Weekly Horoscope 2025: ಈ ರಾಶಿಗಳಿಗೆ ಸಣ್ಣ ಪ್ರಯತ್ನದಿಂದ ಚಿನ್ನಾಭರಣ ಖರೀದಿ ಯೋಗ
ಪ್ರತೀ ದಿನ ಜಾತಕದಲ್ಲಿ ಗ್ರಹಗಳ ಸ್ಥಾನ ಬದಲಾಗುತ್ತಲೇ ಇರುತ್ತವೆ. ಹೀಗಾಗಿ ಇಂದು ಇದ್ದ ಜಾತಕದ ಫಲವನ್ನು ನಾಳೆ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಪ್ರತೀ ಗ್ರಹದ ಸ್ಥಾನಗಳ ಆಧಾರದ ಮೇಲೆ ಆ ದಿನ ಅಥವಾ ವಾರದ ಕೆಲಸ ಕಾರ್ಯಗಳನ್ನು ಜನ ನಿರ್ಧರಿಸುತ್ತಾರೆ. ಪ್ರತೀ ವಾರ ಆರಂಭಕ್ಕೂ ಮೊದಲು ವೃತ್ತಿ, ಹಣಕಾಸು, ಆರೋಗ್ಯ, ಕೌಟುಂಬಿಕ, ಪ್ರೇಮ ಜೀವನ ಹೇಗಿರಲಿದೆ ಎಂದು ತಿಳಿಯಲು ಬಯಸುತ್ತಾರೆ.
ಈ ವಾರದ ಚಂದ್ರನ ಸಂಚಾರ ಪುನರ್ವಸು ನಕ್ಷತ್ರದಿಂದ ಹಸ್ತಾದವರೆಗೆ ಇರುತ್ತದೆ. ಕ್ರೋಧಿ ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಫಾಲ್ಗುಣ ಶುಕ್ಲ ದಶಮಿಯಿಂದ ಬಹುಳ ಬಿದಿಗೆಯವರೆಗೆ ಅಂದರೆ 09.03.25 ರಿಂದ 16.03.25 ವರೆಗೆ 12 ರಾಶಿಗಳ ಭವಿಷ್ಯ ಹೇಗಿದೆ ಎಂದು ತಿಳಿಯೋಣ.

ಮೇಷರಾಶಿ:
ಹೊಸ ಕೆಲಸದ ಪ್ರಯತ್ನದಲ್ಲಿ ಇರುವವರು ಕೊಂಚ ಶ್ರಮ ಹಾಕಿದರೆ ಕೆಲಸ ಸಿಗುತ್ತದೆ. ಲಾಭಸ್ಥಾನದಲ್ಲಿ ಶನಿ ಸೂರ್ಯ ಇರುವುದು ಕೇಂದ್ರ ತ್ರಿಕೋಣಾಧಿಪತಿ ಯೋಗ ಆಗಿದೆ. ಇದು ಕೆಲಸಗಳನ್ನು ಹಗುರ ಮಾಡುತ್ತದೆ. ಸಂಪತ್ತು ಸೌಖ್ಯ ಅಭಿವೃದ್ಧಿ ಆಗುತ್ತದೆ. ಎರಡರಲ್ಲಿ ಗುರು ನಿಮ್ಮ ಚಿಂತೆಗಳನ್ನು ಕಳೆದು ರಕ್ಷಣೆ ಕೊಡುತ್ತಾನೆ. ಹನುಮಾನ್ ಜಪ ಮಾಡಿ. ಗುರುಗಳ ಸೇವೆ ಮಾಡಿ.

ವೃಷಭರಾಶಿ:
ಹತ್ತರಲ್ಲಿ ಸೂರ್ಯ ಶನಿ ಇದ್ದು ನಿಮಗೂ ಸಹ ಕೇಂದ್ರ ತ್ರಿಕೋಣಾಧಿಪತಿ ಯೋಗ ಆಗಿದೆ. ಇದರಿಂದ ವೃತ್ತಿಯಲ್ಲಿ ಯಶಸ್ಸನ್ನು ಗಳಿಸುತ್ತೀರಿ. ಒಳ್ಳೆಯ ಹೆಸರು ಪಡೆಯುತ್ತೀರಿ. ವೃತ್ತಿ ನಿಮಗೆ ಫ್ಲೆಕ್ಸಿಬಲ್ ಆಗಿ ಇರುತ್ತದೆ. ಲಾಭಸ್ಥಾನದಲ್ಲಿ ರಾಹು ಬುಧ ಶುಕ್ರ ಬಹಳ ಒಳ್ಳೆಯ ಯೋಗ. ವಾಹನದಿಂದ ಲಾಭ ವಾಹನ ಖರೀದಿ ಮೊದಲಾದ ಖುಷಿ ಯ. ಸಂಗತಿಗಳು ನಡೆಯುತ್ತದೆ. ಚಿನ್ನ ಬೆಳ್ಳಿ ಆಭರಣ ಖರೀದಿ ಯೋಗ ಇದೆ. ಸಾಹಸ ಪ್ರವೃತ್ತಿ ಇರುತ್ತದೆ.

