ವೃತ್ತಿ ಆಯ್ಕೆಯಲ್ಲಿ ಜ್ಯೋತಿಷ್ಯದ ಮಾತೂ ಕೇಳಿ

ವ್ಯಕ್ತಿಯ ಭವಿಷ್ಯವನ್ನು ವೃತ್ತಿ ನಿರ್ಧರಿಸುವುದರಿಂದ ಕರಿಯರ್ ಬಗ್ಗೆ ತಲೆ ಕೆಡಿಸಿಕೊಳ್ಳಲೇಬೇಕಾಗುತ್ತದೆ. ವೃತ್ತಿಯಲ್ಲಿರುವ ಅನೇಕ ಆಯ್ಕೆ, ಅವಕಾಶ ಹಾಗೂ ಕೌಶಲ್ಯಕ್ಕನುಗುಣವಾಗಿ ಉದ್ಯೋಗದ ಆಯ್ಕೆ ಮುಖ್ಯವಾಗುತ್ತದೆ.
ಆದರೆ ನಿಮ್ಮ ನಿರ್ಧಾರಗಳು ಕೆಲವು ಬಾರಿ ಸರಿಯಿದ್ದರೂ ಉದ್ಯೋಗದಲ್ಲಿ ಏಳಿಗೆ ಕಾಣುವುದಿಲ್ಲ. ವೃತ್ತಿಗೂ, ವ್ಯಕ್ತಿತ್ವಕ್ಕೂ ಒಂದಕ್ಕೊಂದು ಸಂಬಂಧವಿರುವ ಕಾರಣ ಈ ಕುರಿತು ಗಂಭೀರ ಚಿಂತನೆ ಪ್ರಮುಖವಾಗುತ್ತದೆ.
ವ್ಯಕ್ತಿಯ ಉದ್ಯೋಗಕ್ಕೆ ಸಂಬಂಧಿಸಿದಂತೆ ಜ್ಯೋತಿಷ್ಯ ಉಪಯುಕ್ತ ಸಲಹೆ ನೀಡುತ್ತದೆ. ಅಷ್ಟೇ ಅಲ್ಲ, ಉದ್ಯೋಗದ ಕುರಿತು ಮಾಹಿತಿ ನೀಡಲೆಂದೇ ಉದ್ಯೋಗ ಜ್ಯೋತಿಷ್ಯವೂ ಇದೆ. ವ್ಯಕ್ತಿಯ ನಡವಳಿಕೆ, ವೃತ್ತಿ, ವೃತ್ತಿ ಅಥವಾ ವ್ಯಾಪಾರದಲ್ಲಿನ ಯಶಸ್ಸು, ಆದಾಯದ ಮೂಲ, ವ್ಯಾಪಾರ ಪ್ರಾರಂಭಿಸುವುದು ಯಾವಾಗ ಎಂಬ ಇನ್ನಿತರ ಮಾಹಿತಿಗಳನ್ನು ವ್ಯಕ್ತಿಯ ಉದ್ಯೋಗ ಜ್ಯೋತಿಷ್ಯ ಪರಿಶೀಲಿಸಿ ತಿಳಿಯಬಹುದು.
ಗ್ರಹ, ಕುಂಡಲಿ ಮತ್ತು ಉದ್ಯೋಗ ಭವಿಷ್ಯ
ವ್ಯಕ್ತಿಯ ಜಾತಕದಲ್ಲಿ ಶನಿ ಗ್ರಹ ತುಂಬಾ ಪ್ರಭಾವಿಯಾಗಿದ್ದರೆ ಮತ್ತು ಒಳ್ಳೆ ಸ್ಥಾನದಲ್ಲಿದ್ದು, ಅಶುಭ ಅಂಶವನ್ನು ಹೊಂದಿರದಿದ್ದರೆ ವ್ಯಕ್ತಿ ಯಶಸ್ವಿ ವ್ಯವಹಾರಸ್ಥನಾಗುತ್ತಾನೆ. ಜಾತಕ ಕುಂಡಲಿಯ 7 ಮತ್ತು 12 ನೇ ಮನೆಯಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ಗ್ರಹಗಳಿದ್ದರೆ ಆತ ವ್ಯಾಪಾರದಲ್ಲಿ ಒಳ್ಳೆ ಸ್ಥಾನಕ್ಕೆ ಏರುತ್ತಾನೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಅಷ್ಟೇ ಅಲ್ಲ, ಕುಂಡಲಿಯ 7ನೇ ಮನೆ ಪ್ರಭಾವಶಾಲಿಯಾಗಿದ್ದರೆ ವ್ಯಾಪಾರ ವ್ಯವಹಾರದಲ್ಲಿ ಇನ್ನೂ ಅಭಿವೃದ್ಧಿ ಹೊಂದುತ್ತಾರೆ.
ವೃತ್ತಿ ಆಯ್ಕೆಯಲ್ಲಿ ಜ್ಯೋತಿಷ್ಯ ಹೇಗೆ ಸಹಕಾರಿ ಎಂಬುದನ್ನು ಮುಂದೆ ನೋಡಿ...












Click it and Unblock the Notifications