ರಾತ್ರಿ ನಿದ್ರೆ ಬರ್ತಿಲ್ಲವಾ? ವಾಸ್ತು ಪ್ರಕಾರ ನಿದ್ರೆ ಬಾರದ ಸಮಸ್ಯೆಗೆ ಇಲ್ಲಿದೆ ಸುಲಭ ಪರಿಹಾರಗಳು
ಇಂದಿನ ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ಹಲವರು ತಲೆನೋವು, ಮಾನಸಿಕ ಆತಂಕ, ರಾತ್ರಿ ನಿದ್ರೆಯು ಸರಿಯಾಗಿ ಆಗದೆ ಇರುವ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದಕ್ಕೆ ಕೆಲಸದ ಒತ್ತಡ ಮಾತ್ರ ಕಾರಣವೆಂದು ಭಾವಿಸುವುದು ತಪ್ಪು. ವಾಸ್ತು ತಜ್ಞರ ಪ್ರಕಾರ ಮನೆಯೊಳಗೆ ನಕಾರಾತ್ಮಕ ಶಕ್ತಿ ಹೆಚ್ಚಾಗಿದ್ದರೆ ಇಂತಹ ಸಮಸ್ಯೆಗಳು ಎದುರಾಗುವ ಸಾದ್ಯತೆಗಳು ಹೆಚ್ಚಾಗಬಹುದು. ಹಾಗಾದರೆ, ಮನೆಯಲ್ಲಿ ಆವರಿಸಿರುವ ನಕಾರಾತ್ಮಕ ಶಕ್ತಿಯನ್ನು ದೂರಮಾಡಿ ಮನಃಶಾಂತಿ ಪಡೆಯಲು ಏನು ಮಾಡಬಹುದು ಎಂಬುದನ್ನು ತಿಳಿಯೋಣ.
ಮುಖ್ಯ ದ್ವಾರ
ನಮ್ಮ ಮನೆಯ ಮುಖ್ಯ ಪ್ರವೇಶ ದ್ವಾರದಿಂದಲೇ ಸಕಾರಾತ್ಮಕ ಶಕ್ತಿ ಒಳಗೆ ಬರುತ್ತದೆ. ಬಾಗಿಲಿನ ಮುಂದೆ ಚಪ್ಪಲಿ ಅಥವಾ ಹಳೆಯ ವಸ್ತುಗಳನ್ನು ಹಾಕುವುದರಿಂದ ಆ ಸಕಾರಾತ್ಮಕ ಶಕ್ತಿ ಒಳಗೆ ಬರಲು ಅಡ್ಡಿಯಾಗುತ್ತದೆ. ಇದರಿಂದ ಮನೆಯ ಸದಸ್ಯರ ನಿರ್ಧಾರ ತೆಗೆದುಕೊಳ್ಳಬೇಕಾದ ಸಮಯದಲ್ಲಿ ಸ್ವಲ್ಪ ಪರಿಣಾಮ ಬೀರಬಹುದು. ಆದ್ದರಿಂದ ರಾತ್ರಿ ಮಲಗುವ ಮೊದಲು ಬಾಗಿಲಿನ ಸುತ್ತಮುತ್ತ ಸ್ವಚ್ಛವಾಗಿಡುವುದು ಒಳ್ಳೆಯದು. ಸಾಧ್ಯವಾದರೆ ಒಂದು ದೀಪವನ್ನು ಹಚ್ಚಿ ಇಡುವುದರಿಂದ ಮನೆಗೆ ಒಳ್ಳೆಯದಾಗುತ್ತದೆ ಎಂದು ತಜ್ಞರು ಸೂಚಿಸುತ್ತಾರೆ.

ಅಡಿಗೆಮನೆ
ಅಡಿಗೆಮನೆ ಕೇವಲ ಅಡುಗೆಯನ್ನು ಮಾಡುವ ಮತ್ತು ಊಟ ಮಾಡುವ ಜಾಗವಲ್ಲ, ಅದು ಮನೆಯ ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯನ್ನು ಸೂಚಿಸುತ್ತದೆ. ರಾತ್ರಿ ಊಟವಾದ ನಂತರ ಪಾತ್ರೆಗಳನ್ನು ತೊಳೆಯದೆ ಹಾಗೆ ಬಿಡುವುದು ವಾಸ್ತು ಶಾಸ್ತ್ರದ ಪ್ರಕಾರ ತಪ್ಪು ಎಂದು ತಜ್ಞರ ಅಭಿಪ್ರಾಯವಾಗಿದೆ. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಿ, ನಿದ್ರೆಗೆ ಸಮಸ್ಯೆ ಉಂಟಾಗಬಹುದು. ಜೊತೆಗೆ ಅಡುಗೆಮನೆ ಅಥವಾ ಬಾತ್ರೂಮ್‌ನಲ್ಲಿ ಟ್ಯಾಪ್ ಲೀಕ್ ಆಗುತ್ತಿದ್ದರೆ ಅದನ್ನು ತಕ್ಷಣ ಸರಿಪಡಿಸುವುದು ಒಳ್ಳೆಯದು. ಇದು ನಮ್ಮ ಆರ್ಥಿಕ ನಷ್ಟ ಮತ್ತು ಅನಗತ್ಯ ಚಿಂತೆಗಳಿಗೆ ಮುಖ್ಯ ಕಾರಣವಾಗುತ್ತದೆ.
ಮಲಗುವ ಕೋಣೆ
ಮಲಗುವ ಕೋಣೆಯಲ್ಲಿರುವ ವಸ್ತುಗಳು ಮನಸ್ಸಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ವಾಸ್ತು ಪ್ರಕಾರ ತಲೆಯನ್ನು ದಕ್ಷಿಣ ಅಥವಾ ಪೂರ್ವ ದಿಕ್ಕಿಗೆ ಇಟ್ಟು ಮಲಗುವುದು ಉತ್ತಮ. ಹಾಸಿಗೆಯ ಕೆಳಗೆ ಹಳೆಯ ಲೋಹದ ವಸ್ತುಗಳು ಅಥವಾ ಚಪ್ಪಲಿಗಳನ್ನು ಇಡುವುದು ತಪ್ಪು. ಇದು ನಮ್ಮ ಮೆದುಳಿನ ಮೇಲೆ ಒತ್ತಡ ಉಂಟುಮಾಡುತ್ತದೆ.
ಸ್ನಾನಗೃಹ
ಸ್ನಾನಗೃಹದ ಬಾಗಿಲನ್ನು ಸದಾ ಮುಚ್ಚಿರಬೇಕು. ಸ್ನಾನಗೃಹ ಯಾವಾಗಲು ಸ್ವಚ್ಛವಾಗಿಡಬೇಕು ಮತ್ತು ಒಣಗಿದ ಸ್ಥಿತಿಯಲ್ಲಿ ಇಡುವುದು ಉತ್ತಮ. ಇದರಿಂದ ರಾಹು ದೋಷಗಳು ಕಡಿಮೆಯಾಗುತ್ತವೆ ಮತ್ತು ಮನಸ್ಸಿಗೆ ಶಾಂತಿ ದೊರೆಯುತ್ತದೆ.
ಹೆಚ್ಚುವರಿ ಸಲಹೆಗಳು
ವಾರದಲ್ಲಿ ಒಂದು ಬಾರಿ ನೆಲವನ್ನು ತೊಳೆಯುವ ಪದ್ದತಿಯನ್ನು ಬೆಳಸಿಕೊಳ್ಳಿ ಜೊತೆಗೆ ನೀರಿನಲ್ಲಿ ಸ್ವಲ್ಪ ಕಲ್ಲು ಉಪ್ಪು ಸೇರಿಸಿ. ಇದರಿಂದ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿ ಕಡಿಮೆಯಾಗುತ್ತದೆ. ಮಲಗುವ ಕೋಣೆಯಲ್ಲಿ ಟಿವಿ, ಮೊಬೈಲ್ ಮತ್ತು ಕೆಟ್ಟ ಎಲೆಕ್ಟ್ರಾನಿಕ್ ಸಾಧನಗಳನ್ನು ದೂರವಿಡಿ. ಇವುಗಳ ಕಿರಣಗಳು ನಿದ್ರೆಯನ್ನು ಅಡ್ಡಿಪಡಿಸಬಹುದು.














Click it and Unblock the Notifications