Weekly Horoscope Nov. 17-23: ಈ ರಾಶಿಯವರು ಮುಟ್ಟಿದೆಲ್ಲಾ ಚಿನ್ನವಾಗುವ ಸಮಯ
ಕ್ರೋಧಿ ನಾಮ ಸಂವತ್ಸರ ದಕ್ಚಿಣಾಯನ ಶರದ್ ಋತು ಕಾರ್ತೀಕ ಮಾಸದ ಕೃಷ್ಣಪಕ್ಷದ ಬಿದಿಗೆಯಿಂದ ನವಮಿಯವರೆಗೆ
ಈ ವಾರದ ಚಂದ್ರನ ಸಂಚಾರ ರೋಹಿಣಿ ನಕ್ಷತ್ರದಿಂದ ಪುಬ್ಬ ನಕ್ಷತ್ರದ ವರೆಗೆ.
17/11/2024-23ರ/11/2024ರ ವಾರ ಭವಿಷ್ಯ

ಮೇಷ ರಾಶಿಯ ವಾರ ಭವಿಷ್ಯ
ಐದನೇ ಮನೆಯ ಅಧಿಪತಿ ಸೂರ್ಯ ನೀಚ ಸ್ಥಾನದಿಂದ ಹೊರಗೆ ಬಂದಿದ್ದಾನೆ. ಇದು ನಿಮಗೆ ಶು ಭಫಲ ಕೊಡುತ್ತದೆ. ಹೊಸ ಕೆಲಸ ಸಿಗಬೇಕಾದರೆ ಸೂರ್ಯ ಒಳ್ಳೆಯ ಮನೆಯಲ್ಲಿ ಇರಬೇಕು. ಶುಕ್ರ ಒಂಬತ್ತನೇ ಮನೆಯಲ್ಲಿ, ಹನ್ನೊಂದರಲ್ಲಿ ಶನಿ, ಆರರಲ್ಲಿ ಕೇತು ಇದ್ದು ಹಣ ಬರುವ ಮೂಲಗಳು ಚೆನ್ನಾಗಿದೆ. ಗುರು ಎರಡನೇ ಮನೆಯಲ್ಲಿ ಇದ್ದೂ ವಕ್ರನಾಗಿ ಇರುವುದರಿಂದ ಕೆಲಸ ಕಾರ್ಯಗಳಲ್ಲಿ ನಿಧಾನಪ್ರಗತಿ.

ವೃಷಭ ರಾಶಿಯ ವಾರ ಭವಿಷ್ಯ
ಎಂಟರಲ್ಲಿ ಶುಕ್ರ ಶುಭಫಲಗಳನ್ನು ಕೊಡುತ್ತಾನೆ. ಏಳರಲ್ಲಿ ಬುಧ ಸೂರ್ಯ ಇದ್ದು ನಿಮ್ಮ ರಾಶಿಯನ್ನು ನೋಡುತ್ತಾರೆ.
ಬುಧಾದಿತ್ಯ ಯೋಗದಿಂದ ನಿಮ್ಮ ಮಾತಿನಲ್ಲಿ ಶಕ್ತಿಇದೆ. ನೀವು ಹೇಳಿದ್ದು ನಡೆಯುತ್ತದೆ ಹಾಗೂ ನೀವು ಯಾರಿಗಾದರೂ ಶಿಫಾರಸು ಮಾಡಬಲ್ಲಿರಿ. ಹನ್ನೊಂದರಲ್ಲಿ ರಾಹು ನಿಮ್ಮ ಹಣದ ಹರಿವನ್ನು ಹೆಚ್ಚಿಸುತ್ತಾನೆ. ಶೌರ್ಯ ಪರಾಕ್ರಮ ನಿಮ್ಮದಾಗುತ್ತದೆ.

