ದುಡಿಯುತ್ತಲೇ ಇರುವ ಕಾರ್ಮಿಕ, ಕದಿಯುತ್ತಲೇ ಇರುವ ರಾಜಕಾರಣಿ
ಇಂದು ಮೇ 01 ಕಾರ್ಮಿಕರ ದಿನ, ವರ್ಷವೆಲ್ಲಾ ಮೈ ಮುರಿಯೆ ದುಡಿವ ಕಾರ್ಮಿಕರಿಗೆಂದು ಇರುವ ಒಂದೇ ಒಂದು ದಿನ ಆದರೆ ಈ ಅವಕಾಶವಾದಿ ರಾಜಕಾರಣಿಗಳು ಆ ದಿನವೂ ಕಾರ್ಮಿಕರನ್ನು ನೆಮ್ಮದಿಯಾಗಿರಲು ಬಿಡುವುದಿಲ್ಲ ನೋಡಿ.
In Pics: ಕಚಗುಳಿ ಇಡುವ ಚುನಾವಣಾ ಕಾರ್ಟೂನ್: ನಕ್ಕು ಹಗುರಾಗಿ
ಕಾರ್ಮಿಕರಿಗೆ ಮೇ 1 ಅವರ ಹಕ್ಕುಗಳು ಪಡೆದ ದಿನವಾದರೆ ಈ ರಾಜಕಾರಣಿಗಳಿಗೆ ಅದು ಒಂದು ಸಾಮಾನ್ಯ ದಿನವಷ್ಟೆ. ಈ ಕಾರ್ಟೂನಿನಲ್ಲಿ ರಾಜಕಾರಣಿಗಳ ಅವಕಾಶವಾದಿ ತನ, ಸ್ವಾರ್ಥವನ್ನು ಸೂಕ್ಷ್ಮವಾಗಿ ಚಿತ್ರಿಸಲಾಗಿದೆ.
ಕಾರ್ಮಿಕ ದಿನದ ಮಹತ್ವ ಗೊತ್ತಿರದ ರಾಜಕಾರಣಿಯೋರ್ವ ಕಾರ್ಮಿಕನೊಬ್ಬನನ್ನು ತನ್ನ ಜೊತೆ ಪ್ರಚಾರಕ್ಕೆ ಆಹ್ವಾನಿಸುತ್ತಿದ್ದಾನೆ ಇಂದು ರಜೆ ಎಂಬ ಕಾರಣಕ್ಕೆ. ರಾಜಕಾರಣಿಗಳಿಗೆ ಸದಾ ಕೇವಲ ಅವರ ಲಾಭದ್ದೇ ಚಿಂತೆ. ಬೇರೆಯವರ ಹಕ್ಕುಗಳ ಚಿಂತೆ ಅವರೆಲ್ಲಿ ಮಾಡಬೇಕು.
ಕಾರ್ಟೂನಿನಲ್ಲಿ ಚಿತ್ರಿಸಿರುವ ಕೂಲಿ ಕಾರ್ಮಿಕ ಹರಕು ಬಟ್ಟೆ ಧರಿಸಿ 'ಕಾರ್ಮಿಕರೂ ದಿನ'ದಂದೂ ದುಡಿಯುತ್ತಿದ್ದಾನೆ ಇಂದು ಆತನಿಗೆಂದೇ ಇರುವ ದಿನವೆಂಬ ಅರಿವೂ ಆತನಿಗಿಲ್ಲ, ಆದರೆ ಈ ರಾಜಕಾರಣಿ ಆತನಿಗೆ ಆತನ ಹಕ್ಕಿನ ಪರಿಚಯ ಮಾಡಿಕೊಡುವ ಬದಲಿಗೆ ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾನೆ.












Click it and Unblock the Notifications