Pavithra Gowda: ಪವಿತ್ರಾ ಗೌಡ ಬಿಡುಗಡೆ ಬಗ್ಗೆ ನಿಜವಾಯ್ತು ಉಮೇಶ್ ಆಚಾರ್ಯ ಗುರೂಜಿ ನುಡಿದ ಭವಿಷ್ಯ!
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿರುವ ಎ1 ಆರೋಪಿ ಪವಿತ್ರಾ ಗೌಡ ಅವರಿಗೆ ಎಷ್ಟೇ ಪ್ರಯತ್ನಪಟ್ಟರು ಜಾಮೀನು ಸಿಗುತ್ತಿಲ್ಲ. ಇದರಿಂದಾಗಿ ಪವಿತ್ರಾ ಗೌಡ ತುಂಬಾ ನಿರಾಸೆಗೊಂಡಿದ್ದಾರೆ. ಜೈಲಿನಿಂದ ಹೊರಬರಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ. ಆದರೂ ಅವರಿಗೆ ಬಿಡುಗಡೆ ಭಾಗ್ಯ ಸಿಗುತ್ತಿಲ್ಲ. ಇದಕ್ಕೆ ಕಾರಣ ಪವಿತ್ರಾ ಗೌಡ ಅವರ ಜಾತಕದಲ್ಲಿ ಗ್ರಹಗತಿಗಳ ಸ್ಥಾನ ದುರ್ಬಲವಾಗಿರುವುದು. ಹಾಗಾದರೆ ಪವಿತ್ರಾ ಗೌಡ ಅವರ ಕುಂಡಲಿ ಹೇಗಿದೆ? ಅವರ ಜಾತಕದಲ್ಲಿ ಗ್ರಹಗತಿಗಳ ಸ್ಥಾನ ಹೇಗಿದೆ ಎನ್ನುವುದರ ಬಗ್ಗೆ ಉಮೇಶ್ ಆಚಾರ್ಯ ಗುರೂಜಿ ನುಡಿದ ಭವಿಷ್ಯ ಇಲ್ಲಿದೆ...
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ದರ್ಶನ್ ಅವರಿಗೆ ಆರು ವಾರಗಳ ಕಾಲ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಇದರ ಬೆನ್ನಲ್ಲೇ ಪವಿತ್ರಾ ಗೌಡ ಸಹ ಜೈಲಿನಿಂದ ಹೊರಬರಲು ಸಾಕಷ್ಟು ಕಸರತ್ತು ನಡೆಸಿದ್ದಾರೆ. ಆದರೆ ಅವರಿಗೆ ಜಾಮೀನು ಸಿಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಈ ಹಿಂದೆ ದರ್ಶನ್ ಜೈಲಿನಲ್ಲಿ ಇರುವಾಗ ಹಲವಾರು ಜ್ಯೋತಿಷಿಗಳು ದರ್ಶನ್ ಬಿಡುಗಡೆ ಬಗ್ಗೆ ಭವಿಷ್ಯ ನುಡಿದಿದ್ದರು. ಆ ಪೈಕಿ ಬಹುತೇಕ ಜ್ಯೋತಿಷಿಗಳು ನುಡಿದ ಭವಿಷ್ಯ ನಿಜವೂ ಆಗಿದೆ. ಅಲ್ಲದೆ ಪವಿತ್ರಾ ಗೌಡ ಅವರ ಬಿಡುಗಡೆಯ ಬಗ್ಗೆ ನುಡಿದ ಭವಿಷ್ಯವಾಣಿಯೂ ಕೂಡ ನಿಜವಾಗುತ್ತಿರುವಂತೆ ಕಾಣಿಸುತ್ತಿವೆ.

