ಶುಕ್ರ ಸಂಕ್ರಮಣದಿಂದ ವಿಪರೀತ ರಾಜಯೋಗ: ಮೂರು ರಾಶಿಯವರಿಗೆ ಆಗುವುದು ಧನಲಾಭ
ಶುಕ್ರ ಸಂಕ್ರಮಣ 2026: ಶುಕ್ರ ಸಂಕ್ರಮಣದಿಂದ ರೂಪುಗೊಂಡ ವಿಪರೀತ ರಾಜ ಯೋಗವು ಮೇ 14, 2026ರವರೆಗೆ ಶುಭಫಲವನ್ನು ನೀಡುತ್ತದೆ. ಈ ಯೋಗದ ಪರಿಣಾಮವಾಗಿ ಮೂರು ರಾಶಿಯವರಿಗೆ ಹಠಾತ್ ಆರ್ಥಿಕ ಲಾಭವಾಗುವುದು. ಜೊತೆಗೆ ಅವರ ವೃತ್ತಿಜೀವನದಲ್ಲಿ ದೊಡ್ಡ ಮಟ್ಟದ ಯಶಸ್ಸು ಸಿಗುವುದು. ಈ ರಾಜ ಯೋಗದಿಂದಾಗಿ ಈ ಮೂರು ರಾಶಿಯವರ ಅದೃಷ್ಟವೇ ಬೆಳಗುವುದು.
ವಿಪರೀತ ರಾಜಯೋಗ:
ಏಪ್ರಿಲ್ 19, 2026 ರಂದು, ಶುಕ್ರನು ತನ್ನದೇ ಅಧಿಪತ್ಯದ ರಾಶಿಯಾದ ವೃಷಭ ರಾಶಿಯನ್ನು ಪ್ರವೇಶಿಸಿದ್ದಾನೆ. ಮೇ 14, 2026 ರವರೆಗೆ ಶುಕ್ರನು ಅದೇ ರಾಶಿಯಲ್ಲಿ ಸಂಚಾರ ನಡೆಸುತ್ತಾನೆ. ಶುಕ್ರ ಸಂಚಾರವು ಎಲ್ಲಾ 12 ರಾಶಿಯವರ ಜಾತಕಫಲದ ಮೇಲೆ ಪರಿಣಾಮ ಬೀರುತ್ತದೆ. ಶುಕ್ರ ಸಂಕ್ರಮಣದ ಕಾರಣದಿಂದಲೇ ಮಾಳವ್ಯ ರಾಜಯೋಗ ಮತ್ತು ವಿಪರೀತ ರಾಜಯೋಗ ರೂಪುಗೊಳ್ಳುತ್ತದೆ. ಶುಕ್ರನು 6, 8 ಮತ್ತು 12 ನೇ ಮನೆಗಳಲ್ಲಿದ್ದಾಗ, ವಿಪರೀತ ರಾಜಯೋಗ ನಿರ್ಮಾಣವಾಗುತ್ತದೆ.

ಅಂಥಹ ಪರಿಸ್ಥಿತಿಯಲ್ಲಿ, ವೃಷಭ ರಾಶಿಗೆ ಪ್ರವೇಶಿಸುವ ಶುಕ್ರನು ಧನು, ತುಲಾ ಮತ್ತು ಮಿಥುನ ರಾಶಿಯಲ್ಲಿ ವಿಪರೀತ ರಾಜ ಯೋಗವನ್ನು ಸೃಷ್ಟಿಸುತ್ತಿದ್ದಾನೆ. ಹಾಗಾಗಿ ಈ ಮೂರು ರಾಶಿಯಲ್ಲಿ ಜನಿಸಿದವರ ಅದೃಷ್ಟವನ್ನು ಬದಲಾಯಿಸುವ ಯೋಗ ಇದು ಎಂದು ಹೇಳಬಹುದು.
3 ರಾಶಿಯವರ ಅದೃಷ್ಟ ಬೆಳಗುವುದು:
ಮಿಥುನ ರಾಶಿ: ಮಿಥುನ ರಾಶಿಯವರ ಜಾತಕದ 12 ನೇ ಮನೆಯಲ್ಲಿ ವಿಪರೀತ ರಾಜ ರೂಪುಗೊಳ್ಳುತ್ತಿದೆ. ಹಾಗಾಗಿ ಈ ರಾಶಿಯಲ್ಲಿ ಜನಿಸಿದವರಿಗೆ ಆರ್ಥಿಕ ಲಾಭವಾಗುವುದು. ಜೀವನದಲ್ಲಿ ಐಷಾರಾಮಿ ಹೆಚ್ಚಾಗುತ್ತದೆ. ಕುಟುಂಬದೊಂದಿಗೆ ಪ್ರಯಾಣ ಬೆಳೆಸುವ ಅವಕಾಶವಿದೆ. ಅಲಂಕಾರಿಕ ವಸ್ತುಗಳನ್ನು ಖರೀದಿಸಬಹುದು. ವಿದೇಶಾಂಗ ವ್ಯವಹಾರಗಳಿಗೆ ಸಂಬಂಧಿಸಿದ ಕೆಲಸಗಳು ಪೂರ್ಣಗೊಳ್ಳುತ್ತವೆ. ಆದರೆ ನೆನಪಿರಲಿ ಹಣವನ್ನು ಸುಖಾ ಸುಮ್ಮನೆ ವ್ಯಯಿಸಲು ಹೋಗಬೇಡಿ.
