Weekly Horoscope: ನಾಳೆಯಿಂದ ಈ ರಾಶಿಗಳಿಗೆ ಅದೃಷ್ಟದ ಮಳೆ..ಹಣದ ಹೊಳೆ
ಕ್ರೋಧಿ ನಾಮ ಸಂವತ್ಸರ ಉತ್ತರಾಯಣ ವರ್ಷ ಋತು ಭಾದ್ರಪದ ಮಾಸದ ಶುದ್ಧ ದ್ವಾದಶಿಯಿಂದ ಬಹುಳ ಪಂಚಮಿಯವೆರೆಗೆ.
ಈ ವಾರದ ಚಂದ್ರನ ಸಂಚಾರ ಶ್ರವಣಾ ನಕ್ಷತ್ರದಿಂದ ಕೃತ್ತಿಕಾ ನಕ್ಷತ್ರದವರೆಗೆ.
15/09/2024-21/09/2024ರ ವಾರ ಭವಿಷ್ಯ

ಮೇಷ ರಾಶಿಯ ವಾರ ಭವಿಷ್ಯ
ಈ ವಾರದ ಮೊದಲಲ್ಲಿ ಸೂರ್ಯ ಆರನೇ ಮನೆಗೆ ಹಾಗೂ ಶುಕ್ರ ಏಳನೇ ಮನೆಗೆ ಪ್ರವೇಶವಾಗುವುದು ನಿಮಗೆ ಶುಭಫಲಗಳನ್ನು ನೀಡುತ್ತದೆ. ಗುರು ಎರಡನೇ ಮನೆ ಶನಿ ಹನ್ನೊಂದನೇ ಮನೆ ಕೇತು ಆರನೇ ಮನೆಯಲ್ಲಿ ಇರುವುದು ನಿಮಗೆ ಇನ್ನೂ ಹೆಚ್ಚಿನ ಸಹಾಯ ಸಹಕಾರ ಬೆಂಬಲ ಸಿಗುತ್ತದೆ. ಹಣದ ಹರಿವು ಉತ್ತಮವಾಗಿದೆ. ನೀವು ಅಂದುಕೊಂಡ ಕೆಲಸಗಳು ಸರಾಗವಾಗಿ ನಡೆಯುತ್ತದೆ.

ವೃಷಭ ರಾಶಿಯ ವಾರ ಭವಿಷ್ಯ
ಈಗ ರಾಹುಬಲ ಮಾತ್ರವೇ ಇದ್ದರೂ ಬೇರೆ ಗ್ರಹಗಳು ದುಃಸ್ಥಾನದಲ್ಲಿ ಇಲ್ಲದಿರುವುದರಿಂದ ಯಾವುದೇ ತೊಂದರೆ ಇಲ್ಲ. ಹಣದ ಹರಿವು ಬಹಳ ಉತ್ತಮವಾಗಿದೆ. ಮನೆಯಲ್ಲಿ ಶುಭಕಾರ್ಯಗಳು ನಡೆಯುತ್ತವೆ. ಧಾರ್ಮಿಕ ಕಾರ್ಯಗಳಿಗೆ ಖರ್ಚು ಮಾಡುತ್ತೀರಿ.ಕೊಂಚ ಮಂದಗತಿಯ ಜೀವನ. ಇನ್ನು ಕೆಲವೇ ದಿನಗಳಲ್ಲಿ ಶನಿಬಲ ದೊರೆತು ರಾಜಯೋಗ ಅನುಭವಿಸುತ್ತೀರಿ

ಮಿಥುನ ರಾಶಿಯ ವಾರ ಭವಿಷ್ಯ
ನಾಲ್ಕನೇ ಮನೆಯಲ್ಲಿ ಸೂರ್ಯ, ಶುಕ್ರ, ಕೇತು ಇದ್ದು, ಈಗ ನಿಮ್ಮ ಕಷ್ಟಗಳು ಸ್ವಲ್ಪ ಒಂದು ಹಂತಕ್ಕೆ ಕಡಿಮೆಯಾಗುತ್ತಾ ಬರುತ್ತದೆ. ಕೈಯಲ್ಲಿ ನಾಲ್ಕು ಕಾಸು ನಿಲ್ಲುವಂತಾಗುತ್ತದೆ. ತಾಯಿಗೆ ಕೊಂಚ ನಿರಾಳತೆ ಸಿಗುತ್ತದೆ. ಮೂರನೇ ಮನೆಯಲ್ಲಿ ಬುಧ ಕೂಡ ನಿಮಗೆ ಅನುಕೂಲ ಕೊಡುತ್ತಾನೆ. ವಿದ್ಯಾರ್ಥಿಗಳಿಗೆ ಕೊಂಚ ಹಿನ್ನಡೆ ಇದೆ. ಓದಿದ್ದು ಮನನವಾಗಬೇಕಾದರೆ ಕಠಿಣ ಅಭ್ಯಾಸ ಬೇಕು. ಆಧ್ಯಾತ್ಮಿಕ ವಾಗಿ ನಂಬಿಕೆ ಹೆಚ್ಚಾಗುತ್ತದೆ.

ಕಟಕ ರಾಶಿಯ ವಾರ ಭವಿಷ್ಯ
ಎರಡನೇ ಮನೆಯಲ್ಲಿ ಬುಧ ಹನ್ನೊಂದನೇ ಮನೆಯಲ್ಲಿ ಗುರು ಧನ ಲಾಭಕ್ಕೆ ಒಳ್ಳೆಯ ಅವಕಾಶಗಳು ಇವೆ. ಹಣದ ಹರಿವು ಉತ್ತಮವಾಗಿದೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ಮನೆಯಲ್ಲಿ ಶುಭ ಸಮಾರಂಭಗಳ ಸೂಚನೆಗಳು ಇವೆ. ವಿದ್ಯಾರ್ಥಿಗಳಿಗೆ ಶುಭವಿದೆ. ಅಂದುಕೊಂಡ ಕೆಲಸಗಳು ನಿರ್ವಿಘ್ನವಾಗಿ ನೆರವೇರುತ್ತದೆ. ನಿಮ್ಮ ಎಷ್ಟೋ ಸಮಸ್ಯೆಗಳು ಪರಿಹಾರ ಸಿಗುತ್ತದೆ.

ಸಿಂಹ ರಾಶಿಯ ವಾರ ಭವಿಷ್ಯ
ನಿಮ್ಮ ರಾಶಿಯ ಅಧಿಪತಿ ಸೂರ್ಯ ಎರಡನೇ ಮನೆ ಧನ ಸ್ಥಾನದಲ್ಲಿ ಶುಕ್ರ ಹಾಗೂ ಕೇತುವಿನ ಜೊತೆಗೆ ಇದ್ದಾನೆ. ಇದು ಹಣದ ಹರಿವನ್ನು ಉತ್ತಮ ಪಡಿಸುತ್ತದೆ. ವೃತ್ತಿಸ್ಥಾನದಲ್ಲಿ ಗುರು ಇರುವುದು ವೃತ್ತಿಯಲ್ಲಿ ಒತ್ತಡವನ್ನು ಸೂಚಿಸುತ್ತದೆ. ಏಳನೇ ಮನೆಯಲ್ಲಿ ಶನಿ ನಿಮ್ಮ ರಾಶಿಯನ್ನು ನೇರವಾಗಿ ನೋಡುತ್ತಾನೆ ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಜಾಗ್ರತೆ ವಹಿಸಬೇಕು. ಕೆಲಸಗಳು ನಿಧಾನವಾಗಿ ಆಗುತ್ತಿದೆ ಬೇಸರಿಸಬೇಡಿ.

ಕನ್ಯಾ ರಾಶಿಯ ವಾರ ಭವಿಷ್ಯ
ನಿಮ್ಮ ಕೆಲಸಗಳೆಲ್ಲ ಯಾವುದೂ ವಾಯಿದೆ ಇಲ್ಲದೇ ಸರಸರನೆ ನಡೆಯುತ್ತಿದೆ. ಹಣದ ಹರಿವು ಉತ್ತಮವಾಗಿದೆ. ಮನೆಯಲ್ಲಿ ಶುಭಕಾರ್ಯಗಳು ನಡೆಯುವ ಸೂಚನೆ ಇದೆ. ದಾನ ಧರ್ಮ ಹೋಮ ಹವನ ಮಾಡುತ್ತೀರಿ. ಗುರುಹಿರಿಯರ ಮನಸ್ಸಿಗೆ ಸಂತೋಷ ಕೊಡುತ್ತೀರಿ. ಹೊಸ ಹೊಸ ಅವಕಾಶಗಳು ಹುಡುಕಿಕೊಂಡು ಬರುತ್ತದೆ. ವಿದ್ಯಾರ್ಥಿಗಳಿಗೆ ಶುಭವಿದೆ. ಮಕ್ಕಳಿಂದ ಸಂತೋಷ ಇದೆ.

