ಮನೆ ಕಟ್ಟುವಾಗ ವಾಸ್ತು ಪಾಲಿಸದಿದ್ದರೆ ಏನಾಗುತ್ತದೆ? ಇಲ್ಲಿವೆ 5 ಪ್ರಮುಖ ನಿಯಮಗಳು
ಮನೆ ನಿರ್ಮಾಣ ಮಾಡುವಾಗ ನಾವು ವಾಸ್ತು ಶಾಸ್ತ್ರವನ್ನು ತಪ್ಪದೆ ಪಾಲಿಸುವುದು ಒಳ್ಳೆಯದು ಎಂದು ವಾಸ್ತು ಶಾಸ್ತ್ರದ ತಜ್ಙರು ಹೇಳುತ್ತಾರೆ. ಮನೆ ಕೇವಲ ಇಟ್ಟಿಗೆ ಮತ್ತು ಸಿಮೆಂಟ್ ಕಟ್ಟಡವಲ್ಲ ಇದು ಐದು ಮೂಲಭೂತ ಅಂಶಗಳ ಸಮತೋಲನದ ಮೇಲೆ ನಿಂತಿರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಅಡಿಪಾಯದಿಂದ ಗೋಡೆಗಳವರೆಗೆ ಪ್ರತಿಯೊಂದು ಭಾಗವು ಸರಿಯಾದ ರೀತಿಯಲ್ಲಿ ನಿರ್ಮಾಣವಾಗಬೇಕು. ಇಲ್ಲದಿದ್ದರೆ ಮನೆಯಲ್ಲಿರುವವರ ಜೀವನದ ಮೇಲೆ ನಕಾರಾತ್ಮಕ ಶಕ್ತಿಯು ಪರಿಣಾಮ ಬೀರುತ್ತದೆ.
ಅಡಿಪಾಯದ ಬಲವಾಗಿದ್ದರೆ ಕಟ್ಟಡವು ಬಲವಾಗಿರುತ್ತದೆ
ಮನೆಯ ಅಡಿಪಾಯ ಎಷ್ಟು ಬಲವಾಗಿರುತ್ತದೆ ಅಷ್ಟೆ ಬಲವಾಗಿ ಮನೆ ಕಟ್ಟಡ ಇರುತ್ತದೆ. ಹೆಚ್ಚಾಗಿ ನೈಋತ್ಯ ದಿಕ್ಕಿನ ಅಡಿಪಾಯವು ಹೆಚ್ಚು ಆಳವಾಗಿಯೂ ಮತ್ತು ಭಾರವಾಗಿಯೂ ಇರಬೇಕು ಈ ಭಾಗವು ದುರ್ಭಲವಾದ್ದರೆ ಮನೆಯ ಯಜಮಾನರಿಗೆ ಆರ್ಥಿಕ ನಷ್ಟ ಮತ್ತು ಆರೋಗ್ಯದಲ್ಲಿ ಸಮಸ್ಯೆಗಳು ಎದುರಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದರ ಜೊತೆಗೆ ನಾವು ಗಮನಿಸಬೇಕಾದ ಮುಖ್ಯ ಅಂಶವೆಂದರೆ ಮನೆಯ ನೆಲಮಟ್ಟವು ರಸ್ತೆಯ ನೆಲಮಟ್ಟಕಿಂತ ಸ್ವಲ್ಪ ಎತ್ತರದಲ್ಲಿ ಇರುವುದು ಒಳ್ಳೆಯದು.

ಒಂದೆ ಸೈಜಿನ ಗೋಡೆಗಳ ನಿರ್ಮಾಣ
ಮನೆ ಕಟ್ಟುವಾಗ ಎಲ್ಲರು ಒಂದೆ ಸೈಜಿನ ಗಾತ್ರದಲ್ಲಿ ಗೋಡೆಗಳನ್ನು ನಿರ್ಮಿಸುತ್ತಾರೆ ಆದರೆ ಇದು ವಾಸ್ತು ಪ್ರಕಾರ ಎಷ್ಟು ಸರಿ? ಅದಕ್ಕೆ ಇಲ್ಲಿದೆ ಪರಿಹಾರ.
ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನ ಗೋಡೆಗಳು ದಪ್ಪಾವಾಗಿ ಮತ್ತು ಎತ್ತರವಾಗಿ ಇರಬೇಕು.
ಉತ್ತರ ಮತ್ತು ಪೂರ್ವ ದಿಕ್ಕಿನ ಗೋಡೆಗಳು ತೆಳ್ಳಗಾಗಿರಬೇಕು. ಇದರಿಂದ ಸೂರ್ಯನ ಬೆಳಕು ಮತ್ತು ಗಾಳಿ ಸರಿಯಾಗಿ ಮನೆಗೆ ಪ್ರವೇಶಿಸುತ್ತದೆ. ಈ ನಿಯಮ ಪಾಲಿಸದಿದ್ದರೆ, ಮನೆಯೊಳಗೆ ಅಶಾಂತಿ ಹೆಚ್ಚಾಗಿ, ಅನಾರೋಗ್ಯದ ಸಮಸ್ಯೆಗಳು ಕಾಡಬಹುದು.
ಪಕ್ಕದ ಮನೆ ಗೋಡೆಗೆ ಆಧಾರ
ನಮ್ಮ ಮನೆಯ ಗೋಡೆಗಳು ಬೇರೆ ಮನೆಯ ಗೋಡೆಗಳಿಗೆ ಅಂಟಿರಬಾರದು ಮತ್ತು ಅದಕ್ಕೆ ಅವಲಂಭಿಸಿರಬಾರದು. ಇದರಿಂದ ಮನೆಗೆ ವಾಸ್ತು ದೋಷ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಪ್ರತಿಯೊಂದು ಮನೆಗೂ ತನ್ನದೆ ಆದ ಗಟ್ಟಿಯಾದ ಗೋಡೆಗಳನ್ನು ಹೊಂದುವುದು ಒಳ್ಳೆಯದು ಇದರಿಂದ ಮನೆಯು ಗಟ್ಟಿಯಾಗಿರುತ್ತದೆ ಮತ್ತು ವಾಸ್ತು ಶಾಸ್ತ್ರವನ್ನು ಪಾಲಿಸಿದಂತಾಗುತ್ತದೆ.
ಮೇಲ್ಛಾವಣಿ ಸುತ್ತಲಿನ ವಾಸ್ತು
ಮನೆಯ ಮೇಲ್ಛಾವಣಿ ಸುತ್ತಲು ನಾವು ಕಟ್ಟುವ ರಕ್ಷಾ ಗೋಡೆಗಳು, ಕಡಿಮೆ ಎತ್ತರದ ಗೋಡೆಗಳನ್ನು ನಿರ್ಮಿಸಿರುತ್ತಾರೆ. ನೈಋತ್ಯ ಭಾಗದಲ್ಲಿ ಸ್ವಲ್ಪ ಎತ್ತರವಾಗಿಯೂ, ಈಶಾನ್ಯ ಭಾಗದಲ್ಲಿ ಸ್ವಲ್ಪ ಕಡಿಮೆಯಾಗಿಯೂ ಇರುವುದು ಒಳ್ಳೆಯದು. ಇದು ಮನೆಯ ಶಕ್ತಿಯ ಸಮತೋಲನವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ.
ಗೋಡೆಗಳಲ್ಲಿ ಬಿರುಕುಗಳು ಅಪಶಕುನ
ಮನೆಯ ಗೋಡೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡರೆ ಅದು ವಾಸ್ತು ಪ್ರಕಾರ ಅಶುಭಕರ ಎಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ಈಶಾನ್ಯ ದಿಕ್ಕಿನಲ್ಲಿ ಬಿರುಕು ಇದ್ದರೆ ಅದು ಆರ್ಥಿಕ ನಷ್ಟ ಮತ್ತು ಆರೋಗ್ಯ ಸಮಸ್ಯೆಗಳ ಲಕ್ಷಣವಾಗಿರಬಹುದು. ಆದ್ದರಿಂದ ಇಂತಹ ದೋಷಗಳನ್ನು ತಕ್ಷಣ ಸರಿಪಡಿಸುವುದು ಅತ್ಯಅಗತ್ಯವಾಗಿದೆ.












Click it and Unblock the Notifications