ಸಿಂಹ ರಾಶಿ ಯುಗಾದಿ ವರ್ಷ ಭವಿಷ್ಯ; ಅತ್ಯಂತ ಶುಭಕರ, ಸಾಧನೆಗೆ ಸಾಕ್ಷಿಯಾಗುವ ವರ್ಷ

ಸಿಂಹ ರಾಶಿಯವರದ್ದು ಹಟಮಾರಿ ಮನಸ್ಥಿತಿ. ನಾಯಕತ್ವದ ಸ್ವಭಾವ, ಸವಾಲುಗಳು ಬೇಕೆನ್ನುವ ಜೀವ. ಮಖ (4 ಪಾದ), ಪುಬ್ಬಾ - ಪೂರ್ವಾಫಲ್ಗುಣಿ (4 ಪಾದ) ಮತ್ತು ಉತ್ತರಾ ಫಲ್ಗುಣಿ (1ನೇ ಪಾದ) ನಕ್ಷತ್ರಗಳಲ್ಲಿ ಜನಿಸಿದವರು ಸಿಂಹ ರಾಶಿಗೆ ಸೇರುತ್ತಾರೆ. ಅದೃಷ್ಟ ಸಂಖ್ಯೆ 1, ಇವರಿಗೆ ಕಿತ್ತಳೆ ಶುಭ ಬಣ್ಣ, ಪೂರ್ವ ಶುಭ ದಿಕ್ಕು. ಸೂರ್ಯನ ಆರಾಧನೆ ಸಿಂಹ ರಾಶಿಯವರಿಗೆ ಶ್ರೇಯಸ್ಕರ.

ಪರಾಭವ ನಾಮ ಸಂವತ್ಸರದ ಯುಗಾದಿ ವರ್ಷ ಭವಿಷ್ಯ: ಸಿಂಹ ರಾಶಿ ರಾಶಿಯವರಿಗೆ ಈ ಸಂವತ್ಸವರ ಮಿಶ್ರಫಲಗಳನ್ನು ಹೊತ್ತು ತರಲಿದೆ. ಈ ಅವಧಿಯಲ್ಲಿ ಗ್ರಹಗಳ ಚಲನೆ, ಆದಾಯ-ವ್ಯಯ ಸ್ಥಿತಿ, ಆರೋಗ್ಯ, ಉದ್ಯೋಗ ಮತ್ತು ಕುಟುಂಬ ಜೀವನದ ಮೇಲೆ ವಿಶೇಷ ಪರಿಣಾಮಗಳನ್ನು ಕಾಣಬಹುದು. ಈ ಸಂವತ್ಸರದಲ್ಲಿ ಮೀನ ರಾಶಿಯವರ ಜೀವನದಲ್ಲಿ ಏನೆಲ್ಲ ಬದಲಾವಣೆಗಳು ಆಗಬಹುದು? ಯಾವ ವಿಷಯಗಳಲ್ಲಿ ಲಾಭ ಹಾಗೂ ಯಾವ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ ಎಂಬುದನ್ನು ಈ ಬರಹದಲ್ಲಿ ವಿವರಿಸಿದ್ದಾರೆ ಪಂಡಿತ್ ವಿಠ್ಠಲ್ ಭಟ್.

ಸಿಂಹ ರಾಶಿ - ಪರಾಭವ ನಾಮ ಸಂವತ್ಸರ (19.03.2026 - 06.04.2027)

