• search
  • Live TV
keyboard_backspace

ಬಿಟ್ ಕಾಯಿನ್ ವಿಶ್ವಕ್ಕೆ ಭವಿಷ್ಯದ ಸೂಪರ್ ಕರೆನ್ಸಿ !

ಬೆಂಗಳೂರು, ಫೆಬ್ರವರಿ 26: ಒಂದು ಬಿಟ್ ಕಾಯಿನ್ ಬೆಲೆ 46 ಸಾವಿರ ಡಾಲರ್ ! ಭಾರತೀಯ ರೂಪಾಯಿಗಳಲ್ಲಿ ಲೆಕ್ಕ ಹಾಕಿದರೆ 34 ಲಕ್ಷ ರೂಪಾಯಿ. ಕೇವಲ ಒಂದು ಬಿಟ್ ಕಾಯಿನ್ ಇದ್ದಿದ್ದರೆ ಸಾಕಿತ್ತು, ಜೀವನನೇ ಸೆಟ್ಲ್ ಆಗಿ ಬಿಡಿಡೋದು. ಈ ಪರಿ ಬಿಟ್ ಕಾಯಿನ್ ಮೌಲ್ಯ ನಾಗಾಲೋಟತ್ತ ಸಾಗುತ್ತಿದೆ. ವಿಶೇಷ ಎಂದರೆ ಕ್ರಿಪ್ಟೋ ಕರೆನ್ಸಿ ಬಿಟ್ ಕಾಯಿನ್ ಕೋಡ್ 2041 ಕ್ಕೆ ಅಂತ್ಯವಾಗಲಿದೆ. ಬಿಟ್ ಕಾಯಿನ್ ಜನ್ಮ ತಾಳಿ ಹತ್ತು ವರ್ಷ ಮುಗಿದಿದೆ. ಬಿಟ್ ಕಾಯಿನ್ ಆರಂಭದಿಂದ ಹಿಡಿದು ಸೂಪರ್ ಕರೆನ್ಸಿಯಾಗುವ ಬಗ್ಗೆ ವಿಶೇಷ ತಜ್ಞೆ ರೇಖಾ ಅಂಜನ್ ಕುಮಾರ್ ವೈಜ್ಞಾನಿಕ ರೀತಿಯಲ್ಲಿ ವಿಶ್ಲೇಷಿಸಿದ್ದಾರೆ.

ಮಾದಕ ಲೋಕದ ಮಹಾ ಅಸ್ತ್ರ ಬಿಟ್ ಕಾಯಿನ್ !

ಹೊಸ ಅನ್ವೇಷಣೆ :

ಹೊಸ ಅನ್ವೇಷಣೆ :

ಕ್ರಿಪ್ಟೋ ಕರೆನ್ಸಿ ಬಗ್ಗೆ ನಾವು ತಿಳಿದುಕೊಳ್ಳದಿದ್ದರೆ ದಡ್ಡರಾಗಿ ಬಿಡುತ್ತೇವೆ. ಹೊಸ ಅನ್ವೇಷಣೆಗಳು ಪ್ರಚಲಿತ ವ್ಯವಸ್ಥೆಗಳನ್ನು ಏಕಾ ಏಕಿ ಬದಲಾಯಿಸಿ ಬಿಡುತ್ತವೆ. ಮುದ್ರಣ ತಂತ್ರಜ್ಞಾನ ಬರುವ ಮೊದಲು ಕೈಯಲ್ಲಿ ಬರೆಯುತ್ತಿದ್ದರು. ಪ್ರಿಂಟಿಂಗ್ ಬಂದ ಮೇಲೆ ಕೈಯಲ್ಲಿ ಬರೆದು ಮುದ್ರಣ ಹಾಕುವ ಸಮುದಾಯವಿತ್ತು. ಮುದ್ರಣಾ ಟೆಕ್ನಾಲಜಿ ಬಂದ ಮೇಲೆ ಅದು ಬದಲಾಯಿತು. ರೇಡಿಯೋ ಕೂಡ ಹಾಗೇನೆ. ಮೊದಲು ರೇಡಿಯೋ ಇಟ್ಟುಕೊಳ್ಳಬೇಕಾದರೆ ಪರವಾನಗಿ ಬೇಕಿತ್ತು. ಮನೆಯ ಇಂತದ್ದೇ ಜಾಗದಲ್ಲಿ ಮಾತ್ರ ರೇಡಿಯೋ ಇಡಬೇಕಿತ್ತು. ಇದೀಗ ಮೊಬೈಲ್ ನಲ್ಲೇ ರೇಡಿಯೋ ಕೇಳಬಹುದು? ಪೋಟೋ ವಿಚಾರಕ್ಕೆ ಬಂದ್ರೆ ಮೊದಲು ರೀಲ್ ತರಿಸಿ ಅದನ್ನು ತೊಳೆದು ಪೋಟೋ ಕೊಡುತ್ತಿದ್ದರು. ರಾಜವಂಶಸ್ತರು ಮಾತ್ರ ಪೋಟೋ ತೆಗೆಸಿಕೊಳ್ಳುತ್ತಿದ್ದರು. ಮೊದಲು ಪೋಟೋ ತೆಗೆಸಿಕೊಳ್ಳಬೇಕಾದರೆ ರಾಜರ ಅನುಮತಿ ಪಡೆಯಬೇಕಿತ್ತು. ಆನಂತರ ರೀಲ್ ಬಂತು. ಅಮೇಲೆ ಡಿಜಿಟಲ್ ಕ್ಯಾಮರಾಗಳು ಬಂತು. ಕೊನೆಗೆ ಮೊಬೈಲ್ ಬರುವ ವೇಳೆಗೆ ಇಡೀ ಕ್ಯಾಮರಾ ಉದ್ಯಮ ಮಲಗಿತು. ಹೀಗಾಗಿ ಹೊಸ ಅನ್ವೇಷಣೆ ಆಗುತ್ತಿದ್ದಂತೆ ಪ್ರಚಿಲಿತ ವ್ಯವಸ್ಥೆಗಳು ಬದಲಾಗಿ ಬಿಡುತ್ತವೆ. ಹೊಸ ಅನ್ವೇಷಣೆಗೆ ನಾವು ಹೊಂದಿಕೊಳ್ಳಬೇಕು. ವಿಶ್ವದಲ್ಲಿ ಕರೆನ್ಸಿ ವಿಚಾರಕ್ಕೆ ಬಂದರೆ ಡಿಜಿಟಲ್ ಕರೆನ್ಸಿ, ಬಿಟ್ ಕಾಯಿನ್ ಕೂಡ ಅದೇ ತರ ಎಂದು ಭಾವಿಸಬೇಕಾಗುತ್ತದೆ.

