ಶುಕ್ರನ ಕೃಪೆಯಿಂದ ಈ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ; ಹಣ, ಮನೆ, ಪದೋನ್ನತಿ ಯೋಗ
ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ಗ್ರಹಕ್ಕೂ ವಿಶೇಷ ಮಹತ್ವವಿದೆ. ಒಂಬತ್ತು ಗ್ರಹಗಳಲ್ಲಿ ಶುಕ್ರ ಗ್ರಹವನ್ನು ಸಂಪತ್ತು, ಸೌಂದರ್ಯ, ಐಶ್ವರ್ಯ, ಸುಖ-ಸಮೃದ್ಧಿ ಕಾರಕ ಎಂದು ಪರಿಗಣಿಸಲಾಗುತ್ತದೆ. ಯಾರ ಜಾತಕದಲ್ಲಿ ಶುಕ್ರ ಬಲಿಷ್ಠ ಸ್ಥಾನದಲ್ಲಿರುತ್ತಾನೋ ಅವರಿಗೆ ಜೀವನದಲ್ಲಿ ಆರ್ಥಿಕ ಪ್ರಗತಿ, ಭೌತಿಕ ಸೌಲಭ್ಯಗಳು ಮತ್ತು ವೈಯಕ್ತಿಕ ಯಶಸ್ಸು ದೊರೆಯುತ್ತದೆ.
ಜ್ಯೋತಿಷ್ಯದ ಪ್ರಕಾರ, ಗ್ರಹಗಳು ಕಾಲಕಾಲಕ್ಕೆ ತಮ್ಮ ರಾಶಿ ಸ್ಥಾನವನ್ನು ಬದಲಾಯಿಸುತ್ತವೆ. ಇದನ್ನು ಗ್ರಹ ಸಂಕ್ರಮಣ ಎಂದು ಕರೆಯಲಾಗುತ್ತದೆ. ಈ ಸಂಕ್ರಮಣವು ಎಲ್ಲಾ ರಾಶಿಗಳ ಮೇಲೂ ಪ್ರಭಾವ ಬೀರುತ್ತದೆ. ಆದರೆ ಕೆಲವು ರಾಶಿಯವರಿಗೆ ಇದು ವಿಶೇಷ ಶುಭ ಫಲಗಳನ್ನು ನೀಡುತ್ತದೆ. ಗ್ರಹಗಳ ಸ್ಥಾನ ಅಥವಾ ಮನೆ ಬದಲಾವಣೆಯ ಕಾರಣದಿಂದಲೇ ಮನುಷ್ಯನ ಜೀವನದಲ್ಲಿ ಏರು ಪೇರುಗಳು ಕಾಣಿಸಿಕೊಳ್ಳುವುದು. ಕೆಲವೊಮ್ಮೆ ನಿರೀಕ್ಷೆಗೂ ಮೀರಿ ಒಳಿತೇ ಆದ್ರೆ, ಮತ್ತೆ ಕೆಲವೊಮ್ಮೆ ಅದೃಷ್ಟ ನಮ್ಮ ಕೈ ಕೊಡುತ್ತೆ.
ಜೂನ್ 8, 2026 ರಂದು ಕರ್ಕಾಟಕ ರಾಶಿಗೆ ಶುಕ್ರ ಪ್ರವೇಶಿಸುತ್ತಾನೆ. ಈ ಸಂಚಾರವು ಪ್ರೇಮ ಸಂಬಂಧಗಳು, ವೈವಾಹಿಕ ಜೀವನ, ಹಣಕಾಸು ಮತ್ತು ಔದ್ಯೋಗಕ ಜೀವನದ ಮೇಲೆ ,ಸಕರಾತ್ಮಕ ಪರಿಣಾಮ ಬೀರುತ್ತದೆ. ಮಿಥುನ, ತುಲಾ, ಧನು ಮತ್ತು ಮಕರ ರಾಶಿ ಅವಕಿದೆ ತಮ್ಮ ಹಣಕಾಸು ಸ್ಥಿತಿ, ಸಂಬಂಧಗಳು ಮತ್ತು ಕೆಲಸದಲ್ಲಿ ಬದಲಾವಣೆಗಳನ್ನು ನೋಡುತ್ತಾರೆ. ಆದ್ದರಿಂದ, 2026 ರಲ್ಲಿ ಶುಕ್ರ ಸಂಚಾರವು ಈ ರಾಶಿದಶಿಗೆ ಶುಭ ತರುವುದರಲ್ಲಿ ಅನುಮಾನವೇ ಇಲ್ಲ.

ಪ್ರಸ್ತುತ ಶುಕ್ರನ ಅನುಕೂಲಕರ ಪ್ರಭಾವದಿಂದ ಕೆಲವು ರಾಶಿಯವರ ಜೀವನದಲ್ಲಿ ಧನಲಾಭ, ಉದ್ಯೋಗದಲ್ಲಿ ಪ್ರಗತಿ ಮತ್ತು ಕುಟುಂಬದಲ್ಲಿ ಸಂತೋಷ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಉದ್ಯೋಗ ಕ್ಷೇತ್ರದಲ್ಲಿ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ. ಬಡ್ತಿ ಅಥವಾ ವೇತನ ಹೆಚ್ಚಳದ ಯೋಗ ಕಂಡುಬರುತ್ತಿದೆ. ಬಹಳ ದಿನಗಳಿಂದ ಕಾಯುತ್ತಿದ್ದ ವರ್ಗಾವಣೆ ಅವಕಾಶವೂ ದೊರೆಯಬಹುದು.
