Weekly Horoscope: ಕನ್ಯಾ ಸೇರಿದಂತೆ ಈ ರಾಶಿಗಳ ಕೈ ಹಿಡಿಯಲಿದೆ ಅದೃಷ್ಟ, ಧನಲಕ್ಷ್ಮಿಯ ಕೃಪೆ

ಕ್ರೋಧಿ ನಾಮ ಸಂವತ್ಸರ ದಕ್ಷಿಣಾಯನ ಹೇಮಂತ ಋತು ಮಾರ್ಗಶಿರ ಮಾಸದ ಕೃಷ್ಣಪಕ್ಷದ ಸಪ್ತಮಿಯಿಂದ ಚತುರ್ದಶಿಯ ವರೆಗೆ.

ಈ ವಾರದ ಚಂದ್ರನ ಸಂಚಾರ ಪುಬ್ಬಾ ನಕ್ಷತ್ರದಿಂದ ಜ್ಯೇಷ್ಠ ನಕ್ಷತ್ರದ ವರೆಗೆ.

22/12/2024-28/12/2024ರ ವಾರ ಭವಿಷ್ಯ

Weekly Horoscope In Kannada From December 22 To December 28 2024

ಮೇಷ ರಾಶಿಯ ವಾರ ಭವಿಷ್ಯ

ಈ ವಾರದ ಕೊನೆಯಲ್ಲಿ ಶುಕ್ರ ಲಾಭ ಸ್ಥಾನಕ್ಕೆ ಬಂದಾಗ ನಿಮ್ಮ ಜೀವನದಲ್ಲಿ‌ ಒಂದು ಮಹತ್ತರ ಬದಲಾವಣೆ ಸಾಧ್ಯತೆ ಇದೆ. ಬಹುದಿಗಳಿಂದ ನಿರೀಕ್ಷಿಸುತ್ತಿದ್ದ ಫಲ ನಿಮ್ಮ ಕೈಸೇರಲಿದೆ. ಇದರಿಂದ ನಿಮಗೆ ಸಂತೋಷ ನೆಮ್ಮದಿ ಎರಡೂ ದೊರೆಯುತ್ತದೆ. ಹಣದ ಹರಿವು ಉತ್ತಮವಾಗಿದೆ. ತಂದೆಯಿಂದ ಸಹಾಯ ಸಹಕಾರ ಲಭಿಸಲಿದೆ.

Weekly Horoscope In Kannada From December 22 To December 28 2024

ವೃಷಭ ರಾಶಿಯ ವಾರ ಭವಿಷ್ಯ

ಈಗ ಭಾಗ್ಯ ಸ್ಥಾನದಲ್ಲಿ ಶುಕ್ರ ಇದ್ದು ನಿಮಗೆ ಯಾವುದೇ ಸಂಕಷ್ಟಗಳು ಬಾರದಂತೆ ತಡೆಯುತ್ತಾನೆ. ಲಾಭಸ್ಥಾನದಲ್ಲಿ ಮನೆಯಲ್ಲಿ ರಾಹು ಹಣದ ಹರಿವನ್ನು ಉತ್ತಮ ಪಡಿಸುತ್ತಾನೆ. ಏಳನೇ ಮನೆಯಲ್ಲಿ ಬುಧ, ಮೂರನೇ ಮನೆಯಲ್ಲಿ ಕುಜ ಸಹ ನಿಮಗೆ ಅನುಕೂಲರಾಗಿ ಇದ್ದಾರೆ. ಇನ್ನೇನು ಹೊಸವರ್ಷ ಪ್ರಾರಂಭವಾಗುತ್ತದೆ. ಹೊಸವರ್ಷದಲ್ಲಿ ನಿಮಗೆಲ್ಲ ಒಳಿತಾಗುತ್ತದೆ.

Weekly Horoscope In Kannada From December 22 To December 28 2024

ಮಿಥುನ ರಾಶಿಯ ವಾರ ಭವಿಷ್ಯ

ಭೂಮಿ ಸಂಬಂಧವಾಗಿ ಏನೂ ವ್ಯವಹಾರ ಮಾಡಬೇಡಿ ನಷ್ಟವಾಗುತ್ತದೆ. ದೈಹಿಕ ಆಯಾಸ ಮೈಕೈ ನೋವು‌ ಇರುತ್ತದೆ. ಔಷಧಿಗಳ ವ್ಯಾಪಾರ ಮಾಡುವವರು ಹಾಗೂ ಔಷಧಿಯ ಕಂಪೆನಿಗಳಲ್ಲಿ ಕೆಲಸ ಮಾಡುವವರಿಗೆ ಪ್ರಗತಿ‌ ಇದೆ. ಈ ವಾರಾತ್ಯದಲ್ಲಿ ಒಂಬತ್ತನೇ ಮನೆಗೆ ಶುಕ್ರ ಬರುವುದರಿಂದ ನಿಮಗೆ ಧನಲಾಭ ಕಾರ್ಯಸಿದ್ಧಿ ಇದೆ. ಧರ್ಮ ಕಾರ್ಯಗಳು ದೇವರ ಕಾರ್ಯಗಳಿಗೆ ಖರ್ಚು ಮಾಡುವಿರಿ.

