2023 Kanya Rashi Bhavishya : 2023ರಲ್ಲಿ ಕನ್ಯಾ ರಾಶಿ ಭವಿಷ್ಯ ಹೇಗಿರಲಿದೆ?
ಹೊಸ ವರ್ಷಕ್ಕೆ ದಿನ ಸಮೀಪಿಸುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಜನರು 2022ರ ವರ್ಷಕ್ಕೆ ವಿದಾಯ ಹೇಳಿ, 2023ರನ್ನು ಬರ ಮಾಡಿಕೊಳ್ಳಲು ಸಿದ್ಧರಾಗಿದ್ದಾರೆ. ಹೊಸ ನಿರೀಕ್ಷೆಯೊಂದಿಗೆ ಹೊಸ ವರ್ಷದ ಸ್ವಾಗತಕ್ಕೆ ಕಾದಿರುವ ಜನರಿಗೆ ಮುಂದಿನ ವರ್ಷ ತಮ್ಮ ರಾಶಿಯ ಭವಿಷ್ಯ ಹೇಗಿರಲಿದೆ ಎನ್ನುವ ಕುತೂಹಲ ಇದ್ದೇ ಇರುತ್ತದೆ. ಅದರಲ್ಲೂ ವರ್ಷಾರಂಭದಲ್ಲಿ ಗುರು ಕೃಪೆ ಇರುವ ಕನ್ಯಾ ರಾಶಿಯವರ 2023ರ ಜಾತಕ ಹೇಗಿರಲಿದೆ ಎನ್ನುವುದನ್ನು ತಿಳಿಯೋಣ.
ಕನ್ಯಾ ರಾಶಿಯವರಿಗೆ ಮುಂದಿನ ವರ್ಷ ಪ್ರೇಮ ಜೀವನ, ಆರ್ಥಿಕ ಜೀವನ, ವೈಯಕ್ತಿಕ, ವ್ಯಾಪಾರ, ಆರೋಗ್ಯ, ಮದುವೆ, ಆಸ್ತಿ, ಜಾತಕ ಹೇಗಿರಲಿದೆ ಎನ್ನುವ ಪ್ರಶ್ನೆ ಕಾಡುತ್ತಿರಬಹುದು. ಹಾಗಾದರೆ ಮುಂದಿನ ವರ್ಷ ಕನ್ಯಾ ರಾಶಿ ಭವಿಷ್ಯ ಹೇಗಿರಲಿದೆ..? ಎನ್ನುವುದನ್ನು ವಿಸ್ತಾರವಾಗಿ ತಿಳಿಯೋಣ.

ಕನ್ಯಾ: ಪ್ರೀತಿಯ ಜಾತಕ 2023
ಕನ್ಯಾ ರಾಶಿಯವರ ಪ್ರೀತಿಯ ಜಾತಕದ ಪ್ರಕಾರ, 2023ರಲ್ಲಿ ಕನ್ಯಾ ರಾಶಿಯವರುಪ್ರೇಮ ಸಂಬಂಧಗಳಲ್ಲಿ ಕೆಲ ಪರೀಕ್ಷೆಗಳನ್ನು ಎದುರಿಸಬೇಕಾಗುವ ಸಂದರ್ಭಗಳು ಬರಬಹುದು. ನಿಮ್ಮ ಸಂಬಂಧವನ್ನು ಬಲಪಡಿಸಲು ನಿಮಗೆ ಅನೇಕ ಅವಕಾಶಗಳು ಸಿಗಬಹುದು. ಜನವರಿ 17ರ ನಂತರ ಕೆಲವು ವಿಚಾರಗಳಿಗೆ ನೀವು ಒತ್ತಡಕ್ಕೊಳಗಾಗಬಹುದು. ನಿಮ್ಮ ಪ್ರೀತಿಪಾತ್ರರು ಕೆಲವು ಕಾರಣಗಳಿಂದ ಸ್ವಲ್ಪ ಸಮಯದವರೆಗೆ ನಿಮ್ಮಿಂದ ದೂರ ಹೋಗಬಹುದು ಆದರೆ ನಿಮ್ಮ ಪ್ರೀತಿ ಪಾತ್ರರು ನಿಮ್ಮ ಮೇಲೆ ಕೋಪಗೊಳ್ಳದಂತೆ ನೀವು ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಇದರಿಂದ ನಿಮ್ಮ ಸಂಬಂಧ ಉತ್ತಮವಾಗಿರುತ್ತದೆ. ಜನವರಿ, ಏಪ್ರಿಲ್ ಆಗಸ್ಟ್‌ನಿಂದ ಸೆಪ್ಟೆಂಬರ್ ಮತ್ತು ಡಿಸೆಂಬರ್‌ನಲ್ಲಿ ನಿಮ್ಮ ಪ್ರೀತಿಪಾತ್ರರಿಗೆ ಹತ್ತಿರವಾಗಲು ಅವಕಾಶವಿರುತ್ತದೆ. ಜನವರಿಯಿಂದ ಏಪ್ರಿಲ್ ತಿಂಗಳ ವರೆಗೆ ನಿಮ್ಮ ಮದುವೆ ಬಗ್ಗೆ ಪ್ರಸ್ತಾಪಿಸಿದರೆ ನಿಮ್ಮ ಮದುವೆ ನಡೆಯುವ ಸಾಧ್ಯತೆಗಳಿವೆ.