ಹೌದು.. ಪವಿತ್ರಾ ಗೌಡ ಪ್ರಸ್ತುತ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಅವರು ಸಲ್ಲಿಸುವ ಜಾಮೀನು ಅರ್ಜಿಗಳು ತಿರಸ್ಕೃತಗೊಳ್ಳುತ್ತಿವೆ. ಹೀಗಾಗಿ ಅವರ ಬಿಡುಗಡೆ ಯಾವಾಗ ಎನ್ನುವ ಪ್ರಶ್ನೆಗಳು ಸದ್ಯ ಎಲ್ಲರಿಗೂ ಕಾಡುತ್ತಿವೆ. ಈ ಬಗ್ಗೆ ಉಮೇಶ್ ಆಚಾರ್ಯ ಗುರೂಜಿ ಭವಿಷ್ಯ ನುಡಿದಿದ್ದಾರೆ. ಹಾಗಾದರೆ ಪವಿತ್ರಾ ಗೌಡ ಭವಿಷ್ಯ ಹೇಗಿದೆ ಎಂದು ಈಗ ತಿಳಿಯೋಣ.
ಪವಿತ್ರಾ ಗೌಡ ಬಿಡುಗಡೆ ಬಗ್ಗೆ ಸ್ಪೋಟಕ ಭವಿಷ್ಯ..
ಪವಿತ್ರಾ ಗೌಡ ಅವರದ್ದು ಹಸ್ತ ನಕ್ಷತ್ರ ಕನ್ಯಾ ರಾಶಿ. ಮಿಥುನ ಲಗ್ನದಲ್ಲಿ ಇವರ ಜನನವಾಗಿದೆ. ಈ ಮಿಥುನ ಲಗ್ನದಲ್ಲಿ ಜನನ ಆದವರಿಗೆ, ದ್ವಿತೀಯದಲ್ಲಿ ಗುರು ಕೇತು ಯುತಿ, ಚತುರ್ಥ ಸ್ಥಾನದಲ್ಲಿ ಚಂದ್ರ, ಏಳನೇ ಭಾವದಲ್ಲಿ ರವಿ ಮತ್ತು ಬುಧ, ಅಷ್ಟಮದಲ್ಲಿ ಶುಕ್ರ, ರಾಹು ಹಾಗೂ ಶನಿ ಇದೆ. ಇದು ಒಳ್ಳೆಯ ಸ್ಥಾನವಲ್ಲ.
ಇವರ ಎಂಟನೆ ಹಾಗೂ ಹನ್ನೇರಡನೇ ಮನೆಯಲ್ಲಿ ಪಾಪದ ಗ್ರಹಗಳು ಇವೆ. ಪಾಪ ಗ್ರಹಗಳೊಂದಿಗೆ ಶುಭ ಗ್ರಹಗಳು ಸೇರಿದಾಗ ಶುಭ ಗ್ರಹಗಳ ಪುಣ್ಯಾಂಶವೂ ಕೂಡ ಕಡಿಮೆಯಾಗುತ್ತದೆ. ಹೀಗಾಗಿ ಮಿಥುನ ಲಗ್ನದಲ್ಲಿ ಜನನವಾದ ಪವಿತ್ರಾ ಗೌಡ ಅವರಿಗೆ ಬುಧ, ಗುರು, ಸೂರ್ಯ ಮೂರು ಗ್ರಹಗಳು ಅಶುಭ ಫಲವನ್ನು ನೀಡುತ್ತವೆ.

ಮಿಥುನ ರಾಶಿ ದ್ವಂದ್ವ ರಾಶಿಯಾಗಿದೆ. ಮಿಥುನ ಸ್ತ್ರೀ ಮತ್ತು ಪುರುಷ ಇರುವ ಚಿಹ್ನೆಯನ್ನು ಹೊಂದಿದ ರಾಶಿಯಾಗಿದೆ. ಇನ್ನೂ ಕನ್ಯಾ ರಾಶಿ ಕೂಡ ದ್ವಂದ್ವ ರಾಶಿಯಾಗಿದೆ. ಈ ರಾಶಿಯಲ್ಲಿ ಯಾರ ಜನನ ಆಗುತ್ತೋ ಅವರು ಹೆಚ್ಚು ಬಾದಿತರಾಗುತ್ತಾರೆ. ಕನ್ಯಾಕ್ಕೂ ಏಳನೇ ಭಾವಾಧಿಪತಿ ಗುರುವಾಗಿದೆ. ಮಿಥುನಕ್ಕೂ ಏಳನೇ ಭಾವಾಧಿಪತಿ ಗುರುವಾಗಿದೆ.