ಸಿಂಧೂ ನಾಗರೀಕತೆ ಮತ್ತು ವಿನಿಮಯ

ಸಿಂಧೂ ನಾಗರೀಕತೆ ಮತ್ತು ವಿನಿಮಯ

: ಕ್ರಿಪ್ಟೋಕರೆನ್ಸಿ, ಡಿಜಿಟಲ್ ಕರೆನ್ಸಿ ಅರ್ಥವಾಗಬೇಕಾದ್ರೆ ಕರೆನ್ಸಿಯ ಮೂಲದ ಬಗ್ಗೆ ತಿಳಿದುಕೊಳ್ಳಲೇಬೇಕು. ನಮ್ಮ ದೇಶದ ವಿಚಾರಕ್ಕೆ ಬಂದ್ರೆ ಸಿಂಧೂ ನಾಗರಿಕತೆ ಇದ್ದಾಗಲೇ ವಸ್ತು ವಿನಿಯಮ ಪದ್ಧತಿ ಅಸ್ತಿತ್ವದಲ್ಲಿತ್ತು. ಒಂದು ವಸ್ತುವನ್ನು ಕೊಟ್ಟು ಇನ್ನೊಂದು ವಸ್ತುವನ್ನು ಪಡೆಯುತ್ತಿದ್ದರು. ಇದೇ ಕರೆನ್ಸಿ ಪದ್ಧತಿ ಹುಟ್ಟಿನ ಮೂಲ ಎಂದರೂ ತಪ್ಪಾಗಲಾರದು. ಎಲ್ಲಾ ದೇಶಗಳಲ್ಲಿ ಇದೇ ರೀತಿ ವಿನಿಮಯ ಪದ್ಧತಿ ಆರಂಭದಿಂದಲೇ ಕರೆನ್ಸಿ ಹಂತಕ್ಕೆ ಬಂದಿವೆ ಎಂಬುದು ಗಮನಾರ್ಹ. ಕಾಲಂತರದಲ್ಲಿ ಚಿನ್ನದ ನಾಣ್ಯ ಅಸ್ತಿತ್ವಕ್ಕೆ ಬಂತು. ಬಳಿಕ ಬೆಳ್ಳಿ ನಾಣ್ಯ ಚನಾವಣೆಗ ಆಯಿತು. ನಮ್ಮ ದೇಶದಲ್ಲಿ ಟೋಕನ್ ಕರೆನ್ಸಿಯನ್ನು ಜಾರಿಗೆ ತಂದ ಮೇದಾವಿ ಮಹಮದ್ ಬಿನ್ ತೊಘಲಕ್. ತೊಘಲಕ್ ರನ್ನು ಎಲ್ಲರೂ ಹೀಯಾಳಿಸುತ್ತಾರೆ. ವಾಸ್ತವದಲ್ಲಿ ನಾವು ಇವತ್ತು ಬಳಸುತ್ತಿರುವ ಕರೆನ್ಸಿ ನೋಟುಗಳನ್ನು ನೂರಾರು ವರ್ಷಗಳ ಹಿಂದೆಯೇ ಮಹಮದ್ ಬಿನ್ ತೊಘಲಕ್ ಜಾರಿಗೆ ತಂದಿದ್ದ. ಚಿನ್ನದ ಕರೆನ್ಸಿ ಜಾರಿಯಲ್ಲಿದ್ದಾಗ ಚಿನ್ನ ಕಡಿಮೆ ಆಯಿತು. ಸಾಧಾರಣ ಮೆಟಲ್ ಬಳಿಸಿ ಕಾಯಿನ್ ಮುದ್ರಿಸಿ ಚಲಾವಣೆಗೆ ತಂದ. ಸಾಧಾರಣ ಮೆಟಲ್ ಬಳಿಸಿ ಕಾಯಿನ್ ತಯಾರಿಸಿದ್ದರಿಂದ ಎಲ್ಲರೂ ಕಾಯಿನ್ ಮುದ್ರಿಸಿ ಚಲಾವಣೆಗೆ ನಿಂತರು. ಮಹಮದ್ ಬಿನ್ ತೊಘಲಕ್ ಅರ್ಥ ವ್ಯವಸ್ಥೆ ಬಿದ್ದು ಹೋಯಿತು. ನಾವು ಇವತ್ತು ಬಳಸುತ್ತಿರುವ ಕರೆನ್ಸಿ ಟೋಕನ್ ಕರೆನ್ಸಿ. ಅ ನೋಟು ಮೇಲೆ ಬರೆದಿರುವ ಮೌಲ್ಯ ಅದು ಹೊಂದಿರಲ್ಲ. ಆದರೆ, ಅದರ ಮೇಲೆ ಭಾರತೀಯ ರಿಸರ್ವ ಬ್ಯಾಂಕ್ ಗೌರವರ್ನರ್ ಪ್ರಾಮೀಸನರಿ ನೋಟ್ ಹಾಕಿರುತ್ತಾರೆ. ಆ ನೋಟು ನಾವು ಆರ್ ಬಿಐ ಗೆ ಕೊಟ್ಟರೂ, ಅಷ್ಟು ಮೌಲ್ಯದ ಚಿನ್ನ ಬೇಕಾದ್ರೂ ನಾವು ಪಡೆಯಬಹುದು. ನಾವು ತೊಘಲಕ್ ನ್ನು ಹೀಯಾಳಿಸಿದವರು, ಅತ ಪರಿಚಯಿಸಿದ ಟೋಕನ್ ಕರೆನ್ಸಿಯನ್ನು ಇವತ್ತು ನಾವು ಅಳವಡಿಸಿಕೊಂಡಿದ್ದೇವೆ !