ಮಿಥುನ ರಾಶಿಯ ವಾರ ಭವಿಷ್ಯ
ಆರರಲ್ಲಿ ಸೂರ್ಯ ಬುಧ ಈಗ ಸಮಯ ಚೆನ್ನಾಗಿದೆ. ಬಾಕಿ ಎಲ್ಲ ಗ್ರಹಗಳೂ ತಟಸ್ಥ. ಕೊಂಚ ಅನಾರೋಗ್ಯ ಸೂಚನೆ ಇದೆ. ಒಳ್ಳೆಯ ಕೆಲಸಗಳಿಗೆ ಖರ್ಚು ಮಾಡುತ್ತೀರಿ. ತಾಯಿಗೆ ಒತ್ತಡ ಇರುತ್ತದೆ. ತಾಯಿ ನಿಮಗೆ ಸಮಯ ಕೊಡುತ್ತಿಲ್ಲವೆಂದು ನಿಮಗೆ ನೋವುಇದೆ. ಹಣದ ಹರಿವು ಮಧ್ಯಮ. ವೃತ್ತಿಯಲ್ಲಿ ಎಡರುತೊಡರು ಇರುತ್ತದೆ. ಸಂಭಾಳಿಸಿಕೊಳ್ಳಿ. ಬುಧ ಏಳನೇ ಮನೆಗೆ ಪ್ರವೇಶವಾದಾಗ ನಿಮಗೆ ಒಂದು ಆಹ್ಲಾದಕರ ವಾತಾವರಣ ಏರ್ಪಡುತ್ತದೆ.

ಕಟಕ ರಾಶಿಯ ವಾರ ಭವಿಷ್ಯ
ಲಾಭಸ್ಥಾನದಲ್ಲಿ ಗುರು ವಕ್ರಿಯಾಗಿ ಬರುವ ಲಾಭಗಳನ್ನು ಹಿಂಪಡೆಯಿತ್ತಿದ್ದಾನೆ. ಅಷ್ಟಮ ಶನಿಯ ಪ್ರಭಾವ ಹಾಗೂ ವಕ್ರಗುರು ಯಾವ ಶುಭ ಅಥವಾ ಅಭಿವೃದ್ಧಿ ಕೆಲಸಗಳನ್ನೂ ಆಗಲು ಬಿಡುತ್ತಿಲ್ಲ. ವಾರದ ಮಧ್ಯದಲ್ಲಿ ನಿಮ್ಮ ರಾಶಿಗೆ ಚಂದ್ರನ ಪ್ರವೇಶವಾದಾಗ ನಿಮಗೆ ಇನ್ನೂ ಹೆಚ್ಚಿನ ಸಹಾಯ ಸಿಗುತ್ತದೆ. ತಾಯಿಯೊಡನೆ ಒಡನಾಡ ಚೆನ್ನಾಗಿದೆ. ತಾಯಿಯ ಬೆಂಬಲಇದೆ. ಐದನೇ ಮನೆಯ ಬುಧಾದಿತ್ಯ ಯೋಗದಿಂದಲೂ ಶುಭ ಫಲಗಳನ್ನು ಪಡೆಯುವಿರಿ

ಸಿಂಹ ರಾಶಿಯ ವಾರ ಭವಿಷ್ಯ
ನಾಲ್ಕನೇ ಮನೆಯಲ್ಲಿ ಬುಧಾದಿತ್ಯ ಯೋಗದಿಂದ ಬಹಳಷ್ಟು ಪ್ರಯೋಜನಗಳನ್ನು ಪಡೆಯುತ್ತೀರಿ. ಐದನೇ ಮನೆಯಲ್ಲಿ ಶುಕ್ರ ಸಹ ನಿಮಗೆ ಬೆಂಬಲ ಶಕ್ತಿಕೊಡುತ್ತಾನೆ. ಎರಡನೇ ಮನೆಯಲ್ಲಿ ಕೇತು ಮನೆಯಲ್ಲಿ ವೈರುಧ್ಯದ ವಾತಾವರಣ ಕೊಡುತ್ತಾನೆ. ಹತ್ತನೇ ಮನೆಯ ಗುರು ಒತ್ತಡಗಳನ್ನು ಕೊಡುತ್ತಾನೆ. ಆದರೂ ಬುಧ ಶುಕ್ರ ಈಗ ನಿಮಗೆ ಕೊಡೆಯಂತೆ ಕೊಂಚವಾದರು ನೆರಳನ್ನು ಕೊಡುತ್ತಾರೆ.ಮನೆದೇವರ ದರ್ಶನ ಜಪತಪ ಹೆಚ್ಚು ಮಾಡಬೇಕಾಗುತ್ತದೆ.

