ವೈಶಾಖ ಮಾಸದ ವಾರದ ಪಂಚಾಂಗ : ಏಪ್ರಿಲ್ 19ರಿಂದ 25

ವೈಶಾಖ ಮಾಸದ ಏ.19ರಿಂದ ಏ.25ರವರೆಗಿನ ಅವಧಿಯಲ್ಲಿ ಬರುವ ರಾಹುಕಾಲ, ಗುಳಿಕಕಾಲ, ಯಮಗಂಡಕಾಲದ ವಿವರ, ಯಾವ ರಾಶಿಗೆ ಯಾವ ಗ್ರಹ ಪ್ರವೇಶವಾಗಿದೆ ಮತ್ತು ಮುಹೂರ್ತಗಳ ಕುರಿತು ನಕ್ಷತ್ರಗಳಿಗೆ ತಕ್ಕಂತೆ ಜ್ಯೋತಿಷಿ ಎಸ್ಎಸ್ ನಾಗನೂರಮಠ ಅವರು ವಿವರಿಸಿದ್ದಾರೆ. ಇನ್ನು ಎಲ್ಲ ರಾಶಿಗಳಿಗೆ ವಾರ ಭವಿಷ್ಯ ಹೇಗಿದೆ ಅನ್ನುವುದನ್ನು ಕೂಡ ಜ್ಯೋತಿಷಿಗಳು ತಿಳಿಸಿಕೊಟ್ಟಿದ್ದಾರೆ. [ರಾಹುಕಾಲ ಗುಳಿಕಕಾಲ ಯಾಕ್ರೀ ನೋಡಬೇಕು?]

ವೈಶಾಖ ಮಾಸದಲ್ಲಿ ಬರುವ ಈ ವಾರವನ್ನು ಜಯಂತಿಗಳ ವಾರವೆಂದು ಕರೆಯಬಹುದು. ಶಿವಾಜಿ, ಶಂಕರಾಚಾರ್ಯ, ಬಸವ, ಪರಶುರಾಮ, ರಾಮಾನುಜಾಚಾರ್ಯ, ಭಗೀರತ ಜಯಂತಿಗಳನ್ನು ಈ ವಾರ ಆಚರಿಸಲಾಗುತ್ತಿದೆ.

Vaishakha masa - April 19 to 25: Rahu Kala, Gulika Kala, Yamaganda Kala

ಏ.19. ರವಿವಾರ : ಅಶ್ವಿನಿ ನಕ್ಷತ್ರ. ವೈಶಾಖ ಮಾಸದ ಶುಕ್ಲ ಪಕ್ಷ ಆರಂಭ. ದೂರ ಪ್ರಯಾಣದಿಂದ ಸಂತಸ.

ಯಮಗಂಡಕಾಲ : ಮಧ್ಯಾಹ್ನ 12 ರಿಂದ 1-30.
ಗುಳಿಕಕಾಲ : ಮಧ್ಯಾಹ್ನ 3 ರಿಂದ 4-30.
ರಾಹುಕಾಲ : ಸಂಜೆ 4-30 ರಿಂದ 6.

ಏ.20. ಸೋಮವಾರ : ಭರಣಿ. ಶಿವಾಜಿ ಜಯಂತಿ. ದೂರ ಪ್ರಯಾಣದಿಂದ ಲಾಭ.

ಯಮಗಂಡಕಾಲ : ಮಧ್ಯಾಹ್ನ 10-30 ರಿಂದ 12.
ಗುಳಿಕಕಾಲ : ಮಧ್ಯಾಹ್ನ 1-30 ರಿಂದ 3.
ರಾಹುಕಾಲ : ಮುಂಜಾನೆ 7-30 ರಿಂದ 9.

ಏ.21. ಮಂಗಳವಾರ : ಕೃತ್ತಿಕಾ. ಬಸವ ಮತ್ತು ಪರಶುರಾಮ ಜಯಂತಿ. ಅಕ್ಷಯ ತೃತೀಯ. ದೂರ ಪ್ರಯಾಣದಿಂದ ಹಾನಿ.

ಯಮಗಂಡಕಾಲ : ಮುಂಜಾನೆ 9 ರಿಂದ 10-30.
ಗುಳಿಕಕಾಲ : ಮಧ್ಯಾಹ್ನ 12 ರಿಂದ 1-30.
ರಾಹುಕಾಲ : ಸಂಜೆ 3 ರಿಂದ 4-30.

ಏ.22. ಬುಧವಾರ : ರೋಹಿಣಿ. ಯಂತ್ರೋಪಕರಣ ಖರೀದಿಸಲು ಉತ್ತಮ. ದೂರ ಪ್ರಯಾಣದಿಂದ ಶುಭ.

