ಹಸ್ತ ಸಾಮುದ್ರಿಕಾ: ನಿಮ್ಮ ಹೃದಯ ರೇಖೆ ಏನನ್ನು ಸೂಚಿಸುತ್ತದೆ?

Recommended Video

      Palmistry:Heart Line On The Palm Defines Your Personality | Oneindia Kannada

      ಪ್ರೀತಿಸಿ ಮದುವೆಯಾದವರು, ಬಹಳ ವರ್ಷ ಕಾದು, ಹೆತ್ತವರನ್ನು- ಸಮಾಜವನ್ನು ಎದುರು ಹಾಕಿಕೊಂಡು ಮದುವೆಯಾದವರು ಸಹ ವೈಮನಸ್ಯ ಎದುರಾಗಿ ಬೇರೆಯಾಗಿದ್ದಿದೆ. ಕೆಲ ಸಲ ಯಾರೇನು ಅಂದುಕೊಂಡಾರು ಎಂಬ ಚಿಂತೆಯಲ್ಲಿ ಹೇಗೋ ಸಹಿಸಿಕೊಂಡು ಬದುಕು ನಡೆಸುತ್ತಿರುವವರು ಇರುತ್ತಾರೆ.

      ಪ್ರೀತಿ- ವೈವಾಹಿಕ ವಿಚಾರವಾಗಿ ಹಸ್ತ ಸಾಮುದ್ರಿಕಾ ಶಾಸ್ತ್ರ ಏನು ಹೇಳುತ್ತದೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಸಲಾಗುತ್ತಿದೆ. ಹಸ್ತ ಸಾಮುದ್ರಿಕಕ್ಕೆ ಸಂಬಂಧಿಸಿದಂತೆ ಹೃದಯ ರೇಖೆ ಮತ್ತು ಬುದ್ಧಿ ರೇಖೆ ಎಂಬುದು ಬಹಳ ಮುಖ್ಯವಾದದ್ದು. ಹೃದಯ ರೇಖೆಯನ್ನು ಪ್ರೀತಿ ರೇಖೆ ಅಂತಲೂ ಕರೆಯಲಾಗುತ್ತದೆ.

      ಈ ರೇಖೆ ಮೂಲಕ ನಿಮ್ಮ ಆರೋಗ್ಯ, ಭಾವನಾತ್ಮಕ ವಿಚಾರ, ಇತರರ ಜತೆಗಿನ ದೈಹಿಕ ಸಂಬಂಧಗಳನ್ನು ತಿಳಿಯಬಹುದು. ಈ ರೇಖೆಯು ಹೃದಯದ ಆರೋಗ್ಯ ಬಗ್ಗೆ ಕೂಡ ಸುಳಿವನ್ನು ನೀಡುತ್ತದೆ. ಈ ರೇಖೆ ಮೂಲಕ ಭವಿಷ್ಯದಲ್ಲಿ ನಿಮಗೆ ಏನಾಗುತ್ತದೆ ಎಂಬುದನ್ನು ಖಚಿತವಾಗಿ ಹೇಳಬಹುದು.

      ಹೃದಯ ರೇಖೆಯು ಯಾವುದೇ ವ್ಯಕ್ತಿಗೆ ಮುಖ್ಯವಾದದ್ದು. ನಿಮ್ಮ ಬಲಗೈನಲ್ಲಿ ಕಿರು ಬೆರಳಿನ ಕೆಳಗೆ ಎಡದಿಂದ ಬಲಕ್ಕೆ ಸಾಗಿರುವ ರೇಖೆಯೇ ಹೃದಯ ರೇಖೆ. ಕೆಲ ಸಂದರ್ಭಗಳಲ್ಲಿ ಅಂಗೈನ ಹೊರಗಿನವರೆಗೂ ಚಾಚಿರುವ ಅಥವಾ ಹೊರಗಿನಿಂದ ಆರಂಭವಾದ ರೇಖೆಯನ್ನೂ ಕಾಣಬಹುದು. ಇರಲಿ, ಈ ರೇಖೆಯ ಮಹತ್ವ ಮತ್ತು ರೇಖೆ ಹೇಗಿದ್ದರೆ ಏನು ಫಲ ಎಂಬುದನ್ನು ತಿಳಿಯುವುದಕ್ಕೆ ಮುಂದೆ ಓದಿ.

      ವಿವಾಹ ಜೀವನ

      ವಿವಾಹ ಜೀವನ

      ಹಸ್ತ ಸಾಮುದ್ರಿಕಾ ಶಾಸ್ತ್ರದ ಪ್ರಕಾರ, ಗಂಡ- ಹೆಂಡತಿಗೆ ಒಂದೇ ರೀತಿಯ ಹೃದಯ ರೇಖೆ ಇದ್ದರೆ ಅದು ಯಶಸ್ವಿ ವಿವಾಹ ಆಗುತ್ತದೆ. ಒಂದೇ ರೀತಿಯದ್ದು ಅಂತ ಗೊತ್ತಾಗುವುದು ಹೇಗೆ ಅಂದರೆ, ರೇಖೆ ಆರಂಭವಾದ ರೀತಿ ಹಾಗೂ ಅದು ಕೊನೆಗೊಂಡಿರುವ ರೀತಿ ಎರಡನ್ನೂ ಗಮನಿಸಿದರೆ ಗೊತ್ತಾಗುತ್ತದೆ.

