Budhaditya Rajyoga 2024: ಸೂರ್ಯ-ಬುಧ ಸಂಯೋಗದಿಂದ ರೂಪುಗೊಂಡ ಬುಧಾದಿತ್ಯ ರಾಜಯೋಗ: ಈ 3 ರಾಶಿಗಳ ಅದೃಷ್ಟ ಖುಲಾಯಿಸುತ್ತೆ
ಗ್ರಹಗಳು ತಮ್ಮ ಸಂಚಾರದ ವೇಳೆ ರಾಶಿಯನ್ನು ಬದಲಾಯಿಸುತ್ತಲೇ ಇರುತ್ತವೆ. ಈ ವೇಳೆ ಒಂದು ಗ್ರಹದಲ್ಲಿ ಒಂದಕ್ಕಿಂತ ಹೆಚ್ಚು ಗ್ರಹಗಳು ಒಗ್ಗೂಡಿ ಶುಭ ಅಥವಾ ಅಶುಭ ಯೋಗಗಳನ್ನು ರೂಪಿಸುತ್ತವೆ. ಹೀಗೆ ಗ್ರಹಗಳ ಸಂಯೋಜಯಿಂದ ಉಂಟಾದ ಯೋಗಗಳ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಉಂಟಾಗುತ್ತದೆ.
ಆ ನಿಟ್ಟಿನಲ್ಲಿ ಸೂರ್ಯನನ್ನು ನವಗ್ರಹಗಳ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಈ ಸೂರ್ಯನು ಸಿಂಹ ರಾಶಿಯ ಅಧಿಪತಿಯಾಗಿದ್ದಾನೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಸೂರ್ಯನು ತಿಂಗಳಿಗೊಮ್ಮೆ ರಾಶಿಯನ್ನು ಬದಲಾಯಿಸುತ್ತಾನೆ. ಸದ್ಯ ಸೂರ್ಯನು ಮಕರ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ.
ಈ ಸಂದರ್ಭದಲ್ಲಿ ನವಗ್ರಹಗಳ ರಾಜಕುಮಾರನೆಂದು ಪರಿಗಣಿಸಲ್ಪಟ್ಟಿರುವ ಬುಧನು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಬುಧವು ಮಕರ ರಾಶಿಯನ್ನು ಪ್ರವೇಶಿಸಿದಾಗ, ಅದು ಈಗಾಗಲೇ ಸಂಕ್ರಮಿಸುತ್ತಿರುವ ಸೂರ್ಯನ ಜೊತೆಯಲ್ಲಿ ಪ್ರಯಾಣಿಸುತ್ತದೆ. ಹೀಗಾಗಿ ಮಕರ ರಾಶಿಯಲ್ಲಿ ಬುಧ ಹಾಗೂ ಸೂರ್ಯನ ಸಂಚಾರದಿಂದ ಬುಧಾದಿತ್ಯ ಯೋಗ ರೂಪಗೊಳ್ಳುತ್ತದೆ. ಬುಧಾದಿತ್ಯ ಯೋಗ ಸೂರ್ಯ ಮತ್ತು ಬುಧ ಒಟ್ಟಿಗೆ ಸೇರಿದಾಗ ಉಂಟಾಗುವ ಯೋಗವಾಗಿದೆ. ಈ ಯೋಗವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.
ಫೆಬ್ರವರಿ 1 ರಂದು ಈ ಯೋಗವು ರೂಪುಗೊಳ್ಳುತ್ತದೆ. ಹಾಗಾದರೆ ಮಕರ ರಾಶಿಯಲ್ಲಿ ರೂಪುಗೊಂಡ ಬುಧಾದಿತ್ಯ ರಾಜಯೋಗದಿಂದ ಅದೃಷ್ಟವನ್ನು ಪಡೆಯುವ ರಾಶಿಚಕ್ರದ ಜನರು ಯಾರೆಂದು ಈಗ ನೋಡೋಣ.

ಮೇಷ ರಾಶಿ
ಮೇಷ ರಾಶಿಯವರಿಗೆ ಬುಧಾದಿತ್ಯ ರಾಜಯೋಗ ಅತ್ಯಂತ ಮಂಗಳಕರವಾಗಿದೆ. ಇದು ಮೇಷ ರಾಶಿಯ 10ನೇ ಮನೆಯಲ್ಲಿ ರೂಪುಗೊಳ್ಳುತ್ತದೆ. ಹೀಗಾಗಿ ಈ ರಾಶಿಯವರು ವ್ಯಾಪಾರದಲ್ಲಿ ಅಧಿಕ ಲಾಭವನ್ನು ಪಡೆಯುತ್ತಾರೆ. ವ್ಯಾಪಾರದಲ್ಲಿ ಸ್ನೇಹ ಸಂಬಂಧ ಹೆಚ್ಚಾಗಲಿದೆ. ವಿದೇಶಗಳಿಂದಲೂ ಉದ್ಯೋಗಾವಕಾಶಗಳು ಹುಡುಕಿಕೊಂಡು ಬರುತ್ತಿವೆ.
