ಕಟಕ ರಾಶಿ ವರ್ಷ ಭವಿಷ್ಯ: ಆರೋಗ್ಯ, ಹಣಕಾಸು ಸ್ಥಿತಿ ಉತ್ತಮ: ಬದುಕಿನಲ್ಲಿ ಏರಿಳಿತ- Cancer Horoscope 2026
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, "ಕರ್ಕಾಟಕ (ಕಟಕ)' ಎಂಬುದು ನಾಲ್ಕನೇ ರಾಶಿಯಾಗಿದೆ. ಈ ರಾಶಿಯವರು ತುಂಬಾ ಸೂಕ್ಷ್ಮ ಗುಣವುಳ್ಳವರಾಗಿರುತ್ತಾರೆ. ಎಲ್ಲರನ್ನು ಪೋಷಿಸುವಂತವರಾಗಿತ್ತಾರೆ. ಹೊಸ ವರ್ಷ 2026ರಲ್ಲಿ ಕಟಕ ರಾಶಿಯಲ್ಲಿ ಹುಟ್ಟಿದವರ ಮೇಲೆ ಬೀರುವ ಪರಿಣಾಮಗಳು, ಅವರ ಬದುಕಿನ ಹಣಕಾಸು ಸ್ಥಿತಿಗತಿ, ಆರೋಗ್ಯ, ಅನಾರೋಗ್ಯ, ಪ್ರೀತಿ, ವ್ಯವಹಾರ ಜೀವನದ ವರ್ಷ ಭವಿಷ್ಯ, ಗುರುಬಲ ಪ್ರಭಾವದ ಮಾಹಿತಿ ಇಲ್ಲಿದೆ.
ಕಟಕ ರಾಶಿಯವರಿಗೆ ಹೊಸ ವರ್ಷವು ಉತ್ತಮ ಆರೋಗ್ಯ ತರಲಿದೆ. ಅಂದರೆ ಹಿಂದಿನ ವರ್ಷಕ್ಕಿಂತ 2026ರಲ್ಲಿ ಆರೋಗ್ಯ ಇವರ ಉತ್ತಮವಾಗಿರಲಿದೆ. ಯಾವುದೇ ನಕಾರಾತ್ಮಕ ಗ್ರಹಗಳ ಪ್ರಭಾವ ಇರುವುದಿಲ್ಲ. ಡಿಸೆಂಬರ್ 5ರ ನಂತರ ರಾಹು ಮತ್ತು ಕೇತುವಿನ ಪ್ರಭಾವ ಪ್ರಾರಂಭವಾಗುತ್ತದೆ. ಗುರುಬಲ ಕಡಿಮೆ ಆಗುವ ಕಾರಣ ಹೊಟ್ಟೆ ಮತ್ತು ಕೆಳ ಬೆನ್ನಿಗೆ ಸಂಬಂಧಿಸಿದ ಕೆಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು. ಕೊಂಚ ಅಸ್ವಸ್ಥತೆ ಉಂಟಾಗಬಹುದು. ಜೂನ್ 2 ಮತ್ತು ಅಕ್ಟೋಬರ್ 31ರ ನಡುವೆ ಗುರುಬಲ ಇರುವ ಕಾರಣ ನೀವು ಅಂದುಕೊಂಡ ಕೆಲಸಗಳು ಆಗಲಿವೆ.

ವರ್ಷದ ಆರಂಭದಿಂದ ಜೂನ್ 2ರವರೆಗೆ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ನಂತರ ಆರೋಗ್ಯ ಗಣನೀಯವಾಗಿ ಸುಧಾರಿಸುತ್ತದೆ. ಮತ್ತೊಂದೆಡೆ ಶನಿಯ ಸಂಚಾರ ಹೆಚ್ಚು ಅನುಕೂಲಕರವಾಗಿರುವುದಿಲ್ಲ. ಈ ವೇಳೆ ವ್ಯಾಯಾಮ ಮತ್ತು ಯೋಗ ಮಾಡುವುದು ಒಳಿತು. ಜನವರಿ 23 ರಿಂದ ಏಪ್ರಿಲ್ 2 ನಡುವೆ ಮತ್ತು ಆಗಸ್ಟ್ 2 ರಿಂದ ಸೆಪ್ಟೆಂಬರ್ 18ರವರೆಗೆ ಮಂಗಳ ಗ್ರಹವು ದುರ್ಬಲವಾಗುವ ನಿರೀಕ್ಷೆ ಇದೆ. ವಾಹನಗಳನ್ನು ಎಚ್ಚರಿಕೆಯಿಂದ ಓಡಿಸಬೇಕು. ಒಟ್ಟಾರೆ ಕರ್ಕಾಟಕ ರಾಶಿಯವರ ಆರೋಗ್ಯವು ಸರಾಸರಿಗಿಂತ ಉತ್ತಮವಾಗಿರಲಿದೆ.
ಕಟಕ ರಾಶಿಯವರ ಶಿಕ್ಷಣ ಭವಿಷ್ಯ
ಹೊಸ ವರ್ಷ ಕಟಕ ರಾಶಿಯವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಅಧಿಕ ಫಲಿತಾಂಶಗಳು ದೊರೆಯಲಿವೆ. ವರ್ಷದ ಆರಂಭದಿಂದ ಜೂನ್ ವರೆಗೆ ಗುರುಬಲದ ಸ್ಥಾನ ಬದಲಾಗಲಿದೆ. ಶಿಕ್ಷಣಕ್ಕೆ ಅನುಕೂಲಕರವೆಂದು ಪರಿಗಣಿಸಲಾಗುವುದಿಲ್ಲ. ಮನೆಯಿಂದ ಅಥವಾ ವಿದೇಶದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಗುರುವಿನಿಂದ ಸಕಾರಾತ್ಮಕ ಫಲಿತಾಂಶ ದೊರೆಯಲಿವೆ. ಜೂನ್ 2 ರಿಂದ ಅಕ್ಟೋಬರ್ 31ರವರೆಗೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಪ್ರಯೋಜನ ಆಗುತ್ತದೆ. ಸ್ಪರ್ಧಾತ್ಮಕ ಮನೋಭಾವದಿಂದ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಬೆಂಬಲ ಸಿಗಲಿದೆ. ಅಕ್ಟೋಬರ್ 31ರ ನಿಮಗೆ ಪೂರಕ ವಾತಾವರಣ ನಿರ್ಮಾಣವಾಗಲಿದ್ದು, ಉತ್ತಮ ಫಲಿತಾಂಶಗಳು ಬರುವ ನಿರೀಕ್ಷೆ ಇದೆ.
ವ್ಯವಹಾರದಲ್ಲಿ ಸರಾಸರಿ ಫಲಿತಾಂಶ
2026ರ ಕಟಕ ರಾಶಿ ಭವಿಷ್ಯ ಪ್ರಕಾರ, ವ್ಯವಹಾರವು ಒಟ್ಟಾರೆಯಾಗಿ ಈ ವರ್ಷ ಸರಾಸರಿಗಿಂತ ಉತ್ತಮವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಅಧಿಪತಿ ಶನಿಯು ಅದೃಷ್ಟದ ಮನೆಯಲ್ಲಿ ವಾಸಿಸುತ್ತಾನೆ. ಕೆಲವು ಅಡೆತಡೆಗಳು ಇದ್ದರೂ ನೀವು ಸ್ಥಿರವಾದ ಕಠಿಣ ಪರಿಶ್ರಮದ ಮೂಲಕ ಯಶಸ್ಸನ್ನು ಸಾಧಿಸುತ್ತೀರಿ ಎಂಬ ಸೂಚನೆ ಇದೆ. ಆದರೆ ಜನವರಿ 20 ರಿಂದ ಮೇ 17ರವರೆಗೆ ಶನಿ ತನ್ನದೇ ಆದ ನಕ್ಷತ್ರದಲ್ಲಿರುತ್ತಾನೆ. ಈ ಅವಧಿಯಲ್ಲಿ ಉತ್ತಮ ಫಲಿತಾಂಶಕ್ಕಾಗಿ ಹೆಚ್ಚು ಶ್ರಮಪಡಬೇಕಾಗುತ್ತದೆ. ಈ ಸಲಹೆಯನ್ನು ಪಾಲಿಸಬೇಕಾಗುತ್ತದೆ.