ಆದಾಯ: 15
ವ್ಯಯ: 9
ರಾಜಮರ್ಯಾದೆ: 8
ಅವಮಾನ: 2

ಪರಾಭವ ನಾಮ ಸಂವತ್ಸರವು ಸಿಂಹ ರಾಶಿಯವರಿಗೆ ಅತ್ಯಂತ ಶುಭಕರ ಮತ್ತು ಸಾಧನೆಯ ವರ್ಷವಾಗಿರುತ್ತದೆ. ಆದಾಯದ ಮಟ್ಟದಲ್ಲಿ ಸ್ಪಷ್ಟವಾದ ಏರಿಕೆ ಕಂಡುಬರುತ್ತದೆ. ಹಳೆಯ ಹೂಡಿಕೆಗಳು ಉತ್ತಮ ಲಾಭ ತರುತ್ತವೆ ಮತ್ತು ಹೊಸ ಅವಕಾಶಗಳು ಆರ್ಥಿಕ ಸ್ಥಿರತೆಯನ್ನು ಹೆಚ್ಚಿಸುತ್ತವೆ. ಖರ್ಚು ನಿಯಂತ್ರಣದಲ್ಲಿರುವುದರಿಂದ ಉಳಿತಾಯ ಹೆಚ್ಚಾಗುವ ಸಾಧ್ಯತೆ ಇದೆ.

Ugadi 2026

ಉದ್ಯೋಗ ಕ್ಷೇತ್ರದಲ್ಲಿ ಪದೋನ್ನತಿ, ಗೌರವ ಮತ್ತು ಹೆಚ್ಚುವರಿ ಜವಾಬ್ದಾರಿಗಳು ದೊರೆಯುತ್ತವೆ. ಮೇಲಧಿಕಾರಿಗಳ ಮೆಚ್ಚುಗೆ ಹಾಗೂ ಸಹೋದ್ಯೋಗಿಗಳ ಗೌರವ ಹೆಚ್ಚಾಗುತ್ತದೆ. ರಾಜಮರ್ಯಾದೆ ಉತ್ತಮವಾಗಿರುವುದರಿಂದ ಸಮಾಜದಲ್ಲಿ ಸ್ಥಾನಮಾನ ವೃದ್ಧಿಯಾಗುತ್ತದೆ. ನಾಯಕತ್ವ ಗುಣಗಳು ಹೊರಹೊಮ್ಮುತ್ತವೆ. ವ್ಯಾಪಾರಸ್ಥರಿಗೆ ಹೊಸ ಒಪ್ಪಂದಗಳು ಹಾಗೂ ದೊಡ್ಡ ಲಾಭದ ಅವಕಾಶಗಳು ದೊರೆಯುತ್ತವೆ.

ಕುಟುಂಬ ಜೀವನದಲ್ಲಿ ಸಂತೋಷಕರ ವಾತಾವರಣ ಇರುತ್ತದೆ. ಮನೆದಲ್ಲಿ ಶುಭಕಾರ್ಯಗಳು ನಡೆಯುವ ಸಾಧ್ಯತೆ ಇದೆ. ದಾಂಪತ್ಯ ಜೀವನದಲ್ಲಿ ಪರಸ್ಪರ ಗೌರವ ಮತ್ತು ಪ್ರೀತಿ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲ ಸಿಗುತ್ತದೆ.

ಆರೋಗ್ಯ ಉತ್ತಮವಾಗಿದ್ದರೂ ಅತಿಯಾದ ಶ್ರಮದಿಂದ ದೂರವಿರುವುದು ಒಳಿತು. ನಿಯಮಿತ ವ್ಯಾಯಾಮ ಮತ್ತು ಸಮತೋಲನ ಆಹಾರ ಸಹಕಾರಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದು, ಸೂರ್ಯನಾರಾಯಣ ಆರಾಧನೆ ಅಥವಾ ದಾನ ಧರ್ಮಗಳು ಹೆಚ್ಚು ಶುಭಫಲ ನೀಡುತ್ತವೆ.

ಒಟ್ಟಾರೆ ಈ ವರ್ಷ ಸಿಂಹ ರಾಶಿಯವರಿಗೆ ಯಶಸ್ಸು, ಗೌರವ, ಆರ್ಥಿಕ ಅಭಿವೃದ್ಧಿ ಮತ್ತು ಸಮಾಜದಲ್ಲಿ ಪ್ರಭಾವ ಹೆಚ್ಚಿಸುವ ಶಕ್ತಿಶಾಲಿ ಸಂವತ್ಸರವಾಗಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+