ಕನ್ಯಾ: ಉದ್ಯೋಗ ಜಾತಕ 2023
ಕನ್ಯಾ ರಾಶಿಯವರ ಉದ್ಯೋಗ ಜಾತಕದ ಪ್ರಕಾರ, 2023 ರಲ್ಲಿ ಕನ್ಯಾ ರಾಶಿಯವರು ವರ್ಷದ ಆರಂಭದಲ್ಲಿ ತಮ್ಮ ವೃತ್ತಿಜೀವನದ ಬಗ್ಗೆ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ಪ್ರಯತ್ನಿಸಬೇಕು. ಜನವರಿ ತಿಂಗಳಲ್ಲಿ ನಿಮ್ಮ ವೃತ್ತಿಯಲ್ಲಿ ನೀವು ವರ್ಗಾವಣೆಯನ್ನು ಪಡೆಯಬಹುದು. ಈ ವರ್ಷದಲ್ಲಿ ನಿಮ್ಮ ವೃತ್ತಿಜೀವನದಲ್ಲಿ ನಿಮಗೆ ಸಾಕಷ್ಟು ಅವಕಾಶಗಳು ಸಿಗುತ್ತದೆ. ನಿಮ್ಮ ಕೆಲಸದ ಕ್ಷೇತ್ರದಲ್ಲಿ ಹಠಾತ್ ಬದಲಾವಣೆಯಾಗುವ ಸಾಧ್ಯತೆ ಇರುತ್ತದೆ. ಅಥವಾ ನೀವು ವ್ಯಾಪಾರಸ್ಥರಾಗಿದ್ದರೆ, ವ್ಯಾಪಾರವನ್ನು ಬದಲಾಯಿಸುವ ಸಾಧ್ಯತೆಗಳು ಸಹ ಕಂಡುಬರುತ್ತವೆ. ಕೆಲಸದಲ್ಲಿ ಕೆಲವು ಸಮಸ್ಯೆಗಳು ಎದುರಾಗಬಹುದು. ಹೀಗಾಗಿ ನೀವು ಎಚ್ಚರಿಕೆಯಿಂದ ಇರಬೇಕು. ಅಕ್ಟೋಬರ್ ನಿಂದ ಡಿಸೆಂಬರ್ ನಡುವೆ ನಿಮ್ಮ ವೃತ್ತಿ ಜೀವನದಲ್ಲಿ ಉತ್ತಮ ಬದಲಾವಣೆ ಕಂಡುಬರುತ್ತದೆ. ಇದರಿಂದ ನೀವು ಯಶಸ್ಸನ್ನು ಪಡೆಯುತ್ತೀರಿ.

