ಮೇಷ ವರ್ಷ ಭವಿಷ್ಯ : ಹರ್ಷದ ಸಮಯ ಅನುಭವಿಸಲು ಸಿದ್ಧರಾಗಿ

By: ಪಂಡಿತ್ ವಿಠ್ಠಲ ಭಟ್
Subscribe to Oneindia Kannada

ಹೊಸ ವರುಷ ಹೊಸ ಹರುಷ ಖಂಡಿತವಾಗಿ ತರುತ್ತಿದೆ, ಚಿಂತಿಸುವ ಅಗತ್ಯವಿಲ್ಲ. ನಿಮ್ಮ ದೊಡ್ಡದಾದ ಎಲ್ಲ ಸಮಸ್ಯೆಗಳು ಸಹ ಈ ಹೊಸ ವರುಷದ ಮೊದಲ ತಿಂಗಳಿನೊಂದಿಗೆ ಅಂತ್ಯವಾಗಲಿದೆ. ಬಹಳ ಮುಖ್ಯವಾಗಿ ಶತ್ರು ಬಾಧೆಗಳು ಅಂತ್ಯವಾಗಲಿದೆ. ಹಿಂದಿನ ವರುಷ ನೀವು ಅನುಭವಿಸಿದ ಆರೋಗ್ಯ ಬಾಧೆಗಳಿಗೆ ಸಂಪೂರ್ಣ ವಿರಾಮ ಆಲ್ಲದಿದ್ದರೂ ಸಹ ಅಲ್ಪ ವಿರಾಮ ಬೀಳುವ ಸಾಧ್ಯತೆ ಹೆಚ್ಚು ಇದೆ.

ಇನ್ನು ಪೂರ್ಣವಾಗಿ ಆರೋಗ್ಯಾಭಿವೃದ್ಧಿ ಆಗಲು ಈ ವರುಷದ ಸೆಪ್ಟೆಂಬರ್ ತಿಂಗಳು ಕಳೆಯಬೇಕಿದೆ. ಆದರೆ ಅಲ್ಲಿಯ ತನಕ ಸಹ ಹಿಂದಿನ ವರುಷದ ಪ್ರಮಾಣದಲ್ಲಿ ಆರೋಗ್ಯ ಹಾನಿ ಇರುವುದಿಲ್ಲ. ಅನಿವಾರ್ಯವಾಗಿ ಈ ಹಿಂದೆ ಮಾಡಿದ್ದ ಸಾಲಗಳನ್ನು ಈ ವರ್ಷ ಸಾಧ್ಯವಾದಷ್ಟು ತೀರಿಸುತ್ತೀರಿ ಎನ್ನುವುದೇ ಸಂತೋಷ. ಸ್ತ್ರೀಯರು ಯಾವುದೇ ಕಾರಣಕ್ಕೂ ಆಭರಣಗಳನ್ನು ಒತ್ತೆ ಇಡಬೇಡಿ. ವರ್ಷಾಂತ್ಯದವರೆಗೆ ಬಿಡಿಸಿಕೊಳ್ಳಲು ಆಗುವುದಿಲ್ಲ.[ಹನ್ನೆರಡು ರಾಶಿಗಳ ಗುಣ-ಸ್ವಭಾವ ಹೇಗಿರುತ್ತದೆ ಗೊತ್ತಾ?]

Aries

ಇನ್ನು ಹೊಸದಾಗಿ ಸಾಲ ಮಾಡ ಬೇಕಾದ ದುಃಸ್ಥಿತಿ ಬರುವುದು ಅಸಾಧ್ಯ. ಒಂದು ಪಕ್ಷ ಬಂದರೂ ಅದು ನಿಮ್ಮ ವಯಕ್ತಿಕ ಜಾತಕದ ಸಮಸ್ಯೆ ಆಗಬಹುದು. ಉದ್ಯೋಗ ನಿಮಿತ್ತ ಅಥವಾ ಇತರೆ ಯಾವುದೇ ಕಾರಣಗಳಿಂದಾಗಿ ವಿದೇಶ ಪ್ರಯಾಣ ಬಯಸುವವರು ಮಾತ್ರ ಸಾಧ್ಯವಾದರೆ ಈ ವರುಷದ ಸೆಪ್ಟೆಂಬರ್ ತನಕ ಕಾದರೆ ಉತ್ತಮ. ಕಾರಣ ಆ ತಿಂಗಳ ನಂತರವೇ ನಿಮಗೆ ಅವಕಾಶಗಳು ಹೆಚ್ಚು ಹಾಗೂ ಅರೋಗ್ಯ ಭಾಗ್ಯವೂ ಉತ್ತಮ.[ವರ್ಷ ಭವಿಷ್ಯ: ನರೇಂದ್ರ ಮೋದಿಗೆ 2017 ಹೇಗಿರುತ್ತೆ?]