Weekly Horoscope In Kannada From December 22 To December 28 2024

ಕಟಕ ರಾಶಿಯ ವಾರ ಭವಿಷ್ಯ

ನಿಮ್ಮ ರಾಶಿಯಲ್ಲೇ ಕುಜ ಇದ್ದಾನೆ ಇದು ನಿಮ್ಮ ದೈಹಿಕ ಚಟುವಟಿಕೆ ಗಳ ಮೇಲೆ ವಿರುದ್ಧ ಪರಿಣಾಮ ಬೀರುತ್ತದೆ. ಆಯಾಸ, ಶೀತ ಭಾದೆ ಕಾಡಬಹುದು. ಐದನೇ ಮನೆಯಲ್ಲಿ ಬುಧ, ಆರರಲ್ಲಿ ಸೂರ್ಯ, ಹನ್ನೊಂದನೇ ಮನೆಯಲ್ಲಿ ಗುರು ಸಮಯ ಬಹಳ ಚೆನ್ನಾಗಿದೆ. ಯಾವುದೇ ಕೆಲಸ ಮುಂದುವರೆಸಬಹುದು. ಧನಾಗಮನ ಉತ್ತಮವಾಗಿದೆ.

Weekly Horoscope In Kannada From December 22 To December 28 2024

ಸಿಂಹ ರಾಶಿಯ ವಾರ ಭವಿಷ್ಯ

ಗುರು ಹತ್ತನೇ ಮನೆಯಲ್ಲಿರುವುದು ಸ್ಥಾನ ಪಲ್ಲಟವನ್ನು ತೋರಿಸುತ್ತದೆ ಅಥವಾ ವೃತ್ತಿಯಲ್ಲಿ ಏರುಪೇರು ತೋರಿಸುತ್ತದೆ. ನಾಲ್ಕನೇ ಮನೆಯಲ್ಲಿ ಬುಧ ಶುಭಫಲಗಳನ್ನು ಕೊಡುತ್ತಾನೆ. ಇಂಜಿನಿಯರ್, ಲೆಕ್ಕಶಾಸ್ತ್ರ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಶುಭಫಲಗಳಿವೆ. ಆರನೆಸ ಮನೆಯಲ್ಲಿ ಶುಕ್ರ, ಏಳರಲ್ಲಿ ಶನಿ ಹತ್ತರಲ್ಲಿ ಗುರು ಹನ್ನೆರಡನೇ ಮನೆಯಲ್ಲಿ ಕುಜ ಇದು ಯಾವುದೂ ನಿಮಗೆ ಉಪಕಾರಿ‌ ಅಲ್ಲ. ಈಗ ಸಹನೆಯಿಂದಲೇ ಎಲ್ಲ ಸವಾಲುಗಳನ್ನು ಎದುರಿಸಬೇಕು.‌ ಕುಟುಂಬದಲ್ಲೇ ವಿರೋಧಗಳಿವೆ. ತಾಳ್ಮೆ ಇರಲಿ. ದುಡುಕಿನ ನಿರ್ಧಾರಗಳು ಬೇಡ.

Weekly Horoscope In Kannada From December 22 To December 28 2024

ಕನ್ಯಾ ರಾಶಿಯ ವಾರ ಭವಿಷ್ಯ

ಒಂಬತ್ತರ ಗುರು ಧಾರ್ಮಿಕ ಭಾವನೆಯನ್ನು ಉದ್ದೀಪಿಸುತ್ತಾನೆ. ಆ ಮೂಲಕ ನಿಮ್ಮಿಂದ ದೇವ ಕಾರ್ಯ ಧರ್ಮ ಕಾರ್ಯ ಮಾಡಿಸಿ ನಿಮ್ಮ ಪುಣ್ಯವನ್ನು ದ್ವಿಗುಣಗೊಳಿಸುತ್ತಾನೆ. ಆರನೇ ಮನೆಯಲ್ಲಿ ಶನಿ ಹಣದ ಹರಿವನ್ನು ಉತ್ತಮ ಪಡಿಸುತ್ತಾನೆ. ಐದನೇ ಮನೆಯ ಶುಕ್ರನಿಂದ ಸಂತಾನಕ್ಕೆ ಒಳ್ಳೆಯದು. ನಿಮ್ಮ ರಾಶಿಯಲ್ಲೇ ಕೇತು ಇರುವುದರಿಂದ ಆರೋಗ್ಯದಲ್ಲಿ ಜಾಗ್ರತೆ ವಹಿಸಿ.

Weekly Horoscope In Kannada From December 22 To December 28 2024

ತುಲಾ ರಾಶಿಯ ವಾರ ಭವಿಷ್ಯ

ಎರಡನೇ ಮನೆಯಲ್ಲಿ ಬುಧ, ಮೂರರಲ್ಲಿ ಸೂರ್ಯ , ನಾಲ್ಕರಲ್ಲಿ ಶುಕ್ರ, ಆರರಲ್ಲಿ ರಾಹು ಸಮಯ ಬಹಳ ಚೆನ್ನಾಗಿದೆ. ಪಂಚಮ ಶನಿಯ ಅಂತಿಮ ಭಾಗದಲ್ಲಿ ಇದ್ದೀರಿ. ಹೊಸ ವರ್ಷಕ್ಕೆ ಕೆಲವೇ ದಿನಗಳಿವೆ, ಪಂಚಮ ಶನಿಯಿಂದ ಮುಕ್ತಿ‌ಸಿಗುತ್ತದೆ. ಆರನೇ ಮನೆಯ ಶನಿ‌ಪ್ರವೇಶ ಬಹಳಷ್ಟು ಭಾಗ್ಯಗಳನ್ನು ಕೊಡುತ್ತದೆ. ಹಣದ ಹರಿವು ಉತ್ತಮವಾಗಿದೆ. ಶುಭ ಸೂಚನೆಗಳ ನಿರೀಕ್ಷೆ ಇರಲಿ.

Weekly Horoscope In Kannada From December 22 To December 28 2024

ವೃಶ್ಚಿಕ ರಾಶಿಯ ವಾರ ಭವಿಷ್ಯ

ಗುರು ಏಳನೇ ಮನೆಯಲ್ಲಿ ಸಕಲ ದೋಷ‌ನಿವಾರಕ ಸಕಲ ಕಷ್ಟ ನಿವಾರಕ. ಆದರೆ ನಾಲ್ಕರಲ್ಲಿ ಶನಿ, ಐದರಲ್ಲಿ ರಾಹು ಇರುವುದು ದೋಷಪೂರಿತವಾಗಿದ್ದರೂ ಗುರುವಿನ ಅನುಗ್ರಹದಿಂದ ದೋಷನಿವಾರಣೆ ಆಗುತ್ತದೆ. ಮೂರರಲ್ಲಿ ಶುಕ್ರ ಸಹೋದರಿಯರಿಂದ ಸಹಾಯ ಕೊಡಿಸುತ್ತಾನೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ಹೊಸ ಕೆಲಸ ಬಡ್ತಿ ವಿದೇಶ ಪ್ರವಾಸ ಮೊದಲಾದ ಸಂಗತಿಗಳು ನಿಮಗೆ ಖುಷಿ ಕೊಡುತ್ತದೆ

Weekly Horoscope In Kannada From December 22 To December 28 2024

ಧನಸ್ಸು ರಾಶಿಯ ವಾರ ಭವಿಷ್ಯ

ನಿಮ್ಮ ರಾಶಿಯಲ್ಲೇ ಇರುವ ಸೂರ್ಯ ಕೊಂಚ ಉಷ್ಣಪ್ರಕೋಪ ಹೆಚ್ಚಿಸುತ್ತಾನೆ. ಎರಡನೇ ಮನೆಯಲ್ಲಿ ಶುಕ್ರ ಧನಲಾಭ ಕೊಡುತ್ತಾನೆ ವಾಹನದಿಂದ ಲಾಭ ಸಿಗುತ್ತದೆ. ಈಗ ಗುರು ಆರನೇ ಮನೆಯಲ್ಲಿ ಇರುವುದರಿಂದ ಕೊಂಚ ಮಾನಸಿಕ ಕಿರಿಕಿರಿ ಇರುತ್ತದೆ. ಯಾರಾದರೂ ಅಂದ ಸಣ್ಣ ಮಾತೂ ನಿಮಗೆ ನೋವನ್ನು ಉಂಟು ಮಾಡುತ್ತದೆ.‌ ಎಂಟನೇ ಮನೆಯಲ್ಲಿ ಕುಜ ಇರುವುದು ಆರೋಗ್ಯದಲ್ಲಿ ಏರುಪೇರನ್ನು ತೋರಿಸುತ್ತದೆ. ಈಗ ಕೊಂಚ ಸಹಿಸಿಕೊಳ್ಳಿ. ಮುಂದೆ ಹೊಸ ವರ್ಷದಲ್ಲಿ ಒಳ್ಳೆಯ ದಿನಗಲಕು ಖಂಡಿತಾ ಇದೆ.

Weekly Horoscope In Kannada From December 22 To December 28 2024

ಮಕರ ರಾಶಿಯ ವಾರ ಭವಿಷ್ಯ

ಈಗ ಸಾಡೆಸಾತಿ ಶನಿ ಮುಗಿಯುವ ಹಂತದಲ್ಲಿ ಇದೆ. ಐದನೇ ಮನೆಯಲ್ಲಿ ಗುರು‌ ಇದ್ದಾನೆ. ಮೂರನೇ ಮನೆಯಲ್ಲಿ ರಾಹು ಇದ್ದಾನೆ. ನಿಮ್ಮ ರಾಶಿಯಲ್ಲೇ ಶುಕ್ರ ಇದ್ದಾನೆ. ಗ್ರಹಗಳು ಅನುಕೂಲಕರ ಸ್ಥಳಗಳಲ್ಲಿ ಇದೆ. ಇದು ನಿಮಗೆ ಭಾಗ್ಯೋದಯವಾಗುವ ಸಮಯ. ಅದೃಷ್ಟದ ಕದ ಯಾವಕಡೆ ಬೇಕಾದರೂ ತೆರೆಯಬಹುದು. ಎಚ್ಚರಿಕೆಯಿಂದ ಗಮನಿಸುತ್ತಿರಿ. ಖಂಡಿತಾ ನಿಮಗೆ ಯಾವುದೋ‌ ಒಂದು ಅನುಕೂಲ ಅದೃಷ್ಟ ಒದಗಿ ಬರುತ್ತದೆ. ಹೊಸ ಕೆಲಸ ಸಿಗುವುದು, ವಿವಾಹ, ಬಡ್ತಿ, ವಿದೇಶ ಪ್ರವಾಸ ಉನ್ನತ ವ್ಯಾಸಂಗ ಮೊದಲಾದ ಎಲ್ಲ ಸಂಗತಿಗಳಿಗೂ ಈಗ ಸುಸಮಯ.

Weekly Horoscope In Kannada From December 22 To December 28 2024

ಕುಂಭ ರಾಶಿಯ ವಾರ ಭವಿಷ್ಯ

ನಿಮಗೆ ಸಾಡೆಸಾತಿ ಶನಿಯ ಪ್ರಭಾವ ಇರುವುದರಿಂದ ಒಳ್ಳೆಯ ದಿನಗಳಿಗೆ ಕಾಯಬೇಕು.‌ ಮುಂದಿನ ಹೊಸ ವರ್ಷದಲ್ಲಿ‌ ಅದೃಷ್ಟ ಕೈಗೂಡಿಬರಲಿದ ಈಗ ಲಾಭ ಸ್ಥಾನದಲ್ಲಿ ಸೂರ್ಯ ಮತ್ತು ವೃತ್ತಿ ಸ್ಥಾನದಲ್ಲಿ ಬುಧ ಇದ್ದು ನಿಮಗೆ ಅಲ್ಪಮಟ್ಟಿನ ಲಾಭವನ್ನು ಕೊಡುತ್ತಾರೆ. ನಾಲ್ಕರ ಗುರು ಕೊಂಚ ಒತ್ತಡಗಳನ್ನು ಕಿರುಕುಳಗಳನ್ನು ಕೊಡುತ್ತಾನೆ. ಗುರು ಸ್ಮರಣೆ ಮಾಡಬೇಕು.‌

Weekly Horoscope In Kannada From December 22 To December 28 2024

ಮೀನ ರಾಶಿಯ ವಾರ ಭವಿಷ್ಯ

ಈಗ ಲಾಭಸ್ಥಾನದಲ್ಲಿ ಶುಕ್ರ, ಒಂಬತ್ತನೇ ಮನೆಯಲ್ಲಿ‌ ಬುಧ ನಿಮ್ಮ ರಕ್ಷಣೆಗೆ ಇದ್ದಾರೆ. ಸಾಡೆಸಾತಿ ಶನಿಯ ಪ್ರಭಾವದ ಮೊದಲ ಹಂತದಲ್ಲೇ ಇದ್ದೀರಿ, ಆರೋಗ್ಯ ಹಣಕಾಸು ಜೋಪಾನ.‌ ಯಾವುದೋ ಒಂದು ಸಣ್ಣ ವ್ಯತ್ಯಾಸವೂ ನಿಮಗೆ ದುಬಾರಿ‌ ಆಗಬಹುದು. ಜಾಗ್ರತೆ ಇರಲಿ. ಅರೋಗ್ಯ ಸಣ್ಣ ಏರುಪೇರು ಆದರೂ ನಿರ್ಲಕ್ಷ್ಯ ಮಾಡಬೇಡಿ. ಸವಾಲುಗಳು ಬಹಳ ಎದುರಾಗುತ್ತದೆ ನಿಭಾಯಿಸಿ. ಈಶ್ವರನ ಪ್ರಾರ್ಥನೆ ಮಾಡಿ.

This is an AI generated article image through WISE

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+