ಅಮೆರಿಕಾ ಡಾಲರ್ ಮತ್ತು ಪೆಟ್ರೋಲಿಯಂ ಮೇಲಿನ ಚಕ್ರಾಧಿಪತ್ಯ :

ಅಮೆರಿಕಾ ಡಾಲರ್ ಮತ್ತು ಪೆಟ್ರೋಲಿಯಂ ಮೇಲಿನ ಚಕ್ರಾಧಿಪತ್ಯ :

ಜಾಗತಿಕವಾಗಿ ನೋಡಿದಾಗ ಅಮೆರಿಕಾದ ಡಾಲರ್ ಗೆ ಎಲ್ಲಿಲ್ಲದ ಮಹತ್ವ ಯಾಕೆ ? ಅಮೆರಿಕಾದ ಡಾಲರ್ ಕೂಡ ರೂಪಾಯಿ ನಂತೆ ಇತ್ತು. ಅಮೆರಿಕಾ ತನ್ನ ಪ್ರಾಬಲ್ಯ ಬಳಿಸಿ ಅರಬ್ ರಾಷ್ಟ್ರಗಳ ಮೇಲೆ ನಿಯಂತ್ರಣ ಸಾಧಿಸಿತು. ಅರಬ್ ದೇಶಗಳ ನಿಯಂತ್ರಣ ಸಿಕ್ಕಿದ ಮೇಲೆ ಪೆಟ್ರೋಲಿಯಂ ಮತ್ತು ಡೀಸಲ್ ಮೇಲೆ ನಿಯಂತ್ರಣ ಸಿಕ್ಕಿತು. ಇಡೀ ಜಗತ್ತಿಗೆ ಬೇಕಾಗಿದ್ದ ಇಂಧನವನ್ನು ಡಾಲರ್ ನಲ್ಲೇ ಖರೀದಿ ಮಾಡಬೇಕು ಎಂಬ ನಿರ್ಬಂಧಗಳನ್ನು ಅಮೆರಿಕಾ ತನ್ನ ಪ್ರಭಾವದಿಂದ ಜಾರಿಗೆ ತಂದಿತು. ಹೀಗಾಗಿ ಅಮೆರಿಕಾ ಡಾಲರ್ ಬೆಲೆ ಹೆಚ್ಚಾಯಿತು. ಇವತ್ತು ಜಾಗತಿಕ ಮಟ್ಟದ ದೊಡ್ಡ ವಹಿವಾಟು ನಡೆಸಬೇಕಾದರೆ ಅಮೆರಿಕಾದ ಡಾಲರ್ ರೂಪದಲ್ಲಿ ವಹಿವಾಟು ನಡೆಸಬೇಕು. ಡಾಲರ್ ನಲ್ಲಿ ವಹಿವಾಟು ನಡೆದಷ್ಟು ಲಾಭ ಅಮೆರಿಕಾಗೆ ಎಂಬುದರಲ್ಲಿ ಎರಡು ಮಾತಿಲ್ಲ.

ಬಿಟ್ ಕಾಯಿನ್ ಮೇಲೆ ಒಲವು ಯಾಕೆ ? :

ಬಿಟ್ ಕಾಯಿನ್ ಮೇಲೆ ಒಲವು ಯಾಕೆ ? :

ಈಗ ಯಾವುದೇ ದೇಶದ ಬ್ಯಾಂಕಿಂಗ್ ವ್ಯವಸ್ಥೆ ನೋಡಿದ್ರೂ ಕೇಂದ್ರೀಕೃತ ವ್ಯವಸ್ಥೆ ಇದೆ. ಒಬ್ಬ ವ್ಯಕ್ತಿಗೆ ಹಣ ಕಳುಹಿಸಬೇಕಾದರೆ ಮೊದಲು ಬ್ಯಾಂಕಿನಲ್ಲಿ ಹಾಕಬೇಕು. ಅಲ್ಲಿಂದ ಇನ್ನೊಬ್ಬರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಬೇಕು. ನಮ್ಮ ದುಡ್ಡು ತೆಗೆಯಲ್ಲ ಎಂಬ ನಂಬಿಕೆ ಬ್ಯಾಂಕ್ ಮೇಲೆ ಇದೆ. ಈ ಮೊದಲು ಜನ ಸಾಮಾನ್ಯರು ಹಣವನ್ನು ತಿಜೋರಿಗಳಲ್ಲಿ ಬಚ್ಚಿಡುತ್ತಿದ್ದರು. ಈಗ ಮೊಬೈಲ್ ಆಪ್‌ ಬ್ಯಾಂಕಿಂಗ್ ಬಂದಿದೆ. ಮೊಬೈಲ್ ನಲ್ಲಿ ಹಣ ವರ್ಗಾವಣೆ ಮಾಡಬಹುದು, ಸ್ವೀಕರಿಸಬಹುದು. ಬ್ಯಾಂಕ್ ಗೆ ಹೋಗಿ ಮಾಡಬೇಕಿದ್ದ ವಹಿವಾಟು ಪದ್ಧತಿ ಈಗಿಲ್ಲ. ಯಾರು ಯಾರಿಗೆ ಹಣ ವರ್ಗಾವಣೆ ಮಾಡಿದರೂ ಅದಕ್ಕೆ ಸಂಬಂಧಿಸಿದಂತೆ ಲೆಡ್ಜರ್ ಅಂತೂ ಇದ್ದೇ ಇರುತ್ತದೆ. ಈ ಲೆಡ್ಜರ್ ಇರುವುದರಿಂದ ನಮಗೆ ಐದು ರೂಪಾಯಿ ಕೂಡ ಮೋಸ ಆಗಲ್ಲ . ಎಲ್ಲವೂ ಸತ್ಯ ಇರುತ್ತದೆ ಎಂಬ ನಂಬಿಕೆ. ಬ್ಯಾಂಕುಗಳ ಮೇಲೆ ಅಷ್ಟೊಂದು ನಂಬಿಕೆ ಇಟ್ಟುಕೊಂಡಿದ್ದೇವೆ. ಇದೇ ನಂಬಿಕೆಯೇ ಕ್ರಿಪ್ಟೋ ಕರೆನ್ಸಿಯ ಹುಟ್ಟಿಗೆ ಮೂಲ ಕಾರಣವಾಗಿದ್ದು.

ಬಿಟ್ ಕಾಯಿನ್ ಗೆ ಜನ್ಮ:

ಬಿಟ್ ಕಾಯಿನ್ ಗೆ ಜನ್ಮ:

ಕೇಂದ್ರೀಕೃತ ಬ್ಯಾಂಕಿಂಗ್ ವ್ಯವಸ್ಥೆಯಿಂದ ಆಗುತ್ತಿರುವ ಸಮಸ್ಯೆಗಳಿಗೆ ಪರ್ಯಾಯವಾಗಿ ಹುಟ್ಟುಕೊಂಡಿದ್ದೇ ಕ್ರಿಪ್ಟೋ ಕರೆನ್ಸಿ ಬಿಟ್ ಕಾಯಿನ್. 2009 ರಲ್ಲಿ ಸತೋಷಿ ನಾಕಾಮೋಟ ಎಂಬ ವ್ಯಕ್ತಿ ಕಂಡು ಹಿಡಿದಿದ್ದು ಎಂದು ದಾಖಲೆಗಳು ಹೇಳುತ್ತವೆ. ನಿಜವಾಗಿಯೂ ಸತೋಷಿ ನಾಕೋಮೋಟೋ ಇದ್ದಾನಾ ? ಅಥವಾ ಅದೊಂದು ಸೃಷ್ಟಿಯ ಹೆಸರಾ ಎಂಬುದು ಜಗತ್ತಿಗೆ ಈವರೆಗೋ ಗೊತ್ತಿಲ್ಲ. ಈತ ಮೊದಲು ಬಿಟ್ ಕಾಯಿನ್ ಜಗತ್ತಿಗೆ ಪರಿಚಯಿಸಿದ. ಇದೇ ಮಾದರಿಯಲ್ಲಿ ಇಂದು ಜಾಗತಿಕವಾಗಿ ಅನೇಕ ಡಿಜಿಟಲ್ ಕರೆನ್ಸಿಗಳು ಸೃಷ್ಟಿಯಾಗಿವೆ. ಆದರೆ, ಬಿಟ್ ಕಾಯಿನ್ ಅಗ್ರಗಣ್ಯ ಸ್ಥಾನದಲ್ಲಿದೆ. ಇದರ ಬಳಕೆ ದಿನೇ ದಿನೇ ಹೆಚ್ಚಾಗುತ್ತಿದೆ. 2041 ರ ವೇಳೆಗೆ ಬಿಟ್ ಕಾಯಿನ್ ಜಾಗತಿಕ ಸೂಪರ್ ಕರೆನ್ಸಿಯಾಗಿ ರೂಪಾಂತರಗೊಳ್ಳಲಿದೆ ಎಂದೇ ತಜ್ಞರು ಹೇಳುತ್ತಿದ್ಆರೆ. ಯಾಕೆಂದರೆ ಬಿಟ್ ಕಾಯಿನ್ ಮೇಲಿನ ಜನರ ನಂಬಿಕೆ ಜಾಸ್ತಿ ಯಾಗುತ್ತಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿರುವ ಸಮಸ್ಯೆಗಳಿಗೆ ಇದು ಪರ್ಯಾಯ ಅಂತ ಅನ್ನಿಸುತ್ತಿದೆ. ಹೀಗಾಗಿ ಬಿಟ್ ಕಾಯಿನ್ ಗೆ ಎಲ್ಲಿಲ್ಲದ ಮಹತ್ವ ಬಂದಿದೆ.

 ಬಿಟ್ ಕಾಯಿನ್ ಮೇಲಿನ ನಂಬಿಕೆ :

ಬಿಟ್ ಕಾಯಿನ್ ಮೇಲಿನ ನಂಬಿಕೆ :

ಬಿಟ್ ಕಾಯಿನ್ ವಹಿವಾಟಿನಲ್ಲಿ ಪಾರದರ್ಶಕತೆ ಇದೆ. ಬಿಟ್ ಕಾಯಿನ್ ವಹಿವಾಟನ್ನು ಕೂಡ ಲೆಡ್ಜರ್ ನಲ್ಲಿ ನಿರ್ವಹಣೆ ಮಾಡಲಾಗುತ್ತದೆ. ಆರು ಮಂದಿ ಬಿಟ್ ಕಾಯಿನ್ ವಹಿವಾಟು ನಡೆಸುತ್ತಿದ್ದಾರೆ ಎಂದರೆ, ಆನ್‌ಲೈನ್ ನಲ್ಲಿ ಲೆಡ್ಜರ್ ನೋಡಬಹುದು. ಯಾರಿಂದ ಯಾರಿಗೆ ಹಣ ಹೋಗಿದೆ. ಯಾವಾಗ ಹೋಗಿದೆ ಎಂಬ ಲೆಡ್ಜರ್ ನ ಪಬ್ಲಿಕ್ ಡೊಮೈನ್‌ ನಲ್ಲಿಯೇ ಸಿಗುತ್ತದೆ. ಇಲ್ಲಿ ವಹಿವಾಟಿನ ಕೋಡ್ ಗಳನ್ನು ಕಾಪಿ ಮಾಡುವ ಸಾಧ್ಯತೆ ಇತ್ತು. ಇಲ್ಲಿ ಹಣ ಪಡೆದು ವಾಪಸು ಕೊಟ್ಟೆ ಎಂದು ಕಂಪ್ಯೂಟರ್ ನಲ್ಲಿ ಕೋಡ್ ಕ್ರಿಯೇಟ್ ಮಾಡುವ ಅವಕಾಶವಿತ್ತು. ಇದೆಲ್ಲವನ್ನೂ ಅರ್ಥಮಾಡಿಕೊಂಡು, ಪರ್ಯಾಯವಾಗಿ ಸತೋಷಿ ಕೋಡ್ ವ್ಯವಸ್ಥೆ ಅನ್ವೇಷಣೆ ಮಾಡಿದ್ದಾನೆ. ಉದಾಹರಣೆಗೆ ರಮೇಶ ತನ್ನ ಸ್ನೇಹಿತ ರಾಜೇಂದ್ರನಿಗೆ ಐದು ಸಾವಿರ ರೂಪಾಯಿ ಕೊಟ್ಟಿದ್ದಾನೆ ಎಂದರೆ, ಅದು ರಾಜೇಂದ್ರ ಖಾತೆಗೆ ಯಾವಾಗ ಬಂತು. ಆತ ಅದರಲ್ಲಿ ಎಷ್ಟು ಖರ್ಷು ಮಾಡಿದ್ದಾನೆ ಎಂಬುದಕ್ಕೆ ಆನ್‌ಲೈನ್ ವ್ಯಾಲೆಟ್ ನಲ್ಲಿಯೇ ವಿವರಗಳು ಲಭ್ಯವಿರುತ್ತವೆ.

ಬಿಟ್ ಕಾಯಿನ್ ಕೋಡ್ ಸಿಸ್ಟಂ :

ಬಿಟ್ ಕಾಯಿನ್ ಕೋಡ್ ಸಿಸ್ಟಂ :

ಕಂಪ್ಯೂಟರ್ ಗೆ ಎಲ್ಲಾ ಸಂಖ್ಯೆಗಳು ನೆನಪು ಇರಲ್ಲ. ಕೇವಲ 0 ಹಾಗೂ 1 ಮಾತ್ರ. ಈ ಎರಡು ಬಳಸಿಕೊಂಡು ಎಷ್ಟು ಡಿಜಿಟ್ ಕೊಟ್ಟರೆ ಅದನ್ನು ಡೂಪ್ಲಿಕೇಟ್ ಮಾಡೋಕೆ ಆಗಲ್ಲ ಎಂಬುದನ್ನು ಸತೋಷಿ ಕಂಡು ಹಿಡಿದಿದ್ದಾನೆ. ಎಲ್ಲೂ ಇಲ್ಲದ 256 ಬಿಟ್ ಇರುವ ಕೋಡ್ ನ್ನು ಬಿಟ್ ಕಾಯಿನ್ ಗೆ ಜನರೇಟ್ ಮಾಡಲಾಗುತ್ತದೆ. ಈ ಕೋಡ್ ಜನರೇಟ್ ಮಾಡೋಕೆ ವಿಶಿಷ್ಟ ಕಂಪ್ಯೂಟರ್ ಬೇಕು. ಹೊಸ ಕೋಡ್ ಜನರೇಟ್ ಮಾಡುವರಿಗೆ ಸಲ್ವ ಹಣ ತೆಗೆದುಕೊಳ್ಳೂತ್ತಾರೆ. ಒಂದು ಬ್ಲಾಕ್ ಆದ ನಂತರ ಮತ್ತೊಂದು ಬ್ಲಾಕ್ ಎಂಬ ನಿಯಮದ ಮೇಲೆ ಹ್ಯಾಷ್ ಫಂಕ್ಷನ್ ಮೂಲಕ ಬ್ಲಾಕ್ ರಚನೆ ಮಾಡಿರುವುದರಿಂದ ಬಿಟ್ ಕಾಯಿನ್ ಡೂಪ್ಲಿಕೇಟ್ ಮಾಡೋಕೆ ಸಾಧ್ಯವೇ ಇಲ್ಲ. ಇಲ್ಲಿ ಡಿಜಿಟಲ್ ಸಿಗ್ನೇಚರ್ ಇರುತ್ತೆ. ಒಂದು ಪಬ್ಲಿಕ್ ಕೀ. ಮತ್ತೊಂದು ಪ್ರೈವೆಟ್ ಕೀ ಇರುತ್ತದೆ. ಯಾರೂ ವಹಿವಾಟು ನಡೆಸುತ್ತಾರೋ ಅದನ್ನು ಯಾರೂ ನಕಲಿ ಮಾಡಲಿಕ್ಕೆ ಸಾಧ್ಯವಾಗುವುದಿಲ್ಲ. ಆ ರೀತಿಯಲ್ಲಿ ಬಿಟ್ ಕಾಯಿನ್ ಸಂದೇಶ ಎನ್‌ಕ್ರಿಪ್ಟ್ ಮಾಡಲಾಗಿರುತ್ತದೆ. ಇದು ವಹಿವಾಟು ನಡೆಸುವ ವ್ಯಕ್ತಿಗಳ ಇಬ್ಬರ ನಡುವೆ ಮಾತ್ರ ಸಂದೇಶ ವಿನಿಯಮ ಆಗಿರುತ್ತದೆ.

ಸೆಂಟ್ರಲ್ ಬ್ಯಾಂಕಿಂಗ್ ಮತ್ತು ಬಿಟ್ ಕಾಯಿನ್ ಡೀ ಸೆಂಟ್ರಲೈಸ್ :

ಸೆಂಟ್ರಲ್ ಬ್ಯಾಂಕಿಂಗ್ ಮತ್ತು ಬಿಟ್ ಕಾಯಿನ್ ಡೀ ಸೆಂಟ್ರಲೈಸ್ :

ಜಗತ್ತಿನ ಎಲ್ಲಾ ರಾಷ್ಟ್ರಗಳು ಈಗ ಹೊಂದಿರುವುದು ಕೇಂದ್ರೀಕೃತ ಬ್ಯಾಂಕಿಂಗ್ ಸಿಸ್ಟಂ. ಭಾರತದಲ್ಲಿರುವ ವ್ಯಕ್ತಿ ಅಮೆರಿಕಾದಲ್ಲಿರುವ ವ್ಯಕ್ತಿಗೆ ಹಣ ಕಳುಹಿಸಬೇಕು ಎಂದಿಟ್ಟುಕೊಳ್ಳಿ. ಮೊದಲು ಬ್ಯಾಂಕಿಗೆ ಹೋಗಬೇಕು. ಭಾರತದ ರೂಪಾಯಿಯನ್ನು ಮೊದಲು ಅಮೆರಿಕಾದ ಡಾಲರ್ ಗೆ ಬದಲಿಸಬೇಕು. ಇದಕ್ಕಾಗಿ ಒಂದಷ್ಟು ಶುಲ್ಕ ಪಾವತಿಸಬೇಕು. ಆನಂತರ ಇಲ್ಲಿನ ಬ್ಯಾಂಕ್ ನಿಂದ ಅಮೆರಿಕಾದಲ್ಲಿರುವ ಬ್ಯಾಂಕ್ ಗೆ ರವಾನಿಸಬೇಕು. ಅದಕ್ಕೂ ಶುಲ್ಕ ಪಾವತಿಸಬೇಕು. ಇದಕ್ಕಾಗಿ ದುಂದು ವೆಚ್ಚ ಆಗುತ್ತದೆ. ಬಿಟ್ ಕಾಯಿನ್ ನಲ್ಲಿ ಅದ್ಯಾವ ಶುಲ್ಕಗಳು ಇರುವುದಿಲ್ಲ. ನೀವು ಕಳುಹಿಸಬೇಕಾದ ವ್ಯಕ್ತಿಗೆ ಒಂದು ಮೇಲ್ ಮೂಲಕ ಕಳಹಿಸಿದರೆ ಅಲ್ಲಿಗೆ ಹಣ ತಲುಪಿದಂತಾಗುತ್ತದೆ. ಇನ್ನೊಂದು ಇಲ್ಲಿ ಈಗಿರುವ ಕೇಂದ್ರೀಕೃತ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಇಬ್ಬರ ನಡುವಿನ ವಹಿವಾಟಿಗೂ ಮೂರನೆಯವರ ( ಬ್ಯಾಂಕ್ ) ಮಧ್ಯಸ್ತಿಕೆ ಅಗತ್ಯ. ಆದರೆ, ಬಿಟ್ ಕಾಯಿನ್ ವಹಿವಾಟಿನಲ್ಲಿ ಇದರ ಅಗತ್ಯವೇ ಇಲ್ಲ. ಇಲ್ಲಿ ಅನಾವಶ್ಯಕ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಬಿಟ್ ಕಾಯಿನ್ ಯಾವುದೇ ಒಂದು ದೇಶಕ್ಕೆ ಸೀಮಿತವಾಗದ ಕಾರಣ, ಇದಕ್ಕೆ ವಿಶ್ವದಾದ್ಯಂತ ಏಕ ರೂಪದ ಬೆಲೆಯೇ ಇರುತ್ತದೆ. ಬಿಟ್ ಕಾಯಿನ್ ವಹಿವಾಟು ನಡೆಸಿದರೆ, ಟ್ರಾಂಜಕ್ಷನ್ ಗೆ ಒಂದು ವ್ಯವಸ್ಥೆ, ಟ್ಯಾಂಪರ್ ಆಗದಂತೆ ಒಂದು ವ್ಯವಸ್ಥೆ, ಸಂದೇಶ ರವಾನೆ ಆಗುತ್ತದೆ. ಹಣದ ವಹಿವಾಟಿಗೆ ದೇಶಗಳ ನಿರ್ಬಂಧಗಳನ್ನು ಮೀರಿ ಕ್ಷಣಾರ್ಧದಲ್ಲಿ ಕ್ರಿಪ್ಟೋ ಕರೆನ್ಸಿ ವಹಿವಾಟು ನಡೆಸಬಹುದು.

ಬಿಟ್ ಕಾಯಿನ್ ಬೆಲೆ ನಾಗಲೋಟಕ್ಕೆ :

ಬಿಟ್ ಕಾಯಿನ್ ಬೆಲೆ ನಾಗಲೋಟಕ್ಕೆ :

ಇನ್ನು ಬಿಟ್ ಕಾಯಿನ್ ಗೆ ಸೀಮಿತ ಕೋಡ್ ಜನರೇಟ್ ಮಾಡಲಿಕ್ಕೆ ಸಾಧ್ಯ. ಅದರ ಪ್ರಕಾರ 21 ಮಿಲಿಯನ್ ಕೋಟ್ ಮಾತ್ರ ರಚನೆ ಮಾಡಲು ಸಾಧ್ಯ. ಈಗಾಗಲೇ ಅಂದಾಜು 16 ಮಿಲಿಯನ್ ರಚನೆ ಆಗಿದೆ. ಹೀಗಾಗಿ ಅದರ ಬೆಲೆ ಗಗನಕ್ಕೆ ಹೋಗುತ್ತಿದೆ. ಭಾರತದಲ್ಲಿ ಕ್ರಿಪ್ಟೋ ಕರೆನ್ಸಿ ಬ್ಯಾನ್ ಮಾಡಿತ್ತು. ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬಿಟ್ ಕಾಯಿನ್ ನನ್ನು ಟ್ರೇಡಿಂಗ್ ಮಾಡಬಹುದು. ಬಿಟ್ ಕಾಯಿನ್ ಖರೀದಿ ಮಾಡಿ ಇಟ್ಟುಕೊಳ್ಳಬಹುದು. ಒಂದು ಶೇರ್ ಮಾದರಿ ತೆಗೆದಿಟ್ಟುಕೊಳ್ಳಬಹುದು. ಅದರ ಬೆಲೆ ಜಾಸ್ತಿಯಾದಾಗ ಟ್ರೇಡಿಂಗ್ ಮೂಲಕ ಮಾರಾಟ ಮಾಡಬಹದು. ಭಾರತದಲ್ಲಿ ಲೀಗಲ್ ಆಗಿ ಬಿಟ್ ಕಾಯಿನ್ ಬಳಕೆ ಮಾಡಲು ಸಾಧ್ಯವಿಲ್ಲ. ಇನ್ನು ನಿರೀಕ್ಷಿತ ಕೋಡ್ ಜನರೇಟ್ ಗುರಿ 21 ಮಿಲಿಯನ್ ಆದ ಮೇಲೆ ಕೋಡ್ ಜನರೇಟ್ ಆಡೋಕೆ ಆಗಲ್ಲ. ಅಲ್ಲಿಗೆ ಬಿಟ್ ಕಾಯಿನ್ ಕೋಡ್ ಜನರೇಟ್ ನಿಂತು ಹೋಗುತ್ತದೆ.

