Weekly Horoscope 2025: ವಾರ ಭವಿಷ್ಯ: ಯುಗಾದಿ ನಂತರ ಈ ರಾಶಿಯವರ ಬಾಳು ಸೂರ್ಯನಂತೆ ಪ್ರಜ್ವಲಿಸುವುದು

ಮಾರ್ಚ್ ತಿಂಗಳು ಕಳೆದು ನಾವೆಲ್ಲಾ ಏಪ್ರಿಲ್ ತಿಂಗಳಿಗೆ ಕಾಲಿಡುತ್ತಿದ್ದೇವೆ. ಯುಗಾದಿಯ ಮೊದಲ ತಿಂಗಳು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಇತರ ವಿಷಯಗಳಲ್ಲಿ ಹೇಗಿರುತ್ತದೆಂದು ತಿಳಿಯಲು ಎಲ್ಲರಿಗೂ ಕುತೂಹಲ ಇದ್ದೇ ಇರುತ್ತದೆ. ಈ ವಾರದ ಚಂದ್ರನ ಸಂಚಾರ ರೇವತಿ ನಕ್ಷತ್ರದಿಂದ ಪುಷ್ಯದವರೆಗೆ ಇರುತ್ತದೆ. ವಿಶ್ವಾವಸು ನಾಮ ಸಂವತ್ಸರ ಉತ್ತರಾಯಣ ವಸಂತ ಋತು ಚೈತ್ರ ಮಾಸದ ಶುದ್ಧ ಪಾಡ್ಯದಿಂದ ನವಮಿಯವರೆಗೆ ಅಂದರೆ 30.03.25 ರಿಂದ 06.04.25ವರೆಗೆ ಏಪ್ರಿಲ್‌ನ ಮೊದಲ ವಾರ ದ್ವಾದಶಿ ರಾಶಿಗಳಿಗೆ ಹೇಗಿದೆ ಎಂದು ತಿಳಿಯೋಣ.

Weekly Horoscope In Kannada From March 30 To April 06 2025

ಮೇಷ ರಾಶಿ

ಹನ್ನೆರಡನೇ ಮನೆಯಲ್ಲಿ ಆರು ಗ್ರಹಗಳು ಸೇರಿರುವುದರಿಂದ ನೀವು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಸೂರ್ಯ ಶನಿ ಬುಧ ಶುಕ್ರ ರಾಹು ಚಂದ್ರ ಇವರೆಲ್ಲ ವಾರದ ಮೊದಲಲ್ಲಿ ನಿಮ್ಮ ರಾಶಿಯಲ್ಲೇ ಇರುತ್ತಾರೆ. ಗಂಡಸರಿಗೆ ತಂದೆಯ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಬೇಕು. ತಂದೆ ಆಪತ್ತು ಕಂಟಕ‌ ಇರುತ್ತದೆ. ಮೇಷರಾಶಿ ಯವರಿಗೆ ಸಾಡೆಸಾತಿ ಯ ಪ್ರಾರಂಭ. ಹೀಗಾಗಿ ಪ್ರತಿಯೊಂದು ವಿಷಯದಲ್ಲೂ ಎಚ್ಚರಿಕೆ ಅಗತ್ಯ.

Weekly Horoscope In Kannada From March 30 To April 06 2025

ವೃಷಭ ರಾಶಿ

ಹನ್ನೊಂದನೇ ಮನೆಯಲ್ಲಿ ಆರು ಗ್ರಹಗಳು ಇರುತ್ತವೆ. ಇದು ನಿಮಗೆ ಅದೃಷ್ಡ ಕೊಡುತ್ತದೆ. ರಾಜಯೋಗ ಕೊಡುತ್ತದೆ. ಲಾಭಸ್ಥಾನದಲ್ಲಿ ಯಾವುದೇ ಗ್ರಹಗಳಿದ್ದರೂ ಅದು ಧನಾತ್ಮಕ ಫಲಿತಾಂಶ ಕೊಡುತ್ತದೆ. ಹಣದ ಹರಿವು ಬಹಳ ಚೆನ್ನಾಗಿದೆ. ವೃತ್ತಿಯಲ್ಲಿ ಯಶಸ್ಸು ಇದೆ. ವಿದೇಶ ಪ್ರಯಾಣ ಯೋಗ ಇದೆ. ಯಾರು ನಿಮ್ಮ ತಂಟೆಗೆ ಬರುವುದಿಲ್ಕ. ಶತ್ರುಗಳು ನಾಶವಾಗುತ್ತಾರೆ.

Weekly Horoscope In Kannada From March 30 To April 06 2025

ಮಿಥುನ ರಾಶಿ

ಹತ್ತನೇ ಮನೆಯಲ್ಲಿ ಆರು ಗ್ರಹಗಳು ವಾರದ ಮೊದಲಲ್ಲಿ ಇರುತ್ತದೆ. ನಂತರ ಐದು ಗ್ರಹಗಳು ವಾರ ಪೂರ್ತಿ ಇರುತ್ತದೆ. ದಶಮಸ್ಥಾನದಲ್ಕಿ ಗ್ರಹಗಳ ಸಂಯೋಗ ವೃತ್ತಿಯಲ್ಲಿ ಯಶಸ್ಸನ್ನು ಕೊಡುತ್ತದೆ. ವೃತ್ತಿಯಲ್ಲಿ ಶತ್ರುಗಳನ್ನು ನಿವಾರಣೆ ಮಾಡುತ್ತದೆ. ನಿಮಗೆ ಇನ್ನೂ ಕೊಂಚ ಪರೀಕ್ಷೆಯ ದಿನಗಳು‌ಇವೆ.‌ಆದರೆ ಒಂದು‌ಒಳ್ಳೆಯ ಜಾಗ ಬದಲಾವಣೆ ಆಗುತ್ತದೆ ಇದರಿಂದ ನಿಮ್ಮ ಮನಸ್ಸಿಗೆ ಸಂತೋಷ ಸಮಾಧಾನ ಸಿಗುತ್ತದೆ.

Weekly Horoscope In Kannada From March 30 To April 06 2025

ಕಟಕ ರಾಶಿ

ಒಂಬತ್ತನೇ ಮನೆಯಲ್ಲಿ ಐದು ಗ್ರಹಗಳು ಇರುತ್ತದೆ. ಉಚ್ಚ ಶುಕ್ರ ಇರುವುದರಿಂದ ದೂರಪ್ರಯಾಣದ ಯೋಗ ಇದೆ. ಸಾಧು ಸಂತರ ತಪಸ್ವಿಗಳ ಭೇಟಿ, ಪುಣ್ಯಕ್ಷೇತ್ರ ದರ್ಶನ ಇನ್ನೂ ಮೊದಲಾದ ಪುಣ್ಯ ಯೋಗಗಳು ಸಿಗುತ್ತದೆ. ಲಾಭಸ್ಥಾನದಲ್ಲಿ ಗುರು ಇರುವುದರಿಂದ ನೀವು ಅಂದುಕೊಂಡ ಕೆಲಸಗಳನ್ನು ಸಾಧಿಸುತ್ತೀರಿ. ಮೂರನೇ ಮನೆಯಲ್ಲಿ ಕೇತು ಹಣ ಕೊಡುತ್ತಾನೆ. ಸಮಯ ಬಹಳ ಚೆನ್ನಾಗಿದೆ ಅನುಕೂಲಕರವಾಗಿ ಉಪಯೋಗಿಸಿಕೊಳ್ಳಿ.

Weekly Horoscope In Kannada From March 30 To April 06 2025

ಸಿಂಹ ರಾಶಿ

ನಿಮಗೆ ಅಷ್ಠಮ ಶನಿಯ ಪ್ರಾರಂಭ. ಎಂಟನೇ ಮನೆಯಲ್ಲಿ ಸೂರ್ಯ ಶುಕ್ರ ಶನಿ ರಾಹು ಹೀಗೆ ಪರಸ್ಪರ ಶತ್ರು ಗ್ರಹಗಳು ಸೇರಿರುವುದರಿಂದ ಕೊಂಚ ಮುನ್ನೆಚ್ಚರಿಕೆ ಅಗತ್ಯ. ಆರೋಗ್ಯ ಹಣಕಾಸು ಕುಟುಂಬದ ಸೌಖ್ಯ ವೃತ್ತಿ ಹೀಗೆ ಯಾವುದಕ್ಕೆ ಬೇಕಾದರೂ ಧಕ್ಕೆ ಬರಬಹುದು. ಸಾಧ್ಯವಾದಷ್ಟು ಧ್ಯಾನ ಪೂಜೆ ವಿಷ್ಣು ಸಹಸ್ರನಾಮ ಪಠನೆ ಮಾಡಿ. ಇನ್ನೂ ಎರಡು ತಿಂಗಳಿ ನಿಮಗೆ ಕ್ಲಿಷ್ಟಕರ ಪರಿಸ್ಥಿತಿ. ‌ನಂತರ ಗುರುಬಲ ಬರುವುದರಿಂದ ತುಸು ಹಗುವಾಗುತ್ತದೆ.‌

Weekly Horoscope In Kannada From March 30 To April 06 2025

ಕನ್ಯಾ ರಾಶಿ

ಏಳನೇ ಮನೆಯಲ್ಲಿ ಆರು ಗ್ರಹಗಳ ಸಂಯೋಗ ಈ ವಾರ ಪೂರ್ತಿ‌ಇರುತ್ತದೆ. ಇದರಲ್ಲಿ ನಿಮ್ಮ ರಾಶಿಯ ಅಧಿಪತಿ ಬುಧ ನೂ ಇದ್ದಾನೆ. ಬುಧ ಹಾಗೂ ಶುಕ್ರರ ದೃಷ್ಟಿ ನಿಮ್ಮ ರಾಶಿಯ ಮೇಲೆ ನೇರವಾಗಿ ಬೀಳುವುದರಿಂದ ಯಾವುದೇ ಭಯ ಬೇಡ. ಕುಟುಂಬದಲ್ಲಿ ಸೌಖ್ಯ, ಹಣಕಾಸಿನ ಉತ್ತಮ ಹರಿವು, ಮನಸ್ಸಿಗೆ ಸಂತೋಷ ಉಲ್ಲಾಸ ಎಲ್ಲವೂ ಇರುತ್ತದೆ.

Weekly Horoscope In Kannada From March 30 To April 06 2025

ತುಲಾ ರಾಶಿ

ಆರನೇ ಮನೆಯಲ್ಲಿ ಆರು ಗ್ರಹಗಳು ನಿಮಗೆ ಭಾಗ್ಯೋದಯದ ಕಾಲ. ಪಂಚಮ ಶನಿಯಿಂದ ಬಿಡುಗಡೆ ಹೊಂದಿದ್ದೀರಿ. ಶತ್ರುಗಳು ದೂರವಾಗುತ್ತಾರೆ. ನೀವು ಪ್ರಯತ್ನ ಮಾಡುತ್ತಿದ್ದ ಕೆಲಸಗಳು ಯೋಜನೆಗಳು ಫಲಪ್ರದವಾಗುತ್ತದೆ. ಹಣದ ಹರಿವು ಉತ್ತಮವಾಗಿದೆ. ಬಹಳ ಕಷ್ಟ ಪಟ್ಟಿದ್ದೀರಿ. ಈಗ ಕಷ್ಟಗಳು ನಿವಾರಣೆ ಆಗುವ ಕಾಲ. ಬಂಧುಬಳಗದವರಿಂದ ಪ್ರಶಂಸೆ, ವೃತ್ತಿಯಲ್ಲಿ ಯಶಸ್ಸು, ಪ್ರವಾಸ ವಿಹಾರ ಯಾತ್ರೆಗಳು ಎಲ್ಲವೂ ಇವೆ. ಜೀವನ ಎಂಜಾಯ್ ಮಾಡುವ ಸಮಯ.

Weekly Horoscope In Kannada From March 30 To April 06 2025

ವೃಶ್ಚಿಕ ರಾಶಿ

ಐದನೇ ಮನೆಯಲ್ಲಿ ಆರುಗ್ರಹಗಳ ಸಂಯೋಗ. ಶನಿ ಮತ್ತು‌ ರಾಹು ಐದನೇ ಮನೆಯಲ್ಲಿ ಇರುವುದು ಕ್ಷೇಮವಲ್ಲ. ಮಕ್ಕಳಿಂದ ವಿರೋಧ ಅನುಭವಿಸುತ್ತೀರಿ. ಶುಕ್ರ ಹಾಗೂ ಬುಧ ಐದನೇ ಮನೆಯಲ್ಲಿ ಇರುವುದು ನಿಮಗೆ ಸ್ವಲ್ಪ ನಿರಾಳತೆ ಕೊಡುತ್ತದೆ. ಸಂಗಾತಿಯಿಂದ ಬೆಂಬಲ ಸಹಾಯ ಪಡೆಯುತ್ತೀರಿ. ಲಾಭಸ್ಥಾನದಲ್ಲಿ ಕೇತು ಇದ್ದಾನೆ. ಹಣಕಾಸಿಗೆ ತೊಂದರೆ ಇಲ್ಲ. ದೂರ ಪ್ರಯಾಣ ಇದೆ. ವೃತ್ತಿಯಲ್ಲಿ ಯಶಸ್ಸು ಇದೆ.

Weekly Horoscope In Kannada From March 30 To April 06 2025

ಧನಸ್ಸು ರಾಶಿ

ಈಗ ಮೂರನೇ ಮನೆಯಲ್ಲಿ ಇದ್ದ ಶನಿ ನಾಲ್ಕನೇ ಮನೆಗೆ ಬರುತ್ತಾನೆ. ಸ್ವಲ್ಪ ದೈಹಿಕ ಶ್ರಮ‌ ಕಷ್ಟ ಶುರುವಾಗುತ್ತದೆ. ನಿದ್ರಾಹೀನತೆ, ಒತ್ತಡಗಳು ಇರುತ್ತದೆ.‌ ಕೆಲವು ದಿನಗಳ ನಂತರ ರಾಹು ಮೂರನೇ ಮನೆಗೆ ಬಂದಾಗ ಹಣದ ಹರಿವು ಉತ್ತಮವಾಗುತ್ತದೆ. ಚತುರ್ಥ ಶನಿಯಿಂದ ಅಶಾಂತಿಯ ವಾತಾವರಣ. ಮುಂದೆ ಗುರುಬಲ ಬಂದಾಗ ಪರಿಸ್ಥಿತಿ ಗಳು ನಿಮ್ಮ ನಿಯಂತ್ರಣಕ್ಕೆ ಬರುತ್ತದೆ. ಈಗ ಸದ್ಯಕ್ಕಂತೂ ಒತ್ತಡಗಳಿಂದ ಬಿಡುಗಡೆ ಇಲ್ಲ.

Weekly Horoscope In Kannada From March 30 To April 06 2025

ಮಕರ ರಾಶಿ

ಮೂರನೇ ಮನೆಗೆ ಶನಿ ಬಂದು ನೀವು ಸಾಡೆಸಾತಿ ಶನಿಯಿಂದ ಸಂಪೂರ್ಣ ಬಿಡುಗಡೆ ಹೊಂದಿದ್ದೀರಿ. ಈಗ ನಿಮಗೆ ಅಭಿವೃದ್ಧಿಯ ಸಮಯ. ನೀವು ಅಂದುಕೊಂಡು ಆಗದೆ ಉಳಿದ ಕೆಲಸಗಳು ಈಗ ಮರು ಚಾಲನೆ ಪಡೆದು ಯಶಸ್ವಿಯತ್ತ ಸಾಗುತ್ತದೆ. ಗುರಿಬಲ ಇದೆ, ರಾಹು ಹಾಗೂ ಶನಿಬಲ ಜತೆಗೂಡಿ ಏನೋ ಒಂದು ಪವಾಡ ಸದೃಶವಾದ ಘಟನೆ ಯಿಂದ ನಿಮಗೆ ಒಂದು ದೊಡ್ಡ ಅವಕಾಶದ ಬಾಗಿಲು ತೆರೆಯುತ್ತದೆ. ಹಣದ ಹರಿವು ಉತ್ತಮವಾಗುತ್ತದೆ. ವಿದೇಶಕ್ಕೆ ಅವಕಾಶ ಬರಬಹುದು. ನೀವು ಮತ್ತೆ ಹಳಿಗಳ ಮೇಲೆ ಯಶಸ್ವಿಯಾಗಿ ಸಾಗುತ್ತೀರಿ.

Weekly Horoscope In Kannada From March 30 To April 06 2025

ಕುಂಭ ರಾಶಿ

ನಿಮ್ಮ ರಾಶಿಯಲ್ಲೇ ಇರುವ ಶನಿಈಗ ಮುಂದಿನ ಮನೆಗೆ ಚಲಿಸಿದ್ದಾನೆ ಸಾಡೆಸಾತಿ ಶನಿಯ ಐದುವರ್ಷಗಳ ಹಂತ ಮುಗಿಯಿತು. ಈಗ ಕೊಂಚ ಬಿಡುಗಡೆಯ ಭಾವ.‌ ಎರಡನೇ ಮನೆಯಲ್ಲಿ ಐದು ಗ್ರಹಗಳು ಇದ್ದು ನಾನಾ ಮೂಲಗಳಿಂದ ಧನಲಾಭ. ಕುಟುಂಬ ಸೌಖ್ಯ, ಯಾವುದೋ ನಿಮ್ಮನ್ನು ತೀರಾ ಕಾಡಿಸುತ್ತಿರುವ ವಿಷಯದಿಂದ ಬಿಡುಗಡೆ. ಅಥವಾ ನಿಮಗೆ ಕಾಟ/ಹಿಂಸೆ ಕೊಡುತ್ತಿರುವ ವ್ಯಕ್ತಿಯಿಂದ ಬಿಡುಗಡೆ.

Weekly Horoscope In Kannada From March 30 To April 06 2025

ಮೀನ ರಾಶಿ

ಇಷ್ಟು ದಿನ 12 ನೇ ಮನೆಯಲ್ಲಿ ಇದ್ದ ಶನಿ ಈಗ ನಿಮ್ಮ ರಾಶಿಗೇ ಬಂದಿದ್ದಾನೆ. ಇನ್ನೂ ನಿಮಗೆ ಸಾಡೆಸಾತಿ ಶನಿಯಿಂದ ಬಿಡುಗಡೆ ಇಲ್ಲ. ಸವಾಲುಗಳ ಮಹಾಪೂರವೇ ನಿಮ್ಮದುರು‌ಇದೆ. ಹಣಕಾಸಿಗೆ ತುಂಬಾ ಒತ್ತಡ ಇರುತ್ತದೆ. ನಿಮ್ಮ ರಾಶಿಯಲ್ಲೇ ಐದು ಗ್ರಹಗಳು ಇದ್ದು ಇದರಿಂದ ನಿಮಗೆ ಅಲ್ಪಮಟ್ಟದ ಉಪಕಾರ ಆಗಲಿದೆ. ಕಷ್ಟ ಒತ್ತಡಗಳಿಂದ ತಾತ್ಕಾಲಿಕ ಉಪಶಮನ ಸಿಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+