Shukra Gochar 2022 : ಧನು ರಾಶಿಯಲ್ಲಿ ಶುಕ್ರ ಸಂಕ್ರಮಣ: ಯಾವ ರಾಶಿಯವರಿಗೆ ಶುಭ? ಯಾರಿಗೆ ಅಶುಭ?

ಧನು ರಾಶಿಯಲ್ಲಿ ಶುಕ್ರ ಸಂಕ್ರಮಣ 5 ಡಿಸೆಂಬರ್ 2022 ರಂದು ಸೋಮವಾರ ಸಂಭವಿಸಲಿದೆ. ಇದರಿಂದ ದ್ವಾದಶಿ ರಾಶಿಯವರ ಜೀವನದ ಮೇಲೆ ಪರಿಣಾಮ ಬೀಳಲಿದೆ. ಜ್ಯೋತಿಷ್ಯದಲ್ಲಿ ಶುಕ್ರ ಗ್ರಹವನ್ನು ಜೀವನದಲ್ಲಿ ಸಂತೋಷ ತರುವ ಗ್ರಹ ಎಂದು ಕರೆಯಲಾಗುತ್ತದೆ. ಇದರೊಂದಿಗೆ ಇದನ್ನು ಬೆಳಕಿನ ನಕ್ಷತ್ರ ಎಂದು ಕರೆಯುವುದುಂಟು. ಶುಕ್ರ ಗ್ರಹದ ಸಂಚಾರದಿಂದ ವ್ಯಕ್ತಿಯು ಜೀವನದಲ್ಲಿ ಸಾಂಸಾರಿಕ ಸುಖ, ಉದ್ಯೋಗದಲ್ಲಿ ಕೀರ್ತಿ, ಸಂಪತ್ತು, ಸಮೃದ್ಧಿ, ಸಂತೋಷ ಇತ್ಯಾದಿಗಳನ್ನು ಪಡೆಯುತ್ತಾನೆ. ಜೊತೆಗಿದು ಪ್ರೇರಣೆ, ಬುದ್ಧಿವಂತಿಕೆ ಮತ್ತು ಅದೃಷ್ಟವನ್ನು ಸೂಚಿಸುತ್ತದೆ. ವೈದಿಕ ಜ್ಯೋತಿಷ್ಯದಲ್ಲಿ ಶುಕ್ರನ ಸಂಕ್ರಮಣವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಈ ಸಂಚಾರ ಪ್ರತಿಯೊಬ್ಬ ವ್ಯಕ್ತಿಯ ಜೀವನದ ಮೇಲೆ ಶುಭ ಅಥವಾ ಅಶುಭ ಪರಿಣಾಮವನ್ನು ಬೀರಬಹುದು. ಹಾಗಾದರೆ ಯಾವ ರಾಶಿಯವರ ಜಾತಕದಲ್ಲಿ ಶುಕ್ರನ ಬಲವಿದೆ. ಯಾವ ರಾಶಿಯವರು ಶುಕ್ರನ ಅನುಗ್ರಹ ಪಡೆಯುತ್ತಾರೆ? ಜಾತಕದಲ್ಲಿ ಶುಕ್ರ ದುರ್ಬಲವಿರುವವರು ಏನು ಮಾಡಬೇಕು? ಇಂತೆಲ್ಲಾ ಪ್ರಶ್ನೆಗಳಿಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಉತ್ತರವಿದೆ.

ಧನು ರಾಶಿಯಲ್ಲಿ ಶುಕ್ರ ಸಂಚಾರ: ಸಮಯ

ಶುಕ್ರ ಗ್ರಹ ನಮ್ಮ ಜೀವನದಲ್ಲಿ ಆಕರ್ಷಣೆ, ಸೌಂದರ್ಯ, ಯೌವನ, ಪ್ರೀತಿಯ ಬಯಕೆಗಳು, ಪ್ರೀತಿಯ ತೃಪ್ತಿ, ಸೃಜನಶೀಲತೆಯನ್ನು ಪ್ರತಿನಿಧಿಸುತ್ತದೆ. ಮಾತ್ರವಲ್ಲದೆ ಇದು ಕಲೆ, ಸಂಗೀತ, ಕವನ, ವಿನ್ಯಾಸ, ಮನೋರಂಜನೆ, ಪ್ರದರ್ಶನಗಳು, ಗ್ಲಾಮರ್, ಫ್ಯಾಷನ್, ಆಭರಣಗಳ ತಯಾರಿ, ಅಮೂಲ್ಯ ಸಂಶೋಧನೆ, ಮೇಕ್ಅಪ್ ಇತ್ಯಾದಿ ಉದ್ಯೋಗದಲ್ಲಿರುವವರಿಗೆ ಬಲ ನೀಡುತ್ತದೆ. ಐಷಾರಾಮಿ ಪ್ರಯಾಣ, ಐಷಾರಾಮಿ ಆಹಾರ, ಐಷಾರಾಮಿ ವಾಹನಗಳ ಖರೀದಿಗೆ ಪೂರಕವಾಗಿದೆ. ಮತ್ತೊಂದೆಡೆ ಇದು ಸಂಜೀವಿನಿ ವಿದ್ಯಾ ಎಂಬ ಗುಪ್ತ ಜ್ಞಾನವನ್ನೂ ತೋರಿಸುತ್ತದೆ. ಇದು ಶುಕ್ರಾಚಾರ್ಯರಿಂದ ಮಾತ್ರ ನಾವು ಪಡೆಯಬಹುದಾದ ಜ್ಞಾನವಾಗಿದೆ.

ಧನು ರಾಶಿಯಲ್ಲಿ ಶುಕ್ರ ಸಂಕ್ರಮಣ 5 ಡಿಸೆಂಬರ್ 2022 ರಂದು 17:39 ಗಂಟೆಗೆ ಸಂಭವಿಸಲಿದೆ. ಇದು ಶಿಕ್ಷಕರು, ಮಾರ್ಗದರ್ಶಕರು, ಧರ್ಮ ಗುರುಗಳು, ಪ್ರೇರಕ ಭಾಷಣಕಾರರು ಮತ್ತು ಮದುವೆಯ ನಿರ್ಧಾರವನ್ನು ಅಂತಿಮಗೊಳಿಸಲು ಬಯಸುವ ಜನರಿಗೆ ಇದು ಉತ್ತಮ ಗ್ರಹ ಸ್ಥಾನವಾಗಿದೆ.

