ಈ ರಾಶಿಯವರ ಹಣ ಸಂಪತ್ತು ಹೆಚ್ಚಾದರೆ,ಇವರು ಹೆಜ್ಜೆ ಹೆಜ್ಜೆಗೂ ಎಚ್ಚರದಿಂದರಬೇಕು:ದ್ವಾದಶ ರಾಶಿಗಳ ವಾರ ಭವಿಷ್ಯ ಇದು

ಏಪ್ರಿಲ್ 20ರಿಂದ ಏಪ್ರಿಲ್ 26ರವರೆಗೆ ನಡೆಯುವ ಈ ವಾರ ಹನ್ನೆರಡು ರಾಶಿ ಚಕ್ರಗಳ ಮೇಲೆ ಗ್ರಹ-ನಕ್ಷತ್ರಗಳ ಸಂಚಾರವು ವಿಭಿನ್ನ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ವೈದಿಕ ಜ್ಯೋತಿಷ್ಯದ ಪ್ರಕಾರ ಕೆಲವು ರಾಶಿಗಳಿಗೆ ಈ ಸಮಯವು ಅತ್ಯಂತ ಶುಭದಾಯಕವಾಗಿದ್ದರೆ, ಇನ್ನು ಕೆಲವು ರಾಶಿಗಳು ಅನೇಕ ಸಣ್ಣ ಪುಟ್ಟ ಸವಾಲುಗಳನ್ನು ಎದುರಿಸಬೇಕಾಗಬಹುದು. ನಕ್ಷತ್ರಗಳ ಸಂಚಾರದ ಆಧಾರದ ಮೇಲೆ ಮೇಷದಿಂದ ಮೀನ ರಾಶಿವರೆಗಿನ ನಿಮ್ಮ ವಾರಭವಿಷ್ಯವನ್ನು ಇಲ್ಲಿ ವಿವರವಾಗಿ ತಿಳಿದುಕೊಳ್ಳಿ.

ಯಾವ ರಾಶಿಯವರ ವಾರದ ಭವಿಷ್ಯ ಹೇಗಿರಲಿದೆ:

ಮೇಷ ರಾಶಿ: ಈ ವಾರ ಮೇಷ ರಾಶಿಯವರಿಗೆ ಕೆಲಸದಲ್ಲಿ ಹೊಸ ಜವಾಬ್ದಾರಿ ಸಿಗಬಹುದು.ನಿಮ್ಮ ಕರ್ತವ್ಯಗಳನ್ನು ಚೆನ್ನಾಗಿ ನಿರ್ವಹಿಸಿ ನಿಮ್ಮನ್ನು ಸಾಬೀತುಪಡಿಸಲು ಇದು ಉತ್ತಮ ಸಮಯ.ಸಾಲ ಕೊಟ್ಟು ಹೊರಗೆ ಉಳಿದಿರುವ ಹಣ ಮತ್ತೆ ಕೈ ಸೇರುವುದು. ಈ ಮೂಲಕ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುವುದು.

Weekly Horoscope

ವೃಷಭ ರಾಶಿ: ಶುಕ್ರನು ವೃಷಭ ರಾಶಿಯಲ್ಲಿ ಸಂಚರಿಸುತ್ತಿದ್ದು, ಈ ರಾಶಿಯವರ ಸಂಪತ್ತು ಹೆಚ್ಚಾಗುವುದು.ನೀವು ಮಾಡುವ ಕೆಲಸಕ್ಕೆ ಸರಿಯಾದ ಮನ್ನಣೆ ಸಿಗುವುದು.ಸ್ಥಾನಮಾನ, ಗೌರವ ಹೆಚ್ಚಾಗುವುದು.

ಮಿಥುನ ರಾಶಿ: ಮಿಥುನ ರಾಶಿಯವರು ಈ ವಾರ ಹಲವಾರು ಕೆಲಸಗಳನ್ನು ಮಾಡಬೇಕಾಗಬಹುದು.ಇದು ಆಯಾಸ ಮತ್ತು ತಲೆನೋವಿಗೆ ಕಾರಣವಾಗಬಹುದು. ಇದ್ದಕ್ಕಿದ್ದಂತೆ ಖರ್ಚು ಹೆಚ್ಚಾಗಬಹುದು. ಹಳೆಯ ಸ್ನೇಹಿತರ ಮೂಲಕ ಸಿಹಿ ಸುದ್ದಿ ಕೇಳಿ ಬರುವುದು.

ಕರ್ಕಾಟಕ ರಾಶಿ: ಈ ವಾರ ಕೆಲಸದಲ್ಲಿನ ಆಸಕ್ತಿ ಕಡಿಮೆಯಾಗುವುದು. ಇದು ನಿಮ್ಮ ಯಶಸ್ಸಿಗೆ ತೊಡಕು ಉಂಟು ಮಾಡಬಹುದು. ಹಣ ಖರ್ಚು ಮಾಡುವಾಗ ಬುದ್ಧಿವಂತಿಕೆಯಿಂದ ಇರಿ. ಸಣ್ಣ ಪುಟ್ಟ ಕಾಯಿಲೆಗಳು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

ಸಿಂಹ ರಾಶಿ: ವೃತ್ತಿಜೀವನದ ದೃಷ್ಟಿಯಿಂದ ಈ ವಾರ ಶುಭಕರವಾಗಿದೆ. ಬಡ್ತಿ ಸಿಗಬಹುದು ಅಥವಾ ಹೊಸ ಜವಾಬ್ದಾರಿ ನಿಮ್ಮ ಹೆಗಲೇರಬಹುದು. ಆದಾಯವೂ ಹೆಚ್ಚಾಗಬಹುದು.ನಿಮ್ಮ ಕುಟುಂಬ ಮತ್ತು ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ.

ಕನ್ಯಾರಾಶಿ: ಬಾಕಿ ಉಳಿದಿರುವ ಕೆಲಸ ಪೂರ್ಣವಾಗುವುದು. ಭವಿಷ್ಯಕ್ಕಾಗಿ ಸ್ವಲ್ಪ ಹಣವನ್ನು ಉಳಿಸಲು ಕೈಲಾದಷ್ಟು ಪ್ರಯತ್ನಿಸಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ತುಲಾ ರಾಶಿ: ಈ ವಾರ ಕೆಲಸದಲ್ಲಿ ಸವಾಲುಗಳು ಎದುರಾಗಬಹುದು. ನಿಮ್ಮ ಸ್ವಂತ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ.ಯಾರಿಗೂ ಸಾಲ ನೀಡಲು ಹೋಗಬೇಡಿ. ಈ ವಾರ ನೀಡುವ ಸಾಲ ಮರಳಿ ಬರುವುದಿಲ್ಲ. ಮೂಳೆ ಸಮಸ್ಯೆಗಳು ಅಥವಾ ಬೆನ್ನು ನೋವಿನ ಬಾಧೆ ಕಾಣಿಸಿಕೊಳ್ಳಬಹುದು.

ವೃಶ್ಚಿಕ ರಾಶಿ: ನೀವು ಕಲಿಯುವ ಹೊಸ ಕೌಶಲ್ಯ ನಿಮ್ಮ ವೃತ್ತಿ ಜೀವನದ ದಿಕ್ಕನ್ನು ಬದಲಿಸಬಹುದು. ವ್ಯವಹಾರದಲ್ಲಿ ಅಭಿವೃದ್ಧಿಯಾಗುವುದು. ಹಠಾತ್ ಆರ್ಥಿಕ ಲಾಭವಾಗುವ ಸಾಧ್ಯತೆ ಇದೆ. ಮಾನಸಿಕ ಒತ್ತಡ ನಿವಾರಣೆಯಾಗುವುದು.

ಧನು ರಾಶಿ: ಈ ವಾರ ಎಲ್ಲಾ ರೀತಿಯಿಂದಲೂ ಪರಿಸ್ಥಿತಿ ನಿಮ್ಮ ಪರವಾಗಿ ಇರುವುದು.ಆರ್ಥಿಕ ಸ್ಥಿತಿ ಸಮತೋಲನದಲ್ಲಿರುತ್ತದೆ.ಅಂದರೆ ಖರ್ಚುಗಳು ಆದಾಯಕ್ಕೆ ಅನುಗುಣವಾಗಿರುತ್ತವೆ. ಆರೋಗ್ಯವೂ ತೃಪ್ತಿಕರವಾಗಿರುತ್ತದೆ.

ಮಕರ ರಾಶಿ: ಈ ವಾರ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು. ಸಮಯ ಮತ್ತು ಅದೃಷ್ಟ ನಿಮ್ಮ ಕಡೆಯೇ ಇರುತ್ತದೆ. ಈ ಅವಧಿಯು ವ್ಯವಹಾರಕ್ಕೆ ಲಾಭದಾಯಕವಾಗಿರುತ್ತದೆ.

ಕುಂಭ ರಾಶಿ: ಈ ವಾರ ಹೊಸ ಆಲೋಚನೆಗಳೊಂದಿಗೆ ಕೆಲಸ ಆರಂಭಿಸುವಿರಿ. ಅನಗತ್ಯ ವೆಚ್ಚಗಳನ್ನು ತಪ್ಪಿಸಿ. ಕಣ್ಣಿನ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ.

ಮೀನ ರಾಶಿ: ಮೀನ ರಾಶಿಯವರಿಗೆ ಈ ವಾರ ಮಿಶ್ರ ಫಲ ಸಿಗುವುದು. ವೃತ್ತಿಯಲ್ಲಿ ಆರ್ಥಿಕ ಲಾಭವಾಗುವುದು. ಕೆಲಸಗಳಲ್ಲಿನ ವಿಳಂಬವು ಕೋಪ ಅಥವಾ ಒತ್ತಡಕ್ಕೆ ಕಾರಣವಾಗಬಹುದು. ಮಾಡುವ ಕೆಲಸಕ್ಕೆ ಸಂಗಾತಿಯಿಂದ ಬೆಂಬಲ ಸಿಗುತ್ತದೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+