ಬಿಟ್ ಕಾಯಿನ್ ನಕಾರಾತ್ಮಕ ಅಂಶಗಳು:

ಬಿಟ್ ಕಾಯಿನ್ ನಕಾರಾತ್ಮಕ ಅಂಶಗಳು:

ಬಿಟ್ ಕಾಯಿನ್ ವಿಶ್ವದಲ್ಲಿ ಅತಿ ಮಹತ್ವ ಪಡೆದುಕೊಳ್ಳುತ್ತಿರುವ ಕರೆನ್ಸಿಯಾಗಿ ಬಳಕೆಯಾಗುತ್ತಿದೆ. ಕೆನಡಾದಲ್ಲಿ ಬಿಟ್ ಕಾಯಿನ್ ಎಟಿಎಂ ಗಳನ್ನು ತೆರೆಯಲಾಗಿದೆ. ಇತ್ತೀಚೆಗೆ ಸ್ಪೇಸ್ X ದಿಗ್ಗಜ ಇಲಾನ್ ಮಸ್ಕ್ ಬಿಟ್ ಕಾಯಿನ್ ನಲ್ಲಿ ಹೂಡಿಕೆ ಮಾಡಿದ್ದ. ಇದರ ನಡುವೆ ಬಿಟ್ ಕಾಯಿನ್ ವಹಿವಾಟಿನಲ್ಲಿ ಬಹುದೊಡ್ಡ ಲೋಪಗಳು ಎರಡು ಇವೆ. ಒಂದು ನೀವು ಯಾರಿಗಾದರೂ ತಪ್ಪಾಗಿ ಬಿಟ್ ಕಾಯಿನ್ ರವಾನಿಸಿದರೆ ಮತ್ತೆ ಅದನ್ನು ವಾಪಸು ಪಡೆಯಲಿಕ್ಕೆ ಸಾಧ್ಯವಿಲ್ಲ. ಬಿಟ್ ಕಾಯಿನ್ ಪ್ರೆವೈಟ್ ಕೀ ಮರೆತು ಬಿಟ್ಟರೆ ಈ ಜನ್ಮದಲ್ಲಿ ಇನ್ನೊಬ್ಬರು ಆ ಕೀ ರಚನೆ ಮಾಡಲಿಕ್ಕೂ ಸಾಧ್ಯವಿಲ್ಲ. ಅದನ್ನು ತೆರೆಯಲು ಸಾಧ್ಯವಿಲ್ಲ. ಹೀಗಾಗಿ ಕೆಲವರು ಬಿಟ್ ಕಾಯಿನ್ ಇದ್ದರೂ ಅದನ್ನು ಪಡೆಯಲಾಗದೇ ಪರದಾಡುತ್ತಿದ್ದಾರೆ. ಇತ್ತೀಚೆಗೆ ಸಾವಿರಾರು ಕೋಟಿ ಮೌಲ್ಯದ ಬಿಟ್ ಕಾಯಿನ್ ಪ್ರೆವೈಟ್ ಕೀ ಮರೆತಿದ್ದ ವ್ಯಕ್ತಿ ಬಗ್ಗೆ ಸುದ್ದಿಯಾಗಿದ್ದನ್ನು ಸ್ಮರಿಸಬಹುದು.

ಭಾರತದಲ್ಲಿ ಡಿಜಿಟಲ್ ಕರೆನ್ಸಿ :

ಭಾರತದಲ್ಲಿ ಡಿಜಿಟಲ್ ಕರೆನ್ಸಿ :

ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಡಿಜಿಟಲ್ ಕರೆನ್ಸಿ ತರುವುದಾಗಿ ಪ್ರಕಟಿಸಿದೆ. ಇನ್ನೊಂದು ವರ್ಗ ಬಿಟ್ ಕಾಯಿನ್ ರದ್ದು ಮಾಡಬೇಕು. ಬಿಟ್ ಕಾಯಿನ್ ನಿಂದ ಕಪ್ಪು ಕುಳಗಳು ಸುರಕ್ಷಿತವಾಗಿ ಹಣ ರಕ್ಷಣೆ ಮಾಡಿಕೊಳ್ಳುತ್ತಾರೆ ಎಂಬ ವಾದ ಒಂದಡೆಯಿಂದ ಕೇಳಿ ಬರುತ್ತದೆ. ಆದರೆ, ವಾಸ್ತವದಲ್ಲಿ ಕ್ರಿಪ್ಟೋ ಕರೆನ್ಸಿಯ ಪಾರದರ್ಶಕ ನಿಯಮ, ಶುಲ್ಕ ರಹಿತ ಡಿಜಿಟಲ್ ವ್ಯವಸ್ಥೆ, ದೇಶಗಳ ನಡುವಿನ ಗಡಿಗಳ ಮೀರಿದ್ದರಿಂದ, ಇದಕ್ಕೆ ಭೌತಿಕ ಸ್ವರೂಪ ಇಲ್ಲದ ಕಾರಣ ವಿಶ್ವದಲ್ಲಿ ಅಗ್ರಮಾನ್ಯ ಕರೆನ್ಸಿಯಾಗಲಿದೆ ಎಂದು ತಜ್ಞರು. ಅಭಿಪ್ರಾಯಪಟ್ಟಿದ್ದಾರೆ.

English summary
Bitcoin in 2041 : Here’s an insight into what the world of crypto will look like by 2041.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X