ಮೇಷ: ಆಧ್ಯಾತ್ಮಿಕ ಚಟುವಟಿಕೆಗಳತ್ತ ಒಲವು

ಮೇಷ: ಆಧ್ಯಾತ್ಮಿಕ ಚಟುವಟಿಕೆಗಳತ್ತ ಒಲವು

ಮೇಷ ರಾಶಿಯವರ ಜಾತಕದಲ್ಲಿ ಶುಕ್ರನ ಬಲವಿದೆ. ಹೀಗಾಗಿ ಶಿಕ್ಷಕರು, ಮಾರ್ಗದರ್ಶಕರು, ಧರ್ಮ ಗುರುಗಳು, ಪ್ರೇರಕ ಭಾಷಣಕಾರರು ಮತ್ತು ಮದುವೆಯ ನಿರ್ಧಾರವನ್ನು ಅಂತಿಮಗೊಳಿಸಲು ಬಯಸುವ ಮೇಷ ರಾಶಿಯವರಿಗೆ ಇದು ಮಂಗಳಕರ ಸಮಯವಾಗಿದೆ. ವರ್ಷಾಂತ್ಯಕ್ಕೆ ನೀವು ಕೈಗೊಂಡ ಕಾರ್ಯಗಳು ಸರಾಗವಾಗಿ ಪೂರ್ಣಗೊಳ್ಳುತ್ತವೆ. ಯಾವುದೇ ಸಮಸ್ಯೆಯನ್ನು ಎದುರಿಸುವ ಶಕ್ತಿ ನಿಮಗಿರುತ್ತದೆ. ನಿಮ್ಮ ಸಂಗಾತಿಯೇ ನಿಮ್ಮ ಜೀವನದ ಅದೃಷ್ಟ ಲಕ್ಷ್ಮಿಯಾಗಿರುತ್ತಾರೆ. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಇದು ಉತ್ತಮ ಸಮಯವಾಗಿರುತ್ತದೆ.

ಶುಕ್ರನು ಕುಟುಂಬ, ಹಣಕಾಸು, ಮಾತು ಮತ್ತು ಜೀವನ ಸಂಗಾತಿಯ ಏಳನೇ ಮನೆಯನ್ನು ಆಳುತ್ತಾನೆ. ಈಗ ಅದು ನಾಟಕ, ದೂರದ ಪ್ರಯಾಣ, ತೀರ್ಥಯಾತ್ರೆ ಮತ್ತು ಅದೃಷ್ಟದ ಒಂಬತ್ತನೇ ಮನೆಗೆ ಸಾಗುತ್ತಿದೆ. ಮೇಷ ರಾಶಿಯವರು ತಮ್ಮ ತಂದೆ, ಗುರು, ಮಾರ್ಗದರ್ಶಕರ ಬೆಂಬಲವನ್ನು ಪಡೆಯುತ್ತಾರೆ. ಧನು ರಾಶಿಯಲ್ಲಿ ಶುಕ್ರ ಸಂಕ್ರಮಣದ ಸಮಯದಲ್ಲಿ ನೀವು ಅತೀಂದ್ರಿಯ ವಿಜ್ಞಾನದ ಕಡೆಗೆ ಒಲವು ತೋರಬಹುದು. ನೀವು ಆಧ್ಯಾತ್ಮಿಕ ಚಟುವಟಿಕೆಗಳು, ಪೂಜೆಗಳು ಮತ್ತು ಪೌರಾಣಿಕ ಗ್ರಂಥಗಳನ್ನು ಓದುವ ಕಡೆಗೆ ಒಲವನ್ನು ಹೊಂದಿರುತ್ತೀರಿ.

ವೃಷಭ: ಜೀವನದಲ್ಲಿ ಹಠಾತ್ ಬದಲಾವಣೆ

ವೃಷಭ: ಜೀವನದಲ್ಲಿ ಹಠಾತ್ ಬದಲಾವಣೆ

ಧನು ರಾಶಿಯಲ್ಲಿ ಶುಕ್ರ ಸಂಕ್ರಮಣವು ವೃಷಭ ರಾಶಿಯರಿಗೆ ಮಿಶ್ರ ಫಲ ನೀಡುತ್ತದೆ. ನಿಮ್ಮ ಜೀವನದಲ್ಲಿ ಹಠಾತ್ ಬದಲಾವಣೆಗಳಾಗುತ್ತವೆ. ಕುಟುಂಬದಲ್ಲಿ ಹೊಸ ಅತಿಥಿಗಳ ಆಗಮನವಾಗಬಹುದು. ಶುಭ ಕಾರ್ಯಗಳು ನಡೆಯುವ ಸಾಧ್ಯತೆಗಳು ಇವೆ. ಆದರೆ ಈ ಸಂದರ್ಭದಲ್ಲಿ ಆರೋಗ್ಯದ ಕಡೆಗೆ ಹೆಚ್ಚು ಜಾಗರೂಕರಾಗಿರುವುದು ಉತ್ತಮ. ಯಾಕೆಂದರೆ ಕೆಲ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಇದರಿಂದ ಆರೋಗ್ಯಕರ ಆಹಾರ ಸೇವಿಸುವುದು, ಸೋಮಾರಿತನ ತಪ್ಪಿಸುವುದು, ಸದಾ ಕ್ರಿಯಾಶೀಲರಾಗಿರುವುದು ಅವಶ್ಯಕವಾಗಿದೆ. ಹೆಚ್ಚು ಆಲ್ಕೋಹಾಲ್ ಅಥವಾ ಜಿಡ್ಡಿನ ಆಹಾರದ ಸೇವನೆ ತಪ್ಪಿಸುವುದು ಅಗತ್ಯ.

ಈ ಸಂದರ್ಭದಲ್ಲಿ ನಿಮ್ಮ ಉಳಿತಾಯದಲ್ಲಿ ಸುಧಾರಣೆಯಾಗಲಿದೆ. ಆರ್ಥಿಕ ಸ್ಥಿತಿ ಬಲಗೊಳ್ಳಬಹುದು. ಹೂಡಿಕೆ ಮಾಡಲು ಈ ಸಮಯದಲ್ಲಿ ಹಿಂಜರಿಯಬೇಡಿ. ಆದರೆ ಅನುಭವಿಗಳ ಸಲಹೆ ಪಡೆಯಿರಿ. ಲಾಭದಾಯಕ ದಿನಗಳು ಇನ್ನೇನು ದೂರವಿಲ್ಲ. ನಿಮ್ಮ ತಾಳ್ಮೆಯ ಪರೀಕ್ಷೆಯ ಕಾಲವಿದು. ನಿಮ್ಮವರೊಂದಿಗೆ ಸಹನಶೀಲರಾಗಿರಿ. ಅದು ನಿಮ್ಮನ್ನು ಸದಾ ಕಾಪಾಡುತ್ತದೆ.

