Weekly Horoscope: ಐದು ರಾಶಿಯವರಿಗೆ ಇದು ಅದೃಷ್ಟದ ವಾರ; ಒಲಿಯುವುದು ಹೊಸ ಅವಕಾಶಗಳು, ಉದ್ಯೋಗ-ವ್ಯವಹಾರದಲ್ಲಿ ಲಾಭ

ಮುಂಬರುವ ವಾರವು ಗ್ರಹಗಳು ಮತ್ತು ನಕ್ಷತ್ರಗಳ ವಿಷಯದಲ್ಲಿ ಬಹಳ ವಿಶೇಷವಾಗಿರುತ್ತದೆ. ಸೂರ್ಯನು ಕನ್ಯಾರಾಶಿಯಲ್ಲಿ ಸಂಚಾರ ಮಾಡುತ್ತಿದ್ದು ಸೆಪ್ಟೆಂಬರ್ 27ಕ್ಕೆ ನಕ್ಷತ್ರ ಬದಲಿಸುತ್ತಾನೆ. ಬುಧ ತುಲಾ ರಾಶಿಯಲ್ಲಿ ಇರುತ್ತಾನೆ . ಶುಕ್ರನು ಕೂಡಾ ತುಲಾ ರಾಶಿಯಲ್ಲಿಯೇ ಸಂಚಾರ ಮಾಡುತ್ತಾ ಇರುತ್ತಾನೆ. ಇದರಿಂದಾಗಿ ಬುಧ-ಶುಕ್ರರ ಸಂಯೋಗದಿಂದಾಗಿ ಈ ರಾಶಿಯಲ್ಲಿ ಲಕ್ಷ್ಮಿ-ನಾರಾಯಣ ಯೋಗವು ರೂಪುಗೊಳ್ಳುತ್ತದೆ.

ಈ ವಾರ ಮಂಗಳನು ಕರ್ಕ ರಾಶಿಯಲ್ಲಿ ಸಂಚಾರ ಮಾಡುತ್ತಾನೆ. ಶನಿಯು ಮೀನ ರಾಶಿಯಲ್ಲಿಯೇ ಇರುತ್ತಾನೆ. ರಾಹು ಕುಂಭ ರಾಶಿಯಲ್ಲಿ ಕೇತು ಸಿಂಹ ರಾಶಿಯಲ್ಲಿ ಸಂಚಾರ ಮಾಡುತ್ತಾ ಇರುತ್ತಾನೆ. ಈ ವಾರ ಯಾವ ರಾಶಿಯವರಿಗೆ ಅದೃಷ್ಟ ತರಲಿ ನೋಡೋಣ.

weekly horoscope 27 September to 3 October Zodiac Predictions Lucky Number Colour of all signs

ಮೇಷ ರಾಶಿ (Aries):

ನೀವು ಮಾಡುವ ಕೆಲಸಕ್ಕೆ ಮೆಚ್ಚುಗೆ ಸಿಗಬಹುದು. ಹೊಸ ವ್ಯವಹಾರವನ್ನು ಪ್ರಾರಂಭಿಸುವ ಆಲೋಚನೆ ಮುಂದುವರಿಯುತ್ತದೆ. ಕುಟುಂಬ ಮತ್ತು ಸಹೋದ್ಯೋಗಿಗಳಿಂದ ನಿಮಗೆ ಬೆಂಬಲ ಸಿಗುತ್ತದೆ. ಉತ್ಸಾಹದಲ್ಲಿ ಯಾರಿಗೂ ಅತಿಯಾದ ಭರವಸೆ ನೀಡಬೇಡಿ. ವಿದ್ಯಾರ್ಥಿಗಳಿಗೆ ಈ ವಾರ ಪ್ರಯೋಜನಕಾರಿಯಾಗಿರಲಿದೆ. ಹವಾಮಾನ ಬದಲಾದಂತೆ ನಿಮ್ಮ ಆರೋಗ್ಯದ ಬಗ್ಗೆ ಎಚ್ಚರ ವಹಿಸಿಕೊಳ್ಳಿ.

ವೃಷಭ ರಾಶಿ (Taurus):

ನೀವು ಬಹಳ ದಿನಗಳಿಂದ ದೂರವಾಗಿದ್ದ ಸ್ನೇಹಿತ ಮತ್ತೆ ನಿಮ್ಮ ಬಳಿ ಬರಬಹುದು. ಕೆಲಸದಲ್ಲಿ ನಿಮ್ಮ ವೃತ್ತಿಪರ ಇಮೇಜ್ ಅನ್ನು ನೋಡಿಕೊಳ್ಳಿ. ಹೆಚ್ಚಿನ ಲಾಭ ಪಡೆಯುವ ಆಸೆಯಲ್ಲಿ ಗೊತ್ತಿಲ್ಲದವರ ಜೊತೆ ವ್ಯವಹಾರಕ್ಕೆ ಕೈ ಹಾಕಬೇಡಿ. ಹಣ ಹೂಡಿಕೆ ಮಾಡುವ ಮೊದಲು ಸರಿಯಾಗಿ ವಿಚಾರಿಸಿಕೊಳ್ಳಿ. ಸಂಬಂಧಗಳ ಬಗ್ಗೆ ಎಚ್ಚರ ಇರಲಿ. ಸಂಗಾತಿಯೊಂದಿಗೆ ಮನಸ್ತಾಪ ಮೂಡದಂತೆ ನೋಡಿಕೊಳ್ಳಿ.

ಮಿಥುನ ರಾಶಿ (Gemini):

ವಿದ್ಯಾರ್ಥಿಗಳು ಈ ವಾರ ಸ್ವಲ್ಪ ಪರಿಶ್ರಮಪಟ್ಟರೆ ಯಶಸ್ಸು ಸಾಧಿಸುವುದು ಸುಲಭವಾಗಬಹುದು. ವೈಯಕ್ತಿಕ ವಿಷಯಗಳನ್ನು ಕೆಲಸದಿಂದ ಪ್ರತ್ಯೇಕವಾಗಿ ಇರಿಸಿ. ಹಣಕಾಸಿನ ವಿಷಯದಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ಹಣದ ಬಗ್ಗೆ ಖರ್ಚಿನ ಬಗ್ಗೆ ಎಚ್ಚರ ಇರಲಿ. ಹಳೆಯ ಸ್ನೇಹಿತರನ್ನು ಭೇಟಿಯಾಗುವ ಅವಕಾಶ ಸಿಗುವುದು.

ಕರ್ಕಾಟಕ ರಾಶಿ (Cancer) :

ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳೊಂದಿಗೆ ತಪ್ಪು ತಿಳುವಳಿಕೆಯನ್ನು ಪರಿಹರಿಸಿಕೊಳ್ಳಲು ಅವಕಾಶ ಸಿಗಬಹುದು. ಕುಟುಂಬದಲ್ಲಿ, ನಿಮ್ಮ ತಂದೆ ಅಥವಾ ಅಣ್ಣನ ಸಲಹೆಯಂತೆ ನಡೆದರೆ ಪ್ರಯೋಜನವಾಗುವುದು. ಪ್ರಯಾಣ ಮತ್ತು ಕೆಲಸದ ಜಂಜಾಟದ ನಡುವೆ ವಿಶ್ರಾಂತಿ ಪಡೆಯಲು ಮರೆಯಬೇಡಿ. ನಿಮಗೆ ದೈಹಿಕ ಮಾತ್ರವಲ್ಲ ಮಾನಸಿಕವಾಗಿಯೂ ವಿಶ್ರಾಂತಿಯ ಅಗತ್ಯವಿದೆ. ಯಾರನ್ನೋ ಮೆಚ್ಚಿಸಲು ಆದಾಯಕ್ಕೆ ಮೀರಿ ಖರ್ಚು ಮಾಡಲು ಹೋಗಬೇಡಿ.

ಸಿಂಹ ರಾಶಿ (Leo):

ಕೆಲಸದಲ್ಲಿ ಹಳೆಯ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಪ್ರಯತ್ನಿಸುವುದು ಒಳ್ಳೆಯದು. ನೀವು ಮಾಡುವ ಕೆಲಸಕ್ಕೆ ಕುಟುಂಬದವರ ಬೆಂಬಲ ಸಿಗುವುದು. ಈ ವಾರ ನಿಮ್ಮ ಖರ್ಚಿನ ಬಗ್ಗೆ ವಿಶೇಷವಾಗಿ ಜಾಗರೂಕರಾಗಿರಿ. ಸಂಬಂಧಗಳಲ್ಲಿ ಉದಾರತೆ ಒಳ್ಳೆಯದು, ಆದರೆ ಪ್ರತಿ ಬಾರಿಯೂ ಹಣವನ್ನು ಖರ್ಚು ಮಾಡುವ ಅಗತ್ಯವಿಲ್ಲ. ಅತಿಯಾದ ಪ್ರಯಾಣವು ಆಯಾಸಕ್ಕೆ ಕಾರಣವಾಗಬಹುದು.

ಕನ್ಯಾ ರಾಶಿ (Virgo):

ಭೂಮಿ ಖರೀದಿಸುವ ಸಾಧ್ಯತೆ ಇದೆ. ಪೂರ್ವಜರ ಆಸ್ತಿಯಿಂದಲೂ ಲಾಭವಾಗುವುದು. ವ್ಯವಹಾರದಲ್ಲಿ ಈ ವಾರ ಎಚ್ಚರಿಕೆ ಬಹಳ ಮುಖ್ಯವಾಗಿರುವುದು. ಬೇರೆಯವರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳುವ ಬದಲು ನಿಮ್ಮ ಮನಸ್ಸಿನ ಮಾತನ್ನು ಕೇಳಿ. ಈ ವಾರ ನಿಮ್ಮ ವೃತ್ತಿ ಮತ್ತು ಕೌಟುಂಬಿಕ ಜೀವನ ಎರಡಕ್ಕೂ ಪ್ರಯೋಜನಕಾರಿಯಾಗಿದೆ.

ತುಲಾ ರಾಶಿ (Libra) :

ಬಡ್ತಿಗೆ ಅವಕಾಶ ಇರುವುದು. ಕಚೇರಿ ರಾಜಕೀಯದ ಬಗ್ಗೆ ಎಚ್ಚರದಿಂದಿರಿ.

ಹೊಸ ಜವಾಬ್ದಾರಿಗಳು ಸಿಗುವುದು. ಹೊಸ ಒಪ್ಪಂದಗಳ ಕುರಿತು ಚರ್ಚೆಗಳು ನಡೆಯುವುದು. ನೀವು ತೆಗೆದುಕೊಳ್ಳುವ ನಿರ್ಧಾರ ಪ್ರಗತಿಗೆ ದಾರಿ ಮಾಡಿಕೊಡುವುದು. ಹಳೆಯ ಸಮಸ್ಯೆಗಳು ಕಡಿಮೆಯಾಗುವುದು. ಕಣ್ಣಿನ ಸಮಸ್ಯೆ ಕಾಡಬಹುದು.

ವೃಶ್ಚಿಕ ರಾಶಿ (Scorpio):

ವ್ಯವಹಾರದಲ್ಲಿ ಹೊಸ ಗ್ರಾಹಕರು ಸಿಗುವರು. ಕೆಲಸದಲ್ಲಿ ಸಹೋದ್ಯೋಗಿಗಳಿಂದ ಬೆಂಬಲ ಸಿಗುವುದು. ವಾರದ ನಡುವಿನಲ್ಲಿ ಆರ್ಥಿಕ ಲಾಭವಾಗುವುದು.ಆದರೂ ಖರೀದಿಗಾಗಿ ಹಣ ಖರ್ಚು ಮಾಡುವ ಮುನ್ನ ಸರಿಯಾಗಿ ಯೋಚಿಸಿ. ಬೇರೆಯವರ ಕೆಲಸದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸದ ಬಗ್ಗೆ ಗಮನ ಹರಿಸಿ. ಮಂಡಿ ನೋವಿನ ಸಮಸ್ಯೆ ಕಾಡಬಹುದು.

ಧನು ರಾಶಿ (Sagittarius):

ಕೆಲಸ ವೇಗವಾಗಿ ಮುಂದುವರೆಯುವುದು. ಶಾಪಿಂಗ್‌ಗಾಗಿ ಹಣ ಖರ್ಚು ಮಾಡುವಿರಿ. ಮನೆಗಾಗಿ ಅಲಂಕಾರಿಕ ವಸ್ತುಗಳನ್ನು ಖರೀದಿಸುವಿರಿ. ಇತರರಿಗಿಂತ ಮೊದಲು ಕೆಲಸಗಳನ್ನು ಪೂರ್ಣಗೊಳಿಸಲು ಶ್ರಮಿಸುವಿರಿ. ವಿಶ್ರಾಂತಿಯ ಕಡೆಗೆ ಗಮನ ಕೊಡಿ. ವಿದ್ಯಾರ್ಥಿಗಳು ತಮ್ಮ ಗುರಿ ಸಾಧಿಸುವರು.

ಮಕರ ರಾಶಿ (Capricorn):

ಕೆಲಸದಲ್ಲಿ ಹೊಸ ಅವಕಾಶಗಳು ಸಿಗಬಹುದು. ಆಸ್ತಿ ವಿಷಯದಲ್ಲಿ ಉಂಟಾಗಿರುವ ಸಮಸ್ಯೆಗಳು ಬಗೆಹರಿಯುವುದು. ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ಗಮನಹರಿಸಿ. ಮಿತಿ ಮೀರಿ ಖರ್ಚು ಮಾಡಲು ಹೋಗಬೇಡಿ. ಆದಾಯ ಮತ್ತು ಖರ್ಚಿನ ನಡುವ ಸಮತೋಲನ ಇರಲಿ. ವಿದ್ಯಾರ್ಥಿಗಳು ಈ ವಾರ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು.

ಕುಂಭ ರಾಶಿ (Aquarius):

ನಿಮ್ಮ ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ಕುಟುಂಬದ ಸದಸ್ಯರ ಸಲಹೆ ಸಹಾಯಕ್ಕೆ ಬರುವುದು. ಹೆಚ್ಚುವರಿ ಆದಾಯ ಅಥವಾ ಹೂಡಿಕೆ ಪ್ರಸ್ತಾಪವು ಬಂದರೆ, ಎಲ್ಲಾ ನಿಯಮಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ. ಒಳಗೊಂಡಿರುವ ನಿಯಮಗಳು ಮತ್ತು ಅಪಾಯಗಳನ್ನು ಪರಿಗಣಿಸಿ. ಹೊಸ ಕೆಲಸ ಸಿಗುವುದು. ನಿಮಗೆ ಈ ವಾರ ಉತ್ತಮವಾಗಿರುವುದು.

ಮೀನ ರಾಶಿ (Pisces) :

ಹಣಕಾಸಿನ ವಿಷಯದಲ್ಲಿ ಸ್ವಲ್ಪ ಒತ್ತಡ ಉಂಟಾಗಬಹುದು. ದೊಡ್ಡ ಹೂಡಿಕೆಗಳ ಬಗ್ಗೆ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ನಿಮ್ಮ ಸಂಗಾತಿಯೊಂದಿಗೆ ಹಣಕಾಸಿನ ಬಗ್ಗೆ ಶಾಂತವಾಗಿ ಚರ್ಚಿಸಿ. ಕೆಲಸದಲ್ಲಿ ನೀವು ನಿರೀಕ್ಷಿಸಿದ ರಿಸಲ್ಟ್‌ ಸಿಗದೇ ಹೋಗಬಹುದು. ಮಾತಿನಲ್ಲಿ ಪದ ಬಳಕೆಯ ಬಗ್ಗೆ ಎಚ್ಚರ ಇರಲಿ. ಸಣ್ಣ ವಿಷಯಗಳು ಸಹ ತಪ್ಪು ತಿಳುವಳಿಕೆಗೆ ಕಾರಣವಾಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+