ವಾಸ್ತುಶಾಸ್ತ್ರದ ಪ್ರಕಾರ ಮುಂಬಾಗಿಲು, ಕಿಟಕಿ ಹೇಗಿರಬೇಕು?

By: ಮನಸ್ವಿನಿ, ನಾರಾವಿ
Subscribe to Oneindia Kannada

ವಾಸ್ತು ಶಾಸ್ತ್ರವೂ ಭಾರತದ ವಾಸ್ತುಶಿಲ್ಪಶಾಸ್ತ್ರ, ಕಟ್ಟಡ ನಿರ್ಮಾಣ ಪದ್ಧತಿಗಳಲ್ಲಿ ಪ್ರಮುಖವಾದ ವಿಧಾನಗಳಲ್ಲಿ ಒಂದು. ಮಾನವನ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರಾಚೀನ ಋಷಿಗಳು, ವಿದ್ವಾಂಸರು ಈ ಶಾಸ್ತ್ರವನ್ನು ಸೃಷ್ಟಿಸಿದರು. ಈ ಶಾಸ್ತ್ರದ ಜ್ಞಾನದಿಂದ ಮಾನಸಿಕ ಶಾಂತಿ, ದೈಹಿಕ ಆರೋಗ್ಯ, ಧನ ಧಾನ್ಯಗಳಿಂದ ಕೂಡಿದ ಸಮೃದ್ಧ ಜೀವನವನ್ನು ನಡೆಸಲು ಸಾಧ್ಯ ಎಂದು ನಂಬಲಾಗಿದೆ.

ಪ್ರೇಮ ಜೀವನದ ಸುಧಾರಣೆಗೆ ಬೆಡ್ ರೂಮ್ ಗೆ 10 ವಾಸ್ತು ಸಲಹೆ

ಈ ಶಾಸ್ತ್ರದ ನಿಯಮದ ಪ್ರಕಾರ ಕಟ್ಟಿದ ಮನೆ, ಗ್ರಾಮ, ನಗರ, ಅಂಗಡಿ, ಕಚೇರಿ, ಕಾರ್ಖಾನೆಗಳಿಂದ ಸಮೃದ್ಧಿಯನ್ನು ಪಡೆಯಬಹುದು. ಅಧುನಿಕ ವಾಸ್ತುತಜ್ಞರಿಗೂ ಅನೇಕ ಪ್ರಾಚೀನ ವಾಸ್ತುಶಾಸ್ತ್ರ ಗ್ರಂಥಗಳು ಆಧಾರವಾಗಿವೆ. ಶಾಸ್ತ್ರ, ಆಚರಣೆ ಎಲ್ಲಕ್ಕೂ ವೈಜ್ಞಾನಿಕ ಕಾರಣಗಳು ಸಿಕ್ಕಿವೆ.

ವಾಸ್ತು ಎನ್ನುವುದು ಒಂದು ಯಾಂತ್ರಿಕ ಕ್ರಿಯೆ. ಜೀವನದಲ್ಲಿ ಯಶಸ್ಸು ಕಾಣಲು ವಾಸ್ತು ಸಹಕಾರಿ. ಮಾನವರ ಆರ್ಥಿಕ ಹಾಗೂ ಕಾರ್ಯ ಕ್ಷಮತೆ ಹೆಚ್ಚಿಸಲು ವಾಸ್ತು ಉಪಯುಕ್ತವಾಗಿದೆ. ವಾಸ್ತು ಸರಿಯಿಲ್ಲವೆಂದು ಹೋಮ, ಹವನ ಮಾಡಬೇಕು, ಜಪ, ತಪ ಮಾಡಬೇಕು ಎಂದು ಪುರಾಣಗಳು ಹೇಳಬಹುದು, ಆದರೆ, ವಿಜ್ಞಾನ ತಿಳಿಸಿಲ್ಲ.

ಸಂಪತ್ತು, ಹಣಕಾಸು ವೃದ್ಧಿಗೆ ಇಲ್ಲಿವೆ 10 ವಾಸ್ತು ಸಲಹೆ

ಮುಂಬಾಗಿಲು, ಕಿಟಕಿ ಎಲ್ಲಿದ್ದರೆ ಒಳ್ಳೆಯದು? ಯಾವ ಸಂಖ್ಯೆಯಲ್ಲಿರಬೇಕು? ಎತ್ತರ ಗಾತ್ರದ ವಿವರ ಏನು? ಈ ಬಗ್ಗೆ ಸಲಹೆ ಇಲ್ಲಿದೆ....

ಮನೆಯ ಮುಂದಿನ ಮುಖ್ಯದ್ವಾರ

ಮನೆಯ ಮುಂದಿನ ಮುಖ್ಯದ್ವಾರ

ಮನೆಯ ಮುಂದಿನ ಮುಖ್ಯದ್ವಾರ ಸೈಟ್(ನಿವೇಶನ) ಇರುವ ದಿಕ್ಕನ್ನು ಅವಲಂಬಿಸಿರುತ್ತದೆ. ಆದರೆ, ಪೂರ್ವ ಮತ್ತು ಪಶ್ಚಿಮ ದಿಕ್ಕಿನಲ್ಲಿ ಇದ್ದರೆ ಒಳಿತು.