ಮಿಥುನ: ಮನಸ್ಸಿಗೆ ಹಿತ ನೀಡುವ ದೂರದ ಪ್ರಯಾಣ

ಮಿಥುನ: ಮನಸ್ಸಿಗೆ ಹಿತ ನೀಡುವ ದೂರದ ಪ್ರಯಾಣ

ಮಿಥುನ ರಾಶಿಯವರಿಗೆ ಈ ಸಮಯ ಮಂಗಳಕರವಾಗಿದೆ. ಶುಕ್ರನ ಅನುಗ್ರಹದಿಂದ ವ್ಯವಹಾರದಲ್ಲಿ ಲಾಭ ಪಡೆಯುವ ಸಾಧ್ಯತೆಗಳು ಬಲವಾಗಿವೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಉದ್ಯೋಗದಲ್ಲಿ ಹಲವಾರು ಅವಕಾಶಗಳು ನಿಮಗಾಗಿ ಕಾಯಲಿವೆ. ನಿಮ್ಮ ಶ್ರಮದ ಫಲವನ್ನು ನೀವು ಈ ಸಮಯದಲ್ಲಿ ಪಡೆಯುವಿರಿ. ದೂರದ ಪ್ರಯಾಣ ಮನಸ್ಸಿಗೆ ಹಿತ ನೀಡುತ್ತದೆ ಎಂದು ನೀವು ಈಗಾಗಲೇ ಕಂಡುಕೊಂಡಿದ್ದೀರಿ. ಹೀಗಾಗಿ ಕುಟುಂಬಸ್ಥರೊಂದಿಗೆ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಬಹುದು. ಸಂಗಾತಿ ಹಾಗೂ ಪೋಷಕರೊಂದಿಗಿನ ನಿಮ್ಮ ಸಂಬಂಧ ಗಟ್ಟಿಯಾಗಿರುತ್ತದೆ. ನಿಮ್ಮ ಸಂಗಾತಿಯ ಆರೋಗ್ಯದ ಕಡೆಗೆ ಕೊಂಚ ಗಮನವಿರಲಿ.

ಕೆಲವರು ವಿದೇಶಿ ಒಪ್ಪಂದಕ್ಕೆ ಅನುಮತಿ ನೀಡಬಹುದು ಅದು ನಿಮಗೆ ದೊಡ್ಡ ಲಾಭವನ್ನು ತರುತ್ತದೆ. ನಿಮ್ಮ ಆಕರ್ಷಕ ಮಾತು ಹಲವರನ್ನು ಸೆಳೆಯುತ್ತದೆ. ನಿಮ್ಮ ನಡೆ ನಿಮ್ಮೊಂದಿಗಿರುವವರಿಗೆ ಮಾದರಿಯಾಗಿದೆ. ನೀವು ಮಾಡುವ ಕೆಲಸದಲ್ಲಿ ಹೆಚ್ಚು ಶ್ರಮ ವಹಿಸುವಿರಿ. ಇದರಿಂದ ನಿಮ್ಮ ಕೆಲಸ ಸುಲಭಗೊಳ್ಳುತ್ತದೆ ಜೊತೆಗೆ ಅದಕ್ಕೆ ತಕ್ಕ ಲಾಭವನ್ನೂ ನೀವು ಪಡೆಯುತ್ತೀರಿ.

ಕಟಕ: ಸ್ನೇಹಿತರು ಶತ್ರುಗಳಾಗುವ ಸಾಧ್ಯತೆ

ಕಟಕ: ಸ್ನೇಹಿತರು ಶತ್ರುಗಳಾಗುವ ಸಾಧ್ಯತೆ

ಈ ಸಮಯದಲ್ಲಿ ಕಟಕ ರಾಶಿಯವರ ಜಾತಕದಲ್ಲಿ ಶುಕ್ರನ ಬಲವಿದ್ದು ವಾಹನ, ಮನೆ, ಭೂಮಿ ಖರೀದಿಗೆ ಉತ್ತಮ ಸಮಯವಾಗಿದೆ. ನಿಮ್ಮ ಮನಸ್ಸು ಸಂತೋಷದಿಂದ ಕೂಡಿರುತ್ತದೆ. ಕಟಕ ರಾಶಿಯವರು ಕೆಲವು ಧಾರ್ಮಿಕ ಕೆಲಸಗಳಲ್ಲಿ ನಿರತರಾಗಬಹುದು. ನಿಮ್ಮ ಶತ್ರುಗಳ ಕಾರ್ಯಗಳನ್ನು ನಿರ್ಲಕ್ಷಿಸಬೇಡಿ. ಇಲ್ಲದಿದ್ದರೆ ನಿಮ್ಮ ಶತ್ರುಗಳು ನಿಮ್ಮನ್ನು ಆಳುತ್ತಾರೆ. ಹಣಕಾಸಿನ ಹೂಡಿಕೆಗೆ ಸಂಬಂಧಿಸಿದಂತೆ ಯಾವುದೇ ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಇಂದು ನಿಮ್ಮ ಆಲೋಚನೆ ವ್ಯಾಪಾರ ಚಟುವಟಿಕೆಗಳಲ್ಲಿ ಧನಾತ್ಮಕವಾಗಿರುತ್ತೀರಿ. ಮನೆಯ ವಾತಾವರಣ ಅಹ್ಲಾದಕರವಾಗಿರುತ್ತದೆ.

ರಹಸ್ಯ ವ್ಯವಹಾರಗಳು ಅಥವಾ ವಿವಾಹೇತರ ಸಂಬಂಧಗಳಂತಹ ಅನೈತಿಕ ಚಟುವಟಿಕೆಗಳಲ್ಲಿರುವವರೊಂದಿಗೆ ಎಚ್ಚರಿಕೆಯಿಂದಿರಿ. ಇದು ನಿಮ್ಮ ಪ್ರೇಮ ಜೀವನದಲ್ಲಿ ವಿಘಟನೆಯನ್ನು ಉಂಟುಮಾಡಬಹುದು. ಜೊತೆಗೆ ಸಮಾಜದಲ್ಲಿ ನಿಮ್ಮ ಇಮೇಜ್ ಅನ್ನು ಹಾನಿಗೊಳಿಸಬಹುದು. ನಿಮ್ಮ ಮೇಲಿನ ಆರೋಪಗಳನ್ನು ತಪ್ಪಿಸಲು ನೀವು ಅಂತಹ ಚಟುವಟಿಕೆಗಳಿಂದ ದೂರವಿರಲು ಸಲಹೆ ನೀಡಲಾಗುತ್ತದೆ. ಈ ಸಂಚಾರವು ನಿಮ್ಮ ಸ್ನೇಹಿತರನ್ನು ಶತ್ರುಗಳಾಗಿ ಪರಿವರ್ತಿಸುವುದರಿಂದ ಈ ಅವಧಿಯಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ.