ಕನ್ಯಾ ರಾಶಿಯ ವಾರ ಭವಿಷ್ಯ
ನಿಮ್ಮ ರಾಶಿಯಲ್ಲೇ ಕೇತು ಅಷ್ಟು ಒಳ್ಳೆಯವನಲ್ಲ. ಅನಾರೋಗ್ಯ ಹಾಗೂ ಒತ್ತಡಗಳನ್ನು ಕೊಡುತ್ತಾನೆ. ಲಾಭ ಸ್ಥಾನದಲ್ಲಿ ಕುಜ, ಭಾಗ್ಯ ಸ್ಥಾನದಲ್ಲಿ ಗುರು, ಮೂರನೇ ಮನೆಯಲ್ಲಿ ಸೂರ್ಯ-ಬುಧ, ನಾಲ್ಕನೇ ಮನೆಯಲ್ಲಿ ಶುಕ್ರ ಸಮಯ ಬಹಳ ಚೆನ್ನಾಗಿದೆ. ಸ್ತ್ರೀ ಮೂಲದಿಂದ ಧನಾಗಮನ ಇದೆ. ವಾಹನದಿಂದ ಲಾಭ ಇದೆ. ಮನೆ ಖರೀದಿ ಮಾಡುವ ಯೋಗ ಇದೆ. ಗೃಹಲಂಕಾರಕ್ಕಾಗಿ ಖರ್ಚು ಮಾಡುತ್ತೀರಿ. ಆರರಲ್ಲಿ ಶನಿ ಹಣದ ಹರಿವನ್ನು ಉತ್ತಮ ಪಡಿಸುತ್ತಾನೆ.

ತುಲಾ ರಾಶಿಯ ವಾರ ಭವಿಷ್ಯ
ಎರಡನೇ ಮನೆಯಲ್ಲಿ ಬುಧ ಮೂರನೇ ಮನೆಯಲ್ಲಿಶುಕ್ರ ಆರನೇ ಮನೆಯಲ್ಕಿ ರಾಹು ಸಮಯ ಬಹಳ ಚೆನ್ನಾಗಿದೆ. ನಿಮ್ಮ ರಾಶಿಯಲ್ಲೇ ನೀಚ ಸೂರ್ಯ ಇದ್ದಾಗ ತಂದೆಗೆ ಅಪಾಯ. ಈಗ ಸೂರ್ಯ ಎರಡನೇ ಮನೆಗೆ ಬಂದಿದ್ದಾನೆ ಪಂಚಮಶನಿಯ ಪ್ರಭಾವ ಇನ್ನೂ ಇದೆ. ಇದರಿಂದ ಅಭಿವೃದ್ಧಿಯ ಕೊರತೆ ಇರುತ್ತದೆ. ಎಂಟು ಗುರು ಸಹ ಮಾನಸಿಕ ಒತ್ತಡ ಕೊಡುತ್ತಾನೆ. ಬುಧ ಶುಕ್ರರು ಹಣದ ಹರಿವನ್ನು ಉತ್ತಮಪಡಿಸುತ್ತಾರೆ. ನಿಮಗೆ ರಕ್ಷಣೆಯನ್ನು ನೀಡುತ್ತಾರೆ.