ಮಿಕ್ಕಂತೆ ಇತರೆ ಬಾಗಿಲುಗಳು ಉತ್ತರ ಮತ್ತು ಪೂರ್ವ ದಿಕ್ಕಿನಲ್ಲಿ ಇರಬೇಕು. ಒಬ್ಬ ವ್ಯಕ್ತಿಯ ಪ್ರವೇಶದಿಂದ ಆಯಸ್ಕಾಂತ ಕಿರಣಗಳು ಪ್ರವೇಶವಾಗುವುದರಿಂದ ಆ ದಿಕ್ಕಿನಲ್ಲಿ ಇದ್ದರೆ ಒಳಿತು. ಮನೆ ಯಜಮಾನನ ರಾಶಿ, ಸಂಖ್ಯೆ, ಗ್ರಹಗತಿಗಳಿಗೆ ಅನುಗುಣವಾಗಿ ನಿವೇಶನ, ಮನೆ ಬಾಗಿಲಿನ ದಿಕ್ಕನ್ನು ನಿರ್ಧರಿಸಬಹುದು.

ಮುಖ್ಯದ್ವಾರದ ವಿನ್ಯಾಸ, ಕೆತ್ತನೆ ವಿವರ

ಮುಖ್ಯದ್ವಾರದ ವಿನ್ಯಾಸ, ಕೆತ್ತನೆ ವಿವರ

ಮುಂಬಾಗಿಲಲ್ಲಿ ಗಜಲಕ್ಷ್ಮಿ, ದೃಷ್ಟಿ ಗಣೇಶ,ದ್ವಾರಪಾಲಕ ಚಿತ್ರ ಇದ್ದರೆ ಒಳಿತು.
ಕುಲದೇವತೆ, ಕುಟುಂಬದ ದೇವರ ಚಿತ್ರ, ಚಿನ್ಹೆ, ಗುರುತನ್ನು ಬಳಸಬಹುದು.
ಗಿಣಿ, ನವಿಲು, ಹಂಸ, ನೈಸರ್ಗಿಕ ಸಂಪತ್ತು ಸೂಚಿಸುವ ಕೆತ್ತನೆ ಇರಬಹುದು.
ಕಾಲ್ಪನಿಕ ಪ್ರಾಣಿ, ಯುದ್ಧದ ಶಾಸನ ಮುಂತಾದವರು ಇರಬಹುದು.

ಮನೆಯ ಎಲ್ಲಾ ಬಾಗಿಲು ತೆರೆದಿಡಿ

ಮನೆಯ ಎಲ್ಲಾ ಬಾಗಿಲು ತೆರೆದಿಡಿ

ಮನೆಗೆ ಸದಾ ಗಾಳಿ ಬೆಳಕು ಹರಿದು ಬರುವಂತೆ ಕಿಟಕಿ, ಬಾಗಿಲು ತೆರೆದಿಡಿ. ಪೂರ್ವ ಭಾಗದಲ್ಲಿ ಬಾಗಿಲು ಇಡುವುದರಿಂದ ಮುಂಬಾಗಿಲಲ್ಲಿ ಸದಾ ಬೆಳಕು ಹರಿದು ಬರಿದು ಬರುತ್ತದೆ.

ಮುಂಬಾಗಿಲು ತೆರೆಯುವಾಗ ಯಾವುದೇ ಅಡಚಣೆಗಳು ಇರದಂತೆ ನೋಡಿಕೊಳ್ಳಬೇಕು.

ಮುಖ್ಯದ್ವಾರದ ಗಾತ್ರ ಇತರೆ ಬಾಗಿಲುಗಳಿಗಿಂತ ದೊಡ್ಡದಿರಲಿ. ಎಲ್ಲಾ ಬಾಗಿಲುಗಳು ಗೋಡೆಯ ಕಡೆಗೆ ತೆಗೆದುಕೊಳ್ಳುವಂತಿರಲಿ.

ಮುಂಭಾಗದ ಗೇಟು ಹಾಗೂ ಮುಂಬಾಗಿಲು ಒಂದೇ ಕಡೆ ಇರುವಂತೆ ನೋಡಿಕೊಳ್ಳಿ.

ಮುಂಬಾಗಿಲ ಕೆಳಗೆ ಯಾವುದೆ ನೀರಿನ ಟ್ಯಾಂಕ್, ಸಂಪು ಇರಬಾರದು.

ಯಾವ ರೀತಿ ಬಾಗಿಲುಗಳಿರಬಾರದು?

ಯಾವ ರೀತಿ ಬಾಗಿಲುಗಳಿರಬಾರದು?

ಎರಡು ಮನೆಗಳ ಮುಂಬಾಗಿಲುಗಳು ಎದುರು -ಬದರಾಗಿರುವುದು ಒಳ್ಳೆಯದಲ್ಲ. ಮುಂಬಾಗಿಲು ತೆರೆದಿಡಬೇಕು.
ಶೌಚಾಲಯ ಹಾಗೂ ಪಾಯಿಖಾನೆಯ ಬಾಗಿಲನ್ನು ಸದಾ ಮುಚ್ಚಿರಬೇಕು.
ಮನೆಯ ಮುಂಬಾಗಿಲ ಮುಂದೆ ಕಸದ ರಾಶಿ, ವಿದ್ಯುತ್ ದೀಪ ಇರದಂತೆ ಎಚ್ಚರವಹಿಸಿ. ಮನೆಯ ಕಿಟಕಿ ಬಾಗಿಲುಗಳಲ್ಲಿ ಬಿರುಕು, ಒಡಕು ಇರಬಾರದು.
ಡೈನಿಂಗ್ ರೂಮ್ ಹಾಗೂ ಮುಖ್ಯದ್ವಾರದ ಬಾಗಿಲು ಒಂದಕ್ಕೊಂದು ಎದುರಾಗಿರಬಾರದು.

ಮೇಲ್ಮನೆಯಲ್ಲಿ ಬಾಗಿಲು, ಕಿಟಕಿ ಕಮ್ಮಿಯಿರಲಿ

ಮೇಲ್ಮನೆಯಲ್ಲಿ ಬಾಗಿಲು, ಕಿಟಕಿ ಕಮ್ಮಿಯಿರಲಿ

ಎರಡಂತಸ್ತಿನ ಮನೆಯಿದ್ದರೆ ಕೆಳಮನೆಗಿಂತ ಮೇಲ್ಮನೆಯಲ್ಲಿ ಬಾಗಿಲು, ಕಿಟಕಿ ಕಮ್ಮಿಯಿರಲಿ.

ಮನೆಯಲ್ಲಿ ಬಾಗಿಲುಗಳು, ಕಾಲಮ್ ಗಳು ಸರಿ ಸಂಖ್ಯೆ(even number)ಯಲ್ಲಿರಲಿ

ಮುಂಬಾಗಿಲು ತೆರೆಯುವಾಗ ಯಾವುದೇ ಅಡಚಣೆಗಳು ಇರದಂತೆ ನೋಡಿಕೊಳ್ಳಬೇಕು.

ಮನೆಯಲ್ಲಿ ವಾಯುವ್ಯ ದಿಕ್ಕಿನ ಮೂಲೆಯಲ್ಲಿ ಕಿಟಕಿಗಳು ಇರಬಾರದು. ಒಂದು ವೇಳೆ ಈ ದಿಕ್ಕಿನಲ್ಲಿ ಕಿಟಕಿಗಳಿದ್ದರೆ, ಅಂಥ ಕಿಟಕಿಗಳನ್ನು ತೆರೆದಿಡುವುದನ್ನು ಅದಷ್ಟು ಕಮ್ಮಿ ಮಾಡಿ.

ಪೂರ್ವ ದಿಕ್ಕಿನ ಕಿಟಕಿಗಳ ತೆರೆದಿಟ್ಟರೆ ಒಳ್ಳೆಯದು

ಪೂರ್ವ ದಿಕ್ಕಿನ ಕಿಟಕಿಗಳ ತೆರೆದಿಟ್ಟರೆ ಒಳ್ಳೆಯದು

ಉತ್ತರ ಮತ್ತು ಪೂರ್ವ ದಿಕ್ಕಿನ ಕಿಟಕಿಗಳ ತೆರೆದಿಟ್ಟರೆ ಉತ್ತಮ ಆರೋಗ್ಯ,ಕುಟುಂಬದಲ್ಲಿ ಏಕತೆಯ ನೆಲೆ.
ಕಿಟಕಿಗಳು ಕನಿಷ್ಠ 3 ಅಡಿಯಾದರೂ ಇರಬೇಕು. ಉತ್ತರ ಹಾಗೂ ಪೂರ್ವ ಭಾಗದಲ್ಲಿರಬೇಕು.

ಬಾಗಿಲು ತೆಗೆಯಲು ಹಾಕಲು ಸರಾಗವಾಗಿರಬೇಕು, ಶಬ್ದ ಮಾಡುವಂತಿರಬಾರದು.
ಬಾಗಿಲುಗಳು ನಿಮ್ಮ ಬಲಭಾಗಕ್ಕೆ ತೆರೆಯುವಂತಿದ್ದರೆ ಹೆಚ್ಚು.
ಯಾವುದೇ ಬಾಗಿಲಿನ ಮುಂದೆ ನೀರು ನಿಲ್ಲದ್ದಂತೆ ನೋಡಿಕೊಳ್ಳಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Vastu Shastra : Tips for Doors and Windows : As far as doors are concerned, the main door should be larger than the inner doors. Vastu Shastra a Hindu system of architecture describe principles of design, layout, measurements, ground preparation, space arrangement and spatial geometry

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