ಕನ್ಯಾ: ಶಿಕ್ಷಣ ಜಾತಕ 2023
ಕನ್ಯಾ ರಾಶಿಯವರ ಶಿಕ್ಷಣ ಜಾತಕದ ಪ್ರಕಾರ, 2023 ರಲ್ಲಿ ಕನ್ಯಾ ರಾಶಿಯ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಉತ್ತಮ ಸಮಯ ಮತ್ತು ಅವಕಾಶವನ್ನು ಪಡೆಯುತ್ತಾರೆ. ನೀವು ಮಾಡಿದ ಕಠಿಣ ಪರಿಶ್ರಮ ವ್ಯರ್ಥವಾಗುವುದಿಲ್ಲ. ಅದರ ಫಲಿತಾಂಶವನ್ನು ನೀವು ಖಂಡಿತವಾಗಿ ಪಡೆಯುತ್ತೀರಿ. ವರ್ಷದ ಆರಂಭದಲ್ಲಿ ಅಧ್ಯಯನದಲ್ಲಿ ಕಡಿಮೆ ಏಕಾಗ್ರತೆ ಇರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ, ನಿರೀಕ್ಷಿಸಿದ ಯಶಸ್ಸು ಸಿಗುವ ಸಾಧ್ಯತೆ ಕಡಿಮೆ ಇದೆ. ಅತ್ಯುತ್ತಮ ಪ್ರಯತ್ನದಿಂದ ಉತ್ತಮ ಅಂಕಗಳನ್ನು ಪಡೆಯುವ ಸಾಧ್ಯತೆಗಳಿವೆ ಆದ್ದರಿಂದ ಕಠಿಣ ಪರಿಶ್ರಮವನ್ನು ಮುಂದುವರಿಸಿ. ಉನ್ನತ ಶಿಕ್ಷಣಕ್ಕೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಈ ವರ್ಷ ಏರಿಳಿತಗಳನ್ನು ಎದುರಿಸಬಹುದು. ಆದರೆ ಅಕ್ಟೋಬರ್,ನವೆಂಬರ್, ಡಿಸೆಂಬರ್ ಸಮಯದಲ್ಲಿ ನೀವು ಯಶಸ್ಸನ್ನು ಪಡೆಯಬಹುದು ಮತ್ತು ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗುವ ಅವಕಾಶಗಳಿರುತ್ತದೆ.

ಕನ್ಯಾ: ಆರ್ಥಿಕ ಜಾತಕ 2023
ಕನ್ಯಾ ರಾಶಿಯವರ ಆರ್ಥಿಕ ಜಾತಕದ ಪ್ರಕಾರ, 2023 ರಲ್ಲಿ ಕನ್ಯಾ ರಾಶಿಯವರು ಈ ವರ್ಷ ಹಣಕಾಸಿನ ವಿಷಯಗಳಲ್ಲಿ ಎಚ್ಚರದಿಂದ ಇರಬೇಕು. ಜನವರಿಯಿಂದ ಏಪ್ರಿಲ್ ಅಂತ್ಯದವರೆಗೆ ನಿಮ್ಮ ಆರ್ಥಿಕ ಪರಿಸ್ಥಿತಿಗಳು ಉತ್ತಮವಾಗಿರುತ್ತವೆ. ಈ ಸಮಯದಲ್ಲಿ ನೀವು ಹಣಕಾಸಿನ ವಿಷಯಗಳಲ್ಲಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಯಾವ ಕ್ಷೇತ್ರದಲ್ಲಿಯಾದರೂ ಹೂಡಿಕೆ ಮಾಡಲು ಬಯಸಿದರೆ ಇದು ಉತ್ತಮ ಸಮಯವಾಗಿರುತ್ತದೆ. ಏಪ್ರಿಲ್ ಬಳಿಕ ಅಕ್ಟೋಬರ್ ಅಂತ್ಯದವರೆಗೆ ಆರ್ಥಿಕವಾಗಿ ಏರಿಳಿತಗಳನ್ನು ಎದುರಿಸಬೇಕಾಗುತ್ತದೆ. ಹಣಕಾಸಿನ ವಿಚಾರದಲ್ಲಿ ತೊಂದರೆಯನ್ನು ಅನುಭವಿಸಬೇಕಾಗಬಹುದು. ಆದರೆ ಅಕ್ಟೋಬರ್ ನಂತರ ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳು ನಿಮಗೆ ಉತ್ತಮ ಯಶಸ್ಸನ್ನು ನೀಡುತ್ತದೆ. ಈ ಸಮಯದಲ್ಲಿ ನೀವು ಹಣಕಾಸಿನ ವಿಷಯಗಳಲ್ಲಿ ಲಾಭವನ್ನು ಗಳಿಸುತ್ತೀರಿ.