ವೃಶ್ಚಿಕ ರಾಶಿಯ ವಾರ ಭವಿಷ್ಯ
ನಿಮ್ಮ ರಾಶಿಯಲ್ಲೇ ಬುಧ ಮತ್ತು ಸೂರ್ಯ ಇದ್ದಾರೆ ನಿಮ್ಮ ರಾಶಿಯಲ್ಲಿ ಸೂರ್ಯ ಇರುವುದು ಶುಭ. ಶಕ್ತಿಯನ್ನು ಕೊಡುತ್ತಾನೆ. ರಾಶಿಯಲ್ಲೇ ಬುಧ ರಕ್ಷಣೆ ಕೊಡುತ್ತಾನೆ. ಬುಧಾದಿತ್ಯ ಯೋಗದಿಂದ ನಿಮ್ಮ ಮಾತಿಗೆ ಮಹತ್ವ ಇರುತ್ತದೆ. ವಕೀಲರಿಗೆ ಮಾರ್ಕೆಟಿಂಗ್ ವಿಭಾಗದವರಿಗೆ ಶುಭ. ಎರಡನೇ ಮನೆಯಲ್ಲಿ ಶುಕ್ರ ಏಳರಲ್ಲಿ ಗುರು ಹಣದ ಹರಿವನ್ಜು ಉತ್ತಮ ಪಡಿಸುತ್ತಾರೆ. ಕೀರ್ತಿ ಪ್ರಸಿದ್ಧಿ ನಿಮಗೆ ಸಿಗುವ ಸಮಯ. ವಿದೇಶ ಯಾತ್ರೆಯ ಯೋಗ ಇದೆ. ನಿಮ್ಮಿಂದ ಕಾರ್ಯಕ್ಷೇತ್ರದಲ್ಲಿ ಲಾಭ ಇದೆ.

ಧನಸ್ಸು ರಾಶಿಯ ವಾರ ಭವಿಷ್ಯ
ಈ ವಾರ ಸಾಧಾರಣ. ರಾಶಿಯಲ್ಲೇ ಶುಕ್ರ ಇರುವುದು ಸ್ವಲ್ಪಮಟ್ಟಿಗೆ ಸಹಾಯ ಮಾಡುತ್ತದೆ. ಮೂರರಲ್ಲಿ ಶನಿ ಹಣಕಾಸಿನ ಸ್ಥಿತಿಯನ್ನು ಉತ್ತಮಗೊಳಿಸುತ್ತಾನೆ. ತಾಯಿಯ ಆರೋಗ್ಯಕ್ಕೆ ಹಾನಿಇದೆ. ಜಾಗ್ರತೆ ಇರಲಿ. ಬೇರೆ ಯಾವ ಗ್ರಹಗಳೂ ಈಗ ನಿಮಗೆ ಸಹಾಯ ಮಾಡುತ್ತಿಲ್ಲ. ನಿಮ್ಮ ಮಾತಿನಿಂದ ಹಾನಿ ಇದೆ. ಯೋಚಿಸಿ ವಿವೇಚಿಸಿ ಮಾತನಾಡಿ.

ಮಕರ ರಾಶಿಯ ವಾರ ಭವಿಷ್ಯ
ಈಗ ನಿಮಗೆ ಎಲ್ಲವೂ ಸುಸಮಯ ಆದರೂ ಶನಿ ಮೂರನೆಯ ಮನೆಗೆ ಬಂದಾಗ ಭಾಗ್ಯದ ಬಾಗಿಲು ತೆರೆಯುತ್ತದೆ. ಈಗ ನಿಮ್ಮ ಬಗ್ಗೆ ನಿರಾಶಾದಾಯಕ ಮಾತುಗಳನ್ನು ಹೇಳುತ್ತಾರೆ. ನಿಮಗೂ ಮಾನಸಿಕ ಕಿರಿಕಿರಿ ಇದೆ. ಒತ್ತಡಗಳು ಇದೆ. ಎದೆಗುಂದಬೇಡಿ. ಬಹಳ ಒಳ್ಳೆಯ ದಿನಗಳನ್ನು ಮುಂದೆ ಕಾಣುತ್ತೀರಿ. ಹನ್ನೊಂದನೇ ಮನೆಯಲ್ಲಿ ಸೂರ್ಯ ಬುಧ ಮೂರರಲ್ಲಿ ರಾಹು ನಿಮಗೆ ಒಳಿತನ್ನು ಮಾಡುತ್ತಾರೆ. ನಿಮಗೆ ಬೆಂಬಲ ಸಹಾಯ ನೀಡುತ್ತಾರೆ.

