Weekly Horoscope: ಜ.5ರಿಂದ 12ರವರೆಗೆ ವಾರ ಭವಿಷ್ಯ: ಈ ರಾಶಿಗೆ ಭರ್ಜರಿ ಲಾಭ, ಬದುಕು ಬಂಗಾರ
ವರ್ಷದ ಮೊದಲ ವಾರ ಪೂರ್ಣಗೊಂಡು ಎರಡನೇ ವಾರ ಆರಂಭವಾಗುತ್ತಿದೆ. ಕ್ರೋಧಿ ನಾಮ ಸಂವತ್ಸರ ದಕ್ಷಿಣಾಯನ ಹೇಮಂತ ಋತು ಪುಷ್ಯಮಾಸದ ಶುಕ್ಲಪಕ್ಷದ ಷಷ್ಠಿಯಿಂದ ಚತುರ್ದಶಿಯವರೆಗೆ 12 ರಾಶಿಗಳ ಭವಿಷ್ಯ ಹೇಗಿರಲಿದೆ ಎಂದು ಜ್ಯೋತಿಷ್ಯ ಶಾಸ್ತ್ರದ ಮೂಲಕ ತಿಳಿಯಬಹುದು. ಹಾಗಾದರೆ 05.01.25 ರಿಂದ 12.01.25 ರವರೆಗೆ ಅಂದರೆ ಚಂದ್ರನ ಸಂಚಾರ ಪೂರ್ಭಾಭಾದ್ರ ನಕ್ಷತ್ರದಿಂದ ಆರಿದ್ರಾ ನಕ್ಷತ್ರದವರೆಗೆ ದ್ವಾದಶಿ ರಾಶಿಗಳ ಭವಿಷ್ಯ ಹೇಗಿದೆ ಎಂದು ಈಗ ತಿಳಿಯೋಣ.

ಮೇಷರಾಶಿ
ಹನ್ನೊಂದನೇ ಮನೆಯಲ್ಲಿ ಶುಕ್ರ ಶನಿ ಯುತಿಯೋಗದಲ್ಲಿಇದ್ದಾರೆ. ಇದು ನಿಮ್ಮ ಜೀವನದಲ್ಲಿ ಭಾರಿ ಬದಲವಣೆ ತರಲಿದೆ. ಕಾಯುತ್ತಿದ್ದ ಫಲಪಕ್ವವಾಗಿ ನಿಮ್ಮ ಕೈಸೇರಲಿದೆ. ಒಂಬತ್ತನೇ ಮನೆಯಲ್ಲಿ ಸೂರ್ಯ ಬುಧ ಸಹ ನಿಮಗೆ ಬೆಂಬಲವಾಗಿ ಇದ್ದಾರೆ. ಆರನೇ ಮನೆಯ ಕೇತು ಎರಡನೇ ಮನೆಯ ಗುರು ಧನಲಾಭ ವನ್ನು ಕೊಟ್ಟು ಹಿಡಿದ ಕೆಲಸಗಳನ್ನು ಸುಲಭ ಮಾಡಿಕೊಡುತ್ತಾರೆ.

ವೃಷಭರಾಶಿ
ಹನ್ನೊಂದನೇ ಮನೆಯಲ್ಲಿ ರಾಹು ಮೂರನೇ ಮನೆಯಲ್ಲಿ ಕುಜ ನಿಮ್ಮ ಶಕ್ತಿಯನ್ನು ಹೆಚ್ಚು ಮಾಡುತ್ತಾರೆ. ಕ್ಷೇತ್ರದರ್ಶನ ಮಾಡುವಿರಿ. ಮನಸ್ಸಿಗೆ ತಂಪಾಗುವಂತಹ ಘಟನೆಗಳು ನಡೆಯಲಿವೆ. ಮುಂದಿನ ದಿನಗಳು ನಿಮಗೆ ಶುಭದಾಯಕವಾಗಿ ಇರುವುದರಿಂದ ಹೊಸ ಯೋಜನೆಗಳನ್ನು ಹಾಕಿಕೊಳ್ಳಬಹುದು. ಅವಿವಾಹಿತರಿಗೆ ವಿವಾಹ ಭಾಗ್ಯ ಇದೆ.

ಮಿಥುನರಾಶಿ
ಒಂಬತ್ತನೆಯ ಮನೆಯಲ್ಲಿ ಶುಕ್ರ, ಏಳನೇ ಮನೆಯಲ್ಲಿ ಬುಧ ಇಬ್ಬರೂ ನಿಮಗೆ ಶುಭಫಲಗಳನ್ನು ಕೊಡುತ್ತಾರೆ. ಸೂರ್ಯ ಬುಧ ಒಟ್ಟಿಗೆ ಇರುವುದು ಬುಧಾದಿತ್ಯ ಯೋಗ. ಅಂದರೆ ಮಾತಿನಿಂದ ಲಾಭ ಇದೆ. ರಾಜಕಾರಣಿಗಳು, ಜಾಹಿರಾತು, ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುವವರಿಗೆ ಲಾಭ ಇದೆ.

ಕಟಕರಾಶಿ
ಆರನೇ ಮನೆಯಲ್ಲಿ ಸೂರ್ಯ ಇರುವುದು ನಿಮಗೆ ಸರ್ಕಾರದಿಂದ ಲಾಭ, ಬ್ಯಾಂಕ್ ಗಳಿಂದ ಲೋನ್ ಸಿಗುವುದು ಮುಂತಾದ ಸರ್ಕಾರಿ ಕೆಲಸಗಳು ಸುಲಭ ಆಗುತ್ತದೆ. ಎಂಟನೇ ಮನೆಯಲ್ಲಿ ಶುಕ್ರ ಕೂಡ ಶುಭಫಲಗಳನ್ನು ಕೊಡುತ್ತಾನೆ. ಇನ್ನು ಕೆಲವೇ ದಿನಗಳಲ್ಲಿ ಅಷ್ಟಮ ಶನಿಯ ಪ್ರಭಾವ ಮುಗಿದು ನೀವು ನಿರಾಳ ಆಗುತ್ತೀರಿ. ಹೊಸ ಅವಕಾಶಗಳು ದೊರೆಯಲಿದೆ. ಮೂರನೇ ಕೇತುವಿನಿಂದ ಧನಲಾಭ ಇದೆ.

ಸಿಂಹರಾಶಿ
ಯಾವ ಗ್ರಹವೂ ಕೈ ಹಿಡಿಯುತ್ತಿಲ್ಲ. ಅಷ್ಟಮ ಶನಿಯ ಪ್ರಭಾವ ಇನ್ನೇನು ಪ್ರಾರಂಭವಾಗುತ್ತದೆ. ಸರಾಗವಾಗಿ ನಡೆಯುವ ಕಾಲುಗಳಿಗೆ ಎಡರು ತೊಡರು ಎದುರಾಗುತ್ತದೆ. ಎಲ್ಲ ಕೆಲಸಗಳು ಅರ್ಧರ್ಧ ಕ್ಕೇ ನಿಂತುಬಿಡುತ್ತದೆ. ಒತ್ತಡಗಳು ಹೆಚ್ಚಾಗುತ್ತದೆ. ಯಾವುದೂ ಏನೂ ಆಗದಂಥ ಪರಿಸ್ಥಿತಿ. ತಲೆ ಬ್ಲಾಂಕ್ ಆದಂತೆ, ಬುದ್ಧಿ ಓಡದಂತೆ ಸಪ್ಪೆಯಾಗುತ್ತೀರಿ. ಮನೆದೇವರನ್ನು ನಂಬಿ. ಮನೆದೇವರ ಸ್ತೋತ್ರ ಪ್ರಾರ್ಥನೆ ಮಾಡಿ.ಯಾವುದಕ್ಕೂ ಎದೆಗುಂದಬೇಡಿ. ಕಾಲಕ್ರಮೇಣ ಸಮಸ್ಯೆಗಳಿಗೆ ಪರಿಹಾರವೂ ಒದಗಿ ಬರುತ್ತದೆ ಸಹನೆ ಇರಬೇಕು.

ಕನ್ಯಾರಾಶಿ
ಈಗ ನಿಮಗಿರುವ ಶನಿಬಲ ಮುಗಿಯುತ್ತ ಬರುತ್ತಿದೆ. ಇದುವರೆಗೆ ಎಲ್ಲ ಕೆಲಸ ಸರಾಗವಾಗಿ ನಡೆಯುತ್ತಿತ್ತು ಈಗ ಅಡೆತಡೆಗಳು ಎದುರಾಗುತ್ತದೆ. ಇನ್ನು ಕೆಲವೇ ದಿನಗಳಲ್ಲಿ ಕೇತು ನಿಮ್ಮ ರಾಶಿಯನ್ನು ಬಿಟ್ಟು ಸಿಂಹರಾಶಿಗೆ ಪ್ರವೇಶವಾಗಿ, ರಾಹು ಆರನೇ ಮನೆಗೆ ಬಂದಾಗ ನಿಮಗೆ ಶುಭಫಲಗಳು ಸಿಗುತ್ತದೆ. ಈಗ ನಾಲ್ಕನೇ ಮನೆಯಲ್ಲಿ ಬುಧ ಸೂರ್ಯ ಇಬ್ಬರೂ ನಿಮಗೆ ಒಳಿತು ಮಾಡುತ್ತಾರೆ. ಒಂಬತ್ತನೇ ಮನೆಯ ಗುರು ಕೂಡ ನಿಮ್ಮ ಸಹಾಯಕ್ಕೆ ಇದ್ದಾನೆ.