ಪವಿತ್ರಾ ಗೌಡಗೆ ಗುರುದಶಾ ಆರಂಭ..
ಎಷ್ಟು ಕಾಕತಾಳೀಯ ಅಂದರೆ ಪವಿತ್ರಾ ಗೌಡ ಅವರಿಗೂ ದರ್ಶನ್ ಅವರಂತೆ ಗುರುದಶಾ ನಡೆಯುತ್ತಿದೆ. ಪವಿತ್ರಾ ಗೌಡ ಅವರ ಜಾತಕದಲ್ಲಿ ಗುರು ದುರ್ಬಲವಾಗಿದೆ. ಹೀಗಾಗಿ ಇದು ಅಶುಭ ಫಲವನ್ನು ನೀಡುತ್ತಿದೆ. 7-9-2018ರಂದು ಪವಿತ್ರಾ ಗೌಡ ಅವರಿಗೆ ಗುರು ದಶಾ ಪ್ರಾರಂಭ ಆಗಿದೆ. ಇದು 7-9-2034ರವರೆಗೆ ಇರಲಿದೆ. ಅಶುಭ ಫಲ ನೀಡುವ ಈ ಗುರು ಗ್ರಹ ಪವಿತ್ರಾ ಗೌಡ ಜಾತಕದಲ್ಲಿ ಉಚ್ಚ ಸ್ಥಾನದಲ್ಲಿ ಇರುವುದರಿಂದ ಉನ್ನತ ಮಟ್ಟದ ಪಾಪದ ಫಲವನ್ನು ನೀಡುತ್ತದೆ ಎನ್ನುವುದು ಸ್ಪಷ್ಟವಾಗಿದೆ.
ಪ್ರಸ್ತುತ ಪವಿತ್ರಾ ಅವರಿಗೆ ಗುರುದಶಾ ನಡೆಯುತ್ತಿದೆ. ಲಗ್ನಾಧಿಪತಿಯಾದಂತಹ ಬುಧನು, ಸಪ್ತಮಾಧಿಪತಿಯಾದ ಗುರು ಎರಡೂ ಗ್ರಹಗಳು ಕುಳಿತಂತ ಭಾವ ಸಷ್ಟಾಷ್ಟಮ ಸ್ಥಿತಿಯಾಗಿದೆ. ಈ ಸ್ಥಿತಿ ಬಂಧನಾ ಯೋಗವನ್ನು ಸೃಷ್ಟಿಸುತ್ತದೆ. ಯಾವುದೇ ವಿಚಾರವನ್ನು ಹಠದಿಂದ ಸಾಧಿಸಲು ಹೋದರೆ ಗಂಭೀರ ಸಮಸ್ಯೆಗಳಿಗೆ ಒಳಗಾಗಬೇಕಾಗುತ್ತದೆ. ಹೀಗಾಗಿ ಪವಿತ್ರಾ ಗೌಡ ಬಂಧನಕ್ಕೊಳಗಾಗುವ ಮೊದಲೇ ಅವರ ಜಾತಕ ಸರಿಯಾಗಿರಲಿಲ್ಲ. ಘಟನೆ ನಡೆಯುವ ಮೊದಲೇ ಅವರ ಜಾತಕ ಕೇಳಿದ್ದರೆ ಗೊತ್ತಿರುತ್ತದೆ. ಇವರ ರಾಶಿ ದೀರ್ಘಕಾಲ ಕಷ್ಟವನ್ನು ಕೊಡುವ ರಾಶಿಯಾಗಿದೆ.