ವ್ಯಾಪಾರ ಕ್ಷೇತ್ರದಲ್ಲಿರುವವರಿಗೆ ಹೆಚ್ಚಿನ ಲಾಭ ಸಿಗಲಿದೆ. ವ್ಯಾಪಾರ ವಿಸ್ತರಣೆಗೆ ಇದು ಉತ್ತಮ ಸಮಯ. ಕುಟುಂಬದ ಹಿರಿಯರ ಆರೋಗ್ಯ ಸ್ಥಿರವಾಗಲಿದೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರಿಗೆ ಶುಕ್ರನ ಪ್ರಭಾವ ವಿಶೇಷ ಲಾಭವನ್ನು ನೀಡಬಹುದು. ಬಹಳ ದಿನಗಳಿಂದ ಕನಸಾಗಿದ್ದ ಸ್ವಂತ ಮನೆ ಹೊಂದುವ ಕನಸು ನನಸಾಗಲಿದೆ. ಹೊಸ ಮನೆಗೆ ಸ್ಥಳಾಂತರವಾಗುವ ಯೋಗವೂ ಕಂಡುಬರುತ್ತಿದೆ.
ಹೊಸ ಮನೆಯಲ್ಲಿ ಐಷಾರಾಮಿ ಜೀವನ ನಡೆಸಲಿದ್ದೀರಿ. ಚಿನ್ನದಂತಹ ಬೆಲೆಬಾಳುವ ಉಡುಗೊರೆಗಳು ನಿಮಗೆ ಸಿಗಲಿವೆ. ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುವ ಅವಕಾಶ ಸಿಗಲಿದ್ದು, ಮನೆಯಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗಬಹುದು.
ತುಲಾ ರಾಶಿ
ತುಲಾ ರಾಶಿಯವರಿಗೆ ಶುಕ್ರನ ಆಶೀರ್ವಾದದಿಂದ ಆರ್ಥಿಕ ಪರಿಸ್ಥಿತಿ ಉತ್ತಮವಾಗುವ ಸಾಧ್ಯತೆ ಇದೆ. ಹಲವು ಮೂಲಗಳಿಂದ ಆದಾಯ ಬರಬಹುದು. ಬಹಳ ದಿನಗಳಿಂದ ಮರಳಿ ಸಿಗದೆ ಇದ್ದ ಹಣ ವಾಪಸ್ ಸಿಗುವ ಸಾಧ್ಯತೆಯೂ ಇರುತ್ತದೆ. ಇದರಿಂದ ಆರ್ಥಿಕ ಒತ್ತಡ ಕಡಿಮೆಯಾಗಬಹುದು.
ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ನೆಲೆಸಲಿದೆ. ಕುಟುಂಬ ಸದಸ್ಯರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುವ ಅವಕಾಶ ಸಿಗಬಹುದು. ಹೊಸ ಯೋಜನೆಗಳನ್ನು ಆರಂಭಿಸಲು ಸಹ ಇದು ಅನುಕೂಲಕರ ಸಮಯವಾಗಿರಬಹುದು.
ಶುಕ್ರ ಹಾಗೂ ಗುರು ರಾಶಿಗಳ ಸಂಚಾರದಿಂದ ಅದೃಷ್ಟ ಬರುತ್ತದೆ. ಆದರೆ, ಶನಿ ದೋಷ ಎನ್ನುತ್ತಾರೆ. ಸ್ವಲ್ಪ ಮಾನಸಿಕ ನೆಮ್ಮದಿ ಕಸಿದುಕೊಳ್ಳುವ ಜೊತೆಗೆ, ಜೀವನದಲ್ಲಿ ಯಾರು ನಮ್ಮವರು, ಯಾರಲ್ಲ ಎನ್ನುವುದನ್ನು ಈ ಶನಿ ಸ್ಪಷ್ಟಪಡಿಸುತ್ತಾನೆ. ಅಷ್ಟೇ ಅಲ್ಲ ಎಷ್ಟು ಕಷ್ಟ ಕೊಡುತ್ತಾನೆ ಅಷ್ಟೇ ಸುಖ ಕೊಟ್ಟು ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವಂತೆ ನೋಡಿಕೊಳ್ಳುತ್ತಾನೆ.
ಒಟ್ಟಿನಲ್ಲಿ ಜೀವನದಲ್ಲಿ ಕಷ್ಟ ಸುಖಗಳು ಬರುತ್ತವೆ. ಅದನ್ನು ಸಮಾನವಾಗಿ ಸ್ವೀಕರಿಸುವ ಗುಣ ನಮ್ಮದಾಗಬೇಕು.












Click it and Unblock the Notifications