Valentines Day 2024 Horoscope: ಪ್ರೇಮಿಗಳ ದಿನದಂದು ಈ 4 ರಾಶಿಯವರು ತಮ್ಮ ಪ್ರೇಮಿಯನ್ನು ಕಂಡುಕೊಳ್ಳುವರು

ಪ್ರೇಮಿಗಳ ದಿನ ಬರಲಿದೆ. ಪ್ರತಿ ವರ್ಷ ಫೆಬ್ರವರಿ 14 ರಂದು ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು, ಪ್ರೇಮಿಗಳು ತಮ್ಮ ಸಂಗಾತಿಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ವಿಶೇಷ ಉಡುಗೊರೆಗಳೊಂದಿಗೆ ಈ ದಿನವನ್ನು ಆಚರಿಸುತ್ತಾರೆ.

ಹೀಗಾಗಿ ಅವಿವಾಹಿತರು ತಾವು ಪ್ರೀತಿಸಿದವರಿಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಕಾಯುತ್ತಿದ್ದಾರೆ. ಒಬ್ಬರ ಜಾತಕದಲ್ಲಿ ಗ್ರಹಗಳ ಸ್ಥಾನವನ್ನು ಅವಲಂಬಿಸಿ ಕೆಲವರು ತಮ್ಮ ಸಂಗಾತಿಯನ್ನು ಪಡೆಯುತ್ತಾರೆ ಕೆಲವರು ಪಡೆಯುವುದಿಲ್ಲ.

ಗ್ರಹಗಳ ಸ್ಥಾನಕ್ಕೆ ಸಂಬಂಧಿಸಿದಂತೆ ಈ ವರ್ಷ ಫೆಬ್ರವರಿ 14 ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಪ್ರೇಮಪ್ರಸ್ತಾಪಕ್ಕೆ ತುಂಬಾ ಒಳ್ಳೆಯದು. ಹಾಗಾದರೆ ಪ್ರೇಮಿಗಳ ದಿನದಂದು ಯಾವ ರಾಶಿಯವರು ತಮ್ಮ ಪ್ರೇಮಿಯನ್ನು ಕಂಡುಕೊಳ್ಳುವರು ಈಗ ನೋಡೋಣ.

Valentines day 2024 horoscope these zodiac signs will find their love on february in kannada

ವೃಷಭ ರಾಶಿ

ವೃಷಭ ರಾಶಿಯ 7ನೇ ಮನೆ ಗುರುವಿನ ಪ್ರಭಾವದಲ್ಲಿದೆ. ಹೀಗಾಗಿ ಈ ರಾಶಿಯವರು ಈ ಫೆಬ್ರವರಿ 14ರಂದು ಹೊಸ ಸಂಬಂಧವನ್ನು ಪ್ರವೇಶಿಸಬಹುದು. ಅವಿವಾಹಿತರು ಜೀವನ ಸಂಗಾತಿಯನ್ನು ಕಂಡುಕೊಳ್ಳುತ್ತಾರೆ. ನೀವಂದುಕೊಂಡ ಜೀವನ ಸಂಗಾತಿಯನ್ನು ನೀವು ಪಡೆಯಬಹುದು. ಅವರು ನಿಮ್ಮ ಜೀವನವನ್ನು ಸಂತೋಷಪಡಿಸುತ್ತಾರೆ. ಈಗಾಗಲೇ ವಿವಾಹಿತರು ಅಥವಾ ಪ್ರೀತಿಯಲ್ಲಿರುವ ಈ ವೃಷಭ ರಾಶಿಯವರು ಆಳವಾದ ಸಂಬಂಧವನ್ನು ಹೊಂದಿರುತ್ತಾರೆ.

Valentines day 2024 horoscope these zodiac signs will find their love on february in kannada

ಕರ್ಕಾಟಕ ರಾಶಿ

ಫೆಬ್ರವರಿ 14 ರಂದು, ಕರ್ಕ ರಾಶಿಯವರು ಹೊಸ ಜೀವನ ಸಂಗಾತಿಯನ್ನು ಪಡೆಯುವ ಸಾಧ್ಯತೆಯಿದೆ. ಅವರು ಈಗಾಗಲೇ ಪ್ರೀತಿಸುತ್ತಿದ್ದರೆ, ಅವರು ಮದುವೆಯಾಗುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಗೆಳತಿ ಸಿಗದೆ ಇಲ್ಲಿಯವರೆಗೂ ಅಲೆದಾಡುತ್ತಿದ್ದವರ ಪ್ರೀತಿಯ ಹುಡುಕಾಟ ಇನ್ನೇನು ಮುಗಿಯಲಿದೆ.

Valentines day 2024 horoscope these zodiac signs will find their love on february in kannada

ವೃಶ್ಚಿಕ ರಾಶಿ

ನೀವು ವೃಶ್ಚಿಕ ರಾಶಿಯವರಾಗಿದ್ದರೆ, ಈ ವರ್ಷದ ಪ್ರೇಮಿಗಳ ದಿನದಂದು ನಿಮಗೆ ಒಂದು ದೊಡ್ಡ ಆಶ್ಚರ್ಯ ಕಾದಿದೆ. ಅಂದರೆ ಪ್ರೀತಿ ಸಿಗದೇ ಇದ್ದವರು ಈ ವರ್ಷ ತಮ್ಮ ಪ್ರೇಮ ಸಂಗಾತಿಯನ್ನು ಪಡೆಯುತ್ತಾರೆ. ಈಗಾಗಲೇ ಸಂಬಂಧದಲ್ಲಿರುವವರ ಪ್ರೀತಿ ಗಟ್ಟಿಯಾಗುತ್ತದೆ.

Valentines day 2024 horoscope these zodiac signs will find their love on february in kannada

ಮಕರ ರಾಶಿ

ಮಕರ ರಾಶಿಯವರು ಈ ಪ್ರೇಮಿಗಳ ದಿನದಂದು ನಿಮ್ಮ ಪ್ರೀತಿಯ ಸಂಗಾತಿಯನ್ನು ನೀವು ಖಂಡಿತವಾಗಿ ಕಂಡುಕೊಳ್ಳುವಿರಿ. ಪ್ರೇಮಿಗಳು ತಮ್ಮ ಸಂಗಾತಿಯೊಂದಿಗೆ ಸಾಕಷ್ಟು ಸಮಯವನ್ನು ಕಳೆಯುವ ಅವಕಾಶವನ್ನು ಪಡೆಯುತ್ತಾರೆ. ಇದರಿಂದ ಸಂಬಂಧವು ಗಟ್ಟಿಯಾಗುತ್ತದೆ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+