2026ವರೆಗೂ ಆಪಾದನೆ
ಇದಲ್ಲದೆ ಪವಿತ್ರಾ ಗೌಡ ಅವರಿಗೆ 2026 ಜುಲೈವರೆಗೂ ಕೇತುಯುಕ್ತಿ ನಡೆಯುತ್ತಿದೆ. ಹೀಗಾಗಿ ಅವರಿಗೆ ದೈಹಿಕ ಆರೋಗ್ಯ ಸ್ಥಿತಿ ಅಥವಾ ಬಂದ ಆಪಾದನೆಗಳು ತಕ್ಷಣ ದೂರವಾಗುವುದು ಕಷ್ಟಸಾಧ್ಯ. ನನ್ನದೇ ಸರಿ ಎನ್ನುವ ಸಿದ್ಧಾಂತಗಳು ಇವರ ಬದುಕಿನಲ್ಲಿ ಕೊಂಚ ಸಮಸ್ಯೆಗಳನ್ನು ತಂದುಕೊಡುತ್ತವೆ. ಆಸೆಗಳು ಇರಬೇಕು ಅತಿ ಆಸೆ ಇದ್ದರೆ ಕಷ್ಟವಾಗುತ್ತದೆ. ಎಲ್ಲವೂ ಹಿತಮಿತವಾಗಿ ಇದ್ದಾಗ ಮಾತ್ರ ಜೀವನ ಸುಖಮಯವಾಗಿರುತ್ತದೆ. ಹೀಗಾಗಿ ಅವರು ಗುರು ಪ್ರಾರ್ಥನೆ ಮಾಡುವುದು ಮುಖ್ಯ. ಇದರಿಂದ ಅವರು ಸಮಸ್ಯೆಗಳಿಂದ ಕೊಂಚ ಮುಕ್ತರಾಗಬಹುದು ಎಂದು ಉಮೇಶ್ ಆಚಾರ್ಯ ಗುರೂಜಿ ಭವಿಷ್ಯ ನುಡಿದಿದ್ದಾರೆ.
ಪವಿತ್ರಾ ಗೌಡ ಸ್ವಭಾವ
ಪವಿತ್ರಾ ಗೌಡ ಕನ್ನಡ ಸಿನಿಮಾರಂಗದಲ್ಲಿ ಹೇಳಿಕೊಳ್ಳುವಂತಹ ನಟಿಯೇನಲ್ಲ. ಸಿನಿಮಾದಲ್ಲಿ ನಟನೆ ಮಾಡಿರುವುದು ನಿಜವಾಗಿದ್ದರೂ ಅಷ್ಟೊಂದು ಜನಪ್ರಿಯತೆಯನ್ನು ಪಡೆದವರಲ್ಲ. ಬೇಕೆನ್ನುವುದನ್ನು ಪಡೆಯುವ ಹಠವಿರುವ ನಟಿ. ಈಗಾಗಲೇ ಮದುವೆಯಾಗಿರುವ ಪವಿತ್ರಾ ಇದೇ ಹಠದಿಂದ ಗಂಡನಿಂದ ದೂರವಾಗಿದ್ದರು. ಅವರಿಗೆ ಒಬ್ಬ ಮಗಳೂ ಕೂಡ ಇದ್ದಾಳೆ. ಹೀಗಿದ್ದರೂ ಪವಿತ್ರಾ ಗೌಡ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಅವರನ್ನು ತನ್ನ ಮಾಯದ ಬಲೆಗೆ ಹಾಕಿಕೊಂಡಳು. ಈಕೆಯಿಂದಾಗಿನೇ ದರ್ಶನ್ ಸಂಸಾರದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ದರ್ಶನ್ ಪತ್ನಿ ವಿಜಯಲಕ್ಷ್ಮೀ ಮೇಲೆ ಕೈ ಮಾಡಿದ್ದು ಎಂದು ಹೇಳಲಾಗುತ್ತದೆ. ನಟ ದರ್ಶನ್ ಅವರನ್ನು ಬುಟ್ಟಿಗೆ ಹಾಕಿಕೊಂಡಿದ್ದ ಪವಿತ್ರಾಗೆ ದರ್ಶನ್ ಐಷಾರಾಮಿ ಜೀವನದ ಮೇಲೆ ಕಣ್ಣಿತ್ತು. ಅಲ್ಲದೆ ಈಕೆ ಬೇಡಿದ್ದನ್ನು ದರ್ಶನ್ ನೀಡಬೇಕು ಎನ್ನುವ ಹಠ ಇತ್ತು. ಈ ದುರಾಸೆಯಿಂದಲೇ ಆಕೆ ಜೈಲು ಸೇರಿವಂತಾಗಿದೆ ಎಂದು ಹೇಳಲಾಗುತ್ತದೆ.
-
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ












Click it and Unblock the Notifications