ತುಲಾ ರಾಶಿ: ತುಲಾ ರಾಶಿಯ ಎಂಟನೇ ಮನೆಯಲ್ಲಿ ವಿಪರೀತ ರಾಜ ಯೋಗವು ರೂಪುಗೊಳ್ಳುತ್ತಿದೆ. ಇದು ಆರ್ಥಿಕ ಸ್ಥಿತಿಯನ್ನು ಸದೃಢ ಮಾಡುವುದು.ಬಹಳ ದಿನಗಳಿಂದ ಕೈ ಸೇರದೆ ಬಾಕಿ ಉಳಿದಿದ್ದ ಹಣ ಈ ಸಮಯದಲ್ಲಿ ನಿಮ್ಮದಾಗುವುದು. ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಬಡ್ತಿ ಸಿಗಬಹುದು. ಉದ್ಯಮಿಗಳ ಆದಾಯದಲ್ಲಿ ಹೆಚ್ಚಳವಾಗುವುದು. ಕುಟುಂಬದೊಳಗಿನ ಭಿನ್ನಾಭಿಪ್ರಾಯಗಳು ಬಗೆಹರಿದು ಸಂಬಂಧಗಳು ಸುಧಾರಿಸುತ್ತವೆ. ನಿಮ್ಮ ವ್ಯಕ್ತಿತ್ವವು ಹೆಚ್ಚು ಆಕರ್ಷಕವಾಗುತ್ತದೆ. ಆದರೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಧನು ರಾಶಿ: ಧನು ರಾಶಿಯ ಆರನೇ ಮನೆಯಲ್ಲಿ ವಿಪರೀತ ರಾಜ ಯೋಗವು ರೂಪುಗೊಳ್ಳುತ್ತಿದೆ. ಇದರ ಪರಿಣಾಮವಾಗಿ ವಿದೇಶದಿಂದ ಲಾಭ ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯ ಸಾಧ್ಯತೆಯಿದೆ. ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುವ ಹೊಸ ಅವಕಾಶಗಳು ನಿಮ್ಮದಾಗುವುದು. ಪ್ರತಿಕೂಲ ಪರಿಸ್ಥಿತಿಯಲ್ಲಿ ಅವಕಾಶವನ್ನು ಕಂಡುಕೊಳ್ಳಬಹುದು.ಬಹಳಷ್ಟು ಹಣವನ್ನು ಗಳಿಸಬಹುದು. ನಿಮ್ಮ ಸಾಮಾಜಿಕ ಗೌರವ ಹೆಚ್ಚಾಗುತ್ತದೆ. ಆದರೆ ಆರೋಗ್ಯ ಸಮಸ್ಯೆಗಳು ಉದ್ಭವಿಸಬಹುದು, ಜಾಗರೂಕರಾಗಿರಿ.
ಜಾತಕದಲ್ಲಿ ಶುಕ್ರ ದುರ್ಬಲವಾಗಿದ್ದರೆ ಏನು ಪರಿಹಾರ:
ಜಾತಕದಲ್ಲಿ ಶುಕ್ರನ ಸ್ಥಾನ ದುರ್ಬಲವಾಗಿದ್ದರೆ ಅದನ್ನು ಬಲಪಡಿಸಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬಹುದು. ಇದಕ್ಕಾಗಿ, ಪ್ರತಿದಿನ 'ಓಂ ದ್ರಾಂ ದ್ರಾಂ ದ್ರಾಂ ಸಾಃ ಶುಕ್ರಾಯ ನಮಃ' ಅಥವಾ 'ಓಂ ಶುಂ ಶುಕ್ರಾಯ ನಮಃ' ಎಂದು ಜಪಿಸಬೇಕು. ಶುಕ್ರವಾರ ಶ್ರೀ ಸೂಕ್ತಂ, ಕನಕಧಾರ ಸ್ತೋತ್ರ ಮತ್ತು ವಿಷ್ಣು ಸಹಸ್ರನಾಮವನ್ನು ಪಠಿಸಿದರೂ ಪ್ರಯೋಜನವಾಗುವುದು.
(ಬರಹ: ರಂಜಿತಾ ಆರ್.ಕೆ.)












Click it and Unblock the Notifications