ತುಲಾರಾಶಿ
ಈಗ ಸಧ್ಯದಲ್ಲಿ ಯಾವುದೇ ಗ್ರಹಬಲ ಇಲ್ಲದಿದ್ದರೂ ಕೆಲವೇ ದಿನಗಳಲ್ಲಿ ಪಂಚಮ ಶನಿಯಿಂದ ಮುಕ್ತರಾಗಿ ಶನಿಯ ಬಲವನ್ನು ಪಡೆಯುತ್ತೀರಿ. ಮುಂದಿನ ದಿನಗಳು ನಿಮಗೆ ಒಳ್ಳೆಯ ಫಲಗಳನ್ನು ನೀಡಲಿದೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ಹೊಸ ಕೆಲಸ ಸಿಗಬಹುದು ವಿದೇಶ ಪ್ರಯಾಣ ಆಗಬಹುದು. ವೃತ್ತಿಯಲ್ಲಿ ಯಶಸ್ಸು, ಉನ್ನತಿ. ಎಲ್ಲವೂ ಈಗಲೇ ನಿಮ್ಮ ಅನುಭವಕ್ಕೆ ಬರುತ್ತದೆ. ಪಾಸಿಟಿವ್ ಗಾಳಿ ಬೀಸಲು ಪ್ರಾರಂಭವಾಗಿದೆ. ನಿಮ್ಮ ಯೋಜನೆಗಳನ್ನು ತಯಾರಿಸಿ ಇಟ್ಟುಕೊಳ್ಳಿ.

ವೃಶ್ಚಿಕರಾಶಿ
ಪಂಚಮ ಶನಿ ಆಗಲೇ ತನ್ನ ಪ್ರಭಾವವನ್ನು ತೋರಿಸಲು ಪ್ರಾರಂಭಿಸಿದೆ. ಎಡರುತೊಡರುಗಳು ಎದುರಾಗುತ್ತಿವೆ. ಎಲ್ಲದರಲ್ಲೂ ಸಣ್ಣಸಣ್ಣ ಕಿರುಕುಳ, ಮಾನಸಿಕ ಅಶಾಂತಿ ತಲೆದೋರುತ್ತದೆ. ಗುರುಬಲ ಇದ್ದು ಮನೆಯಲ್ಲಿ ಸಂಭ್ರಮದ ವಾತಾವರಣ ಇದ್ದರೂ ಆಗಾಗ ಮೋಡ ಕವಿದಂತೆ ಆಗುತ್ತದೆ. ಎರಡನೇ ಮನೆಯಲ್ಲಿ ಬುಧ, ಸೂರ್ಯ, ನಾಲ್ಕನೇ ಮನೆಯಲ್ಲಿ ಶುಕ್ರ ನಿಮಗೆ ಕೊಂಚಮಟ್ಟಿಗೆ ಶಕ್ತಿ ಕೊಡುತ್ತಾರೆ. ವೃತ್ತಿಯಲ್ಲಿ ಒತ್ತಡ ಇರುತ್ತದೆ. ಎಲ್ಲವನ್ನೂ ಸಹನೆಯಿಂದ ನಿಭಾಯಿಸಿ.

ಧನಸ್ಸುರಾಶಿ
ಈಗ ನಿಮ್ಮ ರಾಶಿಯಲ್ಲಿ ಬುಧ ಸೂರ್ಯ ಇದ್ದು ಕೇಂದ್ರ ತ್ರಿಕೋಣಾಧಿಪತಿ ಯೋಗ ಆಗಿದೆ. ಇದು ನಿಮಗೆ ಅದೃಷ್ಟವನ್ನು ತರುತ್ತದೆ. ಮೂರನೇ ಮನೆಯಲ್ಲಿ ಶನಿ ಹಣದ ಹರಿವನ್ನು ಉತ್ತಮಪಡಿಸುತ್ತಾನೆ. ಆರನೇ ಮನೆಯಲ್ಲಿ ಗುರು ಹಾಗೂ ಎಂಟನೆಯ ಕುಜ ನಿಮಗೆ ಶುಭಕಾರಕರಲ್ಲ. ಆರೋಗ್ಯ ಏರುಪೇರು ಆಗಬಹುದು ಜಾಗ್ರತೆ ವಹಿಸಿ. ನಾಲ್ಕನೇ ಮನೆಯಲ್ಲಿ ರಾಹು ಕೂಡ ಶುಭಕಾರಕನಲ್ಲ. ಮುಂದಿನ ದಿನಗಳಲ್ಲಿ ಗುರು ಏಳನೇ ಮನೆಗೆ ಬಂದಾಗ ಶುಭಫಲಗಳನ್ನು ಪಡೆಯುತ್ತೀರಿ.

