Weekly Horoscope 2025: ವಾರ ಭವಿಷ್ಯ: ಈ ರಾಶಿಯವರಿಗೆ ಇಲ್ಲಿಂದ ಸುವರ್ಣ ಸಮಯ ಶುರು
ಕೆಲವೇ ದಿನಗಳಲ್ಲಿ ಮಾರ್ಚ್ ತಿಂಗಳು ಪೂರ್ಣಗೊಳ್ಳಲಿದೆ. ಮಾರ್ಚ್ ತಿಂಗಳಲ್ಲಿ ಯುಗಾದಿ ಹಬ್ಬ ಬರುವುದರಿಂದ ಏಪ್ರಿಲ್‌ನಿಂದ ಹೊಸ ವರ್ಷ ಆರಂಭವಾಗುತ್ತದೆ. ಮಾರ್ಚ್ ತಿಂಗಳ ಕೊನೆಯ ವಾರ ಅಂದರೆ 23.03.25 ರಿಂದ 30.03.25 ವರೆಗೆ ವಾರ ಭವಿಷ್ಯ ಹೇಗಿದೆ ಎಂದು ತಿಳಿಯುವ ಸಮಯ ಇದು.
ಕ್ರೋಧಿ ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಫಾಲ್ಗುಣ ಮಾಸದ ಬಹುಳ ನವಮಿಯಿಂದ ವಿಶ್ವಾವಸು ನಾಮ ಸಂವತ್ಸರ ವಸಂತ ಋತು ಚೈತ್ರ ಮಾಸದ ಶುದ್ಧ ಪಾಡ್ಯದವರೆಗೆ 12 ರಾಶಿಗಳ ಭವಿಷ್ಯ ಹೇಗಿದೆ ಎಂದು ತಿಳಿಯೋಣ. ಈ ವಾರದ ಚಂದ್ರನ ಸಂಚಾರ ಪೂರ್ವಾಷಾಢ ನಕ್ಷತ್ರದಿಂದ ರೇವತಿವರೆಗೆ ಇರುತ್ತದೆ.

ಮೇಷರಾಶಿ:
ಸ್ವಲ್ಪ ಕಷ್ಟಗಳು ಬಿಸಿ ವಾತಾವರಣ ಇದೆ. ಮನೆಯಲ್ಲಿ ಹಿರಿಯರ ಅನಾರೋಗ್ಯ ಚಿಂತೆ ನೀಡುತ್ತದೆ.ಆದರೂ ಧೈರ್ಯ ದಿಂದ ಇರಿ. ನಿಮಗೆ ಹಿತೈಷಿಗಳು ಬಹಳ ಇದ್ದಾರೆ. ಸಹೋದರಿಯರು, ಸಂಗಾತಿ ಇಂಥವರಿಂದ ಬಲವಾದ ಬೆಂಬಲ ಇದೆ. ಜೊತೆಗೆ ಗುರುಬಲವೂ ಇದೆ. ಹಾಗಾಗಿ ಕಷ್ಟಗಳು ಹಗುರವಾಗುತ್ತದೆ. ಈಗ ಗುರುಬಲ ಇರುವುದರಿಂದ ಹಣಕಾಸು ಸ್ಥಿತಿ ಉತ್ತಮವಾಗಿದೆ. ಯಾವುದೇ ಕೆಲಸ ಯೋಚಿಸಿ ಮಾಡಿ.

ವೃಷಭರಾಶಿ:
ಹಣಕಾಸು ಸ್ಥಿತಿ ಚೆನ್ನಾಗಿದೆ. ಆದರೂ ಖರ್ಚುಗಳೂ ಇವೆ. ಚಿಂತೆಯೂ ಸಾಕಷ್ಟಿದೆ. ಕೆಲವೇ ದಿನಗಳು ಸಹಿಸಿಕೊಳ್ಳಿ. ನಿಮ್ಮ ಚಿಂತೆಗಳು ಕೊನೆಯಾಗುವ ಕಾಲ ಬರುತ್ತದೆ. ಶನಿಯ ಲಾಭಸ್ಥಾನದ ಪ್ರವೇಶ ನಿಮಗೆ ಅಪರಿಮಿತ ಶಕ್ತಿಯನ್ನು, ಹಣಕಾಸಿನ ಸೌಕರ್ಯವನ್ನು ಕೊಡುತ್ತದೆ. ನೀವು ಅಂದುಕೊಂಡ ಕೆಲಸಗಳಲ್ಲಿ ಯಶಸ್ಸನ್ನು ಸಾಧಿಸುವಿರಿ.

ಮಿಥುನರಾಶಿ:
ಈವಾರ ಚಂದ್ರ ಸಂಚಾರ ಎಂಟು, ಒಂಬತ್ತು ಹತ್ತನೇ ಮನೆಯಲ್ಲಿ. ಇದು ನಿಮಗೆ ಸ್ವಲ್ಪಮಟ್ಟಿಗೆ ಯಶಸ್ಸನ್ನು ಕೊಡುತ್ತದೆ. ಹತ್ತನೇ ಮನೆಯಲ್ಲಿ ವಾರದ ಕೊನೆಯಲ್ಲಿ ಐದು ಗ್ರಹಗಳು ಸೇರಿ ಒಂದು ರಾಜಯೋಗ ಆಗುತ್ತದೆ. ಇದು ವೃತ್ತಿಯಲ್ಲಿ ಯಶಸ್ಸನ್ನು ಅದೃಷ್ಟವನ್ನು ತಂದುಕೊಡುತ್ತದೆ.

ಕಟಕರಾಶಿ:
ಒಂಬತ್ತನೇ ಮನೆಯಲ್ಲಿ ಐದು ಗ್ರಹಗಳು ಸೇರುತ್ತದೆ. ಒಂಬತ್ತನೇ ಮನೆ ಭಾಗ್ಯಸ್ಥಾನ. ಐದು ಗ್ರಹಗಳ ಯುತಿ ಯೋಗ ನಿಮಗೆ ದೊಡ್ಡ ಯಶಸ್ಸನ್ನು ತಂದುಕೊಡುತ್ತದೆ. ದೂರ ಪ್ರಯಾಣ ಸೂಚಿಸುತ್ತದೆ. ಗುರುಗಳ ಸಜ್ಜನರ ಸಂಗ ಸತ್ಸಂಗ ಮೊದಲಾದ ಒಳ್ಳೆಯ ಸಂಗತಿಗಳು ದೊರೆಯುತ್ತದೆ. ಹಣಕಾಸು ಸ್ಥಿತಿ ಸುಗಮವಾಗಿದೆ.

ಸಿಂಹರಾಶಿ:
ಎಂಟನೇ ಮನೆಯಲ್ಲಿ ನಾಲ್ಕು ಗ್ರಹಗಳುಇವೆ. ಆಪತ್ತಿನಿಂದ ರಕ್ಷಣೆ ನೀಡುತ್ತದೆ. ನಾಲ್ಕೂ ಗ್ರಹಗಳೂ ಎಂಟನೇ ಮನೆಯಿಂದ ಎರಡನೇ ಮನೆ ನೋಡುವಾಗ ಹಣದ ಅಡಚಣೆಯೂ ಕಡಿಮೆಯಾಗುತ್ತದೆ. ಆದರೆ ಯುವಪ್ರೇಮಿಗಳಿಗೆ ಕೊಂಚ ವಿಷಾದಕರ. ಪ್ರೇಮ ವೈಫಲ್ಯ ಅನುಭವಿಸಬೇಕಾಬಹುದು. ಕೆಲವು ದಿನಗಳಲ್ಲಿ ಗುರುಬಲ ಬರುತ್ತದೆ. ಆಗ ಪರಿಸ್ಥಿತಿ ಇನ್ನಷ್ಡು ಸುಧಾರಿಸುತ್ತದೆ.

ಕನ್ಯಾರಾಶಿ:
ಏಳನೇ ಮನೆಯಲ್ಲಿ ನಾಲ್ಕು ಗ್ರಹಗಳು ನೇರವಾಗಿ ನಿಮ್ಮ ರಾಶಿಯನ್ನು ನೋಡುತ್ತವೆ. ಆರೋಗ್ಯ ಸಮಸ್ಯೆಗಳು ಉಲ್ಬಣಿಸಬಹುದು. ಬ್ಯಾಕ್ಟೀರಿಯಗಳಿಂದ ತೊಂದರೆ, ಅಲರ್ಜಿ ಹೊಟ್ಟೆಯೊಳಗಿನ ಅಂಗಗಳಿಗೆ ಧಕ್ಕೆ ಆಗಬಹುದು. ಆರೋಗ್ಯದ ವಿಷಯದಲ್ಲಿ ಜಾಗ್ರತೆ ವಹಿಸಿ. ದೇವರ ಕಾರ್ಯಗಳನ್ನು ಮಾಡುತ್ತೀರಿ, ವಿದೇಶಪ್ರಯಾಣ ಯೋಗ ಇದೆ. ಧರ್ಮಪ್ರಚಾರ ಮಾಡುತ್ತೀರಿ.

ತುಲಾರಾಶಿ:
ಕಾಯುತ್ತಿರುವ ಗಳಿಗೆಗಳು ಹತ್ತಿರ ಬರುತ್ತಿವೆ. ಆರನೇ ಮನೆಗೆ ಶನಿ ಪ್ರವೇಶ, ಲಾಭಸ್ಥಾನಕ್ಕೆ ಕೇತು ಹಾಗೂ ಭಾಗ್ಯಸ್ಥಾನಕ್ಕೆ ಗುರು ಪ್ರವೇಶ ಮಾಡುವುದರಿಂದ ನಿಮಗೆ ಹೊಸದೊಂದುಲೋಕವೇ ತೆರೆದಂತಾಗುತ್ತದೆ. ನೀವು ಊಹಿಸದ ಶುಭ ಪರಿವರ್ತನೆಗಳು ನಡೆಯಲಿವೆ. ಒಂದು ದೊಡ್ಡ ಜವಾಬ್ದಾರಿ ಯಿಂದ ಮುಕ್ತಿ ದೊರೆತು ನಿರಾಳರಾಗುತ್ತೀರಿ

ವೃಶ್ಚಿಕರಾಶಿ:
ಐದನೇ ಮನೆಯಲ್ಲಿ ನಾಲ್ಕು ಗ್ರಹಗಳು ಸೇರಿ ಒಂದು ರಾಜಯೋಗವಾಗಿದೆ. ಐದನೇ ಮನೆ ವಿದ್ಯಾಸ್ಥಾನ, ಪೂರ್ವ ಪುಣ್ಯ ಸ್ಥಾನ ಸಂತಾನಸ್ಥಾನ ಹಾಗಾಗಿ ಈ ಮೂರೂ ಸಂಗತಿಗಳಿಗೂ ಈಗ ಪುಷ್ಟಿ ಸಿಗುತ್ತದೆ. ಉನ್ನತ ಶಿಕ್ಷಣ ಪ್ರಾಪ್ತವಾಗುತ್ತದೆ, ಸಂತಾನ ನಿರೀಕ್ಷೆ ಇರುವರಿಗೆ ಸಂತಾನಪ್ರಾಪ್ತಿ, ಯವುದಾದರೂ ಬಾಕಿಯಾಗಿದ್ದ ಮುಖ್ಯ ಕೆಲಸಗಳು ಪೂರ್ಣವಾಗುತ್ತದೆ. ಮನಸ್ಸಿಗೆ ಸಮಾಧಾನ ಸಿಗುತ್ತದೆ.

ಧನಸ್ಸುರಾಶಿ:
ಈಗ ಷಷ್ಠಮ ಗುರು ಆರೋಗ್ಯ ಹಾನಿ ಮಾಡುತ್ತಾನೆ. ಮಾನಸಿಕ ಕ್ಲೇಶ ಅನುಭವಿಸುವಂತೆ ಮಾಡುತ್ತಾನೆ. ಇನ್ನು ಕೆಲವೇ ದಿನಗಳಲ್ಲಿ ಗುರುಬಲ ಬರುತ್ತದೆ. ಜೀವನ ಸರಿದಾರಿಗೆ ಬರುತ್ತದೆ. ಗುರುಬಲ ಬರುವುದರಿಂದ ನಿಂತು ಹೋದ ಕೆಲಸಗಳು ಪುನಃ ಪ್ರಾರಂಭವಾಗುತ್ತದೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ನೌಕರಿಯಲ್ಲಿ ಬಡ್ತಿ ಇದೆ. ರಾಹು ಮೂರನೇ ಮನೆಗೆ ಬಂದಾಗ ಹಣಕಾಸಿನ ಹರಿವು ಉತ್ತಮವಾಗುತ್ತದೆ.

ಮಕರರಾಶಿ:
ಮೂರನೇ ಮನೆಯಲ್ಲಿ ರಾಹು ಐದನೇ ಮನೆಯಲ್ಲಿ ಗುರು ಸಮಯ ಬಹಳ ಚೆನ್ನಾಗಿದೆ. ಶನಿ ಕೂಡ ಎರಡನೇ ಮನೆಯಿಂದ ಮೂರನೇ ಮನೆಗೆ ಪ್ರವೇಶವಾದಾಗ ಇನ್ನೂ ಹೆಚ್ಚಿನ ಶುಭ ಫಲಗಳು ದೊರೆಯುತ್ತದೆ. ಹೊಸ ಕೆಲಸ, ಬಡ್ತಿ, ಅಧಿಕಾರ, ಪದವಿ ನಿಮ್ಮದಾಗಲಿದೆ. ವಿದ್ಯಾರ್ಥಿಗಳಿಗೆ ಶುಭವಿದೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿಇದೆ. ಬದುಕಿನಲ್ಲಿ ಬಹಳಒಳ್ಳೆಯ ತಿರುವು ಇದೆ.

ಕುಂಭರಾಶಿ:
ಎರಡನೇ ಮನೆಯಲ್ಲಿ ನಾಲ್ಕು ಗ್ರಹಗಳು ಸೇರಿ ಹಣಕಾಸಿನ ಸುಸ್ಥಿತಿ ತಂದುಕೊಡುತ್ತದೆ. ಹೊಸ ಹೊಸ ನಿರೀಕ್ಷೆಗಳು ಹೊಸ ಯೋಜನೆಗಳು ಮನದಲ್ಲಿ ಇದೆ. ಅವೆಲ್ಲವೂ ವಾಸ್ತವಕ್ಕೆ ಬರಬೇಕೆಂದರೆ ಕೊಂಚ ಕಾಯಬೇಕು. ಸ್ವಲ್ಪ ದಿನಗಳಲ್ಲಿ ಗುರುಬಲ ಬರುತ್ತದೆ ಹಾಗೂ ಶನಿ ನಿಮ್ಮ ರಾಶಿಯಿಂದ ಮುಂದಿನ ರಾಶಿಗೆ ಚಲಿಸುತ್ತಾನೆ. ಮುಂದಿನ ದಿನಗಳು ಖಂಡಿತಾ ಒಳ್ಳೆಯದಿದೆ.

ಮೀನರಾಶಿ:
ಇನ್ನೂ ಕಷ್ಟಗಳ ಚಿಂತೆಗಳ ಸರಮಾಲೆ ತಪ್ಪಿದ್ದಲ್ಲ. ಈಗೇನಿದ್ದರೂ ದೇವರನ್ನು ನಂಬಬೇಕು ದೇವರಿಗೆ ಬಿಡಬೇಕು ಅಷ್ಟೆ. ನಿಮ್ಮ ರಾಶಿಯಲ್ಲೇ ನಾಲ್ಕು ಗ್ರಹಗಳಿವೆ. ಈ ವಾರ ಕೊಂಚ ಉಸಿರಾಡಲು ಅವಕಾಶ ಇದೆ. ಹಂತಹಂತವಾಗಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಈಗ ಕಷ್ಟ ಇದ್ದರೂ ಮುಂದೆ ಒಳ್ಳೆಯ ದಿನಗಳುಇವೆ. ಯವ ಕೆಲಸವನ್ನೂ ಯೋಚಿಸಿ ನಿಧಾನವಾಗಿ ಮಾಡಿ. ಬ್ಯಾಕ್ಟೀರಿಯಾ ಇನ್ ಫೆಕ್ಷನ್ ಆಗಬಹುದು ಜಾಗ್ರತೆ.












Click it and Unblock the Notifications