ಏಪ್ರಿಲ್ 11 ರಿಂದ ಏಪ್ರಿಲ್ 30 ರವರೆಗೆ ಬುಧ ಗ್ರಹವು ದುರ್ಬಲವಾಗಿರಲಿದೆ. ಸಣ್ಣ ಅಥವಾ ದೊಡ್ಡ ಹೂಡಿಕೆ ಮಾಡದಿರುವುದು ಒಳಿತು. ಮೇ 17 ರಿಂದ ಅಕ್ಟೋಬರ್ 9 ರವರೆಗೆ ವ್ಯವಹಾರಕ್ಕೆ ಸೂಕ್ತ ಕಾಲವಾಗಿದೆ. ಆಗ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.
ಆರ್ಥಿಕ ಜೀವನದ ಭವಿಷ್ಯ
ಕಟಕ ರಾಶಿಯ ವ್ಯಕ್ತಿಗಳು ಆರ್ಥಿಕ ಜೀವನವು ವರ್ಷವಿಡೀ ಮಿಶ್ರ ಫಲಿತಾಂಶದಿಂದ ಕೂಡಿರಲಿದೆ. 2026ರ ಆರಂಭದಲ್ಲಿ ಗುರು ಬಲ ಸಾಮಾನ್ಯವಾಗಿ ಅನುಕೂಲಕರ ಸ್ಥಾನದಲ್ಲಿರಲಿದೆ. ಜೂನ್ 2ರವರೆಗೆ ಹಣಕಾಸಿನ ವಿಷಯಗಳಿಗೆ ಹೆಚ್ಚು ಬೆಂಬಲ ಸಿಗುತ್ತದೆ. ಲಾಭದ ಹಾದಿಯಲ್ಲಿ ನೀವು ಸಾಗಲಿದ್ದೀರಿ. ಅನಿರೀಕ್ಷಿತವಾಗಿ ಹಣ ಪಡೆಯಬಹುದು. ಸಕಾರಾತ್ಮಕ ಫಲಿತಾಂಶ ಈ ವರ್ಷ ಸಿಗಲಿದೆ. ಅಕ್ಟೋಬರ್ 31ರವರೆಗೆ ಗುರುಬಲ ಪ್ರಭಾವ ಪ್ರತಿಕೂಲವಾಗಿರಲಿದೆ. ಒಟ್ಟಾರೆ ಮುಂದಿನ ವರ್ಷ ಹಣ, ಆದಾಯದ ವಿಚಾರದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ನೀವು ನೋಡಲಿದ್ದೀರಿ.

