Statues Vastu: ಮನೆಗೆ ಈ 5 ಮೂರ್ತಿಗಳನ್ನು ಇಟ್ಟರೆ ಲಕ್ಷ್ಮೀ ಕೃಪೆ ಖಚಿತ!

ಬಹಳಷ್ಟು ಜನರು ಎಷ್ಟು ಕಷ್ಟಪಟ್ಟರೂ ಹಣ ಉಳಿಯುವುದಿಲ್ಲ, ಮನೆಯಲ್ಲೂ ಶಾಂತಿ ಇರುವುದಿಲ್ಲ ಎಂದು ಬೇಸರಪಡುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ನಮ್ಮ ಮನೆಯಲ್ಲಿರುವ ವಸ್ತುಗಳು ಮತ್ತು ಅವುಗಳ ಜೋಡಣೆಯ ವ್ಯವಸ್ಥೆ ನಮ್ಮ ಜೀವನದ ಮೇಲೆ ನೇರ ಪರಿಣಾಮ ಬೀರುತ್ತವೆ. ಸರಿಯಾದ ದಿಕ್ಕಿನಲ್ಲಿ ಕೆಲವು ವಿಶೇಷವಾದ ಮೂರ್ತಿಗಳನ್ನು ಇಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಲಕ್ಷ್ಮೀ ದೇವಿಯ ಒಲಿಯುತ್ತಾಳೆ ಎಂದು ವಾಸ್ತು ತಜ್ಞರು ಹೇಳುತ್ತಾರೆ.

ಮನೆಗೆ ಇರಬೇಕಾದ 5 ಪ್ರಮುಖ ಮೂರ್ತಿಗಳು:

ಆಮೆ ಮೂರ್ತಿ ಮನೆಯ ಆರ್ಥಿಕ ಸ್ಥಿರತೆಗೆ ಬೆನ್ನೆಲುಬು

ಪುರಾಣಗಳ ಪ್ರಕಾರ ಆಮೆ ವಿಷ್ಣುವಿನ ಕೂರ್ಮ ಅವತಾರದ ಪ್ರತೀಕವಾಗಿದೆ. ಲಕ್ಷ್ಮೀ ದೇವಿಗೆ ಆಮೆ ಅತ್ಯಂತ ಪ್ರಿಯವೆಂದು ನಂಬಲಾಗಿದೆ. ಮನೆಯ ಹಾಲ್‌ನಲ್ಲಿ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಆಮೆ ಮೂರ್ತಿಯನ್ನು ಇಡುವುದು ಉತ್ತಮ. ಇದರಿಂದ ಹಣದ ಹರಿವು ಹೆಚ್ಚುತ್ತದೆ ಮತ್ತು ವ್ಯಾಪಾರದಲ್ಲಿ ನಷ್ಟವಾಗುವ ಸಾಧ್ಯತೆ ಕಡಿಮೆ ಇರುತ್ತದೆ. ನೀರಿನ ಪಾತ್ರೆಯಲ್ಲಿ ಲೋಹದ ಆಮೆ ಇಟ್ಟರೆ ಇನ್ನೂ ಉತ್ತಮ ಫಲ ಸಿಗುತ್ತದೆ ಎಂದು ಹೇಳಲಾಗುತ್ತದೆ.

Statues Vastu

ಆನೆ ಮೂರ್ತಿ ಐಶ್ವರ್ಯ ಮತ್ತು ದೋಷ ಸಂಕೇತ

ಆನೆ ಗಜಲಕ್ಷ್ಮಿಯ ಪ್ರತೀಕ ಎಂದು ಹೇಳಲಾಗುತ್ತದೆ. ಇದು ಐಶ್ವರ್ಯ, ಸಮೃದ್ಧಿ ಮತ್ತು ಶಕ್ತಿಯನ್ನು ಸೂಚಿಸುತ್ತದೆ. ಪೂರ್ವ ದಿಕ್ಕಿನಲ್ಲಿ ಬೆಳ್ಳಿ ಆನೆ ಮೂರ್ತಿಯನ್ನು ಇಡುವುದು ಶುಭಕರ. ಇದು ರಾಹು ದೋಷವನ್ನು ಕಡಿಮೆ ಮಾಡಿ ಕುಟುಂಬದಲ್ಲಿ ಸೌಹಾರ್ದ ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಇರುವ ತೊಂದರೆಗಳನ್ನು ದೂರಮಾಡುತ್ತದೆ.

ಒಂಟೆ ಮೂರ್ತಿ ಮನೆಯ ಯಶಸ್ಸಿನ ಸಂಕೇತ

ಒಂಟೆ ಪರಿಶ್ರಮ ಮತ್ತು ಸಹನಶೀಲತೆಯ ಸಂಕೇತ ಎಂದು ಕರೆಯಲಾಗುತ್ತದೆ. ಮನೆಯ ಉತ್ತರ-ಪಶ್ಚಿಮ ದಿಕ್ಕಿನಲ್ಲಿ ಒಂಟೆ ಮೂರ್ತಿಯನ್ನು ಇಡುವುದರಿಂದ ಸಹನಶೀಲತೆಯ ಶಕ್ತಿ ಹೆಚ್ಚುತ್ತದೆ. ಇದರಿಂದ ವ್ಯವಹಾರದಲ್ಲಿ ಎದುರಾಗುವ ಅಡೆತಡೆಗಳು ನಿವಾರಣೆಯಾಗುತ್ತವೆ. ನಿಂತಿರುವ ಕೆಲಸಗಳು ವೇಗವಾಗಿ ಮುಂದುವರಿಯಲು ಸಹಾಯವಾಗುತ್ತದೆ.