ಯಮಗಂಡಕಾಲ : ಮುಂಜಾನೆ 7-30 ರಿಂದ 9.
ಗುಳಿಕಕಾಲ : ಮುಂಜಾನೆ 10-30 ರಿಂದ 12.
ರಾಹುಕಾಲ : ಮಧ್ಯಾಹ್ನ 12 ರಿಂದ 1-30.

ಏ.23. ಗುರುವಾರ : ಮೃಗಶಿರಾ. ವಿಶ್ವ ಪುಸ್ತಕ ದಿನ. ಶಂಕರಾಚಾರ್ಯ ಜಯಂತಿ. ಹೊಸ ವಹಿವಾಟು ಮತ್ತು ಉದ್ಯೋಗ ಪ್ರಾರಂಭಕ್ಕೆ ಶುಭ. ದೂರ ಪ್ರಯಾಣದಿಂದ ಅಪಾಯ.

ಯಮಗಂಡಕಾಲ : ಮುಂಜಾನೆ 6 ರಿಂದ 7-30.
ಗುಳಿಕಕಾಲ : ಮುಂಜಾನೆ 9 ರಿಂದ 10-30.
ರಾಹುಕಾಲ : ಮಧ್ಯಾಹ್ನ 1-30 ರಿಂದ 3.

ಏ.24. ಶುಕ್ರವಾರ : ಆರಿದ್ರಾ. ರಾಮಾನುಜಾಚಾರ್ಯ ಜಯಂತಿ. ದೂರ ಪ್ರಯಾಣದಿಂದ ಲಾಭ.

ಯಮಗಂಡಕಾಲ : ಮಧ್ಯಾಹ್ನ 3 ರಿಂದ 4-30.
ಗುಳಿಕಕಾಲ : ಮುಂಜಾನೆ 7-30 ರಿಂದ 9.
ರಾಹುಕಾಲ : ಮುಂಜಾನೆ 10-30 ರಿಂದ 12.

ಏ.25. ಶನಿವಾರ : ಪುನರ್ವಸು. ಭಗೀರಥ ಜಯಂತಿ. ದೂರ ಪ್ರಯಾಣದಿಂದ ಲಾಭ.

ಯಮಗಂಡಕಾಲ : ಮಧ್ಯಾಹ್ನ 1-30 ರಿಂದ 3.
ಗುಳಿಕಕಾಲ : ಮುಂಜಾನೆ 6-00 ರಿಂದ 7-30.
ರಾಹುಕಾಲ : ಮುಂಜಾನೆ 9 ರಿಂದ 10-30.

ಯಮಗಂಡಕಾಲ ಮುಖ್ಯ ಕೆಲಸಗಳಿಗೆ ಉತ್ತಮವಲ್ಲ.
ಗುಳಿಕಕಾಲ ಎಲ್ಲ ಕೆಲಸ ಮಾಡಲು ಉತ್ತಮ. ಶುಭಮುಹೂರ್ತವೆನ್ನಲಾಗುತ್ತದೆ.
ರಾಹುಕಾಲ ದೂರ ಪ್ರಯಾಣ ಮತ್ತು ಮುಖ್ಯ ಕೆಲಸ ಆರಂಭಿಸಲು ಸೂಕ್ತವಲ್ಲ.

ಮದುವೆಗೆ ಶುಭ ಮುಹೂರ್ತ : ಮಂಗಳವಾರ, ಬುಧವಾರ, ಗುರುವಾರ.

ಹೊಸಮನೆ ಪ್ರವೇಶಕ್ಕೆ ಶುಭ ಮುಹೂರ್ತ : ರವಿವಾರ, ಬುಧವಾರ, ಗುರುವಾರ,

ಈ ವಾರ ಹೊಸಮನೆಗೆ ಸಂಬಂಧಪಟ್ಟ ಎಲ್ಲ ಕೆಲಸ ಕಾರ್ಯ ಮಾಡಿಕೊಳ್ಳುವುದು ಉತ್ತಮ.

ಈ ವಾರದ ಗ್ರಹಗತಿ : ಮೇಷ: ರವಿ+ಬುಧ+ಮಂಗಳ+ಚಂದ್ರ (ನಂತರ ಮುಂದಿನ ರಾಶಿಗೆ ಚಂದ್ರ ಪ್ರವೇಶ). ವೃಷಭ: ಶುಕ್ರ. ಕರ್ಕ: ಗುರು. ಕನ್ಯಾ: ಸ್ವಕ್ಷೇತ್ರದಲ್ಲಿ ರಾಹು. ವೃಶ್ಚಿಕ: ನೀಚಶನಿ. ಮೀನ: ಕೇತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+