      ಬಾಗಿರುವ ಹೃದಯ ರೇಖೆ

      ಬಾಗಿರುವ ಹೃದಯ ರೇಖೆ

      ಬಾಗಿದಂತೆ ಹೃದಯ ರೇಖೆ ಇರುವವರು ಬಹಳ ರೊಮ್ಯಾಂಟಿಕ್ ಆದ ಸ್ವಭಾವ ಹೊಂದಿರುತ್ತಾರೆ. ಅವರ ಪ್ರೀತಿಯನ್ನು ಹಾಗೆಲ್ಲ ಸುಮ್ಮ ಸುಮ್ಮನೆ ತೋರಗೊಡುವುದಿಲ್ಲ. ಆದರೆ ಪ್ರೀತಿಯನ್ನು ತೋರಿಸಿಕೊಳ್ಳಬೇಕು ಅಂತ ಅವರಿಗೇ ಅನ್ನಿಸಿದರೆ ಆಕ್ರಮಣಕಾರಿ ಧೋರಣೆ ಅವರದಾಗಿರುತ್ತದೆ.

      ನೇರ ಹೃದಯ ರೇಖೆ

      ನೇರ ಹೃದಯ ರೇಖೆ

      ಈ ರೀತಿ ನೇರ ಹೃದಯ ರೇಖೆ ಇರುವವರು ಪ್ರಣಯದ ವಿಚಾರದಲ್ಲಿ ತುಂಬ ಆಸಕ್ತಿ ವ್ಯಕ್ತಪಡಿಸಲ್ಲ. ಅಂದರೆ ಅವರಾಗಿಯೇ ಆಸಕ್ತಿ ತೋರುವುದಿಲ್ಲ. ಎದುರಿನವರೇ ಇವರ ಬಳಿ ಪ್ರೀತಿ ನಿವೇದನೆ ಮಾಡಬೇಕಾಗುತ್ತದೆ.

      ಢಾಳಾದ ಬಾಗಿದ ರೇಖೆ

      ಢಾಳಾದ ಬಾಗಿದ ರೇಖೆ

      ಢಾಳಾದ ಬಾಗಿದ ಹೃದಯ ರೇಖೆಯು ತೋರುಬೆರಳು ಹಾಗೂ ಮಧ್ಯದ ಬೆರಳಿನ ಮಧ್ಯೆ ಕೊನೆಗೊಂಡರೆ ಅಂಥ ವ್ಯಕ್ತಿಗೆ ತೀವ್ರ ಹಾಗೂ ಪ್ರಬಲವಾದ ಲೈಂಗಿಕ ಆಸಕ್ತಿಗಳಿರುತ್ತವೆ.

      ತೋರು ಬೆರಳಿನಡಿ ರೇಖೆ ಅಂತ್ಯ

      ತೋರು ಬೆರಳಿನಡಿ ರೇಖೆ ಅಂತ್ಯ

      ಯಾರಿಗೆ ಹೃದಯ ರೇಖೆಯು ತೋರು ಬೆರಳಿನ ಅಡಿಯಲ್ಲಿ ಅಂತ್ಯವಾಗುತ್ತದೋ ಅಂತಹವರು ಸ್ನೇಹಿತರು ಹಾಗೂ ಸಂಗಾತಿ ಆಯ್ಕೆ ವಿಚಾರದಲ್ಲಿ ತುಂಬ ನಿರ್ದಿಷ್ಟವಾಗಿರುತ್ತಾರೆ.

      ಮಧ್ಯದ ಬೆರಳ ಕೆಳಗೆ ರೇಖೆ ಕೊನೆ

      ಮಧ್ಯದ ಬೆರಳ ಕೆಳಗೆ ರೇಖೆ ಕೊನೆ

      ಯಾರಿಗೆ ಹೃದಯ ರೇಖೆಯು ಮಧ್ಯದ ಬೆರಳಿನ ಕೆಳಗೆ ಕೊನೆಯಾಗುತ್ತದೋ ಅಂಥವರು ಅಪರೂಪ. ಇಂತಹ ವ್ಯಕ್ತಿಗಳ ಜತೆಗೆ ಒಡನಾಟಕ್ಕೆ ಬರುವವರು ಇವರನ್ನು ಬಹಳ ಪ್ರೀತಿ ಮಾಡುತ್ತಾರೆ.

      ಕವಲೊಡೆದ ಹೃದಯ ರೇಖೆ

      ಕವಲೊಡೆದ ಹೃದಯ ರೇಖೆ

      ಒಂದು ವೇಳೆ ಹೃದಯ ರೇಖೆಯು ಎರಡು- ಮೂರು ಕವಲೊಡೆದಿದ್ದರೆ ಇಂಥವರ ಭಾವನೆಗಳಿಗೆ ಹೆಚ್ಚು ಮುಖಗಳಿರುತ್ತವೆ. ಅದರರ್ಥ ಇವರ ಭಾವನೆಗಳಲ್ಲಿ ಬದಲಾವಣೆಗಳು, ಏರಿಳಿತಗಳು ಇರುತ್ತವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+