ಕನ್ಯಾ: ಕುಟುಂಬ ಜಾತಕ 2023
ಕನ್ಯಾ ರಾಶಿಯವರ ಕುಟುಂಬ ಜಾತಕದ ಪ್ರಕಾರ, 2023 ರಲ್ಲಿ ಕನ್ಯಾ ರಾಶಿಯವರು ಈ ವರ್ಷ ಕುಟುಂಬ ಜೀವನದಲ್ಲಿ ಏರಿಳಿತಗಳನ್ನು ಎದುರಿಸುತ್ತಾರೆ. ಏಪ್ರಿಲ್ 22ರ ನಂತರ ನಿಮ್ಮ ಕುಟುಂಬ ಜೀವನದಲ್ಲಿ ಸಮಸ್ಯೆಗಳು ಎದುರಾಗಬಹುದು. ಈ ಸಮಯದಲ್ಲಿ ಕುಟುಂಬದ ಹಿರಿಯ ಸದಸ್ಯರು ದೈಹಿಕ ಅಥವಾ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಕೌಟುಂಬಿಕ ಜೀವನದಲ್ಲಿ ವೈಮನಸ್ಸು ಉಂಟಾಗಬಹುದು. ರಾಹುವಿನ ಪ್ರಭಾವವು ಕೌಟುಂಬಿಕ ಜೀವನದಲ್ಲಿ ಒತ್ತಡವನ್ನು ಹೆಚ್ಚಿಸುತ್ತದೆ. ಕುಟುಂಬ ಜೀವನದಲ್ಲಿ ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಕುಟುಂಬ ಸದಸ್ಯರೊಂದಿಗೆ ಆಗಾಗ ಮಾತನಾಡುವ ಮೂಲಕ ಕುಟುಂಬದಲ್ಲಿ ಶಾಂತಯುತ ವಾತಾವರಣ ಕಾಪಾಡಿಕೊಳ್ಳಿ. ಮೇನಿಂದ ಅಕ್ಟೋಬರ್‌ವರೆಗೆ ಕುಟುಂಬದಲ್ಲಿ ಯಾರಾದರೂ ಮದುವೆಯಾಗುವ ಸಾಧ್ಯತೆಯಿದೆ. ಕುಟುಂಬ ಸದಸ್ಯರು ಮನೆಯಲ್ಲಿ ಸೇರುವುದರಿಂದ ಸಂತೋಷದ ವಾತಾವರಣ ಇರುತ್ತದೆ.

ಕನ್ಯಾ: ಮಕ್ಕಳ ಜಾತಕ 2023
ಕನ್ಯಾ ರಾಶಿಯವರ ಮಕ್ಕಳ ಜಾತಕದ ಪ್ರಕಾರ, 2023 ರಲ್ಲಿ ಕನ್ಯಾ ರಾಶಿಯವರ ಮಕ್ಕಳಿಗೆ ಈ ವರ್ಷ ಉತ್ತಮವಾಗಿರುತ್ತದೆ. ಶನಿ ಮತ್ತು ಶುಕ್ರರು 5ನೇ ಮನೆಯಲ್ಲಿರುವುದರಿಂದ ಕನ್ಯಾ ರಾಶಿಯವರ ಮಗನು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾನೆ. ಅವರು ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲಿ, ಓದು ಅಥವಾ ಬೇರೆ ಕೆಲಸ ಎರಡರಲ್ಲೂ ಯಶಸ್ಸನ್ನು ಪಡೆಯುತ್ತಾರೆ. ಈ ವರ್ಷ ಸಂತತಿಗೆ ಸಂಬಂಧಿಸಿದ ಒಳ್ಳೆಯ ಸುದ್ದಿಯನ್ನು ನೀವು ಪಡೆಯುತ್ತೀರಿ. ಮೇನಿಂದ ಜೂನ್‌ವರೆಗೆ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ನಿಮ್ಮ ಮಕ್ಕಳು ಕಷ್ಟಪಟ್ಟು ದುಡಿಯುತ್ತಾರೆ ಮತ್ತು ಅವರ ಕಠಿಣ ಪರಿಶ್ರಮ ಉತ್ತಮ ಫಲಿತಾಂಶಕೊಡುತ್ತದೆ. ಅವರ ಯಶಸ್ಸಿನ ಬಗ್ಗೆ ನೀವು ಹೆಮ್ಮೆ ಪಡುತ್ತೀರಿ.

ಕನ್ಯಾ: ವಿವಾಹ ಜಾತಕ 2023
ಕನ್ಯಾ ರಾಶಿಯವರ ವಿವಾಹ ಜಾತಕದ ಪ್ರಕಾರ, 2023 ರಲ್ಲಿ ಕನ್ಯಾ ರಾಶಿಯವರು ಈ ವರ್ಷ ನಿಮ್ಮ ವೈವಾಹಿಕ ಜೀವನದ ಬಗ್ಗೆ ನೀವು ಸ್ವಲ್ಪ ಚಿಂತಿಸಬಹುದು. ವರ್ಷದ ಆರಂಭವು ಅನುಕೂಲಕರವಾಗಿರುತ್ತದೆ. ಗುರು ಗ್ರಹದ ಸ್ಥಾನವು ನಿಮ್ಮ ಮದುವೆಗೆ ಉತ್ತಮ ಯೋಗಗಳನ್ನು ಸೃಷ್ಟಿಸುತ್ತದೆ. ನೀವು ಮದುವೆಗೆ ಅರ್ಹರಾಗಿದ್ದರೆ ನೀವು ಜನವರಿಯಿಂದ ಏಪ್ರಿಲ್ ಅಂತ್ಯದೊಳಗೆ ಮದುವೆಯಾಗಬಹುದು. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ ಈ ಸಮಯದಲ್ಲಿ ನಿಮ್ಮ ಪ್ರೇಮ ವಿವಾಹ ಯಶಸ್ವಿಯಾಗುವ ಬಲವಾದ ಸಾಧ್ಯತೆ ಇರುತ್ತದೆ. ನೀವು ವಿವಾಹಿತರಾಗಿದ್ದರೆ, ಈ ಸಮಯವು ವೈವಾಹಿಕ ಜೀವನದಲ್ಲಿ ಒತ್ತಡವನ್ನು ಕಡಿಮೆ ಮಾಡುತ್ತದೆ. ಈ ವರ್ಷ ನಿಮ್ಮ ಜೀವನ ಸಂಗಾತಿಯ ಆರೋಗ್ಯವು ಸ್ವಲ್ಪ ಹದಗೆಡಬಹುದು. ವರ್ಷದ ಮಧ್ಯೆದಲ್ಲಿ ಕೆಲ ಮನಸ್ತಾಪಗಳು ಉಂಟಾಗಬಹುದು ವರ್ಷದ ಕೊನೆಯ ತಿಂಗಳಲ್ಲಿ ನಿಮ್ಮ ವೈವಾಹಿಕ ಜೀವನವು ಸಂತೋಷವಾಗುತ್ತದೆ.

ಕನ್ಯಾ: ವ್ಯವಹಾರ ಜಾತಕ 2023
ಕನ್ಯಾ ರಾಶಿಯವರ ವ್ಯವಹಾರ ಜಾತಕದ ಪ್ರಕಾರ, 2023 ರಲ್ಲಿ ಕನ್ಯಾ ರಾಶಿಯವರು ಈ ವರ್ಷ ವ್ಯವಹಾರದಲ್ಲಿ ಬುದ್ಧಿವಂತಿಕೆಯಿಂದ ವರ್ತಿಸಬೇಕು. ಏಕೆಂದರೆ ವ್ಯವಹಾರವು ವರ್ಷದ ಆರಂಭದಲ್ಲಿ ಉತ್ತಮವಾಗಿರುತ್ತದೆ. ನಂತರ ದುರ್ಬಲವಾಗುವ ಸಾಧ್ಯತೆಗಳಿವೆ. ವಿಶೇಷವಾಗಿ ಮೇನಿಂದ ಆಗಸ್ಟ್ ನಡುವೆ, ವ್ಯವಹಾರದಲ್ಲಿ ನಿರೀಕ್ಷಿತ ಫಲಿತಾಂಶಗಳನ್ನು ಪಡೆಯದ ಕಾರಣ ನೀವು ನಿರಾಶೆಯನ್ನು ಎದುರಿಸಬೇಕಾಗಬಹುದು. ಹೀಗಾಗಿ ಈ ಅವಧಿಯಲ್ಲಿಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸದೇ ಇರುವುದು ಉತ್ತಮ. ಈ ವರ್ಷ ನೀವು ನೀವು ಯಾವುದೇ ಒಪ್ಪಂದ ಮಾಡಿಕೊಳ್ಳುವ ಮೊದಲು ಅದರ ಹಿಂದಿನ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ ಏಕೆಂದರೆ ಅದರಲ್ಲಿ ಕೆಲವು ಸಮಸ್ಯೆಗಳಿರಬಹುದು. ಬಳಿಕ ಅದರಿಂದ ನಿಮಗೆ ತೊಂದರೆ ಉಂಟುಮಾಡಬಹುದು. ಅಕ್ಟೋಬರ್ ನಂತರ ಎಲ್ಲವೂ ಬದಲಾಗುತ್ತದೆ. ಈ ಸಮಯದಲ್ಲಿ ನೀವು ವ್ಯವಹಾರದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ವಿದೇಶಿ ಸಂಪರ್ಕಗಳಿಂದ ಲಾಭ ಪಡೆಯುವ ಸಾಧ್ಯತೆಗಳಿವೆ. ಕನ್ಯಾ ರಾಶಿಯ ವ್ಯಾವಹಾರಸ್ಥರಿಗೆ ವರ್ಷದ ಮೊದಲ ನಾಲ್ಕು ತಿಂಗಳುಗಳು ಮತ್ತು ಕೊನೆಯ ಎರಡು ತಿಂಗಳುಗಳು ತುಂಬಾ ಉತ್ತಮವಾಗಿರುತ್ತದೆ.

ಕನ್ಯಾ: ವಾಹನ ಮತ್ತು ಆಸ್ತಿ ಜಾತಕ 2023
ಕನ್ಯಾ ರಾಶಿಯವರ ವಾಹನ ಮತ್ತು ಆಸ್ತಿ ಜಾತಕದ ಪ್ರಕಾರ, 2023 ರಲ್ಲಿ ಕನ್ಯಾ ರಾಶಿಯವರಿಗೆ ಈ ವರ್ಷ ಆಸ್ತಿಯ ದೃಷ್ಟಿಕೋನದಿಂದ ಉತ್ತಮವಾಗಿರುತ್ತದೆ. ವರ್ಷದ ಮೊದಲ ಆರು ತಿಂಗಳು ಉತ್ತಮವಾಗಿರುತ್ತದೆ. ಜನವರಿಯಿಂದ ಏಪ್ರಿಲ್ ನಡುವಿನ ಅವಧಿಯಲ್ಲಿ ದೊಡ್ಡ ಪ್ರಮಾಣದ ಆಸ್ತಿಯನ್ನು ಖರೀದಿಸಬಹುದು. ನೀವು ಸರ್ಕಾರಿ ನೌಕರಾಗಿದ್ದರೆ ಸರ್ಕಾರದಿಂದ ನೀವು ಮನೆಯನ್ನು ಪಡೆಯಬಹುದು. ಈ ಸಮಯದಲ್ಲಿ ನೀವು ನಿಮ್ಮ ಸ್ವಂತ ಮನೆಯನ್ನು ಸಹ ನಿರ್ಮಿಸಬಹುದು. ಆದರೆ ಮೇ ಬಳಿಕ ನೀವು ಯಾವುದೇ ಆಸ್ತಿಯನ್ನು ಖರೀದಿಸುವುದನ್ನು ತಪ್ಪಿಸಬೇಕು ಏಕೆಂದರೆ ನೀವು ಮೋಸ ಹೋಗುವ ಸಾಧ್ಯತೆಯಿದೆ. ನೀವು ವಾಹನವನ್ನು ಖರೀದಿಸಲು ಬಯಸಿದರೆ ಫೆಬ್ರವರಿ ಮತ್ತು ಮಾರ್ಚ್ ಉತ್ತಮ ಸಮಯವಾಗಿರುತ್ತದೆ.
ಇನ್ನು ಕನ್ಯಾರಾಶಿಯವರು ಪೂರ್ವಜರ ಆಸ್ತಿಯ ರೂಪದಲ್ಲಿ ಹಣವನ್ನು ಪಡೆಯಬಹುದು. ಜನವರಿಯಲ್ಲಿ ಸರ್ಕಾರಿ ವಲಯದಿಂದ ಲಾಭ ಪಡೆಯುವ ಸಾಧ್ಯತೆಗಳಿವೆ. ಆರ್ಥಿಕ ಸ್ಥಿತಿಯನ್ನು ಉತ್ತಮವಾಗಿ ಕಾಪಾಡಿಕೊಳ್ಳಲು ನೀವು ಸಾಕಷ್ಟು ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಏಪ್ರಿಲ್ ಮತ್ತು ಮೇ ಅವಧಿಯಲ್ಲಿ ನೀವು ಎಚ್ಚರಿಕೆಯಿಂದ ಇರಬೇಕು. ಈ ಸಮಯದಲ್ಲಿ ವಿಶೇಷ ಆರ್ಥಿಕ ಸವಾಲುಗಳನ್ನು ಎದುರಿಸಬೇಕಾಗಬಹುದು. ಆದರೆ ನಂತರದ ಅವಧಿಯಲ್ಲಿ ಆರ್ಥಿಕ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ.

ಕನ್ಯಾ: ಸಂಪತ್ತು ಮತ್ತು ಲಾಭ ಜಾತಕ 2023
ಕನ್ಯಾ ರಾಶಿಯವರ ಸಂಪತ್ತು ಮತ್ತು ಲಾಭ ಜಾತಕದ ಪ್ರಕಾರ, 2023 ಕನ್ಯಾ ರಾಶಿಯವರಿಗೆ ಹಣವನ್ನು ಗಳಿಸುವ ವರ್ಷವೆಂದು ಹೇಳುಬಹುದು. ವರ್ಷದ ಆರಂಭ ಹಣ ಗಳಿಸಲು ಉತ್ತಮವಾಗಿರುತ್ತದೆ. ಏಕೆಂದರೆ ಈ ಅವಧಿಯಲ್ಲಿ ನಿಮಗೆ ಹಣ ಗಳಿಸಲು ಅನೇಕ ಅವಕಾಶಗಳಿವೆ. ಜನವರಿಯಿಂದ ಏಪ್ರಿಲ್ ಮತ್ತು ನವೆಂಬರ್‌ನಿಂದ ಡಿಸೆಂಬರ್ ತಿಂಗಳುಗಳು ಆರ್ಥಿಕವಾಗಿ ಉತ್ತಮವಾಗಿರುತ್ತದೆ. ಮೇ ಮತ್ತು ಅಕ್ಟೋಬರ್ ಅವಧಿಯಲ್ಲಿ ಯಾವುದೇ ರೀತಿಯ ಹೂಡಿಕೆಯ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಈ ವೇಳೆ ನೀವು ನಷ್ಟ ಅನುಭವಿಸಬಹುದು.
ಇನ್ನು ಕನ್ಯಾರಾಶಿಯವರು ಪೂರ್ವಜರ ಆಸ್ತಿಯ ರೂಪದಲ್ಲಿ ಹಣವನ್ನು ಪಡೆಯಬಹುದು. ಜನವರಿಯಲ್ಲಿ ಸರ್ಕಾರಿ ವಲಯದಿಂದ ಲಾಭ ಪಡೆಯುವ ಸಾಧ್ಯತೆಗಳಿವೆ. ಆರ್ಥಿಕ ಸ್ಥಿತಿಯನ್ನು ಉತ್ತಮವಾಗಿ ಕಾಪಾಡಿಕೊಳ್ಳಲು ನೀವು ಸಾಕಷ್ಟು ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಏಪ್ರಿಲ್ ಮತ್ತು ಮೇ ಅವಧಿಯಲ್ಲಿ ನೀವು ಎಚ್ಚರಿಕೆಯಿಂದ ಇರಬೇಕು. ಈ ಸಮಯದಲ್ಲಿ ವಿಶೇಷ ಆರ್ಥಿಕ ಸವಾಲುಗಳನ್ನು ಎದುರಿಸಬೇಕಾಗಬಹುದು. ಆದರೆ ನಂತರದ ಅವಧಿಯಲ್ಲಿ ಆರ್ಥಿಕ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ.

ಕನ್ಯಾ: ಆರೋಗ್ಯ ಜಾತಕ 2023
ಕನ್ಯಾ ರಾಶಿಯವರ ಆರೋಗ್ಯ ಜಾತಕದ ಪ್ರಕಾರ, 2023ರಲ್ಲಿ ಕನ್ಯಾ ರಾಶಿಯವರು ಸಂಪೂರ್ಣವಾಗಿ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು. ವರ್ಷದ ಆರಂಭವು ಉತ್ತಮವಾಗಿರುತ್ತದೆ. ಆದರೆ ಏಪ್ರಿಲ್ ಮತ್ತು ಮೇ ನಡುವಿನ ಸಮಯದಲ್ಲಿ ಆರೋಗ್ಯ ಸಂಬಂಧಿತ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ. 2023ರಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸದಿದ್ದರೆ, ನೀವು ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗಬಹುದು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬಾರದು. ಆಗ ಮಾತ್ರ ನೀವು ಇಡೀ ವರ್ಷ ಉತ್ತಮ ಆರೋಗ್ಯ ಪಡೆಯಲು ಸಾಧ್ಯ. ಇಲ್ಲದಿದ್ದರೆ ಈ ವರ್ಷ,ನೀವು ಆರೋಗ್ಯದ ದೃಷ್ಟಿಯಿಂದ ದುರ್ಬಲರಾಗಿರುತ್ತೀರಿ.
ಈ ವರ್ಷವು ಮುಖ್ಯವಾಗಿ ನಿಮ್ಮ ಆರೋಗ್ಯ ಸಮಸ್ಯೆಗಳ ಬಗ್ಗೆ ನಿಮಗೆ ಎಚ್ಚರವಹಿಸಬೇಕು. ಮತ್ತು ಹಣಕಾಸು ಹೂಡಿಕೆ ಮಾಡುವ ಮೊದಲು ಎಚ್ಚರವಹಿಸಬೇಕು. ಜನವರಿಯಿಂದ ಏಪ್ರಿಲ್‌ವರೆಗೆ ಹಾಗೂ ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳು ನಿಮಗೆ ಹೆಚ್ಚು ಲಾಭದಾಯಕವಾಗಿರುತ್ತದೆ. ನಿಮ್ಮ ಮೇಲೆ ನಿಮಗೆ ನಂಬಿಕೆ ಇರಬೇಕು ಮತ್ತು ನೀವು ಯಾವುದೇ ಕೆಲಸವನ್ನು ಮಾಡಿದರೂ ಅದನ್ನು ಸಂಪೂರ್ಣವಾಗಿ ಮಾಡಿ. ಉತ್ತಮ ಕುಟುಂಬ ಜೀವನವನ್ನು ಕಾಪಾಡಿಕೊಳ್ಳಲು ನೀವು ನಿರಂತರ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ.

ಕನ್ಯಾ: ಅದೃಷ್ಟ ಜಾತಕ 2023
ಕನ್ಯಾ ರಾಶಿಯವರ ಅದೃಷ್ಟ ಜಾತಕದ ಪ್ರಕಾರ, 2023ರಲ್ಲಿ ಕನ್ಯಾ ರಾಶಿಯವರು, ಕನ್ಯಾರಾಶಿಯ ಆಡಳಿತ ಗ್ರಹ ಬುಧವಾಗಿದ್ದು, ಕನ್ಯಾ ರಾಶಿಯವರಿಗೆ ಅದೃಷ್ಟ ಸಂಖ್ಯೆಗಳು 5 ಮತ್ತು 6 ಎಂದು ಪರಿಗಣಿಸಲಾಗುತ್ತದೆ. 2023ರಲ್ಲಿ ಕನ್ಯಾರಾಶಿಯವರಿಗೆ ಒಟ್ಟು ಯೋಗಗಳ ಸಂಖ್ಯೆ 7 ಆಗಿರುತ್ತದೆ. ಅದೃಷ್ಟದ ದೃಷ್ಟಿಯಿಂದ ಕನ್ಯಾ ರಾಶಿಯವರಿಗೆ ಈ ವರ್ಷ ಉತ್ತಮ ವರ್ಷ ಎಂದು ನಿರೀಕ್ಷಿಸಬಹುದು. ಈ ವರ್ಷ ನೀವು ಕೆಲವು ಸವಾಲುಗಳನ್ನು ಎದುರಿಸಬಹುದು, ಆದರೆ ಅದೃಷ್ಟ ಬಲದಿಂದ ನೀವು ಹೆಚ್ಚಿನ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಗಳಿವೆ.
ಈ ವರ್ಷವು ಮುಖ್ಯವಾಗಿ ನಿಮ್ಮ ಆರೋಗ್ಯ ಸಮಸ್ಯೆಗಳ ಬಗ್ಗೆ ನಿಮಗೆ ಎಚ್ಚರವಹಿಸಬೇಕು. ಮತ್ತು ಹಣಕಾಸು ಹೂಡಿಕೆ ಮಾಡುವ ಮೊದಲು ಎಚ್ಚರವಹಿಸಬೇಕು. ಜನವರಿಯಿಂದ ಏಪ್ರಿಲ್‌ವರೆಗೆ ಹಾಗೂ ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳು ನಿಮಗೆ ಹೆಚ್ಚು ಲಾಭದಾಯಕವಾಗಿರುತ್ತದೆ. ನಿಮ್ಮ ಮೇಲೆ ನಿಮಗೆ ನಂಬಿಕೆ ಇರಬೇಕು ಮತ್ತು ನೀವು ಯಾವುದೇ ಕೆಲಸವನ್ನು ಮಾಡಿದರೂ ಅದನ್ನು ಸಂಪೂರ್ಣವಾಗಿ ಮಾಡಿ. ಉತ್ತಮ ಕುಟುಂಬ ಜೀವನವನ್ನು ಕಾಪಾಡಿಕೊಳ್ಳಲು ನೀವು ನಿರಂತರ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ.
-
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ!












Click it and Unblock the Notifications