ಮಿಥುನರಾಶಿ:
ಶನಿ ಸೂರ್ಯ ಯುತಿಯೋಗದಲ್ಲಿ ಇದ್ದಾರೆ. ಒಂದು ಪರಾಕ್ರಮಾಧಿಪತಿ ಒಂದು ಭಾಗ್ಯಾಧಿಪತಿ. ಎರಡೂ ಗ್ರಹಗಳೂ ಲಾಭ ಕೊಡುತ್ತದೆ. 12 ನೇ ಮನೆಯ ಗುರು ಶುಭಕಾರ್ಯಕ್ಕೆ ಖರ್ಚು ಮಾಡಿಸುತ್ತಾನೆ. ಮಿಥುನರಾಶಿ ಯವರಿಗೆ ಈಗ ಯಾವ ಗ್ರಹಬಲವೂ ಇಲ್ಲ ಆದರೆ ಕೆಟ್ಟಸ್ಥಾನದಲ್ಲಿ ಯಾವ ಗ್ರಹವೂ ಇಲ್ಲ. ಹೀಗಾಗಿ ಕೆಟ್ಟಫಲ ಅಂತೂ ಇಲ್ಲ. ಮುಂದೆ ಒಳ್ಳೆಯ ದಿನಗಳು ಬರಲಿವೆ.

ಕಟಕರಾಶಿ:
ಎರಡನೇ ಮನೆ ಅಧಿಪತಿ ಎಂಟನೇ ಮನೆಯ ಅಧಿಪತಿ ಯ ಜೊತೆ ಯುತಿ ಯೋಗದಲ್ಲಿ ಇದ್ದಾರೆ. ಖರ್ಚು ಬಹಳ. ನೀವು ಊಹಿಸದೆ ಇರುವ ಖರ್ಚುಗಳು ಧುತ್ತನೆ ಬಂದು ನಿಲ್ಲುತ್ತದೆ. ಒಂಬತ್ತನೇ ಮನೆಯಲ್ಲಿ ಬುಧ ಶುಕ್ರ ದೂರ ಪ್ರಯಾಣ ಸೂಚಿಸುತ್ತಾರೆ. ವಿದೇಶ ಪ್ರಯಾಣ, ಅಥವಾ ವೃತ್ತಿಸಂಬಂಧ ದೂರ ಪ್ರಯಾಣ ಇರಬಹುದು. ಹನ್ನೊಂದನೇ ಮನೆಯಲ್ಲಿ ಗುರು ಲಾಭವನ್ನೇ ಕೊಡುತ್ತಾನೆ.

ಸಿಂಹರಾಶಿ:
ಏಳನೇ ಮನೆಯಲ್ಲಿ ಶನಿ ಸೂರ್ಯ ಇಬ್ಬರೂ ನಿಮ್ಮ ರಾಶಿಯನ್ನು ನೋಡುತ್ತಾರೆ. ಇದು ಕೊಂಚ ವ್ಯತಿರಿಕ್ತ ಪರಿಣಾಮವನ್ನು ನೀಡುತ್ತದೆ. ನೀವು ಮಾಡುವ ಕೆಲಸ ನಾನಾ ಚರ್ಚೆಗೆ ಕಾರಣವಾಗುತ್ತದೆ. ನಿಮ್ಮ ಹತ್ತಿರದವರೇ ನಿಮ್ಮನ್ನು ಆಕ್ಷೇಪಣೆ ಮಾಡಿ ಮನಸ್ಸಿಗೆ ನೋವುಕೊಡುತ್ತಾರೆ. ನಿಮಗೆ ಬೆನ್ನ ಹಿಂದಿನಶತ್ರುಗಳು ಹೆಚ್ಚು. ಜಾಗರೋಕರಾಗಿರಿ. ಹಣದ ಅಭಾವ ಇದೆ. ಸವಾಲುಗಳು ಇವೆ. ಮನೆಯಲ್ಲಿ ಹಿರಿಯರ ಆರೋಗ್ಯ ಜಾಗ್ರತೆಯಿಂದ ನೋಡಿಕೊಳ್ಳಿ.