ಸಿಂಹ: ದೃಢ ಮತ್ತು ಪ್ರಮುಖ ನಿರ್ಧಾರಗಳಲ್ಲಿ ಯಶಸ್ಸು

ಸಿಂಹ: ದೃಢ ಮತ್ತು ಪ್ರಮುಖ ನಿರ್ಧಾರಗಳಲ್ಲಿ ಯಶಸ್ಸು

ಸಿಂಹ ರಾಶಿಯವರ ಜಾತಕದಲ್ಲಿ ಶುಕ್ರ ಬಲವಿದೆ. ಕೆಲಸದ ಸ್ಥಳದಲ್ಲಿ ತೆಗೆದುಕೊಂಡ ದೃಢ ಮತ್ತು ಪ್ರಮುಖ ನಿರ್ಧಾರಗಳು ಯಶಸ್ವಿಯಾಗುತ್ತವೆ. ನಿಮ್ಮ ಮಾತು ನಂಬಿಕೆಗೆ ಅರ್ಹವಾಗಿರುತ್ತದೆ. ಕೆಲಸದ ಕಡೆಗೆ ಸಂಪೂರ್ಣ ಗಮನವಿರುತ್ತದೆ. ಕಠಿಣ ಪರಿಶ್ರಮದಿಂದ ಕೆಲಸ ಮಾಡಲು ಪ್ರಯತ್ನಿಸುತ್ತಿರಿ. ಇದು ನಿಮ್ಮನ್ನು ಸಾಬೀತುಪಡಿಸುವ ಸಮಯ. ಕೊಂಚ ಎಚ್ಚರ ತಪ್ಪಿದರೆ ಕಾನೂನು ತೊಂದರೆಗೆ ಸಿಲುಕಬಹುದು. ಹೀಗಾಗಿ ವ್ಯವಹಾರದಲ್ಲಿ ಅಥವಾ ಲಾಭದಾಯಕ ಹುದ್ದೆಗಳಲ್ಲಿ ಎಚ್ಚರ ವಹಿಸುವುದು ಅತ್ಯಾವಶ್ಯಕ.

ಡಿಸೈನಿಂಗ್, ಕಲೆ, ಸೃಜನಶೀಲತೆ, ಕವನ ಕ್ಷೇತ್ರದಲ್ಲಿ ಇರುವ ವಿದ್ಯಾರ್ಥಿಗಳಿಗೆ ಈ ಸಂಕ್ರಮಣದಲ್ಲಿ ಸೃಜನಾತ್ಮಕ ಕಲ್ಪನೆಗಳನ್ನು ಸೃಷ್ಟಿಸುತ್ತದೆ. ಪ್ರೇಮಿಗಳು ಪ್ರಣಯ ಸಮಯವನ್ನು ಆನಂದಿಸುತ್ತಾರೆ. ಶುಕ್ರ ಗ್ರಹ ಧನು ರಾಶಿಯಲ್ಲಿ ಸಾಗಿದಾಗ ಸಂಬಂಧ ಬಲಗೊಳ್ಳುತ್ತದೆ. ಮೇಲಾಧಿಕಾರಿಗಳ ಸಹಾಯದಿಂದ ನಿಮ್ಮ ಕೆಲಸಗಳು ಸುಗಮಗೊಳ್ಳುತ್ತವೆ. ಸಹೋದ್ಯೋಗಿಗಳು ನಿಮ್ಮ ಕಾರ್ಯವೈಖರಿಯನ್ನು ಮೆಚ್ಚುತ್ತಾರೆ. ನ್ಯಾಯಾಲಯದಲ್ಲಿನ ಪ್ರಕರಣಗಳ ತೀರ್ಪು ನಿಮ್ಮ ಪರವಾಗಿ ಬರಬಹುದು. ಮನೆಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಕೊಂಚ ಮನಸ್ತಾಪಗಳು ಉಂಟಾಗುವುದರಿಂದ ಶುಭ ಕಾರ್ಯಗಳನ್ನು ಶುಭ ಗಳಿಯಲ್ಲಿ ಮಾಡುವುದು ಉತ್ತಮ. ಒಟ್ಟಿನಲ್ಲಿ ಸಿಂಹ ರಾಶಿಯವರಿಗೆ ಒಳ್ಳೆಯ ಸಮಯ.

