೂ ನಮಗೆ ನಾಯಕರಲ್ಲ. ಉಳಿದವರನ್ನು ನಾವು ನಾಯಕರೆಂದು ಪರಿಗಣಿಸುವುದಿಲ್ಲ. ನಮ್ಮ Role Modelಗಳೂ ಹಾಗೆ. ಸಿನಿಮಾ ನಟ, ನಟಿಯರು,ಕ್ರಿಕೆಟ್ ಆಟಗಾರರು, ಫ್ಯಾಷನ್ ಪ್ರಪಂಚದವರು ಮಾತ್ರ ಆದರ್ಶ ವ್ಯಕ್ತಿಗಳು. ನಾವು ಅವರನ್ನು ಅನುಕರಿಸುತ್ತೇವೆ. ಅವರಂತೆ ಆಗಬೇಕೆಂದು ಬಯಸುತ್ತೇವೆ. ನಮ್ಮ ಮಕ್ಕಳಿಗೂ ಅವರಂತೆ ಆಗುವಂತೆ ಹೇಳುತ್ತೇವೆ. ಅವರ ಎಲ್ಲ ನಡೆ-ನುಡಿಗಳೂ ನಮಗೆ ಇಷ್ಟವಾಗುತ್ತವೆ. ಪತ್ರಿಕೆ ಹಾಗೂ ಟಿವಿ ಚಾನೆಲ್‌ಗಳೂ ಪದೇ ಪದೆ ಅವರನ್ನು ವೈಭವೀಕರಿಸುತ್ತವೆ. ಈ ಭರಾಟೆಯಲ್ಲಿ ನಿಜವಾದ ಹೀರೊಗಳು, ಆದರ್ಶ ವ್ಯಕ್ತಿಗಳು ಬೆಳಕಿಗೆ ಬರುವುದೇ ಇಲ್ಲ. ಹಾಗೆ ನೋಡಿದರೆ ನಮಗೆ ನಾಯಕರೇ ಇಲ್ಲ. ನಾವು ಅನುಕರಿಸುತ್ತಿರುವ, ಅನುಸರಿಸುತ್ತಿರುವ ಆದರ್ಶ ವ್ಯಕ್ತಿಗಳು ಖಂಡಿತವಾಗಿಯೂ ಆದರ್ಶ ಅಲ್ಲ. ನಮ್ಮ ಭ್ರಷ್ಟ ಶಾಸಕ, ಸಂಸದ, ಮಂತ್ರಿಗಳನ್ನೆಲ್ಲ ಯಾವ ಮುಖವಿಟ್ಟುಕೊಂಡು ನಾಯಕ ಎಂದು ಒಪ್ಪಿಕೊಳ್ಳೋಣ? ಸಿನಿಮಾ ತಾರೆಯರು, ಕ್ರಿಕೆಟ್ ಪಟುಗಳನ್ನುಆದರ್ಶವ್ಯಕ್ತಿಗಳೆಂದು ಹೇಗೆ ಅಪ್ಪಿಕೊಳ್ಳೋಣ?

ಆದರೆ ನಮ್ಮ ಸುತ್ತ ನಮ್ಮ ಕಣ್ಣಿಗೆ ಬೀಳದ ಅಸಂಖ್ಯ ಹೀರೊಗಳಿದ್ದಾರೆ, ಆದರ್ಶ ವ್ಯಕ್ತಿಗಳಿದ್ದಾರೆ. ಇವರೆಲ್ಲ ದಿನನಿತ್ಯ ಪತ್ರಿಕೆ, ಟಿವಿ, ಕಂಪ್ಯೂಟರ್ ಸ್ಕ್ರೀನ್‌ಗಳಲ್ಲಿ ಇಣುಕುವುದಿಲ್ಲ. ಪತ್ರಕರ್ತರೂ ಸಹ ಇವರ ಹತ್ತಿರ ಹೋಗುವುದಿಲ್ಲ, ಅವರನ್ನು ಮೂಸಿಯೂ ನೋಡುವುದಿಲ್ಲ. ಅವರಿಗೂ ವಿಧಾನಸೌಧ, ಗಾಂಧಿ ನಗರ, ಮಂತ್ರಿಗಳು, ತಾರೆಯರು, ಫ್ಯಾಷನ್ ಗುರುಗಳೇ ಬೇಕು. ಅಪ್ಪಿತಪ್ಪಿಯೂ ಇವರನ್ನು ಬಿಟ್ಟು ಅವರತ್ತ ಹೋಗುವುದಿಲ್ಲ. ಕಂಡರೂ ಮಾತಾಡಿಸುವುದಿಲ್ಲ. ಹೀಗಾಗಿ ಅವರು ತಮ್ಮ ಪಾಡಿಗೆ ತಾವಿರುತ್ತಾರೆ. ಪ್ರಪಂಚ'ದಿಂದ ದೂರವಿರುತ್ತಾರೆ. ನಮಗೆ Unsung Heroಗಳಾಗಿಯೇ ಇರುತ್ತಾರೆ. ಮಹೇಶ್ ಇಂಥವರ ಲೋಕ ಪ್ರವೇಶಿಸುತ್ತಾರೆ. ಅವರನ್ನು ಹುಡುಕಿಕೊಂಡು ದೇಶವ್ಯಾಪಿ ತಿರುಗುತ್ತಾರೆ. ಅವರ ಸಾಧನೆಗೆ ಕಿವಿಯಾಗುತ್ತಾರೆ, ಕಣ್ಣಾಗುತ್ತಾರೆ. ಕನ್ನಡಿಯ ಮುಂದೆ ನಿಂತು ಪೋಸು ಕೊಡಲು ನಾಚುವವರನ್ನು ಸಹ ತಮ್ಮ ಕೆಮರಾದಲ್ಲಿ ಹಿಡಿದಿಡುತ್ತಾರೆ. ಇಲ್ಲಿನ ಎಲ್ಲರ ಬದುಕು ಒಂದು ಆದರ್ಶವೇ. ಎಲ್ಲರ ಗುರಿ ಸದುದ್ದೇಶವೇ. ಈ ಕೃತಿಯಲ್ಲಿ ಬರುವ ಎಲ್ಲ ವ್ಯಕ್ತಿಗಳು ಒಂದಿಲ್ಲೊಂದು ರೀತಿಯಲ್ಲಿ ಅಪ್ರತಿಮ ಹೀರೊಗಳೇ ಆದರೂ, ಆದರ್ಶ ವ್ಯಕ್ತಿಗಳೇ ಆದರೂ ಅತಿಯಾಗಿ ತಟ್ಟಿದವರು ಅವಳು.

ಮುಂದಿನ ಭಾಗ : ತರಕಾರಿ ಮಾರಿ ಆಸ್ಪತ್ರೆ ಕಟ್ಟಿದ ಸುಭಾಷಿಣಿ ಮಿಸ್ತ್ರಿ! »

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+