ಕೆಲಸದಲ್ಲಿ ನಿಮ್ಮ ಕಾರ್ಯಕ್ಷಮತೆಯನ್ನು ಪ್ರಶಂಸಿಸಲಾಗುತ್ತದೆ. ಸಹೋದ್ಯೋಗಿಗಳಿಂದ ಸಂಪೂರ್ಣ ಬೆಂಬಲ ನಿಮಗಿರಲಿದೆ. ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ದೊರೆಯುತ್ತದೆ. ಜಂಟಿ ಉದ್ಯಮಿಗಳಿಗೂ ಅಧಿಕ ಲಾಭ ದೊರೆಯಲಿದೆ. ಆದರೆ ಆರೋಗ್ಯದಲ್ಲಿ ಸ್ವಲ್ಪ ಜಾಗ್ರತೆ ವಹಿಸುವುದು ತುಂಬಾ ಮುಖ್ಯ. ಜೊತೆಗೆ ಪ್ರಯಾಣದ ವೇಳೆ ಜಾಗರೂಕರಾಗಿರಿ.

ವೃಷಭ ರಾಶಿ
ಬುಧಾದಿತ್ಯ ರಾಜಯೋಗ ವೃಷಭ ರಾಶಿಯವರಿಗೆ ಶುಭ ಯೋಗವಾಗಿದೆ. ವೃಷಭ ರಾಶಿಯ 9ನೇ ಮನೆಯು ಈ ಯೋಗ ಸೃಷ್ಟಿಯಾಗಲಿದೆ. ಈ ಯೋಗದ ಅವಧಿಯಲ್ಲಿ ವೃಷಭ ರಾಶಿಯವರು ಸಾಕಷ್ಟು ಹಣವನ್ನು ಗಳಿಸುವ ಸಾಧ್ಯತೆಗಳು ಹೆಚ್ಚು. ಇದಕ್ಕೆ ನಿಮ್ಮ ಸನ್ಮಾರ್ಗ ಹಾಗೂ ಶ್ರಮದ ಅಗತ್ಯವಿದೆ. ಅದಕ್ಕೆ ತಕ್ಕಂತೆ ಆದಾಯವೂ ಹೆಚ್ಚುತ್ತದೆ.
ಅದೃಷ್ಟದ ಸಂಪೂರ್ಣ ಬೆಂಬಲ ನಿಮಗಿರಲಿದೆ. ಯಶಸ್ಸು ಸದಾ ನಿಮ್ಮದಾಗಲಿದೆ. ಉದ್ಯೋಗಿಗಳಿಗೆ ವೇತನ ಹೆಚ್ಚಳದ ಜೊತೆಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ. ಜಂಟಿ ವ್ಯಾಪಾರ ಮಾಡುವವರು ಉತ್ತಮ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಆರೋಗ್ಯವನ್ನು ನೀವು ಕಾಪಾಡಿಕೊಳ್ಳುವಿರಿ.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಬುಧಾದಿತ್ಯ ರಾಜಯೋಗ ಅದೃಷ್ಟವನ್ನು ತರಲಿದೆ. ವೃಶ್ಚಿಕ ರಾಶಿಯ 3ನೇ ಮನೆಯಲ್ಲಿ ಬುಧಾದಿತ್ಯ ರಾಜಯೋಗ ರಚನೆಯಾಗಲಿದೆ. ಇದರಿಂದ ಈ ರಾಶಿಯವರ ಜೀವನ ಸುಖಮಯ ಮತ್ತು ಆನಂದಮಯವಾಗಿರುತ್ತದೆ. ನಿಮ್ಮ ಪ್ರಯತ್ನಕ್ಕೆ ತಕ್ಕಂತೆ ಜೀವನದಲ್ಲಿ ಪ್ರಗತಿ ಕಾಣುವಿರಿ. ಕೆಲವರು ಅನಿರೀಕ್ಷಿತ ಆರ್ಥಿಕ ಲಾಭವನ್ನು ಪಡೆಯುವಿರಿ. ವಿದೇಶದಿಂದ ಉದ್ಯೋಗಾವಕಾಶಗಳು ದೊರೆಯುತ್ತವೆ. ಉದ್ಯೋಗಿಗಳಿಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ. ಪಿತ್ರಾರ್ಜಿತ ಆಸ್ತಿಯು ಹಣದ ಲಾಭವನ್ನು ತರುತ್ತದೆ. ಸಂಗಾತಿಯೊಂದಿಗಿನ ಸಂಬಂಧವು ಆಹ್ಲಾದಕರವಾಗಿರುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications