Shani Ravi Pushya Yoga After 400 Years: ಶನಿ ರವಿ ಪುಷ್ಯ ಯೋಗ:ಈ ದಿನ ಬಟ್ಟೆ, ಆಭರಣ ಖರೀದಿಸಿದರೆ ಹಣ ನಿಮ್ಮನ್ನು ಹುಡುಕುತ್ತೆ

ನಾವೆಲ್ಲಾ 2023ರ ಅಂತ್ಯದಲ್ಲಿದ್ದು ನವೆಂಬರ್ ತಿಂಗಳನ್ನು ಪ್ರವೇಶಿಸಿದ್ದೇವೆ. ಈ ನವೆಂಬರ್‌ನಲ್ಲಿ ಅನೇಕ ಗ್ರಹಗಳ ಬದಲಾವಣೆಗಳು ನಡೆಯುವುದರಿಂದ ಈ ತಿಂಗಳು ಅನೇಕ ಜನರ ಜೀವನವನ್ನು ಬದಲಾಯಿಸುವ ತಿಂಗಳಾಗಲಿದೆ.

ದೀಪಾವಳಿಯ ಮೊದಲೆರಡು ದಿನಗಳು ಬಹಳ ಮಂಗಳಕರವಾಗಿದ್ದು ಅನೇಕರಿಗೆ ಸಂಪತ್ತನ್ನು ತರಲಿದೆ. ಏಕೆಂದರೆ ಈ ಎರಡು ದಿನ ರವಿ ಪುಷ್ಯ ಯೋಗ ಮತ್ತು ಶನಿ ಪುಷ್ಯ ಯೋಗವು ರೂಪುಗೊಳ್ಳುತ್ತದೆ. ನವೆಂಬರ್ 4ರ ಶನಿವಾರದಂದು ಶನಿ ಪುಷ್ಯ ಯೋಗ ಮತ್ತು ನವೆಂಬರ್ 5ರಂದು ರವಿ ಪುಷ್ಯ ಯೋಗ ರೂಪಗೊಳ್ಳುತ್ತದೆ.

shani ravi pushya yoga after 400 years these zodiac signs get financial benefits in kannada

400 ವರ್ಷಗಳ ನಂತರ ಯೋಗ

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಸುಮಾರು 400 ವರ್ಷಗಳ ನಂತರ ಶನಿ ಮತ್ತು ರವಿ ಪುಷ್ಯ ಯೋಗ ರೂಪಗೊಳ್ಳುತ್ತಿದೆ. ದೀಪಾವಳಿಗೂ ಮುನ್ನ ಬರುವ ಈ ಯೋಗಕಾಲದಲ್ಲಿ ಬಟ್ಟೆ, ಆಭರಣ ಇತ್ಯಾದಿಗಳನ್ನು ಖರೀದಿಸಿದರೆ ಮನೆಯಲ್ಲಿ ಹಣ ವೃದ್ಧಿಯಾಗುತ್ತದೆ. ಶನಿ ಮತ್ತು ಸೂರ್ಯನಿಂದ ರೂಪುಗೊಂಡ ಈ ಯೋಗಗಳು ಕೆಲವು ರಾಶಿಯವರಿಗೆ ಬಹಳ ಅದ್ಭುತವಾದ ಫಲಿತಾಂಶವನ್ನು ನೀಡುತ್ತವೆ. ಸರಳವಾಗಿ ಹೇಳಬೇಕೆಂದರೆ ಕೆಲವು ರಾಶಿಯ ಜನರನ್ನು ಹುಡುಕಿಕೊಂಡು ಹಣ ಬರುತ್ತದೆ. ಪ್ರಗತಿಗೆ ಅವಕಾಶಗಳು ದೊರೆಯಲಿವೆ. ನೀವು ಮಾಡಿದ ಒಳ್ಳೆಯ ಕಾರ್ಯಗಳಿಗೆ ಫಲ ಸಿಗುವ ಸಮಯವಿದು. ಕತ್ತಲೆಯಿಂದ ಬೆಳಕಿನತ್ತ ಕಾಲಿಡುವ ಪ್ರತಿಯೊಬ್ಬರಿಗೂ ಈ ದಿನ ಬಹಳ ವಿಶೇಷವಾಗಿದೆ.

ನವೆಂಬರ್ 4 ರಂದು ಪುಷ್ಯ ಯೋಗ

ಪುಷ್ಯ ನಕ್ಷತ್ರದಲ್ಲಿ ಶನಿಯ ಸಂಚಾರ ನವೆಂಬರ್ 04 ರಂದು ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗುತ್ತದೆ. ಶನಿವಾರದಂದು ಪ್ರಾರಂಭವಾಗುವ ಈ ಶನಿ ಪುಷ್ಯ ಯೋಗ ನವೆಂಬರ್ 05ರ ಭಾನುವಾರದಂದು ಬೆಳಿಗ್ಗೆ 10 ಗಂಟೆಯವರೆಗೆ ಇರುತ್ತದೆ. ಈ ಅವಧಿಯಲ್ಲಿ ಸೂರ್ಯ ಸಂಕ್ರಮಣದಿಮದಾಗಿ ಶನಿ ಮತ್ತು ರವಿ ಪುಷ್ಯ ಯೋಗವು ರೂಪುಗೊಳ್ಳುತ್ತದೆ. ಅಲ್ಲದೆ ಶನಿದೇವನಿಗೆ ಶಾಸರಾಜಯೋಗ, ಗುರು ಮತ್ತು ಚಂದ್ರರ ಸಂಯೋಗದಿಂದ ಗಜಗೇಸರಿ ರಾಜಯೋಗ ಸೇರಿದಂತೆ ಇತ್ಯಾದಿ ಯೋಗಗಳು ಇರುವುದರಿಂದ ಈ ದಿನವನ್ನು ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗಿದೆ.

ಅದೃಷ್ಟದ ರಾಶಿಗಳು

ಜ್ಯೋತಿಷ್ಯದ ಪ್ರಕಾರ, ಈ ಅಪರೂಪದ ಯೋಗವು ದೀಪಾವಳಿಯ ಮೊದಲು ರೂಪುಗೊಂಡಿದೆ. ಆದ್ದರಿಂದ 5 ರಾಶಿಯವರು ಅತ್ಯಂತ ಅದ್ಭುತವಾದ ಫಲಿತಾಂಶಗಳನ್ನು ಪಡೆಯುತ್ತಾರೆ. ವಿಶೇಷವಾಗಿ ಮೇಷ, ಮಿಥುನ, ಕರ್ಕಾಟಕ, ಧನು ರಾಶಿ, ಮಕರ ಮತ್ತು ಕುಂಭ ರಾಶಿಯವರಿಗೆ ಶನಿ, ಗುರು ಮತ್ತು ಲಕ್ಷ್ಮಿ ದೇವಿಯ ಪರಿಪೂರ್ಣ ಅನುಗ್ರಹ ದೊರೆಯುತ್ತದೆ. ಈ ಕಾರಣದಿಂದಾಗಿ ಈ ರಾಶಿಯವರು ಪ್ರಗತಿಗೆ ಅವಕಾಶಗಳನ್ನು ಪಡೆಯುತ್ತಾರೆ. ಉತ್ತಮ ಹಣದ ಹರಿವು ದೊರೆಯುವುದರೊಂದಿಗೆ ಬಹುಕಾಲದಿಂದ ನನೆಗುದಿಗೆ ಬಿದ್ದಿದ್ದ ಹಣ ಕೈಗೆ ಬರುವ ಸಾಧ್ಯತೆ ಇದೆ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+