ಕನ್ಯಾ: ಕ್ರಮ ಮತ್ತು ಶಿಸ್ತುಬದ್ಧ ವಾತಾವರಣ

ಕನ್ಯಾ: ಕ್ರಮ ಮತ್ತು ಶಿಸ್ತುಬದ್ಧ ವಾತಾವರಣ

ಕನ್ಯಾ ರಾಶಿಯವರಿಗೆ ಈ ಸಮಯ ಅತ್ಯಂತ ಮಂಗಳಕರವಾಗಿದೆ. ಶುಕ್ರವು ನಿಮಗೆ ಸ್ನೇಹಿ ಗ್ರಹವಾಗಿದೆ. ಹೀಗಾಗಿ ಮನೆಯ ವಾತಾವರಣ ಕ್ರಮಬದ್ಧವಾಗಿ ಮತ್ತು ಶಿಸ್ತುಬದ್ಧವಾಗಿರುತ್ತದೆ. ಮನೆಯಲ್ಲಿ ಸತ್ಯನಾರಾಯಣ ಕಥೆಯಂತಹ ಕೆಲವು ಆಧ್ಯಾತ್ಮಿಕ ಚಟುವಟಿಕೆಗಳನ್ನು ಮಾಡಬಹುದು. ಮನೆ ಮತ್ತು ವ್ಯಾಪಾರದ ನಡುವೆ ಉತ್ತಮ ಹೊಂದಾಣಿಕೆ ಇರುತ್ತದೆ. ಕೆಲಸ ಹೆಚ್ಚು ಆದರೆ ಎಲ್ಲಾ ಕೆಲಸಗಳು ಸರಿಯಾಗಿ ಪೂರ್ಣಗೊಳ್ಳುತ್ತವೆ. ಆಧ್ಯಾತ್ಮಿಕ ಕೆಲಸಗಳಲ್ಲಿ ನಿಮ್ಮ ಆಸಕ್ತಿಯೂ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಹಣದ ವ್ಯವಹಾರದಲ್ಲಿ ಯಾವುದೇ ನಷ್ಟ ಉಂಟಾಗುವ ಸಾಧ್ಯತೆಯಿದೆ. ವಿರೋಧಿಗಳ ಚೇಷ್ಟೆಗಳನ್ನು ನಿರ್ಲಕ್ಷಿಸಬೇಡಿ. ವಿದ್ಯಾರ್ಥಿಗಳು ಅಧ್ಯಯನಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಮಕ್ಕಳೊಂದಿಗೆ ಸ್ನೇಹದಿಂದಿರಿ. ನಿಮ್ಮ ಯಾವುದೇ ಯೋಜನೆಗಳನ್ನು ಯಾರಿಗೂ ಬಹಿರಂಗಪಡಿಸಬೇಡಿ. ನಿಮ್ಮ ಮೇಲ್ವಿಚಾರಣೆಯಲ್ಲಿ ಕೆಲಸದ ಸ್ಥಳದಲ್ಲಿ ಎಲ್ಲಾ ಕೆಲಸಗಳನ್ನು ಮಾಡಿ. ನಿಮ್ಮ ತಾಯಿಯೊಂದಿಗೆ ಬೆಂಬಲ ಮತ್ತು ಗುಣಮಟ್ಟದ ಸಮಯವನ್ನು ಆನಂದಿಸುವಿರಿ. ನಿಮ್ಮ ಮನೆಗೆ ಕೆಲವು ಐಷಾರಾಮಿ ವಸ್ತುಗಳನ್ನು ಖರೀದಿಸಲು ನೀವು ಹಣವನ್ನು ಖರ್ಚು ಮಾಡುತ್ತೀರಿ. ಈ ಸಮಯವನ್ನು ಪೂರ್ಣವಾಗಿ ಆನಂದಿಸಲು ನಿಮಗೆ ಸಲಹೆ ನೀಡಲಾಗುತ್ತದೆ.

ತುಲಾ: ಸಾಮಾಜಿಕ ವಲಯದಲ್ಲಿ ಛಾಪು

ತುಲಾ: ಸಾಮಾಜಿಕ ವಲಯದಲ್ಲಿ ಛಾಪು

ತುಲಾ ರಾಶಿಯವರಿಗೆ ಈ ಸಮಯ ಕೊಂಚ ಅಡೆತಡೆ ಉಂಟು ಮಾಡಬಹುದು. ಆದರೆ ನಿಮ್ಮ ಮಧುರ ನಡವಳಿಕೆ ಮತ್ತು ಅತ್ಯುತ್ತಮ ವ್ಯಕ್ತಿತ್ವದಿಂದ ಸಾಮಾಜಿಕ ಮತ್ತು ಕೌಟುಂಬಿಕ ವಲಯದಲ್ಲಿ ಛಾಪು ಮೂಡಿಸುತ್ತಾರೆ. ಸಂಪರ್ಕದ ವ್ಯಾಪ್ತಿಯೂ ವಿಸ್ತರಿಸುತ್ತದೆ. ನಿಮ್ಮ ಆಸಕ್ತಿಯ ಕೆಲಸಗಳಲ್ಲಿಯೂ ಸ್ವಲ್ಪ ಸಮಯವನ್ನು ಕಳೆಯಬಹುದು. ವೈಯಕ್ತಿಕ ಕೆಲಸಗಳ ಜೊತೆಗೆ ಕುಟುಂಬದ ಸದಸ್ಯರೊಂದಿಗೆ ಸಮಯ ಕಳೆಯುವುದು ನಿಮ್ಮ ಜವಾಬ್ದಾರಿಯಾಗಿದೆ. ಕೆಲವೊಮ್ಮೆ ಅದೃಷ್ಟವು ನಿಮ್ಮ ಕಡೆ ಇಲ್ಲ ಎಂದು ತೋರುತ್ತದೆ. ಇದು ನಿಮ್ಮ ಭ್ರಮೆ. ಅದೃಷ್ಟ ನಿಮ್ಮ ಶ್ರಮದ ಫಲ ನೀಡುತ್ತದೆ. ಹೀಗಾಗಿ ಕೆಲಸದಲ್ಲಿ ಶ್ರಮವಿರಲಿ. ದೈವದಲ್ಲಿ ನಂಬಿಕೆ ಇಡುವುದು ಅತ್ಯಾವಶ್ಯಕ. ಯಂತ್ರ ಮತ್ತು ಆಹಾರಕ್ಕೆ ಸಂಬಂಧಿಸಿದ ವ್ಯವಹಾರವು ಯಶಸ್ವಿಯಾಗುತ್ತದೆ.

ನಿಮ್ಮ ಕಿರಿಯ ಸಹೋದರರೊಂದಿಗಿನ ನಿಮ್ಮ ಸಂಬಂಧ ಈ ಸಮಯದಲ್ಲಿ ಉತ್ತಮವಾಗಿರುತ್ತದೆ. ನೀವು ಅವರೊಂದಿಗೆ ಹಠಾತ್ ಸಣ್ಣ ಪ್ರವಾಸವನ್ನು ಸಹ ಯೋಜಿಸಬಹುದು ಮತ್ತು ಪ್ರೀತಿಯ ಕ್ಷಣಗಳನ್ನು ಕಳೆಯಬಹುದು. ಆರೋಗ್ಯದ ಬಗ್ಗೆ ನೀವು ಸ್ವಲ್ಪ ಜಾಗೃತರಾಗಿರಬೇಕು.

ಧನು ರಾಶಿಯಲ್ಲಿನ ಶುಕ್ರ ಸಂಕ್ರಮಣವು ನಿಮ್ಮ ಬರವಣಿಗೆಯ ಕೌಶಲ್ಯ, ಸಂವಹನ ಕೌಶಲ್ಯಗಳಲ್ಲಿ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಬರವಣಿಗೆ, ಲಲಿತಕಲೆ ಮತ್ತು ಸಾಹಿತ್ಯದಲ್ಲಿ ತೊಡಗಿರುವ ಜನರಿಗೆ ಈ ಸಮಯ ಹೆಚ್ಚು ಸೃಜನಶೀಲವಾಗಿರುತ್ತದೆ. ಇದು ನಿಮ್ಮ ಕೆಲಸವನ್ನು ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.