ತುಲಾ ರಾಶಿಯ ವಾರ ಭವಿಷ್ಯ
ನೀವು ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ರಾಹುಬಲ ಇರುವುದರಿಂದ ಹಣಕ್ಕೆ ಕೊರತೆ ಇಲ್ಲ. ಯಾವುದಾದರೂ ಮೂಲದಿಂದ ಹಣದ ಸಹಾಯ ಒದಗಿ ಬರುತ್ತದೆ. ಆದರೆ ಎಂಟನೇ ಮನೆಯ ಗುರು ಹಾಗೂ ಪಂಚಮ ಶನಿ ನಿಮಗೆ ಒತ್ತಡಗಳನ್ನು ಕೊಡುತ್ತಾರೆ. ವಿಪರೀತ ಕೋಪ ತಾಪ ಹಠಮಾರಿತನದಿಂದ ನಿಮ್ಮ ಮನೆಯವರಿಗೆ ಬೇಸರ ಬರುವಂತೆ ಮಾಡುತ್ತೀರಿ. ನಿಮ್ಮ ನಡವಳಿಕೆಯನ್ನು ತಿದ್ದಿಕೊಳ್ಳಿ. ಪಂಚಮ ಶನಿ ನಿಮ್ಮ ತಾಳ್ಮೆಯನ್ನು ಕಳೆಯಬಹುದು. ಸಣ್ಣಪುಟ್ಟ ಸಂಗತಿಗಳಿಗೆ ಕಿರಿಕಿರಿ ಆಗಬಹುದು. ವಿವೇಚನೆಯಿಂದ ಕಾರ್ಯ ನಿರ್ವಹಿಸಿ.

ವೃಶ್ಚಿಕ ರಾಶಿಯ ವಾರ ಭವಿಷ್ಯ
ಲಾಭ ಸ್ಥಾನದಲ್ಲಿ ಸೂರ್ಯ ಶುಕ್ರ ಕೇತು ಇದ್ದು, ನೌಕರಿ ಲಾಭ, ಧನಲಾಭ, ಬಡ್ತಿ ಲಾಭ ಮುಂತಾದ ಎಲ್ಲ ಸೌಕರ್ಯಗಳುಇವೆ. ನೌಕರಿಯಲ್ಲಿ ಬಹುದೊಡ್ಡ ಬದಲಾವಣೆ ನಿಮಗೆ ಯಶಸ್ಸು ತಂದುಕೊಡುತ್ತದೆ. ಏಳನೇ ಮನೆಯ ಗುರುವಿನಿಂದ ಮನೆಯಲ್ಲಿ ಶುಭಕಾರ್ಯಗಳು ನಡೆಯುತ್ತದೆ. ಬಂಧು ಮಿತ್ರರ ಸಂಯೋಗ, ಭೂರಿ ಭೋಜನ, ಹಳೆಯ ಗೆಳೆಯರ ಭೇಟಿ ಮೊದಲಾದ ಮನಸ್ಸಿಗೆ ಸಂತೋಷವಾಗುವ ಸಂಗತಿಗಳು ನಡೆಯುತ್ತವೆ.

ಧನಸ್ಸು ರಾಶಿಯ ವಾರ ಭವಿಷ್ಯ
ಈಗ ನಿಮಗೆ ಇಷ್ಟು ದಿನ ಇದ್ದ ಗ್ರಹಬಲ ಇಲ್ಲದೆ ಕೊಂಚ ಪರಿತಪಿಸಬೇಕಾಗುತ್ತದೆ. ಕುಟುಂಬದಲ್ಲಿ ಅನಾವಶ್ಯಕ ವಾದವಿವಾದ ನಡೆದು ಅಸೌಖ್ಯಕ್ಕೆ ಕಾರಣವಾಗುತ್ತದೆ. ನಿಮಗೂ ಆರೋಗ್ಯದಲ್ಲಿ ಏರುಪೇರುಗಳು ಇರುತ್ತದೆ. ತಾಯಿಯ ವಿರೋಧಕ್ಕೆ ಗುರಿಯಾಗುತ್ತೀರಿ. ಮಾನಸಿಕ ಕ್ಲೇಶ ನಿಮ್ಮನ್ನು ಹಣ್ಣು ಮಾಡುತ್ತದೆ. ನಿಮ್ಮ ಇಷ್ಟದೇವರ ಪ್ರಾರ್ಥನೆ ಮಾಡಿಕೊಳ್ಳಿ. ಧ್ಯಾನಜಪ ಜೊತೆಗೆ ಇರಲಿ.