ಕನ್ಯಾರಾಶಿ:
ಈಗ ಗುರುಬಲ ಇದ್ದರೂ ಕಡಿಮೆ ಆಗುತ್ತಿದೆ. ಇನ್ನು ಮೂರು ತಿಂಗಳು ಮಾತ್ರವೇ ಗುರುಬಲ ಇರುವುದರಿಂದ ಮುಖ್ಯ ಕೆಲಸಗಳನ್ನು ಸಾಧ್ಯವಾದಷ್ಟು ಬೇಗನೆ ಮುಗಿಸಿಕೊಳ್ಳಿ.ಕಚೇರಿಯಲ್ಲಿ ಯಾರಾದರೂ ಪಿತೂರಿ ಮಾಡಿ ನಿಮ್ಮ ಕೆಲಸಕ್ಕೆ ಸಂಚಕಾರ ತರಬಹುದು. ಎಚ್ಚರಿಕೆಯಿಂದ ಇರಿ. ಹಣದ ಹರಿವು ಉತ್ತಮವಾಗಿದ್ದರೂ ಖರ್ಚುಗಳೂ ಇವೆ. ಹೊಟ್ಟೆಗೆ ಸಂಬಂಧಿಸಿದ ತೊಂದರೆಗಳು ಧುತ್ತನೆ ಎದುರಾಗುತ್ತದೆ. ರಾಹು ಆರನೇ ಮನೆಗೆ ಪ್ರವೇಶವಾದಾಗ ಉತ್ತಮ ಸಂಗತಿಗಳು ನಡೆಯುತ್ತದೆ.

ತುಲಾರಾಶಿ:
ಈಗ ಗುರು ಎಂಟನೇ ಮನೆಯಲ್ಲಿ ಇದ್ದು ಮಾನಸಿಕ ಹಿಂಸೆ ಬಹಳವಾಗಿರುತ್ತದೆ. ಪತಿಪತ್ನಿಯರ ನಡುವೆ ಮನಸ್ತಾಪ, ಹಣಕಾಸಿನ ಗೋಜಲುಗಳು ಇರುತ್ತದೆ. ಪಂಚಮಶನಿಯ ಪ್ರಭಾವ ಇನ್ನು ಕೆಲವೇ ದಿನಗಳಲ್ಲಿ ದೂರವಾಗುತ್ತದೆ. ಆಗ ಪರಿಸ್ಥಿತಿ ಸುಧಾರಿಸುತ್ತದೆ. ಈಗ ವೃಥಾ ಶ್ರಮ ಅಲೆದಾಟ ಯಾವುದೇ ಫಲಪ್ರದ ಸಂಗತಿಗಳು ಇಲ್ಲದೆ ಬಳಲುತ್ತೀರಿ. ತಾಳ್ಮೆ ಸಹನೆಯನ್ನು ಕಾಪಾಡಿಕೊಳ್ಳಿ.

ವೃಶ್ಚಿಕರಾಶಿ:
ಗುರುಬಲ ಇದ್ದರೂ ಪಂಚಮಶನಿ ಪ್ರಾರಂಭವಾಗಿರುವುದರಿಂದ ಈಗ ಅಡೆತಡೆಗಳು ಇವೆ. ಯಾವುದೇ ಕೆಲಸ ತಕ್ಷಣ ಆಗುವುದಿಲ್ಲ. ಸಮಯ ತೆಗೆದುಕೊಳ್ಳುತ್ತದೆ. ಹಣದ ಹರಿವು ಉತ್ತಮವಾಗಿದೆ. ಮನೆಯಲ್ಲಿ ಶುಭಕಾರ್ಯ ನಡೆಯುವ ಲಕ್ಷಣಗಳುಇವೆ. ಲಾಭಸ್ಥಾನದಲ್ಲಿ ಕೇತು, ಏಳನೇ ಮನೆಯಲ್ಲಿ ಗುರು ನಿಮಗೆ ಬೆಂಬಲವಾಗಿ ಇದ್ದರೂ ಮನಸ್ಸಿಗೆ ನೆಮ್ಮದಿ ಕಡಿಮೆ. ಮಾನಸಿಕ ಕಿರಿಕಿರಿ, ಒತ್ತಡಗಳು ಇರುತ್ತದೆ.

ಧನಸ್ಸುರಾಶಿ:
ಈಗ ಗುರು ಷಷ್ಠಸ್ಥಾನದಲ್ಲಿ, ರಾಹು ಸುಖಸ್ಥಾನದಲ್ಲಿ ಇರುವುದರಿಂದ ಎತ್ತ ತಿರುಗಿದರೂ ಕಿರಿಕಿರಿ ರಗಳೆ ಒತ್ತಡ ಅನುಭವಿಸುತ್ತೀರಿ. ಮನೆಯಲ್ಲೇ ನಿಮಗೆ ವಿರೋಧಗಳು ಕಾಣಬಹುದು. ಮೂರನೇ ಮನೆಯ ಶನಿಯ ಪ್ರಭಾವ ಕಡಿಮೆ ಆಗಿದೆ. ರಾಹು ಇನ್ನು ಕೆಲವು ತಿಂಗಳಲ್ಲಿ ಮೂರನೇ ಮನೆಗೆ ಬರುತ್ತಾನೆ ಆಗ ಅನುಕೂಲ ಪರಿಸ್ಥಿತಿ ಏರ್ಪಡುತ್ತದೆ. ಮುಂದೆ ಗುರುಬಲವೂ ಕೂಡಿಕೊಂಡು ಎಷ್ಟೋ ಸಮಸ್ಯೆಗಳು ಪರಿಹಾರ ಆಗುತ್ತದೆ.