ವೃಶ್ಚಿಕ: ಶತ್ರು ನಾಶಕ್ಕೆ ಮಧುರ ಮಾತು ಸಾಕು

ವೃಶ್ಚಿಕ: ಶತ್ರು ನಾಶಕ್ಕೆ ಮಧುರ ಮಾತು ಸಾಕು

ವೃಶ್ಚಿಕ ರಾಶಿಯವರಿಗೆ ಈ ಸಮಯ ಶುಭವಾಗಿರುತ್ತದೆ. ಶುಕ್ರ ಸಂಕ್ರಮಣದಿಂದಾಗಿ ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ. ಅಂದುಕೊಂಡ ಕಾರ್ಯಗಳು ಅಡೆತಡೆಯಿಂದ ಕೊಂಚ ನಿಧಾನವಾಗಬಹುದು. ಮನೆಯ ವಾತಾವರಣ ಆಹ್ಲಾದಕರವಾಗಿರುತ್ತದೆ. ಶಾಂತವಾಗಿ ಮತ್ತು ಚಿಂತನಶೀಲವಾಗಿ ವರ್ತಿಸಿ. ಮಕ್ಕಳ ಭವಿಷ್ಯದ ಬಗ್ಗೆ ಕೆಲವು ಯೋಜನೆಗಳು ಸಹ ಫಲಪ್ರದವಾಗುತ್ತವೆ. ಆದರೆ ನಿಮ್ಮ ಹೃದಯದ ಬದಲಿಗೆ ನಿಮ್ಮ ತಲೆಯಿಂದ ಕೆಲಸ ಮಾಡಿ. ಭಾವನಾತ್ಮಕವಾಗಿ, ನೀವು ತಪ್ಪು ನಿರ್ಧಾರ ತೆಗೆದುಕೊಳ್ಳಬಹುದು. ಬೇರೆಯವರು ಕೂಡ ಇದರ ಲಾಭವನ್ನು ತಪ್ಪಾಗಿ ಪಡೆಯಬಹುದು.

ಈ ಅವಧಿಯಲ್ಲಿ ನಿಮ್ಮ ಮಾತು ತುಂಬಾ ಸಿಹಿಯಾಗಿರುತ್ತದೆ. ನಿಮ್ಮ ಕುಟುಂಬದೊಂದಿಗೆ ನೀವು ಆಳವಾದ ಬಾಂಧವ್ಯವನ್ನು ಅನುಭವಿಸುವಿರಿ. ನಿಮ್ಮ ಪ್ರೀತಿಪಾತ್ರರ ಜೊತೆಗೆ ಗುಣಮಟ್ಟದ ಸಮಯವನ್ನು ಕಳೆಯಲು ನೀವು ಬಯಸುತ್ತೀರಿ. ಈ ಸಂಚಾರ ವೃಶ್ಚಿಕ ರಾಶಿಯವರಿಗೆ ವಿದೇಶಿ ಭೂಮಿಯಿಂದ ಸಾಕಷ್ಟು ಆರ್ಥಿಕ ಲಾಭವನ್ನು ತರುತ್ತದೆ.

MNC ಗಳೊಂದಿಗೆ ಕೆಲಸ ಮಾಡುತ್ತಿರುವ ಅಥವಾ ಐಷಾರಾಮಿ ಬಟ್ಟೆಗಳು, ಆಮದು ರಫ್ತು ಇತ್ಯಾದಿ ಕೆಲಸಗಳಲ್ಲಿರುವ ಉದ್ಯೋಗಿಗಳಿಗೆ ಆನಂದವಿರುತ್ತದೆ. ಅತೀಂದ್ರಿಯ ವಿಜ್ಞಾನದಲ್ಲಿ ಏನನ್ನಾದರೂ ಕಲಿಯಲು ನೀವು ಯೋಜಿಸುತ್ತಿದ್ದರೆ ಅದು ಉತ್ತಮ ಸಮಯ.

ಧನು: ಆದಾಯ ಮತ್ತು ಆರ್ಥಿಕ ಲಾಭ

ಧನು: ಆದಾಯ ಮತ್ತು ಆರ್ಥಿಕ ಲಾಭ

ಮನೆಯ ವಾತಾವರಣ ಆನಂದದಿಂದ ಕೂಡಿರುತ್ತದೆ. ನೀವು ಐಷಾರಾಮಿ ಮತ್ತು ಸೌಕರ್ಯವನ್ನು ಅನುಭವಿಸುವಿರಿ. ಧನು ರಾಶಿಯವರಿಗೆ ಈ ಸಮಯದಲ್ಲಿ ಶುಕ್ರನ ಬಲ ಇರುತ್ತದೆ. ನೀವು ಐಷಾರಾಮಿ ಮತ್ತು ಸೌಕರ್ಯವನ್ನು ಅನುಭವಿಸುವಿರಿ. ನೀವು ಪ್ರಭಾವಿ ವ್ಯಕ್ತಿಗಳ ಸಹವಾಸವನ್ನು ಆನಂದಿಸುತ್ತೀರಿ ಮತ್ತು ಸ್ನೇಹಿತರು ಮತ್ತು ಸಾಮಾಜಿಕ ವಲಯದೊಂದಿಗೆ ಸಾಕಷ್ಟು ಸಮಯವನ್ನು ಕಳೆಯುತ್ತೀರಿ. ಧನು ರಾಶಿಯಲ್ಲಿ ಶುಕ್ರ ಸಂಕ್ರಮಣದೊಂದಿಗೆ ಈ ಸಮಯದಲ್ಲಿ ನಿಮ್ಮ ಆದಾಯ ಮತ್ತು ಆರ್ಥಿಕ ಲಾಭಗಳನ್ನು ಸುಧಾರಿಸಲು ನೀವು ಹೊಸ ಅವಕಾಶಗಳನ್ನು ಪಡೆಯುತ್ತೀರಿ. ಈ ಸಂಚಾರ ಪ್ರೀತಿ ಮತ್ತು ಮದುವೆಗೆ ಸಂಬಂಧಿಸಿದ ವಿಷಯಗಳನ್ನು ಅರಳಿಸುತ್ತದೆ. ಆರೋಗ್ಯದ ಸುಧಾರಣೆಯತ್ತ ಗಮನ ಹರಿಸುತ್ತೀರಿ.

