ಎಲೆಕ್ಷನ್ ಶುರುವಾದ್ಮೇಲೆ ನಿಲ್ಲೋದೇ ಕಷ್ಟ. ಅಂತಾದ್ರಲ್ಲಿ...!
ಕರ್ನಾಟಕದಲ್ಲಿ ಚುನಾವಣೆ ಹವಾ ಶುರುವಾಗಿದೆ. ಕುಡುಕರಿಗಂತೂ ಹಬ್ಬವೋ ಹಬ್ಬ. ವೇದಿಕೆ ಮೇಲೆ 'ಮದ್ಯಪಾನ ಆರೋಗ್ಯಕ್ಕೆ ಹಾನಿಕರ. ಇಂಥ ದುಶ್ಚಟ ಬಿಟ್ಟುಬಿಡಿ' ಎನ್ನುವ ರಾಜಕಾರಣಿಗಳೇ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ರಾಜಾರೋಷವಾಗಿ ಹಣ-ಹೆಂಡ ಹಂಚುವುದು ಇಂದು ಗುಟ್ಟಾಗಿ ಉಳಿದಿಲ್ಲ.
ರಾಜಕಾರಣಿಗಳ ಈ ಇಬ್ಬಂದಿತನವನ್ನು ಸಮರ್ಥವಾಗಿ ವಿವರಿಸುವ ಅತ್ಯತ್ತಮ ವ್ಯಂಗ್ಯಚಿತ್ರವನ್ನು ರಚಿಸಿದ್ದಾರೆ ವ್ಯಂಗ್ಯಚಿತ್ರಕಾರ ಎಂ ಎನ್ ದತ್ತಾತ್ರಿ.

"ಎಲೆಕ್ಷನ್ ಶುರುವಾದ್ಮೇಲೆ ಒಂದ್ಕಡೆ ನಿಲ್ಲೋದೇ ಕಷ್ಟ. ಅದ್ರಲ್ಲಿ ನೀವು ಎರಡೆರಡು ಕಡೆ ಎಂಗ್ ನಿಲ್ತೀರಾ ಸಾಹೇಬ್ರೆ" ಎಂದು ಕುಡುಕನೊಬ್ಬ ರಾಜಕಾರಣಿಯನ್ನು ಪ್ರಶ್ನಿಸುತ್ತಿದ್ದಾನೆ. ಒಂದು ಕಡೆ ನಿಲ್ಲುವುದಕ್ಕಾಗದೆ ತೂರಾಡುತ್ತಿರುವ ಕುಡುಕ, ಎರಡೆರಡು ಕ್ಷೇತ್ರಗಳಲ್ಲಿ ಚುನಾವಣೆಗೆ ನಿಲ್ಲುವ ರಾಜಕಾರಣಿಗಳಿಗೆ ಕೇಳುತ್ತಿರುವ ಪ್ರಶ್ನೆ.












Click it and Unblock the Notifications