ಇನ್ನು ಅವಿವಾಹಿತರಿಗೂ ವರ್ಷಾಂತ್ಯದಲ್ಲಿ ವಿವಾಹದ ಅವಕಾಶಗಳು ಹೆಚ್ಚಿವೆ. ಆದರೆ ವ್ಯಾಪಾರದಲ್ಲಿ ತೀವ್ರ ತರಹದ ನಷ್ಟ ಅನುಭವಿಸಿದರೂ ಉದ್ಯೋಗರಹಿತರಿಗೆ ಈ ವರ್ಷ ಸ್ವಲ್ಪ ಸಮಾಧಾನ ತರಲಿದೆ. ಅದರಲ್ಲಿಯೂ ಕಬ್ಬಿಣದ ವ್ಯಾಪಾರಿಗಳಿಗೆ ಹಾಗೂ ಗಣಕ ಯಂತ್ರ ಉದ್ಯೋಗಿಗಳಿಗೆ ದೊಡ್ಡ ಕಷ್ಟಗಳಿಂದ ಪಾರಾಗಿ ಬದುಕಿ ಬಾಳಿಸುವ ವರುಷವಿದು.

ಸಂತಾನ ಅಪೇಕ್ಷಿತ ದಂಪತಿಗೆ ಈ ವರ್ಷಾಂತ್ಯದಲ್ಲಿ ಶುಭ ಸಮಾಚಾರ. ವಿದ್ಯಾರ್ಥಿಗಳಿಗೆ ಮಾತ್ರ ಕಷ್ಟಗಳು ಸ್ವಲ್ಪ ಹಾಗೆಯೇ ಇರಲಿದ್ದು, ಓದಿನಲ್ಲಿ ಶ್ರಮ ಇನ್ನೂ ಜಾಸ್ತಿ ಬೇಕಾಗಲಿದೆ, ಕಾರಣ ನೀವು ಹಾಕುವ ಶ್ರಮಕ್ಕೆ ತಕ್ಕ ಪ್ರತಿಫಲ ಕಷ್ಟಸಾಧ್ಯ.[ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]
ಒಟ್ಟಾರೆ ವರ್ಷ ಫಲ 3/5

ಪರಿಹಾರ
ವೈದಿಕ : ಈ ವರುಷ ಸಾಧ್ಯವಾದರೆ "ರುದ್ರ ಹೋಮ" ಹಾಗೂ "ಗುರು ಶಾಂತಿ ಹವನ" ತಪ್ಪದೇ ಮಾಡಿಸಿ.
ಕ್ಷೇತ್ರ : ಶ್ರೀ ಕ್ಷೇತ್ರ ಮಂತ್ರಾಲಯಕ್ಕೆ ತಪ್ಪದೆ ಒಮ್ಮೆ ಹೋಗಿ. ನಿಮ್ಮ ಕೈಲಾದ ಸೇವೆ ಸಲ್ಲಿಸಿ ಬನ್ನಿ.
ರತ್ನ: ಪರಿಶುದ್ದವಾದ ಮಾಣಿಕ್ಯ ರತ್ನವನ್ನು ಶಾಸ್ತ್ರೋಕ್ತವಾಗಿ ತ್ರಿದಿನ ಸಂಸ್ಕರಿಸಿ, ಪೂಜಿಸಿ, ಬೆಳ್ಳಿಯಲ್ಲಿ ಧರಿಸಿ
ಸ್ತೋತ್ರ: ಪ್ರತಿ ದಿನ ಗುರು ಗ್ರಹದ ಆಷ್ಟೋತ್ತರವನ್ನು ವರ್ಷ ಪೂರ್ತಿ ಶ್ರದ್ಧೆಯಿಂದ ಪಠಿಸಿ