ಅನುಭವಿ ಜನರು ಮತ್ತು ಪ್ರಕೃತಿಯೊಂದಿಗೆ ಸ್ವಲ್ಪ ಸಮಯ ಕಳೆಯಿರಿ. ನೀವು ಶಾಂತಿಯನ್ನು ಕಾಣಬಹುದು. ವ್ಯಾಪಾರ ಚಟುವಟಿಕೆಗಳನ್ನು ಸರಿಯಾಗಿ ನಡೆಸಲು ನೌಕರರ ಸಲಹೆಯನ್ನು ಅನುಸರಿಸಿ. ಮಹಿಳಾ ಉದ್ಯೋಗಿಗಳು ಈ ಸಂಚಾರ ಸಮಯದಲ್ಲಿ ಅಂದುಕೊಂಡ ಕಾರ್ಯಗಳನ್ನು ಸುಲಭವಾಗಿ ಮಾಡುತ್ತಾರೆ. ಅವರ ಕಾರ್ಯ ವೈಖರಿಯನ್ನು ಕುಟುಂಬಸ್ಥರು ಮೆಚ್ಚುತ್ತಾರೆ. ಮನೆ ಹಾಗೂ ಉದ್ಯೋಗವನ್ನು ಸುಲಭವಾಗಿ ನಿಭಾಯಿಸುವ ಜಾಣ್ಮೆ ಮಹಿಳೆಯರಿಗೆ ಇರುತ್ತದೆ.

ಮಕರ: ಹೊಸ ವರ್ಷಕ್ಕೆ ಪ್ರವಾಸದ ಯೋಜನೆ

ಮಕರ: ಹೊಸ ವರ್ಷಕ್ಕೆ ಪ್ರವಾಸದ ಯೋಜನೆ

ಶುಕ್ರ ಯೋಗ ಕಾರಕ ಗ್ರಹ. ಇದು ಐದನೇ ಮನೆ ಮತ್ತು ಹತ್ತನೇ ಮನೆಯನ್ನು ಆಳುತ್ತದೆ ಮತ್ತು ಈಗ ಅದು ವಿದೇಶಿ ಭೂಮಿ, ವೆಚ್ಚಗಳು, ನಷ್ಟಗಳ ಹನ್ನೆರಡನೇ ಮನೆಯಲ್ಲಿ ಸಾಗುತ್ತಿದೆ. ಆದ್ದರಿಂದ ರಫ್ತು-ಆಮದು ವ್ಯವಹಾರದಲ್ಲಿರುವ ಅಥವಾ ಎಂಎನ್‌ಸಿಯಲ್ಲಿ ಕೆಲಸ ಮಾಡುವ ಮಕರ ರಾಶಿಯವರಿಗೆ ಇದು ಮಂಗಳಕರ ಸಮಯವಾಗಿದೆ. ಕೆಲಸದಲ್ಲಿ ಯಾವುದೇ ಒತ್ತಡವಿರುವುದಿಲ್ಲ. ಹೊಸ ವರ್ಷದ ತಯಾರಿಯಲ್ಲಿ ನೀವಿರುತ್ತೀರಿ. ವರ್ಷಾಂತ್ಯಕ್ಕೆ ಸ್ನೇಹಿತರೊಂದಿಗೆ ಪ್ರವಾಸ ಕೈಗೊಳ್ಳಬಹುದು. ಕುಟುಂಬಸ್ಥರೊಂದಿಗೆ ಸಮಯ ಕಳೆಯಲು ರೆಸಾರ್ಟ್‌ ಅಥವಾ ರೆಸ್ಟೊರೆಮಟ್‌ಗಳಿಗೆ ತೆರಳಬಹುದು. ನಿಮ್ಮ ಯೋಜಿತ ಕಾರ್ಯಗಳನ್ನು ಎಲ್ಲರೂ ಮೆಚ್ಚುತ್ತಾರೆ. ಇದು ನೀವು ನಿಮ್ಮವರೊಂದಿಗೆ ಕಳೆಯುವ ಸಮಯ.

ಶುಕ್ರನ ಈ ಸಂಕ್ರಮಣ ವಿದೇಶಿ ವ್ಯಾಪಾರ ಪ್ರಯಾಣಕ್ಕೆ ಅವಕಾಶವನ್ನು ಸೃಷ್ಟಿಸುತ್ತದೆ. ಅದು ನಿಮಗೆ ಪ್ರಯೋಜನಕಾರಿಯಾಗಿದೆ. ಕೆಲವು ತಪ್ಪು ತಿಳುವಳಿಕೆ ಅಥವಾ ಅಜ್ಞಾನವು ನಿಮ್ಮ ಪ್ರೇಮ ಸಂಬಂಧಕ್ಕೆ ಅಡ್ಡಿಯಾಗುವುದರಿಂದ ಪ್ರೇಮ ಪಕ್ಷಿಗಳು ಸ್ವಲ್ಪ ಎಚ್ಚರದಿಂದಿರಬೇಕು. ನಿಮ್ಮ ಹಣವನ್ನು ಐಷಾರಾಮಿ ಮತ್ತು ಮನರಂಜನೆಗಾಗಿ ಖರ್ಚು ಮಾಡಬೇಡಿ. ಸರಿಯಾದ ಬಜೆಟ್ ಅನ್ನು ತಯಾರಿಸಿ ಮತ್ತು ಧನು ರಾಶಿಯಲ್ಲಿ ಶುಕ್ರ ಸಂಕ್ರಮಣದ ಸಮಯದಲ್ಲಿ ಅನಗತ್ಯ ವೆಚ್ಚಗಳನ್ನು ತಪ್ಪಿಸಿ.

ಕುಂಭ: ನಿಮ್ಮದಾಗುತ್ತೆ ಐಷಾರಾಮಿ ಜೀವನ

ಕುಂಭ: ನಿಮ್ಮದಾಗುತ್ತೆ ಐಷಾರಾಮಿ ಜೀವನ

ಕುಂಭ ರಾಶಿಯವರಿಗೆ ಶುಕ್ರನ ಬಲವಿರುತ್ತದೆ. ಇದು ನಿಮ್ಮ ಐಷಾರಾಮಿ ಮತ್ತು ಸೌಕರ್ಯವನ್ನು ಹೆಚ್ಚಿಸುತ್ತದೆ. ಆರ್ಥಿಕ ಲಾಭ ಹೆಚ್ಚಾಗಲಿದೆ. ಇದು ನಿಮ್ಮ ಐಷಾರಾಮಿ ಮತ್ತು ಸೌಕರ್ಯವನ್ನು ಹೆಚ್ಚಿಸುತ್ತದೆ. ನಿಮ್ಮ ಭೌತಿಕ ಆಸೆಗಳು ಈಡೇರುತ್ತವೆ. ಈ ಸಮಯದಲ್ಲಿ ಸಾಮಾಜಿಕ ವಲಯದಲ್ಲಿ ನಿಮ್ಮ ಉತ್ತಮ ಕೆಲಸಗಳು ಎಲ್ಲರ ಗಮನ ಸೆಳೆಯುತ್ತದೆ.

