ವ್ಯಾಲಂಟೈನ್ಸ್ ಡೇ ವಿಶೇಷ ಭವಿಷ್ಯ ನಿಮ್ಮ ರಾಶಿಗೆ ಏನಿದೆ ?

By: ಪಂಡಿತ್ ವಿಠ್ಠಲ ಭಟ್
Subscribe to Oneindia Kannada
   ವ್ಯಾಲೆಂಟೈನ್ಸ್ ಡೇ ಸ್ಪೆಷಲ್ : ನಿಮ್ಮ ರಾಶಿ ಭವಿಷ್ಯದಲ್ಲಿ ಏನಿದೆ | Oneindia Kannada

   ಫೆಬ್ರವರಿ ಹದಿನಾಲ್ಕನೇ ತಾರೀಕು ಪ್ರೇಮಿಗಳ ದಿನ. ಯಾವ ದಿನ ಪ್ರೇಮಿಗಳದಲ್ಲ ಹೇಳಿ. ಆದರೂ ಪ್ರೇಮ ನಿವೇದನೆಗೆ ಹಾಗೂ ತಮ್ಮ ಪ್ರೀತಿಯನ್ನು ಉತ್ಕಟವಾಗಿ ತೋರಿಸಿಕೊಳ್ಳ ಬಯಸುವವರಿಗೆ ಅಂತ ಈ ದಿನ ಮೀಸಲಿಟ್ಟಿರಬಹುದು. ಗಾಂಧರ್ವ ವಿವಾಹ ಅಂದರೆ ಏನು ಅಂತ ತಿಳಿದುಕೊಂಡರೆ ಯಾರಿಗಾದರೂ ಸರಿ, ನಮ್ಮ ಹಿರಿಯರು ಒಲವಿಗೆ ನೀಡಿದ ಮಹತ್ವ ತಿಳಿಯುತ್ತದೆ.

   ಇನ್ನು ಪರಸ್ಪರ ಗಂಡು- ಹೆಣ್ಣು ಮೆಚ್ಚಿಕೊಂಡ ಮೇಲೆ ಅಂದರೆ ಪರಸ್ಪರರು ಪ್ರೀತಿಸುತ್ತಿದ್ದರೆ ಜಾತಕ ಮತ್ತೊಂದು ನೋಡಲೇಬೇಡಿ ಎಂದು ಮಹಾ ಋಷಿಯೊಬ್ಬರು ಹೇಳಿದ್ದಾರೆ. ಇದರರ್ಥ ಏನೆಂದರೆ ಪರಸ್ಪರ ಗಂಡು- ಹೆಣ್ಣು ಪ್ರೀತಿಸುವುದಕ್ಕೆ ನಮ್ಮ ಹಿರಿಯರ ತಕರಾರು ಏನಿರಲಿಲ್ಲ. ಆದರೆ ಸ್ವೇಚ್ಛಾಚಾರ ತರವಲ್ಲ ಎಂಬುದು ಅದರ ತಿರುಳಾಗಿತ್ತು.

   ಹನ್ನೆರಡು ರಾಶಿಗಳ ಮದುವೆ, ಲವ್ ಭವಿಷ್ಯ 2018

   ಇನ್ನೊಂದು ವಾರಕ್ಕೆ ಬರುವ ಪ್ರೇಮಿಗಳ ದಿನಕ್ಕೆ ಯಾರ್ಯಾರು ನಿಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳಬೇಕು ಅಂತ ತೀರ್ಮಾನಿಸಿದ್ದೀರಿ. ನಿಮಗೆ ಆ ದಿನ ಹೇಗೆ ನಡೆದುಕೊಳ್ಳಬೇಕು. ಪ್ರೀತಿ- ಪ್ರೇಮದ ವಿಚಾರದಲ್ಲಿ ಜ್ಯೋತಿಷ್ಯ ಏನು ಹೇಳುತ್ತದೆ ಎಂದು ತಿಳಿಸುವುದಕ್ಕಾಗಿಯೇ ಇಂದಿನ ಲೇಖನ ನಿಮ್ಮೆದುರು ಇದೆ. ನಿಮಗೊಂದಿಷ್ಟು ಸಹಾಯ ಆಗಬಹುದು.