ಮಕರ ರಾಶಿಯ ವಾರ ಭವಿಷ್ಯ
ಈಗ ನಿಮಗೆ ಅವಕಾಶಗಳ ಸುಗ್ಗಿ. ನಿಮಗೆ ಅವಕಾಶ ಸಿಗಬೇಕೆನ್ನುವುದಕ್ಕಾಗಿ ಯಾವುದೇ ಬದಲಾವಣೆ ನಡೆಯಬಹುದು. ಉನ್ನತ ಉದ್ಯೋಗ ವಿವಾಹ ಆಸ್ತಿ ಖರೀದಿ ಮುಂತಾದ ಎಲ್ಲ ಶುಭಸಂಗತಿಗಳು ಈಗ ನಡೆಯುವ ಸಮಯ. ಕಷ್ಟಕಾಲ ಮುಗಿದಿದೆ. ಈಗ ನೀವು ಸಂತೋಷದಿಂದಿರುವ, ನೆಮ್ಮದಿಯ ಜೀವನ ಮಾಡುವ ಸಮಯ. ಕೊಂಚ ಪ್ರಯತ್ನ ಪಟ್ಟರೆ ಚಿನ್ನದಂತ ಬದುಕು ನಿಮ್ಮದಾಗುತ್ತದೆ. ದೊಡ್ಡ ಅಧಿಕಾರ ಪದವಿ ಸಿಗುವ ಯೋಗ ಇದೆ.

ಕುಂಭ ರಾಶಿಯ ವಾರ ಭವಿಷ್ಯ
ವೃತ್ತಿಜೀವನದಲ್ಲಿ ಸಾಕಷ್ಟು ರಗಳೆ ರಾದ್ಧಂತಗಳು ಆಗಿದೆ. ನಿಮ್ಮನ್ನು ಹಣಿಯಲು ಒಂದು ವಿರೋಧಿ ಶಕ್ತಿಗಳ ಗುಂಪೇ ಇದೆ. ನಾಲ್ಕನೇ ಮನೆಯಲ್ಲಿ ಗುರು ಇರುವುದು, ಶನಿ ನಿಮ್ಮ ರಾಶಿಯಲ್ಲಿ ಇರುವುದು, ರಾಹು ಎರಡನೇ ಮನೆಯಲ್ಲಿ ಇರುವುದು ಕೆಲವು ವ್ಯತಿರಿಕ್ತ ಪರಿಣಾಮಗಳಿಗೆ ಕಾರಣವಾಗುತ್ತದೆ. ನೀವು ಆದಷ್ಟು ಸತ್ಯದ ದಾರಿಯಲ್ಲಿ ನಡೆಯಿರಿ. ಪ್ರಮಾಣಿಕತೆಯನ್ನು ಬಿಡಬೇಡಿ. ಯಾರು ಎಷ್ಟೇ ನಿಮ್ಮ ವಿರುದ್ಧ ಜಿಗಿದಾಡಿದರೂ ನಿಮ್ಮ ಪ್ರಾಮಾಣಿಕತೆ ನಿಮ್ಮನ್ನು ಕಾಪಾಡುತ್ತದೆ.

ಮೀನ ರಾಶಿಯ ವಾರ ಭವಿಷ್ಯ
ತೀರ್ಥಯಾತ್ರೆ, ಪುಣ್ಯಕ್ಷೇತ್ರ ದರ್ಶನ ಮೊದಲಾದ ಪುಣ್ಯ ಕಾರ್ಯಗಳನ್ನು ಮಾಡುತ್ತಿರಿ. ರಾಶಿಯಲ್ಲೇ ರಾಹು ಇರುವುದರಿಂದ ಒಮ್ಮೆ ಕಾಳಹಸ್ತಿಗೆ ಹೋಗಿ ಬರುವುದು ಒಳ್ಳೆಯದು. ರಾಹು ರಾಶಿಯಲ್ಲೇ ಇರುವುದು ಅನಾವಶ್ಯಕ ಕಿರಿಕಿರಿ ಚರ್ಮದ ಅಲರ್ಜಿ ಮುಂತಾದ ಉಪದ್ರವಗಳು ಇರುತ್ತದೆ. ಗುರು ಬಲ ಇಲ್ಲದಿರುವುದರಿಂದ ಯಾವ ಕೆಲಸವೂ ಮಂದಗತಿಯಲ್ಲಿ ಸಾಗುತ್ತದೆ. ಸಹನೆ ಇರಬೇಕು.












Click it and Unblock the Notifications