ಶಿಕ್ಷಣ, ಪ್ರೇಮ ಸಂಬಂಧಗಳು ಉತ್ತಮವಾಗಿರುತ್ತವೆ. ನಿಮ್ಮ ಮಕ್ಕಳಿಂದ ನೀವು ಸಂತೋಷವನ್ನು ಪಡೆಯುತ್ತೀರಿ ಮತ್ತು ಸೃಜನಶೀಲ ಅಥವಾ ವಿನ್ಯಾಸ ಕ್ಷೇತ್ರದಲ್ಲಿ ಇರುವ ವಿದ್ಯಾರ್ಥಿಗಳು ಈ ಸಂಚಾರದ ಸಂಪೂರ್ಣ ಲಾಭವನ್ನು ಪಡೆಯಬಹುದು. ಕುಂಭ ರಾಶಿಯವರು ತಮ್ಮ ಪ್ರಾಯೋಗಿಕ ಕೌಶಲ್ಯದಿಂದ ಯಾವುದೇ ರೀತಿಯ ಕೆಲಸವನ್ನು ಮಾಡಲು ಸಾಧ್ಯವಾಗುತ್ತದೆ. ನಿಮ್ಮ ಯಾವುದೇ ಯೋಜನೆಯನ್ನು ಪ್ರಾರಂಭಿಸುವ ಮೊದಲು ಮತ್ತೊಮ್ಮೆ ಯೋಚಿಸಿ. ಯಾವುದೇ ಪ್ರಮುಖ ಮಾಹಿತಿಯನ್ನು ಮೊಬೈಲ್ ಅಥವಾ ಇಮೇಲ್ ಮೂಲಕ ಪಡೆಯಬಹುದು. ಹತಾಶೆಯಲ್ಲಿ, ಕೆಲವೊಮ್ಮೆ ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆ ಬರಬಹುದು. ಅನುಭವಿ ಜನರು ಮತ್ತು ಪ್ರಕೃತಿಯೊಂದಿಗೆ ಸ್ವಲ್ಪ ಸಮಯ ಕಳೆಯಿರಿ, ನೀವು ಶಾಂತಿಯನ್ನು ಕಾಣಬಹುದು. ವ್ಯಾಪಾರ ಚಟುವಟಿಕೆಗಳನ್ನು ಸರಿಯಾಗಿ ನಡೆಸಲು ನೌಕರರ ಸಲಹೆಯನ್ನು ಅನುಸರಿಸಿ.

ಮೀನ: ಶುತ್ರಗಳಿಂದ ಇರಲಿ ಅಂತರ

ಮೀನ: ಶುತ್ರಗಳಿಂದ ಇರಲಿ ಅಂತರ

ಮೀನ ರಾಶಿಯವರ ಜಾತಕದಲ್ಲಿ ಶುಕ್ರನ ಬಲವಿರುತ್ತದೆ. ನಿಮ್ಮ ಸಾಧನೆಯನ್ನು ಗೌರವಿಸಲಾಗುತ್ತದೆ. ಸಮಾಜಮುಖಿ ಕೆಲಸಗಳನ್ನು ನೀವು ಮಾಡುವಿರಿ. ನಿಮ್ಮ ಯಶಸ್ಸಿನಿಂದಾಗಿ ಕೆಲವರು ನಿಮ್ಮ ಬಗ್ಗೆ ಅಸೂಯೆ ಹೊಂದಬಹುದು. ಎಲ್ಲರನ್ನೂ ನಿರ್ಲಕ್ಷಿಸಿ, ನಿಮ್ಮ ಕೆಲಸದ ಮೇಲೆ ಕೇಂದ್ರೀಕರಿಸಿ. ನಿಮ್ಮ ಮನೆಯಲ್ಲಿ ಕೆಲವು ಧಾರ್ಮಿಕ ಪೂಜೆಗಳನ್ನು ನಡೆಸಲು ನೀವು ಸ್ವಲ್ಪ ಹಣವನ್ನು ಖರ್ಚು ಮಾಡಬಹುದು.

ನಿಮ್ಮ ಯಾವುದೇ ಯಶಸ್ಸನ್ನು ಮನೆಯಲ್ಲಿ ಮತ್ತು ಸಮಾಜದಲ್ಲಿ ಚರ್ಚಿಸಲಾಗುವುದು. ಮಕ್ಕಳ ಚಟುವಟಿಕೆಗಳಲ್ಲಿ ಆಸಕ್ತಿ ವಹಿಸುವುದರಿಂದ ಅವರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಕಛೇರಿಯಲ್ಲಿ ಅತಿಯಾದ ಕೆಲಸದಿಂದಾಗಿ ಮನೆಯಲ್ಲೇ ಸಮಯ ಕಳೆಯಬೇಕಾಗಬಹುದು. ಕೆಲಸದ ಸ್ಥಳದಲ್ಲಿ, ನಿಮ್ಮ ಕಠಿಣ ಪರಿಶ್ರಮಕ್ಕೆ ಅನುಗುಣವಾಗಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ವೃತ್ತಿಪರ ಜೀವನದಲ್ಲಿ ಕೆಲವು ಹಠಾತ್ ಬದಲಾವಣೆಗಳಾಗಬಹುದು. ನೀವು ಯಾವುದೇ ಸಂಶೋಧನಾ ಕ್ಷೇತ್ರದಲ್ಲಿದ್ದರೆ ಧನು ರಾಶಿಯಲ್ಲಿ ಶುಕ್ರ ಸಂಕ್ರಮಣದಿಂದ ನಿಮಗೆ ಲಾಭವಾಗುತ್ತದೆ. ನಿಮ್ಮ ಮನೆಗೆ ಹೊಸ ವಾಹನ ಅಥವಾ ಯಾವುದೇ ಐಷಾರಾಮಿ ವಸ್ತುಗಳನ್ನು ಖರೀದಿಸಲು ಇದು ಉತ್ತಮ ಸಮಯವಾಗಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+