   ಕೆಲವರಿಗೆ ಜಾತಕದಲ್ಲೇ ಪ್ರೇಮ ವಿವಾಹ ಅಂತಿರುತ್ತದೆ. ಇನ್ನೂ ಕೆಲವರಿಗೆ ದೊಡ್ಡವರು ಗೊತ್ತು ಮಾಡಿದ ಹುಡುಗ/ಹುಡುಗಿಯೇ ಸಿಗುತ್ತಾರೆ. ಇನ್ನೂ ಕೆಲವರಿಗೆ ಪ್ರೇಮ ವೈಫಲ್ಯ ಎಂಬುದು ಜಾತಕದಲ್ಲೇ ಇರುತ್ತದೆ. ಅದು ಬರೆದರೆ ಮತ್ತೊಂದು ಲೇಖನ ಆಗುತ್ತದೆ. ಇನ್ನು ದೊಡ್ಡವರಿಗೆ ಬೇಸರ ಆಗದ ರೀತಿಯಲ್ಲಿ, ಕಿರಿಯರ ಮನಸ್ಸು ಒಡೆಯದ ಬಗೆಯಲ್ಲಿ ನಿರೀಕ್ಷಿತ ಪ್ರೀತಿ ಪ್ರಾಪ್ತಿರಸ್ತು ಎನ್ನುವುದು ನನ್ನ ಹಾರೈಕೆ. ಇನ್ನೇನು ತಡ, ಲೇಖನದ ಮುಂದಿನ ಭಾಗ ಓದಿ.

   ಮೇಷ

   ಮೇಷ

   ನೀವು ಈ ಬಾರಿ ಪ್ರೇಮ ನಿವೇದನೆ ಮಾಡಿಕೊಳ್ಳಬಹುದು. ಗುರು- ಶನಿ ಬಲ ಇರುವುದರಿಂದ ಪ್ರೇಮ ಫಲಿಸುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ ವಿಪರೀತ ಖರ್ಚು ಕಾಣಿಸುತ್ತಿದೆ. ಈ ಬಗ್ಗೆ ಸ್ವಲ್ಪ ಗಮನ ಇಟ್ಟುಕೊಳ್ಳಿ. ದುಬಾರಿ ಗಿಫ್ಟ್, ಹೊರಗೆ ಓಡಾಟ ಮತ್ತೊಂದು ಇನ್ಯಾವುದೋ ಕಾರಣಕ್ಕೆ ಖರ್ಚಂತೂ ಕಾಣುತ್ತಿದೆ.

   ವೃಷಭ

   ವೃಷಭ

   ನೀವು ಈ ಬಾರಿ ಯಾವ ಸಾಹಸಕ್ಕೂ ಕೈ ಹಾಕಬೇಡಿ. ಇದು ನಿಮ್ಮ ಮೊದಲನೇ ಪ್ರಯತ್ನ ಅಂದರಂತೂ ಸುಮ್ಮನಿರುವುದು ಮತ್ತೂ ಒಳಿತು. ಇಲ್ಲ, ನನ್ನ ಮನಸ್ಸಿನಲ್ಲಿರುವುದನ್ನು ಹೇಳೇಹೇಳ್ತೀನಿ ಎಂದು ಹಠ ಮಾಡಿದರೆ ಮನಸ್ಸು ಒಡೆದೀತು, ಕೆನ್ನೆ ಊದೀತು ಎಚ್ಚರ, ಎಚ್ಚರ.

   ಮಿಥುನ

   ಮಿಥುನ

   ನಿಮ್ಮ ಮಾತಿನ ಮೋಡಿ, ನಗುವಿಗೆ ಬಹಳ ಬೇಗ ಆಕರ್ಷಿತರಾಗುತ್ತಾರೆ. ಅಂಥ ಸೊಗಸಾದ ಮಾತಿನ ಕಲೆ ನಿಮಗಿದೆ. ಆದರೆ ನೀವು ಮಾತಿನ ಮೇಲೆ ನಿಲ್ಲಬೇಕು. ನಿರ್ಧಾರಗಳನ್ನು ಬದಲಿಸುವುದು ಒಳ್ಳೆಯದಲ್ಲ. ಬೇರೊಬ್ಬರ ಮನಸ್ಸಿನ ಜತೆಗೆ ಆಟವಾಡುವುದು ತರವಲ್ಲ. ನಿಮ್ಮ ಮನಸ್ಸಿನಲ್ಲಿರುವ ಪ್ರೇಮ ನಿವೇದನೆ ಮಾಡಲು ಅಡ್ಡಿಯಿಲ್ಲ.

   ಕರ್ಕಾಟಕ

   ಕರ್ಕಾಟಕ

   ನೀವು ಈ ಬಾರಿ ಪ್ರೇಮ ನಿವೇದನೆ ಮಾಡಬಹುದು. ಆದರೆ ಒಂದೇ ಸಲಕ್ಕೆ ಆಗುವ ಸಾಧ್ಯತೆ ಇಲ್ಲ. ಆದರೆ ಬೆನ್ನು ಬಿದ್ದು ಪ್ರಯತ್ನಿಸಿದರೆ, ಹಾಗಂತ ತೊಂದರೆ ಕೊಡಿ ಅಂತಲ್ಲ. ಪ್ರೇಮ ನಿವೇದನೆ ಮಾಡಿದ ನಂತರ ಎದುರಿನವರ ಅಭಿಪ್ರಾಯವನ್ನು ತಿಳಿಸುವುದಕ್ಕೆ ಸ್ವಲ್ಪ ಸಮಯ ಕೊಡಿ.

   ಸಿಂಹ

   ಸಿಂಹ

   ನೀವು ಯಾರಿಗೂ ಪ್ರೇಮ ನಿವೇದನೆ ಮಾಡದಿದ್ದರೆ ಒಳ್ಳೆಯದು. ಮನಸ್ಸಿನಲ್ಲಿ ಯಾರಾದರೂ ಇದ್ದರೆ, ನೀವು ವಿವಾಹ ವಯಸ್ಕರಾಗಿದ್ದರೆ ಪೋಷಕರ ಮೂಲಕ ಒಮ್ಮೆ ಪ್ರಯತ್ನಿಸಿ ನೋಡಿ. ಹಾಗಂತ ನೀವು ಅಂದುಕೊಂಡ ಉತ್ತರವೇ ಸಿಗುತ್ತದೆ ಎಂಬ ಯಾವ ಖಾತ್ರಿಯೂ ಇಲ್ಲ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ.

   ಕನ್ಯಾ

   ಕನ್ಯಾ

   ನೀವು ವಿಪರೀತ ಮಾತಿನಮಲ್ಲರು. ವಿಪರೀತ ಬುದ್ಧಿವಂತಿಕೆ ತೋರಿಸುತ್ತೀರಿ. ಅತಿಯಾದ ಆತ್ಮವಿಶ್ವಾಸ ಬೇಡ. ಎಲ್ಲವೂ ತಾನಾಗಿ ಆಗಲಿ ಎಂದು ಕಾಯುವುದು ಬೇಡ. ನಿಮ್ಮ ಮನಸ್ಸಿನಲ್ಲಿರುವ ವಿಚಾರವನ್ನು ಆಲಸ್ಯ ಮಾಡದೆ ಆದಷ್ಟು ಬೇಗ ತಿಳಿಸಿದರೆ ಒಳ್ಳೆಯದು. ನಾಳೆ- ನಾಡಿದ್ದು ಎಂದು ಮುಂದಕ್ಕೆ ಹಾಕಬೇಡಿ.

   ತುಲಾ

   ತುಲಾ

   ಪ್ರೀತಿ- ಪ್ರೇಮ ವಿಚಾರದಲ್ಲಿ ನೀವು ಬಹಳ ಎಚ್ಚರದಿಂದ ಇರಬೇಕು. ಏಕೆಂದರೆ ನಿಮ್ಮ ಜೀವನದಲ್ಲಿ ಅದಕ್ಕೂ ಮುಖ್ಯವಾದ ವಿಚಾರ ಬಹಳ ಇದೆ. ಇಲ್ಲ, ನನ್ನ ಪ್ರೀತಿಯನ್ನು ಹೇಳಿಕೊಳ್ಳಲೇ ಬೇಕು ಎಂದು ಹಠ ಮಾಡಿ ಪಡೆದರೂ ತೀರಾ ನೆಮ್ಮದಿಯಾಗಿ ನೀವು ಇರುವುದಕ್ಕೆ ಆಗುವುದಿಲ್ಲ. ವಿಪರೀತ ನಿರೀಕ್ಷೆ ಬೇಡ.

   ವೃಶ್ಚಿಕ

   ವೃಶ್ಚಿಕ

   ನೀವು ಪ್ರೀತಿ-ಪ್ರೇಮದಿಂದ ದೂರ ಇರಿ. ನಿಮ್ಮ ಪೋಷಕರನ್ನು ಎದುರು ಹಾಕಿಕೊಳ್ಳಬೇಕಾಗುತ್ತದೆ. ಆರೋಗ್ಯದ ಬಗ್ಗೆ ಸ್ವಲ್ಪ ಹುಷಾರಾಗಿರಿ. ಅದನ್ನು ಸರಿ ಮಾಡಿಕೊಳ್ಳಿ. ನಿಮಗೆ ಎಷ್ಟೇ ಹೇಳಿದರೂ ಪ್ರೀತಿ-ಪ್ರೇಮದಲ್ಲಿ ಬೀಳುತ್ತೀರಾ. ಪೋಷಕರನ್ನು ಎದುರು ಹಾಕಿಕೊಳ್ಳುತ್ತೀರಾ ಎಂಬುದು ಗೋಚರಿಸುತ್ತಿದೆ.

   ಧನುಸ್ಸು

   ಧನುಸ್ಸು

   ನಾಚಿಕೆ ಬಿಡಬೇಕು ನೀವು. ಸಂಕೋಚ ಪಟ್ಟುಕೊಂಡರೆ ಆಗುವುದಿಲ್ಲ. ನೀವಂದುಕೊಂಡಿದ್ದು ಯಶಸ್ಸು ಕಾಣುತ್ತದೆ. ಆದರೆ ನಿಮ್ಮ ಸ್ವಭಾವದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯ. ನೀವು ಮನಸ್ಸಲ್ಲೇ ಮಂಡಿಗೆ ತಿಂದರೆ ಅದು ಎದುರಿನವರಿಗೆ ಹೇಗೆ ಗೊತ್ತಾಗುತ್ತದೆ?

   ಮಕರ

   ಮಕರ

   ನಿಮಗೆ ಯಾವಾಗಲೂ ದ್ವಿಸ್ವಭಾವ ಕಾಡುತ್ತದೆ. ಆದರೆ ಸಮಯ ನೋಡಿಕೊಂಡು, ನಿಧಾನವಾಗಿಯಾದರೂ ಹೇಳಿಕೊಳ್ಳಬಹುದು. ಆದರೆ ಇದೇ ಫೆಬ್ರವರಿ ಹದಿನಾಲ್ಕನೇ ತಾರೀಕೇ ಹೇಳಿಕೊಳ್ಳಬೇಕು ಎಂಬ ಆತರ ಬೇಡ. ಸಮಯಕ್ಕಾಗಿ ಕಾಯಿರಿ, ಒಂದೊಳ್ಳೆ ವಾತಾವರಣ, ಸಮಯ ನೋಡಿಕೊಂಡು ಪ್ರೀತಿ ನಿವೇದನೆ ಮಾಡಬಹುದು.

   ಕುಂಭ

   ಕುಂಭ

   ಮೊದಲು ನಿಮ್ಮ ಸೋಮಾರಿತನ ಬಿಡಬೇಕು. ನಿಮಗೆ ದೈವಾನುಗ್ರಹ ತುಂಬ ಬೇಕಿದೆ. ಈಗ ಇಲ್ಲ ಅಂತಲ್ಲ. ಆದರೆ ದೇವರ ಬಳಿ ಪರಿಶುದ್ಧ ಭಕ್ತಿಯಿಂದ ಕೇಳಿಕೊಳ್ಳಿ. ನಿಮ್ಮ ಪ್ರೀತಿಯೂ ಪರಿಶುದ್ಧವಾಗಿದ್ದರೆ ಅಂದುಕೊಂಡದ್ದು ನೆರವೇರುತ್ತದೆ. ನಿಮ್ಮ ಭಕ್ತಿ ಹಾಗೂ ಪ್ರೀತಿ ಪ್ರಾಮಾಣಿಕವಾಗಿ ಇರಬೇಕು ಎಂಬುದು ನೆನಪಿನಲ್ಲಿ ಇಟ್ಟುಕೊಳ್ಳಿ.

   ಮೀನ

   ಮೀನ

   ನೀವು ಈ ಬಾರಿ ತಣ್ಣಗೆ ಇದ್ದುಬಿಡಿ. ಈ ಬಾರಿ ವ್ಯಾಲಂಟೈನ್ಸ್ ಡೇ ನಮ್ಮ ಪಾಲಿಗಲ್ಲ ಅಂತ ಇದ್ದು ಬಿಡಿ. ನೀವು ವಾಸ್ತವವಾದಿಗಳು. ಎಲ್ಲವನ್ನೂ ತಕ್ಕಡಿಗೆ ಹಾಕಿ ಅಳೆದು- ತೂಗಿ ನೋಡುವ ಪೈಕಿ. ಪ್ರೀತಿ- ಪ್ರೇಮವನ್ನು ಸಹ ಹಾಗೆ ನೋಡುವುದು ಸರಿಯಲ್ಲ. ನಿಮ್ಮ ಭಾವನೆಯನ್ನು ಸರಿಯಾಗಿ ವ್ಯಕ್ತಪಡಿಸಿ. ಇದು ಸಲಹೆಯಷ್ಟೇ: ಈ ಸಲಕ್ಕೆ ಅಲ್ಲ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Valentines day special astrology for zodiac signs for the year 2018. What vedic astrology says about proposal of love to 12 zodiac signs, well known astrologer Pandit Vittala Bhat explains in Kannada.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