Surya Grahana 2025: ವರ್ಷದ ಮೊದಲ ಸೂರ್ಯಗ್ರಹಣ ಈ ರಾಶಿಯವರಿಗೆ ಲಕ್ಕಿ
2025ನೇ ವರ್ಷ ಹಲವಾರು ವಿಷಯದಲ್ಲಿ ವಿಶೇಷವಾಗಿರಲಿದೆ. ಈ ವರ್ಷ ನಾಲ್ಕು ಗ್ರಹಣಗಳು ಸಂಭವಿಸಲಿದ್ದು, ಇದರಲ್ಲಿ 2 ಸೂರ್ಯ ಹಾಗೂ 2 ಚಂದ್ರ ಗ್ರಹಣಗಳು ಸಂಭವಿಸಲಿವೆ. 2025ರಲ್ಲಿ ಚೈತ್ರ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯಂದು ಮೊದಲ ಸೂರ್ಯಗ್ರಹಣ ನಡೆಲಿದೆ.
ವರ್ಷದ ಮೊದಲ ಸೂರ್ಯ ಗ್ರಹಣ ಮಾರ್ಚ್ 29, 2025ರಂದು ಮಧ್ಯಾಹ್ನ 02:20ಕ್ಕೆ ಪ್ರಾರಂಭವಾಗುತ್ತದೆ. ಸಂಜೆ 06:16ಕ್ಕೆ ಕೊನೆಗೊಳ್ಳುತ್ತದೆ. ಈ ಗ್ರಹಣ ಭಾರತದಲ್ಲಿ ಗೋಚರಿಸದಿದ್ದರೂ, ಅದರ ಶುಭ ಮತ್ತು ಅಶುಭ ಪರಿಣಾಮಗಳು 12 ರಾಶಿಗಳ ಮೇಲೆ ವಿಭಿನ್ನವಾಗಿರುತ್ತದೆ.
ವೈದಿಕ ಜ್ಯೋತಿಷ್ಯದ ಪ್ರಕಾರ 2025ರ ಮೊದಲ ಸೂರ್ಯಗ್ರಹಣ 3 ರಾಶಿಗಳಿಗೆ ಅದೃಷ್ಟವನ್ನು ತರುತ್ತದೆ. ಹಾಗಾದರೆ ಯಾವ 3 ರಾಶಿಗಳು ವರ್ಷದ ಮೊದಲ ಸೂರ್ಯ ಗ್ರಹಣದಿಂದ ವ್ಯಾಪಾರ, ಉದ್ಯೋಗ, ವೃತ್ತಿ, ಪ್ರೀತಿಯ ವಿಷಯದಲ್ಲಿ ಲಾಭ ಪಡೆಯಲಿದ್ದಾರೆ ಎಂದು ತಿಳಿಯೋಣ.

ವೃಷಭ ರಾಶಿ
ವೃಷಭ ರಾಶಿಯವರಿಗೆ 2025ನೇ ವರ್ಷದ ಮೊದಲ ಸೂರ್ಯಗ್ರಹಣ ಶುಭ ಪರಿಣಾಮಗಳನ್ನು ಬೀರಲಿದೆ. ಸೂರ್ಯಗ್ರಹಣದಿಂದಾಗಿ ವೃಷಭ ರಾಶಿಯವರ ಆರ್ಥಿಕ ಸ್ಥಿತಿಯು ಮೊದಲಿಗಿಂತ ಬಲವಾಗಿರುತ್ತದೆ. ಸಂಪತ್ತು ಹೆಚ್ಚಾಗುವ ಸಾಧ್ಯತೆ ಇದೆ. ಸಮಾಜಸೇವೆಯಲ್ಲಿ ಆಸಕ್ತಿ ಹೆಚ್ಚಲಿದೆ.
ಕಛೇರಿಯಿಂದ ಒಳ್ಳೆಯ ಸುದ್ದಿ ಬರಬಹುದು. ನೀವು ಕಚೇರಿ ಸಹೋದ್ಯೋಗಿಗಳಿಂದ ಬೆಂಬಲವನ್ನು ಪಡೆದು ಸಾಕಷ್ಟು ಖ್ಯಾತಿಯನ್ನು ಪಡೆಯುತ್ತೀರಿ. ಹೂಡಿಕೆಯ ನಿರ್ಧಾರ ಲಾಭದಾಯಕವಾಗಿರುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ವಿದೇಶಕ್ಕೆ ಹೋಗಲು ಯೋಚಿಸುವವರಿಗೆ ಸಕಾಲ ಇದಾಗಿದೆ.