ಕುಂಭ ರಾಶಿಯ ವಾರ ಭವಿಷ್ಯ
ಹನ್ನೊಂದನೇ ಮನೆಯಲ್ಲಿ ಶುಕ್ರ, ಒಂಬತ್ತನೇ ಮನೆಯಲ್ಲಿ ಸೂರ್ಯ ಬುಧ ಸಮಯ ಚೆನ್ನಾಗಿದೆ. ಆದರೆ ನಿಮ್ಮ ರಾಶಿಯಲ್ಲೇ ಶನಿ, ಎರಡನೇ ಮನೆಯಲ್ಲಿ ರಾಹು ಹಾಗೂ ನಾಲ್ಕನೇ ಮನೆಯಲ್ಲಿ ಗುರು ಬಹಳಷ್ಟು ಕಿರಿಕಿರಿಗಳನ್ನು ಕೊಡುತ್ತಾರೆ. ಜೀವನವೇ ಬೇಸರ ಎನಿಸುವಷ್ಟು ಮಾನಸಿಕವಾಗಿ ಕುಗ್ಗಿ ಹೋಗುತ್ತೀರಿ. ಅಪಮಾನ ಆಪಾದನೆಗಳು ಮೈಮೇಲೆ ಬರಲಿದೆ. ಸುಬ್ರಹ್ಮಣ್ಯ ಹಾಗೂ ದತ್ತಾತ್ರೇಯ ದರ್ಶನ ಮಾಡಿ. ಮನೆಯಲ್ಲಿ ಅಶಾಂತಿಯ ವಾತಾವರಣ ಇರುತ್ತದೆ. ನಿಮ್ಮ ಅಡಚಣೆಗಳು ಪರಿಹಾರವಾಗಲು ಇನ್ನೂ ಸಮಯ ಬೇಕು. ಧೈರ್ಯವೊಂದೇ ಈಗ ನಿಮ್ಮ ಆಯುಧ.

ಮೀನ ರಾಶಿಯ ವಾರ ಭವಿಷ್ಯ
ನೀವು ಇನ್ನೂ ಸಾಡೆಸಾತಿ ಶನಿಯ ಮೊದಲ ಹಂತದಲ್ಲೇ ಇರುವುದರಿಂದ ಧನ ನಷ್ಟ, ನೆಮ್ಮದಿ ನಷ್ಟ ಮಾನ ಹಾನಿ ಇಂಥವೆಲ್ಲ ಇರುತ್ತದೆ. ಮನೆಯಲ್ಲಿ ಹಿರಿಯರ ವಿಯೋಗದಂಥ ದುಃಖವನ್ನು ಭರಿಸಬೇಕಾಗುತ್ತದೆ. ತಾಳ್ಮೆ ಸಹನೆ ಇರಲಿ. ಆದಷ್ಟು ಮನೆದೇವರ ಪ್ರಾರ್ಥನೆ ಮಾಡಿ ಮತ್ತು ಯಾವ ವಿಷಯವನ್ನೂ ಕಾಂಪ್ಲಿಕೇಷನ್ ಮಾಡಿಕೊಳ್ಳಬೇಡಿ. ಏನೇ ಸಮಸ್ಯೆ ಆದರೂ ಆದಷ್ಟು ಶಾಂತಿಯುತವಾಗಿ ಬಗೆಹರಿಸಿಕೊಳ್ಳಿ.












Click it and Unblock the Notifications