Trigraha Yoga 2023: ತುಲಾ ರಾಶಿಯಲ್ಲಿ ರೂಪುಗೊಂಡ ತ್ರಿಗ್ರಹ ಯೋಗ: ಅಕ್ಟೋಬರ್ 15 ರಿಂದ ಈ 3 ರಾಶಿಯವರಿಗೆ ಲಕ್ಕಿ ಟೈಂ
ನವಗ್ರಹಗಳು ಕಾಲಕಾಲಕ್ಕೆ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಚಲಿಸುತ್ತವೆ. ಗ್ರಹಗಳು ಹಾಗೆ ರಾಶಿಯನ್ನು ಬದಲಾಯಿಸಿದಾಗ ಕೆಲವೊಮ್ಮೆ ಒಂದೇ ರಾಶಿಯಲ್ಲಿ ಒಂದಕ್ಕಿಂತ ಹೆಚ್ಚು ಗ್ರಹಗಳ ಸಂಯೋಜನೆ ಆಗುತ್ತದೆ. ಈ ಗ್ರಹಗಳ ಸಂಯೋಜನೆಯು ಶುಭ ಅಥವಾ ಅಶುಭ ಯೋಗಗಳನ್ನು ಉಂಟುಮಾಡಬಹುದು. ಈ ರೀತಿ ರೂಪುಗೊಂಡ ಯೋಗಗಳ ಪರಿಣಾಮವನ್ನು ಎಲ್ಲಾ ರಾಶಿಯವರ ಜೀವನದಲ್ಲಿ ಕಾಣಬಹುದು.
ಅಂದಹಾಗೆ ಮಂಗಳ ಗ್ರಹವು ಅಕ್ಟೋಬರ್ 3 ರಂದು ತುಲಾ ರಾಶಿಯನ್ನು ಪ್ರವೇಶಿಸಿತು. ಕೇತು ಈಗಾಗಲೇ ಈ ತುಲಾ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಈ ವೇಳೆ ಅಕ್ಟೋಬರ್ 15 ರಂದು ಚಂದ್ರನು ತುಲಾ ರಾಶಿಗೆ ಪ್ರವೇಶಿಸಲಿದ್ದಾನೆ. ತುಲಾ ರಾಶಿಯಲ್ಲಿ ಮಂಗಳ, ಕೇತು, ಚಂದ್ರರ ಸಂಯೋಗದಿಂದ ತ್ರಿಗ್ರಹ ಯೋಗ ಉಂಟಾಗುವುದು. ಈ ಯೋಗ 2 1/2 ದಿನಗಳವರೆಗೆ ಇರುತ್ತದೆ. ಈ ಅವಧಿಯಲ್ಲಿ ಕೆಲವು ರಾಶಿಯವರಿಗೆ ಅನಿರೀಕ್ಷಿತ ಹಣದ ಹರಿವು ಹೆಚ್ಚಾಗಬಹುದು. ಈಗ ಆ ಅದೃಷ್ಟದ ರಾಶಿಗಳು ಯಾರೆಂದು ನೋಡೋಣ.

ಮಿಥುನ ರಾಶಿ
ಮಿಥುನ ರಾಶಿಯ 5ನೇ ಮನೆಯಲ್ಲಿ ತ್ರಿಗ್ರಹ ಯೋಗ ರೂಪುಗೊಳ್ಳುತ್ತದೆ. ಈ ಕಾರಣದಿಂದಾಗಿ ಮಿಥುನ ರಾಶಿಯರು ಅತ್ಯುತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಅದೂ ಸಹ ಷೇರು ಮಾರುಕಟ್ಟೆಗೆ ಸಂಬಂಧಿಸಿದ ಜನರು ಉತ್ತಮ ಲಾಭವನ್ನು ಪಡೆಯಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು ಉತ್ತಮ ಯಶಸ್ಸನ್ನು ಕಾಣುತ್ತಾರೆ.
ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯಲಿದೆ. ಕೆಲವರು ಕೆಲಸಕ್ಕೆ ಸಂಬಂಧಿಸಿದ ಪ್ರವಾಸಗಳಿಗೆ ಹೋಗಬಹುದು. ಕೆಲವರಿಗೆ ಸಾಕಷ್ಟು ಹಣ ಗಳಿಸುವ ಅವಕಾಶ ಸಿಗಲಿದೆ. ಆದರೆ ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು.

ಕನ್ಯಾ ರಾಶಿ
ಕನ್ಯಾ ರಾಶಿಯ 2ನೇ ಮನೆಯಲ್ಲಿ ತ್ರಿಗ್ರಹ ಯೋಗ ರೂಪುಗೊಳ್ಳುತ್ತದೆ. ಹೀಗಾಗಿ ಉದ್ಯೋಗಿಗಳು ಬಡ್ತಿ, ವೇತನ ಹೆಚ್ಚಳ ಇತ್ಯಾದಿಗಳನ್ನು ಪಡೆಯಬಹುದು. ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ಆರ್ಥಿಕವಾಗಿ ಈ ಅವಧಿಯಲ್ಲಿ ನೀವು ಅನಿರೀಕ್ಷಿತ ಹಣದ ಹರಿವನ್ನು ಪಡೆಯಬಹುದು. ಹೊಸ ಆದಾಯದ ಮೂಲಗಳನ್ನು ಸೃಷ್ಟಿಸಬಹುದು. ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ದೊರೆಯುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಆರೋಗ್ಯ ಉತ್ತಮವಾಗಿರುತ್ತದೆ.

ಧನು ರಾಶಿ
ಧನು ರಾಶಿಯ 11ನೇ ಮನೆಯಲ್ಲಿ ತ್ರಿಗ್ರಹ ಯೋಗವು ರೂಪುಗೊಳ್ಳುತ್ತದೆ. ಹೀಗಾಗಿ ಈ ಸ್ಥಳೀಯರು ಉತ್ತಮ ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಈ ಅವರಿಯಲ್ಲಿ ಧನು ರಾಶಿಯವರ ಆಶಯಗಳು ಈಡೇರುತ್ತವೆ. ಉದ್ಯೋಗಸ್ಥರಿಗೆ ಹೊಸ ಉದ್ಯೋಗಾವಕಾಶಗಳು ದೊರೆಯಲಿವೆ.
ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ದೊರೆಯಲಿದೆ. ಕೆಲವರು ವಿದೇಶದಿಂದ ಅಧಿಕ ಆರ್ಥಿಕ ಲಾಭವನ್ನು ಪಡೆಯಬಹುದು. ಷೇರು ಮಾರುಕಟ್ಟೆಯಲ್ಲಿ ಇರುವವರು ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಜಂಟಿ ವ್ಯಾಪಾರ ಮಾಡುವವರಿಗೆ ಈ ಸಮಯವು ತುಂಬಾ ಒಳ್ಳೆಯದು.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications