ಕಾರ್ಟೂನ್: ಮತದಾರನಿಗೆ ಅಪೌಷ್ಠಿಕತೆ, ರಾಜಕಾರಣಿಗೆ ಬೊಜ್ಜು!
ಒಂದೆಡೆ ಊಟವಿಲ್ಲದೆ ಅಪೌಷ್ಠಿಕತೆಯಿಂದ ಬಳಲುತ್ತಿರುವ ಜನಸಾಮಾನ್ಯ. ಇನ್ನೊಂದೆಡೆ ತಿಂದಿದ್ದು ಹೆಚ್ಚಾಗಿ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವ ರಾಜಕಾರಣಿ ಇದು ದೇಶದ ಇಬ್ಬಂದಿತನ!
ಇರುವ ಆಹಾರವೆಲ್ಲ ಇವರಿಗೇ ಸಾಕಾಗೋಲ್ಲ, ನಮಗೆಲ್ಲಿ ಮಿಕ್ಕಿಸಿರ್ತಾರೆ ಎಂಬ ಜನಸಾಮಾನ್ಯನ ಪ್ರಶ್ನೆ ಅರ್ಥಗರ್ಭಿತ. ಇರುವ ಹಣವನ್ನೆಲ್ಲ ಕೊಳ್ಳೆಹೊಡೆದು, ಮತದಾರನನ್ನು ಬಡತನದಲ್ಲೇ ಉಳಿಸುವ ರಾಜಕಾರಣಿಗಳಿಗೆ ಕಾರ್ಟೂನ್ ಮೂಲಕ ಛಾಟಿ ಏಟು ಕೊಟ್ಟಿದ್ದಾರೆ ಕಾರ್ಟೂನಿಸ್ಟ್ ಶಂಕರ್.
In Pics: ಕಚಗುಳಿ ಇಡುವ ಚುನಾವಣಾ ಕಾರ್ಟೂನ್: ನಕ್ಕು ಹಗುರಾಗಿ
ಅಪೌಷ್ಠಿಕತೆ ಭಾರತ ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆ. ಒಂದು ಪಕ್ಷ ಇನ್ನೊಂದು ಪಕ್ಷವನ್ನು ತೆಗಳಲು ಅಪೌಷ್ಠಿಕತೆಯ ಸಮ್ಯೆಯನ್ನು ಆಯುಧವನ್ನಾಗಿಟ್ಟುಕೊಂಡಿದೆಯಷ್ಟೆ. ಅಪೌಷ್ಠಿಕತೆಯ ಬಗ್ಗೆ ಗಂಟೆಗಟ್ಟಲೆ ಮಾತನಾಡುವ ರಾಜಕಾರಣಿಜಗಳು ತಾವೇ ಸ್ವತಃ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಈ ಕಾರ್ಟೂನ್ ಮೂಲಕ ಶಂಕರ್ ತೋರಿಸಿಕೊಟ್ಟಿದ್ದಾರೆ.













Click it and Unblock the Notifications