ಮಕರರಾಶಿ
ಐದನೇ ಮನೆಯಲ್ಲಿ ಗುರು, ಮೂರನೇ ಮನೆಯಲ್ಲಿ ರಾಹು ನಿಮಗೆ ಶಕ್ತಿಯನ್ನೂ ಯಶಸ್ಸನ್ನೂ ಕೊಡುತ್ತಾರೆ. ನೀವು ಕೈಹಾಕಿದ ಕೆಲಸಗಳಲ್ಲಿ ಜಯ ಲಭಿಸುತ್ತದೆ. ಯಶಸ್ವಿಯಾಗುತ್ತದೆ. ಕೆಲವೇ ದಿನಗಳಲ್ಲಿ ಸಾಡೆಸಾತಿ ಶನಿ ಯಿಂದ ಸಹ ಮುಕ್ತರಾಗುತ್ತೀರಿ. ಇದು ನಿಮಗೆ ಬಹುದೊಡ್ಡ ಬದಲಾವಣೆ ತರಲಿದೆ. ನಿಮ್ಮ ಕಷ್ಟಗಳ ಕತ್ತಲೆ ಕಳೆದು ಹೊಸ ಬೆಳಕು ಮೂಡುತ್ತದೆ. ಈಗ ಎರಡನೇ ಮನೆಯಲ್ಲಿ ಶುಕ್ರ ಇದ್ದು ಧನಾಗಮನ ವೃದ್ಧಿಸುತ್ತಾನೆ.

ಕುಂಭರಾಶಿ
ಒಳ್ಳೆಯ ದಿನಗಳಿಗಾಗಿ ಇನ್ನೂ ಕಾಯಬೇಕು. ಕೆಲವೇ ದಿನಗಳಲ್ಲಿ ಸಾಡೆಸಾತಿ ಶನಿಯ ಕೊನೆಯ ಹಂತಕ್ಕೆ ಬರುತ್ತೀರಿ. ನಿಮ್ಮ ದಾರಿ ಸುಗಮವಾಗಲಿದೆ. ಈಗ ಹನ್ನೊಂದನೇ ಮನೆಯಲ್ಲಿ ಸೂರ್ಯ ಬುಧ ಇದ್ದು ಸರ್ಕಾರಿ ಕೆಲಸಗಳು ಸುಲಭವಾಗಿ ನೆರವೇರುತ್ತದೆ. ಬ್ಯಾಂಕಿಂಗ್/ ಮಾರ್ಕೆಟಿಂಗ್ ಕ್ಷೇತ್ರದವರಿಗೆ ಲಾಭ ಇದೆ. ನಿಮ್ಮ ರಾಶಿಯಲ್ಲೇ ಶುಕ್ರ ಇರುವುದೂ ಸಹ ನಿಮಗೆ ಶುಭವನ್ನು ತರುತ್ತದೆ. ಆರನೇ ಮನೆಯಲ್ಲಿ ಕುಜ ನಿಮ್ಮ ಧೈರ್ಯ ಸಾಹಸ ವನ್ನು ಹೆಚ್ಚಿಸುತ್ತಾನೆ.

ಮೀನರಾಶಿ
ನೀವು ಇನ್ನೂ ಬಹಳ ಸಮಯ ಕಾಯಬೇಕು. ಇನ್ನು ಕೆಲವೇ ದಿನಗಳಲ್ಲಿ ಸಾಡೆಸಾತಿ ಶನಿಯ ಎರಡನೇ ಹಂತಕ್ಕೆ ಬರುತ್ತೀರಿ. ಕೊಂಚ ಉಸಿರಾಡುವಷ್ಟು ಹಗುರ ಎನಿಸುತ್ತದೆ. ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ. ಆದಷ್ಡು ದೇವರ ಧ್ಯಾನ ಜಪತಪ ಮಾಡಿ. ಬಡಬಗ್ಗರಿಗೆ ದಾನ / ಸಹಾಯ ಮಾಡಿ. ಕಪ್ಪು ಹಸುವಿಗೆ ಗೋಗ್ರಾಸ ಕೊಡಿ. ಯಾವುದೇ ಹೊಸ ಯೋಜನೆಗಳನ್ನು ಮಾಡಬೇಡಿ. ಶೇರ್ಸ್ ನಲ್ಲಿ ಹಣ ಹೂಡಬೇಡಿ. ಒತ್ತಡಗಳು ಇರುತ್ತವೆ. ಜಾಗ್ರತೆಯಿಂದ ನಿಭಾಯಿಸಿ.
ಶುಭಮಸ್ತು












Click it and Unblock the Notifications