ಬಾತ್‌ರೂಮ್ ಪಕ್ಕದಲ್ಲಿ ಅಡುಗೆಮನೆ ಅಥವಾ ಪೂಜಾ ಕೋಣೆ ಇರಬಹುದೇ? ವಾಸ್ತು ಏನು ಹೇಳುತ್ತದೆ?
ಬಾತ್‌ರೂಮ್ ಪಕ್ಕದಲ್ಲಿ ಅಡುಗೆಮನೆ ಅಥವಾ ಪೂಜಾ ಕೋಣೆ ಇರಬಹುದೇ? ವಾಸ್ತು ಏನು ಹೇಳುತ್ತದೆ?

ಜೋಡಿ ಹಂಸ ಮೂರ್ತಿಗಳು ದಾಂಪತ್ಯದ ಸೌಹಾರ್ದ

ಹಣ ಇದ್ದರೂ ಮನೆಯಲ್ಲಿ ಶಾಂತಿ, ನೆಮ್ಮದಿ ಇಲ್ಲದಿದ್ದರೆ ಜೀವನ ಅಪೂರ್ಣ. ಗಂಡ-ಹೆಂಡತಿ ನಡುವೆ ಸೌಹಾರ್ದತೆ ಕಾಪಾಡಲು ಹಂಸ ಜೋಡಿಯ ಮೂರ್ತಿಯನ್ನು ಮಲಗುವ ಕೋಣೆಯಲ್ಲಿ ಉತ್ತರ ದಿಕ್ಕಿನಲ್ಲಿ ಇಡುವುದು ಒಳ್ಳೆಯದು. ಇದು ಗಂಡ-ಹೆಂಡತಿ ನಡುವೆ ಪ್ರೀತಿ ಮತ್ತು ನಂಬಿಕೆಯನ್ನು ಹೆಚ್ಚಿಸುತ್ತದೆ ಮನೆಯಲ್ಲಿ ಶಾಂತಿಯ ವಾತಾವರಣವನ್ನು ನಿರ್ಮಿಸುವಲ್ಲಿ ಸಹಾಯ ಮಾಡುತ್ತದೆ.

ಹಸು ಮೂರ್ತಿ ಸಕಲ ದೇವತೆಗಳ ವಾಸಸ್ಥಳ

ಗೋಮಾತೆ ಕಂಡರೆ ಎಲ್ಲರಿಗೂ ಪ್ರೀತಿ ಮತ್ತು ಗೋಮಾತೆಯಲ್ಲಿ ಎಲ್ಲಾ ದೇವತೆಗಳ ವಾಸವಿರುತ್ತಾರೆ ಎಂದು ನಂಬಲಾಗುತ್ತದೆ. ಮನೆಯ ಈಶಾನ್ಯ ದಿಕ್ಕಿನಲ್ಲಿ ಅಥವಾ ಪೂಜಾ ಕೋಣೆಯಲ್ಲಿ ಹಸುವಿನ ಮೂರ್ತಿಯನ್ನು ಇಡುವುದು ಅತ್ಯಂತ ಶುಭಕರ. ಇದು ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ, ಆರ್ಥಿಕ ಸಮೃದ್ಧಿಯನ್ನು ತರಲು ಸಹಾಯ ಮಾಡುತ್ತದೆ.

ಪರ್ಸ್‌ನಲ್ಲಿ ಈ 6 ವಸ್ತು ಇಡಬೇಡಿ! ನಿಮ್ಮ ಕೈಯಲ್ಲಿ ಹಣ ಉಳಿಯದಿರಲು ಇದೇ ಕಾರಣ
ಪರ್ಸ್‌ನಲ್ಲಿ ಈ 6 ವಸ್ತು ಇಡಬೇಡಿ! ನಿಮ್ಮ ಕೈಯಲ್ಲಿ ಹಣ ಉಳಿಯದಿರಲು ಇದೇ ಕಾರಣ

ಈ ಮೂರ್ತಿಗಳನ್ನು ಇಡುವ ಸ್ಥಳ ಯಾವಾಗಲೂ ಬೆಳಕಿನಿಂದ ಮತ್ತು ಸ್ವಚ್ಛವಾಗಿರಬೇಕು. ಮುರಿದ ಅಥವಾ ಹಾಳಾದ ಮೂರ್ತಿಗಳನ್ನು ಮನೆಯಲ್ಲಿ ಇಡಬಾರದು. ಸರಿಯಾದ ರೀತಿಯಲ್ಲಿ ಈ ವಾಸ್ತು ನಿಯಮಗಳನ್ನು ಪಾಲಿಸಿದರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗಿ, ಸುಖ-ಸಮೃದ್ಧಿ ನೆಲೆಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+