ಸಿಂಹ ರಾಶಿ
2025ನೇ ವರ್ಷದ ಮೊದಲ ಸೂರ್ಯಗ್ರಹಣ ಸಿಂಹ ರಾಶಿಯವರಿಗೆ ಮಂಗಳಕರ ಫಲ ನೀಡಲಿದೆ. ಸಾಮಾಜಿಕ ಕಾರ್ಯಗಳಲ್ಲಿ ವಿಶೇಷ ಆಸಕ್ತಿ ಇರುತ್ತದೆ. ಈ ಸಮಯದಲ್ಲಿ ನೀವು ಹೂಡಿಕೆ ಮಾಡಲು ಯೋಜಿಸಬಹುದು. ಇದು ಸಾಕಷ್ಟು ಲಾಭವನ್ನು ತಂದು ಕೊಡಲಿದೆ. ಅಲ್ಲದೆ ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯುವಿರಿ.
ಉದ್ಯಮಿಗಳಿಗೆ ಈ ಸಮಯ ಮೊದಲಿಗಿಂತ ಉತ್ತಮವಾಗಿರುತ್ತದೆ. ಕೆಲಸದಲ್ಲಿ ಒತ್ತಡ ಕಡಿಮೆಯಾಗಲಿದೆ. ಸಂಬಂಧಗಳು ಮೊದಲಿಗಿಂತ ಉತ್ತಮವಾಗಿರುತ್ತವೆ. ಅನಾವಶ್ಯಕ ಖರ್ಚು ಕಡಿಮೆಯಾಗಿ ಆರ್ಥಿಕ ಸ್ಥಿತಿ ಮೊದಲಿಗಿಂತ ಸುಧಾರಣೆಯಾಗಲಿದೆ.

ಕುಂಭ ರಾಶಿ
ಕುಂಭ ರಾಶಿಯವರಿಗೆ ಸೂರ್ಯ ಗ್ರಹಣ ಶುಭ ಫಲಿತಾಂಶಗಳನ್ನು ನೀಡುತ್ತದೆ. ಈ ಸಮಯದಲ್ಲಿ ಯಾವುದೇ ನಿರ್ಧಾರವನ್ನು ಯೋಚಿಸಿ ತೆಗೆದುಕೊಳ್ಳುವಿರಿ. ನಿಮಗೆ ಯಾವುದೇ ಕೆಲಸದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ. ನೀವು ಕಷ್ಟಪಟ್ಟು ಕೆಲಸ ಮಾಡದ ಫಲ ಈ ಸಮಯದಲ್ಲಿ ಸಿಗಲಿದೆ.
ಸಂಬಂಧಗಳು ಮೊದಲಿಗಿಂತ ಉತ್ತಮವಾಗಿರುತ್ತವೆ. ನೀವು ವ್ಯಾಪಾರ ಮಾಡುವ ಬಗ್ಗೆ ಯೋಚಿಸಬಹುದು. ಸಂಪತ್ತು ಹೆಚ್ಚಿಸಲು ಹೊಸ ಅವಕಾಶಗಳು ಸಿಗಲಿವೆ. ಹೂಡಿಕೆ ಲಾಭದಾಯಕವಾಗಿರುತ್ತದೆ. ತರಾತುರಿಯಲ್ಲಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.












Click it and Unblock the Notifications