ತಿಂಗಳ ಭವಿಷ್ಯ
ಜನವರಿ: ನಿಮ್ಮ ಹೆಚ್ಚಿನ ಸಮಸ್ಯೆಗಳು ಈ ತಿಂಗಳು ಕೊನೆಗೊಳ್ಳಲಿದೆ. ಹೊಸದಾಗಿ ಈ ತಿಂಗಳು ಯಾರಿಗೂ ಸಾಲ ಕೊಡಲು ಹೋಗದಿರಿ.

ಫೆಬ್ರವರಿ: ಹಿಂದೆ ನಿಮ್ಮಿಂದಾದ ತಪ್ಪುಗಳಿಗೆ ಈ ತಿಂಗಳಿನಲ್ಲಿ ಕ್ಷಮಾಪಣೆ ಸಿಗಲಿದೆ. ದೊಡ್ಡ ಪ್ರಮಾಣದಲ್ಲಿ ಹಣದ ಹೂಡಿಕೆ ಈ ತಿಂಗಳೂ ಬೇಡ.

ಮಾರ್ಚ್: ಪೂರ್ಣಪ್ರಮಾಣದಲ್ಲಿ ಅಲ್ಲದಿದ್ದರೂ ನಿಮ್ಮ ಪ್ರಾಮಾಣಿಕತೆಯನ್ನು ಸ್ವಲ್ಪ ಆದರೂ ಇತರರು ಗುರುತಿಸುತ್ತಾರೆ, ಆದರೆ ಅದನ್ನು ನಿಮ್ಮ ಹಿರಿಯರಿಗಾಗಲಿ, ಮೇಲಧಿಕಾರಿಗಳಿಗಾಲಿ ಈಗಲೇ ತಿಳಿಸುವುದಿಲ್ಲ.

ಏಪ್ರಿಲ್: ಆರೋಗ್ಯ ಬಾಧೆ ಅದರಲ್ಲಿಯೂ ಹೊಟ್ಟೆಗೆ ಸಂಬಂಧಪಟ್ಟ ಆರೋಗ್ಯ ಸಮಸ್ಯೆ. ಅಸಿಡಿಟಿ, ಅಜೀರ್ಣ ಇತ್ಯಾದಿಗಳಿಂದ ಬಳಲುತ್ತೀರಿ. ಆಹಾರದ ನಿಯಮಿತ ಸಮಯ ಹಾಗೂ ಗುಣಮಟ್ಟದ ವಿಚಾರದಲ್ಲಿ ಎಚ್ಚರವಾಗಿ ಇದ್ದರೆ ಸಮಸ್ಯೆ ಪರಿಹಾರ.

ಮೇ: ಆರ್ಥಿಕ ವಿಚಾರಗಳಿಂದಾಗಿ ಮಾನಸಿಕವಾಗಿ ಸ್ವಲ್ಪ ಕುಗ್ಗಬಹುದು. ಆದರೆ ಹತಾಶರಾಗದಿರಿ. ಕಾರಣ ನಿಮ್ಮ ಪೂರ್ಣವಾದ ಉತ್ತಮ ಸಮಯ ಸದ್ಯದಲ್ಲಿಯೇ ಪ್ರಾರಂಭವಾಗಲಿದೆ ಅದಕ್ಕಾಗಿ ಇನ್ನೂ ಕೆಲ ತಿಂಗಳು ಕಾಯಬೇಕು.

ಜೂನ್: ಈ ತಿಂಗಳು ನಿಮ್ಮ ಆದರ್ಶಗಳಿಂದಾಗಿ ನಿಮಗೆ ಸಮಾಜದಲ್ಲಿ ಗೌರವ ಹೆಚ್ಚಳವಾಗುತ್ತದೆ, ಆದರೆ ತೀರದ ಆಸೆ- ಆಕಾಂಕ್ಷೆಗಳು ಹಾಗೇ ಮನದಲ್ಲಿ ಉಳಿದು ಬಿಡುವುದರಿಂದ ಬೇಸರ ಸಾಮಾನ್ಯ.

ಜುಲೈ: ಮಾಡುತ್ತಿರುವ ಉದ್ಯೋಗ ಅಥವಾ ವ್ಯಾಪಾರದಲ್ಲಿ ಗಮನಾರ್ಹ ಬದಲಾವಣೆ ಸಾಧ್ಯವಿದೆ. ಅಥವಾ ಸ್ಥಾನ ಪಲ್ಲಟದ ಸಾಧ್ಯತೆಗಳಿವೆ, ಅದರಿಂದಾಗಿ ನೀವು ಈ ಮೊದಲೇ ಹಾಕಿಕೊಂಡಿದ್ದ ಚಿತ್ರಣ ಸ್ವಲ್ಪ ಏರುಪೇರಾಗಬಹುದು.

ಆಗಸ್ಟ್: ನಿಮಗೆ ಮೋಸ ಮಾಡುವವರ ಸಂಖ್ಯೆಯಲ್ಲಿ ಏನೂ ಬದಲಾವಣೆಗಳಿಲ್ಲ. ಎಲ್ಲಾ ಮನದಲ್ಲಿ ಕತ್ತಿ ಮಸೆಯುತ್ತಾ ಇದ್ದಾರೆ ಎಂಬ ಭಾವನೆ ಬರುತ್ತದೆ. ಆದರೆ ದೇಹಿ ಎಂದು ನಿಮ್ಮ ಬಳಿ ಬರುವವರ್ಯಾರೂ ಬರಿಗೈಲಿ ಹೋಗುವುದಿಲ್ಲ.

ಸೆಪ್ಟೆಂಬರ್: ನಿಮಗೆ ಸಿಗಬೇಕಾದ ಸಹಾಯ ಸನಿಹದಲ್ಲಿಯೇ ಇದೆ. ಆದರೆ ನಿಮಗೆ ಅದನ್ನು ಕಷ್ಟಪಟ್ಟು ತಲುಪ ಬೇಕಾದ ಅನಿವಾರ್ಯ ಇಲ್ಲ. ಸ್ವಲ್ಪ ತಾಳ್ಮೆ ಇರಲಿ. ಎಲ್ಲ ತಾನಾಗಿಯೇ ನಿಮ್ಮ ಕೈ ಸೇರುತ್ತದೆ.

ಅಕ್ಟೋಬರ್: ಅವಿವಾಹಿತರಿಗೆ ವಿವಾಹದ ಮಾತುಕತೆ ಪ್ರಾರಂಭವಾಗುತ್ತದೆ. ಉದ್ಯೋಗದಲ್ಲಿಯೂ ದೊಡ್ಡ ಜವಾಬ್ದಾರಿ ನಿಮ್ಮ ಹೆಗಲ ಮೇಲೆ ಬೀಳುವ ಸಾಧ್ಯತೆಗಳಿವೆ.

ನವೆಂಬರ್: ಸ್ವಲ್ಪ ಮನಸ್ಸು ಮಾಡಿದರೂ ನೂತನ ವಾಹನ ಖರೀದಿ ಯೋಗವಿದೆ, ಶತ್ರುಗಳ ಸಂಖ್ಯೆ ಅಥವಾ ನಿಮ್ಮಲ್ಲಿ ಶತ್ರುತ್ವದ ಭಾವನೆಗಳು ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗಲಿದೆ.

ಡಿಸೆಂಬರ್: ರಾಜಾರೋಷವಾಗಿ ತಲೆಯೆತ್ತಿ ನಡೆಯುವ ಸಮಯ. ಆದರೆ ಗಮನಿಸಿ ಅಹಂಕಾರ ಅರಿವಿಲ್ಲದೇ ಸೇರಿ ಬಿಡುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Yearly horoscope for Aries zodiac sign by astrologer Pandit Vittala Bhat.
Please Wait while comments are loading...