ಮಕರರಾಶಿ:
ಈಗ ಗುರುಬಲ ಇದೆ, ರಾಹುಬಲವೂ ಇದೆ. ಹೊಸ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಸಮಯ. ಇನ್ನು ಕೆಲವೇ ದಿನಗಳಲ್ಲಿ ಸಾಡೆಸಾತಿ ಶನಿಯೂ ಮುಗಿಯುತ್ತದೆ. ಶನಿ ಮೂರನೇ ಮನೆಗೆ ಬರುತ್ತಾನೆ. ಆಗ ನಿಮಗೆ ಇನ್ನಷ್ಟು ಚೇತರಿಕೆಯ ಲಕ್ಷಣಗಳು ಗೋಚರಿಸುತ್ತದೆ. ಹೊಸ ಕೆಲಸ, ಸ್ಥಾನಮಾನ, ಪದವಿ ಅಧಿಕಾರ ಎಲ್ಲವೂ ಸಿಗುವ ಸಮಯ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ವಿದೇಶ ಪ್ರಯಾಣ ಯೋಗ ಇದೆ.

ಕುಂಭರಾಶಿ:
ಈಗ ಸ್ವಲ್ಪ ನಿಧಾನ ಜೀವನ. ತಾಯಿಯ ಆರೋಗ್ಯಕ್ಕೆ ಸಮಸ್ಯೆ. ತಾಯಿಗೆ ಒತ್ತಡಗಳು ಇರುತ್ತವೆ. ಗುರು ನಾಲ್ಕನೇ ಮನೆಯಲ್ಲಿ ಕೊಂಚ ಏರುಪೇರಿನ ಜೀವನ ತೋರಿಸುತ್ತಾನೆ. ಲಾಭ ಬರುವ ತುಂಬಾ ನಂಬಿ ಹಣಹೂಡಿದ ಕಡೆ ನಷ್ಟ ವಾಗುತ್ತದೆ. ಈಗ ಯಾವುದೇ ಹೂಡಿಕೆ ಬೇಡ. ಕೆಲವೇ ದಿನಗಳಲ್ಲಿ ಶನಿ ನಿಮ್ಮ ರಾಶಿಯಿಂದ ಹೊರ ಹೋಗುತ್ತಾನೆ. ಮತ್ತು ಗುರುಬಲ ಬರುತ್ತದೆ. ಆಗ ಸಮಸ್ಯೆಗಳು ಸುಲಭವಾಗುತ್ತದೆ.

ಮೀನರಾಶಿ:
ನಿಮಗೆ ಇನ್ನೂ ಸಾಡೆಸಾತಿ ಪ್ರಭಾವ ಇರುವುದರಿಂದ ಸಮಾಧಾನ ಈಗ ಸಧ್ಯಕ್ಕೆ ಸಾಧ್ಯವಿಲ್ಲ. ನಿಮ್ಮ ಆರೋಗ್ಯ ಮನೆಯವರ ಆರೋಗ್ಯ ಎರಡೂ ಗಮನಿಸಿಕೊಳ್ಳಿ. ನಿಮ್ಮ ರಾಶಿಯಲ್ಲೇ ರಾಹು ಇರುವುದರಿಂದ ಕೊಂಚ ಕಣ್ಣಿನ ತೊಂದರೆಗಳು, ಬ್ಯಾಕ್ಟೀರಿಯಾ ಇನಫೆಕ್ಷನ್ ಮೊದಲಾದ ತೊಂದರೆಗಳು ಕಾಣಿಸಬಹುದು. ಸರಿಯಾದ ವೈದ್ಯರಿಗೆ ತೋರಿಸಿ. ಆದಷ್ಟು ಧೈರ್ಯವಾಗಿ ಪರಿಸ್ಥಿತಿ ಗಳನ್ನು ಎದುರಿಸಿ. ಹಣದ ಅಡಚಣೆ ಇರುತ್ತದೆ. ನಿಭಾಯಿಸಿ. ಯಾರೊಂದಿಗೂ ಜಗಳ ಬೇಡ. ಅನಗತ್ಯ ಮಾತೂ ಬೇಡ.












Click it and Unblock the Notifications