ಪ್ರೇಮ ಜೀವನದಲ್ಲಿ ಜಾಗರೂಕರಾಗಿರಿ
ಈ ರಾಶಿಯವರ ಪ್ರೇಮ ಜೀವನವು ವರ್ಷವಿಡೀ ಅನುಕೂಲಕರವಾಗಿರುತ್ತದೆ. ಗುರು ಬಲದ ಕಾರಣ ಜೂನ್ 2 ರವರೆಗೆ ಬಹಳ ಶುಭ ಸಂಯೋಜನೆ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ನಿಮ್ಮ ಪ್ರಣಯ ಜೀವನವು ಅಭಿವೃದ್ಧಿ ಹೊಂದುತ್ತದೆ. ಈ ವೇಳೆ ಹೊಸದಾಗಿ ವ್ಯಕ್ತಿಗಳು ಪ್ರೀತಿಯಲ್ಲಿ ಬೀಳಬಹುದು. ನೀವು ಪ್ರೇಮ ಜೀವನದಲ್ಲಿ ನಡೆಯುತ್ತಿರುವ ಯಾವುದೇ ಸಮಸ್ಯೆಗಳು ಬಗೆಹರಿಸಿಕೊಳ್ಳುವ ಸಾಧ್ಯತೆ ಇದೆ. ನಂತರ ಅಕ್ಟೋಬರ್ 31ರವರೆಗೆ ಗುರು ಬಲ ಪ್ರಭಾವ ಕಡಿಮೆ ಆಗುವ ಕಾರಣ ಪ್ರೇಮ ವಿಷಯಗಳು ದುರ್ಬಲಗೊಳ್ಳಬಹುದು. ಹೀಗಾಗಿ ಯಾವುದೇ ಪ್ರಮುಖ ಸಮಸ್ಯೆಗಳನ್ನು ನಿರ್ಲಕ್ಷಿಸುವಂತಿಲ್ಲ. ಸಂಗಾತಿ ದೂರವಿದ್ದರು ನೀವು ಕಾಳಜಿ ವಹಿಸಬೇಕು. ಈ ಬಗ್ಗೆ ಜಾಗರೂಕರಾಗಿರಬೇಕು.
ಕಟಕ ರಾಶಿಯವರಿಗೆ ಪ್ರೀತಿ ಮತ್ತು ಸಂಬಂಧಗಳಿಗೆ ಅನುಕೂಲಕರ ಸ್ಥಿತಿ ಒದಗಿಬರಲಿದೆ. ಪರಸ್ಪರ ತಿಳುವಳಿಕೆ ಮುಖ್ಯವಾಗಿರುತ್ತದೆ. ಗುರು ಬಲದ ಪ್ರಭಾವ 12 ತಿಂಗಳುಗಳಲ್ಲಿ 5 ತಿಂಗಳು ಕೊಂಚ ದುರ್ಬಲವಾಗಿರಲಿದೆ. ಆರೋಗ್ಯಕರ ಸಂಬಂಧಕ್ಕಾಗಿ ತಾಳ್ಮೆ ಮತ್ತು ಪ್ರಬುದ್ಧತೆಯಿಂದ ಕಾಪಾಡಿಕೊಳ್ಳಬೇಕಿದೆ.
ಸಮಸ್ಯೆಗಳಿಗೆ ಪರಿಹಾರಗಳು
ನಿಮ್ಮ ಹಣೆಯ ಮೇಲೆ ನಿಯಮಿತವಾಗಿ ಕೇಸರಿ ತಿಲಕ ಇರಬೇಕು. ಪ್ರತಿ ನಾಲ್ಕು ತಿಂಗಳಿಗೊಮ್ಮೆ 4 ತೆಂಗಿನಕಾಯಿಗಳನ್ನು ಸಿಪ್ಪೆಯೊಂದಿಗೆ (ಜಟ್ಟ ವಾಲೆ ನಾರಿನ ಜತೆ) ಹರಿಯುವ ನೀರಿನಲ್ಲಿ ಮುಳುಗಿಸಬೇಕು. ನಿಮ್ಮೊಂದಿಗೆ ಒಂದು ಸಣ್ಣ ಚದರ ಬೆಳ್ಳಿಯ ತುಂಡನ್ನು ಇಟ್ಟುಕೊಳ್ಳಿ. ಮಾನಸಿಕ ಶಾಂತಿ ಮತ್ತು ಭಾವನಾತ್ಮಕ ಸಮತೋಲನಕ್ಕಾಗಿ ನಾಲ್ಕು ಮುಖದ ರುದ್ರಾಕ್ಷಿ ಮಾಲೆ ಧರಿಸಬೇಕು.
-
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ












Click it and Unblock the Notifications