Budhaditya Rajayoga 2024: ಸೂರ್ಯನಿಂದ ರೂಪುಗೊಂಡ ಬುಧಾದಿತ್ಯ ಯೋಗ: ಈ 6 ರಾಶಿಯವರಿಗೆ ಜೀವನದಲ್ಲಿ ರಾಜಯೋಗ
ಜ್ಯೋತಿಷ್ಯಶಾಸ್ತ್ರದಲ್ಲಿ ಸೂರ್ಯನನ್ನು ಯಶಸ್ಸನ್ನು ಪ್ರತಿನಿಧಿಸುವ ಗ್ರಹ ಎಂದು ನಂಬಲಾಗಿದೆ. ಜೀವನದಲ್ಲಿ ಒಬ್ಬರು ಪಡೆಯುವ ಯಶಸ್ಸು ಅವರ ಜನ್ಮ ಜಾತಕದಲ್ಲಿ ಸೂರ್ಯನ ಸ್ಥಾನವನ್ನು ಅವಲಂಭಿಸಿರುತ್ತದೆ. ಅಂದಹಾಗೆ ಜೂನ್ ತಿಂಗಳಲ್ಲಿ ಸೂರ್ಯನ ಪ್ರಮುಖ ಸಂಚಾರವಿದೆ. ಇದು ಕೆಲವು ರಾಶಿಗಳಿಗೆ ವೃತ್ತಿಪರವಾಗಿ ಉತ್ತಮ ಫಲಿತಾಂಶಗಳನ್ನು ತರುತ್ತದೆ.
ಜೂನ್ 15 ರಂದು ಮಧ್ಯಾಹ್ನ 12:16 ಕ್ಕೆ ಸೂರ್ಯ ಮಿಥುನ ರಾಶಿಗೆ ಪ್ರವೇಶಿಸಿದೆ. ಜೂನ್ 14 ರಂದು ಬುಧವು ಮಿಥುನ ರಾಶಿಯನ್ನು ಪ್ರವೇಶಿಸಿದೆ. ಹೀಗಾಗಿ ಸೂರ್ಯ ಮತ್ತು ಬುಧ ಒಂದೇ ರಾಶಿಯಲ್ಲಿ ಸಾಗಿದಾಗ ಎರಡೂ ಗ್ರಹಗಳು ಆ ರಾಶಿಯಲ್ಲಿ ಯೋಗವನ್ನು ರೂಪಿಸುತ್ತವೆ.
ಸೂರ್ಯ ಮತ್ತು ಬುಧ ಗ್ರಹಗಳ ಸಂಯೋಗದಿಂದಾಗಿ ಬುಧಾದಿತ್ಯ ಯೋಗ ರೂಪಗೊಳ್ಳುತ್ತದೆ. ಈ ಯೋಗ ಜೂನ್ 29ರವರೆಗೆ ಇರುತ್ತದೆ. ನಂತರ ಬುಧ ಗ್ರಹ ಕರ್ಕ ರಾಶಿಗೆ ಚಲಿಸುತ್ತದೆ. ಮತ್ತೊಂದೆಡೆ ಜುಲೈ 16ರವರೆಗೆ ಸೂರ್ಯನು ಮಿಥುನ ರಾಶಿಯಲ್ಲಿ ಇರುತ್ತದೆ. ಜೂನ್ 15 ರಿಂದ ಜುಲೈ 16 ರವರೆಗೆ ಸೂರ್ಯನು ಮಿಥುನ ರಾಶಿಯಲ್ಲಿ ಸಾಗುವುದರಿಂದ, ಕೆಲವು ರಾಶಿಯವರು ತಮ್ಮ ವೃತ್ತಿಜೀವನದಲ್ಲಿ ದೊಡ್ಡ ಯಶಸ್ಸನ್ನು ಪಡೆಯಲಿದ್ದಾರೆ. ಹಾಗಾದರೆ ಆ ರಾಶಿಯವರು ಯಾರೆಂದು ತಿಳಿಯೋಣ..

ಮೇಷ ರಾಶಿ
ಮೇಷ ರಾಶಿಯ ಐದನೇ ಮನೆಯ ಅಧಿಪತಿಯಾದ ಸೂರ್ಯನು ಪ್ರಸ್ತುತ ಮೂರನೇ ಮನೆಯಲ್ಲಿ ಸಂಚರಿಸುತ್ತಿದ್ದಾನೆ. ಈ ಅವಧಿಯಲ್ಲಿ ನೀವು ಪ್ರಗತಿಯ ಹಾದಿಯಲ್ಲಿ ಸಾಗುತ್ತೀರಿ. ನಿರೀಕ್ಷಿತ ಆರ್ಥಿಕ ಲಾಭವನ್ನು ಗಳಿಸುವಿರಿ. ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವ ಸಾಧ್ಯತೆಗಳಿವೆ.
ವೃತ್ತಿಪರವಾಗಿ ನೀವು ಗಮನಾರ್ಹ ಯಶಸ್ಸನ್ನು ಸಾಧಿಸುವಿರಿ. ಅನೇಕ ಹೊಸ ಉದ್ಯೋಗಾವಕಾಶಗಳನ್ನು ಪಡೆಯುತ್ತೀರಿ. ನೀವು ಹೊಸ ಉದ್ಯೋಗ ಅವಕಾಶಕ್ಕಾಗಿ ಕಾಯುತ್ತಿದ್ದರೆ ಈ ಸಮಯದಲ್ಲಿ ಅಂದುಕೊಂಡ ಹುದ್ದೆ ಸಿಗಲಿದೆ.

ವೃಷಭ ರಾಶಿ
ಸೂರ್ಯನು ವೃಷಭ ರಾಶಿಯವರ ನಾಲ್ಕನೇ ಮನೆಯನ್ನು ಆಳುತ್ತಾನೆ. ಈ ಸಂಕ್ರಮಣದ ಸಮಯದಲ್ಲಿ ಸೂರ್ಯನು ಎರಡನೇ ಮನೆಗೆ ಹೋಗುತ್ತಾನೆ. ಇದರಿಂದ ನಿಮ್ಮ ಸಂವಹನ ಕೌಶಲ್ಯಗಳು ಉತ್ತಮವಾಗುತ್ತವೆ. ವೃತ್ತಿಪರವಾಗಿ ನಿಮ್ಮ ಸಾಮಾರ್ಥ್ಯ ಹೆಚ್ಚಾಗುತ್ತದೆ. ನಿಮಗೆ ಉದ್ಯೋಗದಲ್ಲಿ ಉತ್ತಮ ಫಲಿತಾಂಶ ನೀಡುವ ಸೂಚನೆಗಳಿವೆ. ಈ ಅವಧಿಯು ನಿಮ್ಮ ವೃತ್ತಿ ಜೀವನದಲ್ಲಿ ಬಹಳ ಮುಖ್ಯವಾಗಿರುತ್ತದೆ.

ಮಿಥುನ ರಾಶಿ
ಸೂರ್ಯನು ಮಿಥುನ ರಾಶಿಯ ಮೂರನೇ ಮನೆಯನ್ನು ಆಳುತ್ತಾನೆ. ಈ ಸಂಕ್ರಮಣದ ಸಮಯದಲ್ಲಿ ಅದು ನಿಮ್ಮ ಮನೆಯಲ್ಲಿ ಆರ್ಥಿಕ ಸ್ಥಿತಿಯನ್ನು ವೃದ್ಧಿಸುತ್ತದೆ. ನಿಮ್ಮ ವೃತ್ತಿಜೀವನದಲ್ಲಿ ನೀವು ಅನಿರೀಕ್ಷಿತ ಪ್ರಗತಿಯನ್ನು ಸಾಧಿಸುವಿರಿ. ಕೆಲಸದಲ್ಲಿ ಮೇಲಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ಉದ್ಯೋಗಸ್ಥ ಮಿಥುನ ರಾಶಿಯವರು ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಳ್ಳುತ್ತಾರೆ. ಮೇಲಾಧಿಕಾರಿಗಳಿಂದ ಯಶಸ್ಸು ಸಾಧಿಸುತ್ತಾರೆ.

ಸಿಂಹ ರಾಶಿ
ಸಿಂಹ ರಾಶಿಯ ಮೊದಲ ಮನೆಯನ್ನು ಸೂರ್ಯನು ಆಳುತ್ತಾನೆ. ಈಗ ಸೂರ್ಯ ಗ್ರಹ ಸಿಂಹ ರಾಶಿಯವರ ಮೊದಲ ಮನೆಯಲ್ಲಿ ಸಾಗುತ್ತಿದೆ. ಈ ಅವಧಿಯಲ್ಲಿ ನಿಮ್ಮ ವ್ಯವಹಾರದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುವಿರಿ. ನಿಮ್ಮ ವೃತ್ತಿ ಜೀವನದಲ್ಲಿ ನೀವು ಮಾಡಿದ ಕಠಿಣ ಪರಿಶ್ರಮಕ್ಕೆ ಯಶಸ್ಸು ಸಿಗುತ್ತದೆ. ನಿಮ್ಮ ವೃತ್ತಿಜೀವನದಲ್ಲಿ ಬಡ್ತಿಯ ಅವಕಾಶಗಳೂ ಇವೆ.

ಕನ್ಯಾ ರಾಶಿ
ಸೂರ್ಯನು ಕನ್ಯಾ ರಾಶಿಯವರ ಹನ್ನೆರಡನೇ ಮನೆಯನ್ನು ಆಳುತ್ತಾನೆ. ಪೂರ್ವಿಕರ ಆಸ್ತಿಯಿಂದ ಅನಿರೀಕ್ಷಿತ ಲಾಭ ಪಡೆಯುವ ಸಾಧ್ಯತೆ ಇದೆ. ವೃತ್ತಿಯ ವಿಷಯದಲ್ಲಿ, ನಿಮ್ಮ ಕೆಲಸವನ್ನು ಬದಲಾಯಿಸುವ ಅವಕಾಶವನ್ನು ನೀವು ಪಡೆಯುತ್ತೀರಿ. ನೀವು ವಿದೇಶಕ್ಕೆ ಹೋಗುವ ಸಾಧ್ಯತೆಗಳೂ ಇವೆ.

ತುಲಾ ರಾಶಿ
ತುಲಾ ರಾಶಿಯ ಹನ್ನೊಂದನೇ ಮನೆಯ ಅಧಿಪತಿಯಾದ ಸೂರ್ಯನು ಪ್ರಸ್ತುತ ಒಂಬತ್ತನೇ ಮನೆಯಲ್ಲಿ ನೆಲೆಸಿದ್ದಾನೆ. ವಿದೇಶದಲ್ಲಿರುವ ಸ್ನೇಹಿತರ ಮೂಲಕ ಲಾಭ ಸಿಗಲಿದೆ. ನಿಮ್ಮ ಕೆಲಸಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನೀವು ಅದೃಷ್ಟಶಾಲಿಯಾಗುತ್ತೀರಿ. ನಿಮ್ಮ ಕೆಲಸದಲ್ಲಿ ನೀವು ಅನೇಕ ಅನಿರೀಕ್ಷಿತ ಲಾಭಗಳನ್ನು ಪಡೆಯುತ್ತೀರಿ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ದಯವಿಟ್ಟು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications